ಎಂಭತ್ತರ ದಶಕದವರೆಗೂ ಕನ್ನಡ ಚಿತ್ರರಂಗ ಎಂದರೆ ಕೇವಲ BKT ಪ್ರದೇಶಗಳಿಗಷ್ಟೇ ಸೀಮಿತವಾಗಿ ಮಿಕ್ಕೆಲ್ಲಾ ಭಾಗಗಳಲ್ಲೂ ಪರಭಾಷೆಯ ಚಿತ್ರಗಳದ್ದೇ ಆರ್ಭಟವಿದ್ದ ಕಾಲದಲ್ಲಿ ಉತ್ತಮವಾಗಿ ಚಿತ್ರವನ್ನು ತಯಾರಿಸಿದಲ್ಲಿ ಸಮಸ್ತ ಕರ್ನಾಟಕದಲ್ಲಷ್ಟೇ ಅಲ್ಲದೇ, ಹೊರ ರಾಜ್ಯಗಳಲ್ಲಿಯೂ ಯಶಸ್ವಿಯಾಗಿ ಪ್ರದರ್ಶಿಸಬಹುದು ಎಂದು ಕನ್ನಡ ಚಿತ್ರರಂಗದ ವ್ಯಾಪ್ತಿಯನ್ನು ವಿಸ್ತೀರ್ಣಗೊಳಿಸಿದವರು ಯಾರು? ಎಂಬ ಪ್ರಶ್ನೆಯನ್ನು ಯಾವುದೇ ಕನ್ನಡಿಗರನ್ನು ಕೇಳಿದರೂ, ಒಂದು ಚೂರೂ ಹಿಂದೂ ಮುಂದು ಯೋಚಿಸದೇ ಥಟ್ ಎಂದು ರವಿಚಂದ್ರನ್ ಅವರ ಹೆಸರನ್ನು ಒಕ್ಕೊರಲಿನಿಂದ ಹೇಳುತ್ತಾರೆ. ಕನ್ನಡ ಸಿನಿಮಾದಲ್ಲಿ ಅಧ್ದೂರಿತನ, ತಾಂತ್ರಿಕ ಕೌಶಲ್ಯ, ಕನ್ನಡ ಸಿನಿಮಾಗಳ ಆಡಿಯೋ ರೈಟ್ಸ್ ಮುಂತಾದವುಗಳಿಗೆ ನಿಜವಾದ ಕಾಯಕಲ್ಪ ನೀಡಿ, ಸಾವಿರಾರು ಕಲಾವಿದರುಗಳನ್ನು ಬೆಳಕಿಗೆ ತಂದ, ಹತ್ತು ಹಲವು ಮೊದಲುಗಳಿಗೆ ನಾಂದಿ ಹಾಡಿದ ಕನಸುಗಾರ, ಕ್ರೇಜಿಸ್ಟಾರ್ ವೀರಾಸ್ವಾಮಿ ರವಿಚಂದ್ರನ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ.

ರವಿಚಂದ್ರನ್ ಅವರ ತಂದೆ ವೀರಾಸ್ವಾಮಿಯವರು ಗಾಂಧಿನಗರದಲ್ಲಿ ರೀಲ್ಸ್ ಗಳನ್ನು ಸಾಗಿಸುವ ಕೆಲಸಕ್ಕೆ ಸೇರಿಕೊಂಡು ನಂತರ ಪ್ರದರ್ಶಕರಾಗಿ, ನಂತರದ ದಿನಗಳಲ್ಲಿ ಹೆಸರಾಂತ ನಿರ್ಮಾಪಕರಾಗಿ ತಮ್ಮ ಈಶ್ವರೀ ಪ್ರೊಡಕ್ಷನ್ ಮೂಲಕ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಲೋಕೇಶ್ ಮುಂತಾದ ಕನ್ನಡ ಮೇರು ನಟರುಗಳ ಹತ್ತು ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಕೊಂಡಿಯ ಮೂಲಕ ತಿಳಿಯಬಹುದಾಗಿದೆ. ಇಂತಹ ವೀರಾಸ್ವಾಮಿ ಮತ್ತು ಪಟ್ಟಮ್ಮಾಳ್ ದಂಪತಿಗಳಿಗೆ ಹಿರಿಯ ಪುತ್ರನಾಗಿ 1961ರ ಮೇ 30 ರಂದು ರುಚಿ ರುಚಿಯಾದ ಹಲ್ವಾಗಳಿಗೆ ಖ್ಯಾತಿ ಪಡೆದಿರುವ ತಿರುನಲ್ವೇಲಿಯಲ್ಲಿ ಜನಿ

ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡೇ ಜನಿಸಿದರು ರವಿಚಂದ್ರನ್. ಗುಂಗುರು ಕೂದಲಿನ ಮಾದಕ ಕಣ್ಗಳನ್ನು ಹೊಂದಿದ್ದ ರವಿ ಚಿಕ್ಕವಯಸ್ಸಿನಲ್ಲಿ ಅತ್ಯಂತ ಮುದ್ದು ಮುದ್ದಾಗಿದ್ದ ಕಾರಣ, ಸಹಜವಾಗಿಯೇ ಅಪ್ಪನಿಗೆ ಮುದ್ದಿನ ಮಗನಾಗಿದ್ದರು. ಇದೇ ಕಾರಣಕ್ಕಾಗಿಯೋ ಏನೋ? ರಾಜಕುಮಾರ್ ಅವರನ್ನು ಹಾಕಿಕೊಂಡು ತಮ್ಮ ಚೊಚ್ಚಲು ನಿರ್ಮಾಣದ ಧೂಮಕೇತು ಚಿತ್ರದಲ್ಲಿ ರವಿಚಂದ್ರನ್ ಅವರನ್ನು ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಮತ್ತೆ ತಮ್ಮ ಮುಂದಿನ ಚಿತ್ರವಾದ ಕುಲ ಗೌರವದಲ್ಲಿಯೂ ಸಹಾ ಬಾಲನಟನಾಗಿ ಬೆಳ್ಳಿ ಪರದೆಯಮೇಲೆ ಕಾಣಿಸಿಕೊಂಡಿದ್ದರು. ವೀರಾಸ್ವಾಮಿ





