1994ರಲ್ಲಿ ಉದಯ ಟಿವಿ ಎಂಬ ಖಾಸಗಿ ಛಾನೆಲ್ ಆರಂಭವಾಗುವ ವರೆಗೂ ಸಮಸ್ತ ಕನ್ನಡಿಗರಿಗೂ ದೂರದರ್ಶನದ ಚಂದನ ವಾಹಿನಿಯೇ ಪ್ರಮುಖವಾದ ಆಕರ್ಷಣೆ. ಅದರಲ್ಲೂ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಮುನ್ನೋಟ ಮತ್ತು ಸಂಜೆಯ ಹೊತ್ತಿನಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕರ ಪ್ರಶ್ನೋತ್ತರ ಕಾರ್ಯಕ್ರಮ. ಈ  ಎರಡೂ ಕಾರ್ಯಕ್ರಮಗಳು  ಅಂದಿನ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಲು ಕಾರಣೀಭೂತರಾದವರೇ, ಮಂದಹಾಸದ ವದನರಾದ ನಟ, ನಾಟಕಕಾರ, ನಿರ್ದೇಶಕ,  ಕಂಚಿನ ಕಂಠದ ಕಂಠದಾನ ಕಲಾವಿದ ಹೀಗೆ ಬಹುಮುಖ ಪ್ರತಿಭೆಯ ಶ್ರೀ  ಕೆ. ವಿ. ಶ್ರೀನಿವಾಸ ಪ್ರಭು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

prabhu4

ಕೆ. ವಿ. ಶ್ರೀನಿವಾಸಪ್ರಭು ಅವರು ಹಾಸನ ಜಿಲ್ಲೆಯ ಕಟ್ಟೇಪುರದಲ್ಲಿ 1955ರ ಅಕ್ಟೋಬರ್ 21ರಂದು ಜನಿಸಿದರು.  ತಂದೆ ಕೆ.ಆರ್.ವಿ. ಸುಬ್ರಹ್ಮಣ್ಯ. ತಾಯಿ ರುಕ್ಮಿಣಮ್ಮ.  ಕನ್ನಡ ಬಿ. ಎ. ಆನರ್ಸ್ ಪ್ರಥಮ ರ್‍ಯಾಂಕ್ ಮತ್ತು 1974ರಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಗಳಿಸಿದ ಸಾಧನೆ ಪ್ರಭು ಅವರದ್ದು. ಶಾಲೆಯ ದಿನಗಳಿಂದಲೇ  ಓದಿನ ಜೊತೆ ಸಾಂಸ್ಕೃತಿಕ ಚಟುವಟಿಗಳಲ್ಲಿಯೂ ಆಸಕ್ತಿ ಹೊಂದಿದ್ದ ಪ್ರಭು, 1980ರಲ್ಲಿ ದೆಹಲಿಯ ನಾಟಕ ಶಾಲೆಯಿಂದ ನಾಟಕ ರಂಗದಲ್ಲಿ ಪದವಿ ಗಳಿಸಿದ ನಂತರ ಕೆಲ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಕೊಂಡ ನಂತರ ಬೆಂಗಳೂರಿನಿಂದಲೇ ಕಾರ್ಯಕ್ರಮ ತಯಾರಾಗಿ ಪ್ರಸಾರ ಆರಂಭಿಸಿದ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ 1983ರಲ್ಲಿ ನಿರ್ದೇಶಕರಾಗಿ ಸೇರಿಕೊಂಡು ಅಲ್ಲಿಂದ ಕೆಲ ವರ್ಷಗಳ ಕಾಲ ಗುಲ್ಬರ್ಗಾ ಕೇಂದ್ರದಲ್ಲಿಯೂ 1998ರವರೆಗೆ ಕಾರ್ಯ ನಿರ್ವಹಿಸಿದ್ದರು. ಶ್ರೀನಿವಾಸ ಪ್ರಭು ಅವರು  ದೂರದರ್ಶನದಲ್ಲಿದ್ದ 14 ವರ್ಷಗಳ ಅವಧಿಯಲ್ಲಿ ಬಿ. ಜಯಶ್ರೀ, ಸಿ.ಜಿ. ಕೃಷ್ಣಸ್ವಾಮಿ, ಸುರೇಂದ್ರನಾಥ್, ನೀನಾಸಂ ತಂಡ, ಬಿ. ಸಿ ಸೇರಿದಂತೆ ಅನೇಕ ನಾಟಕರಾರರಿಗೆ ದೂರದರ್ಶನಲ್ಲಿ ಅವಕಾಶ ನೀಡುವ ಮೂಲಕ ನೂರಾರು ನಾಟಕಗಳನ್ನು ಕಿರುತೆರೆಗೆ ಅಳವಡಿಸಿದ್ದಲ್ಲದೇಕನ್ನಡದ ವಾಹಿನಿಯನ್ನೂ ಹಿಂದೀ ವಾಹಿನಿಯಂತೆಯೇ ಆಕರ್ಶಣೀಯಗೊಳಿಸುವ ಸಲುವಾಗಿ ತೆನಾಲಿರಾಮ, ಡಿಟೆಕ್ಟಿವ್ ಅಜಿತ್ ಮೊದಲಾದ ಪತ್ತೇದಾರಿ ಕಥೆಗಳನ್ನು ನಿರ್ಮಾಣ ಮತ್ತು ನಿರ್ದೇಶನ ಮಾಡಿದರು.  ಇದೇ ಸಮಯದಲ್ಲಿಯೇ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಮುನ್ನೋಟ ಮತ್ತು ಸಂಜೆಯ ಹೊತ್ತಿನಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕರ ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಶ್ರೀನಿವಾಸ ಪ್ರಭು ಅವರೇ ಭಾಗಿಗಳಾಗಿ ವೀಕ್ಷಕರ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡುವ ಮೂಲಕ ಚಂದನ ವಾಹಿನಿ ವೀಕ್ಷಕರ ಸಂಖ್ಯೆ ಹೆಚ್ಚಾಗಲು ಕಾರಣರಾದರು ಎಂದರೂ ಅತಿಶಯವಾಗದು

ಶ್ರೀನಿವಾಸ ಪ್ರಭು ಅವರು ದೂರದರ್ಶನದ ಸೇವೆಯಿಂದ ಹೊರಬಂದ ಮೇಲೆ ವೃತ್ತಿಪರ ನಟನೆ ಮತ್ತು ನಿರ್ದೇಶನದಲ್ಲಿ ತೊಡಗಿಕೊಂಡರು. ಖಾಸಗೀ ಛಾನೆಲ್ಲುಗಳಲ್ಲಿ ಪ್ರಸಾರವಾಗುತ್ತಿದ್ದ ಜನನಿ, ಮನ್ವಂತರ, ಮುಕ್ತ ಮುಕ್ತ, ಶರಪಂಜರ, ಮಹಾಪರ್ವ, ಕ್ಲಾಸ್‍ಮೇಟ್ಸ್, ಗೀತಾಂಜಲಿ, ಮನೆಯೊಂದು ಮೂರು ಬಾಗಿಲು, ಜೋಡಿಹಕ್ಕಿ, ಕುಟುಂಬ, ನಾಕುತಂತಿ, ಮದರಂಗಿ, ತಕಧಿಮಿತಾ ಮುಂತಾದ ಧಾರಾವಾಹಿಗಳಲ್ಲಿ ಪೋಷಕಪಾತ್ರ ಅಥವಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದರೆ, ಸಂಜೆ ಮಲ್ಲಿಗೆ, ಡಿಟೆಕ್ಟಿವ್ ಧನುಷ್, ಅಂತರಗಂಗೆ, ಆಸರೆ ಮುಂತಾದ  ಸುದೀರ್ಘವಾದ ಧಾರಾವಾಹಿಗಳನ್ನು ವಿವಿಧ ವಾಹಿನಿಗಳಿಗಾಗಿ ನಿರ್ದೇಶಿಸಿದ್ದಾರೆ.

ತಮ್ಮ ಭಾಷಾ ಶೈಲಿ, ಕಂಚಿನ ಕಂಠ ಮತ್ತು ಕಾರ್ಯಕ್ರಮ ನಿರ್ವಹಿಸುವ ವಿಶಿಷ್ಟ ಪ್ರತಿಭೆಯನ್ನು ಹೊಂದಿರುವ ಕಾರಣ, ನಭೂತೋ ನಭವಿಷ್ಯತಿ ಎನ್ನುವಂತೆ ದಿವಂಗತ ಸಿ.‍ ಅಶ್ವಥ್ ಅವರ ಕನ್ನಡವೇ ಸತ್ಯ ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಮಾಡಿದ್ದರೆ, ಈTV ವರ್ಷದ ಕನ್ನಡಿಗ, ಉಡುಪಿ ಪರ್ಯಾಯ ಮಹೋತ್ಸವಗಳು, ಧರ್ಮಸ್ಥಳ ಲಕ್ಷದೀಪೋತ್ಸವ ಮುಂತಾದ ಕಾರ್ಯಕ್ರಮಗಳ ನಿರ್ವಹಣೆ ಮತ್ತು ನೇರಪ್ರಸಾರದಲ್ಲಿ ವೀಕ್ಷಕ ವಿವರಣೆಯನ್ನೂ ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ