Sj*

'ಪುಣ್ಯಕೋಟಿ' ಹಾಡನ್ನು ಕೇಳದ ಕಿವಿಗಳೆ ಇಲ್ಲ ಎನ್ನಬಹುದು. ಅಂತಹ "ಪುಣ್ಯಕೋಟಿ" ಹಾಡನ್ನು ಖ್ಯಾತ ಕಾದಂಬರಿಕಾರ, ಬರಹಗಾರ, ಕೃಷಿ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಕೆ.ಎನ್ ಗಣೇಶಯ್ಯ ಪುನರಚಿಸಿದ್ದಾರೆ. ಇದಕ್ಕೆ "ಪುಣ್ಯಕೋಟಿ ಶತಕರುಣಿ" ಎಂದು ಹೆಸರಿಟ್ಟಿದ್ದಾರೆ. ಲಾಫ್ಟಿಲ್ಯಾನ್ಡ್ ಸಂಸ್ಥೆ, ದಿನಿ ಸಿನಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ಈ ಹಾಡನ್ನು ದೃಶ್ಯಕಾವ್ಯವಾಗಿ ನಿರ್ಮಾಣ ಮಾಡಿದ್ದಾರೆ. ಬಾಲು ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ಅಜಯ್ ಶ್ರೀನಿವಾಸಮೂರ್ತಿ ಸಂಗೀತ ನೀಡಿರುವ ಈ ದೃಶ್ಯಕಾವ್ಯದ ಹಾಡನ್ನು ಮೇಘನ ಹಳಿಯಾಳ್, ಚಿಂತನ್ ವಿಕಾಸ್ ಹಾಗೂ ಆರವ್ ಜೋಶಿ ಹಾಡಿದ್ದಾರೆ. ಇತ್ತೀಚೆಗೆ ಈ ದೃಶ್ಯಕಾವ್ಯದ ಲೋಕಾರ್ಪಣೆ ಸಮಾರಂಭ ಜಯನಗರದ ಯಡಿಯೂರಿನಲ್ಲಿರುವ ಅ.ನ.ಕೃ ಸಮುದಾಯ ಭವನದ ಪುನೀತ್ ರಾಜಕುಮಾರ್ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜ್ಯಸಾಭಾ ಸದಸ್ಯರಾದ ಸುಧಾಮೂರ್ತಿ ಹಾಗೂ ಹೆಸರಾಂತ ನಟರಾದ ರಮೇಶ್ ಅರವಿಂದ್ ಈ ದೃಶ್ಯಕಾವ್ಯವನ್ನು ಲೋಕಾರ್ಪಣೆ ಮಾಡಿದರು. ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲೂ ಈ ದೃಶ್ಯಕಾವ್ಯ ಮೂಡಿಬಂದಿರುವುದು ವಿಶೇಷ. ಇಂಗ್ಲೀಷ್ ನ‌ ದೃಶ್ಯಕಾವ್ಯಕ್ಕೆ ರಮೇಶ್ ಅರವಿಂದ್ ಅವರೆ ಧ್ವನಿ ನೀಡಿದ್ದಾರೆ. "ಪುಣ್ಯಕೋಟಿ ಶತಕರುಣಿ" ದೃಶ್ಯಕಾವ್ಯದ ಲೋಕಾರ್ಪಣೆಯ ನಂತರ ಗಣ್ಯರು ಹಾಗೂ ತಂಡದವರು ಮಾತನಾಡಿದರು.

ಗಣೇಶಯ್ಯ ಅವರಿಗೆ ಪುಣ್ಯಕೋಟಿ ಎಂದರೆ ಬಹಳ ಇಷ್ಟ. ಏಕೆಂದರೆ ಅವರ ಮಗಳಿಗೂ ಅದೇ ಹೆಸರಿಟ್ಟಿದ್ದಾರೆ ಎಂದು ಮಾತನಾಡಿದ ಸುಧಾಮೂರ್ತಿ, ಪುಣ್ಯಕೋಟಿ ಹಾಡನ್ನು ನಾವೆಲ್ಲಾ ಕೇಳಿ ಬೆಳೆದಿದ್ದೇವೆ. ನಾವು ಪುಣ್ಯಕೋಟಿಯ ತ್ಯಾಗವನ್ನಷ್ಟೇ ನೋಡಿದ್ದೇವೆ. ಆದರೆ ಗಣೇಶಯ್ಯ ಅವರು ಇಲ್ಲಿ ಶತಕರುಣಿಯ(ಹುಲಿ) ತ್ಯಾಗವನ್ನು ಹೇಳಿದ್ದಾರೆ. ಕೊನೆಗೆ‌ ಅವರು ಹೇಳಿರುವ "ಲೋಕವೆಲ್ಲವು ಏಕವಾಗಿ ನಾಕವಾಗುವುದಿ ಧರೆ" ಎಂಬ ಸಾಲು ನನ್ನ ಮನಮುಟ್ಟಿತ್ತು. ಈ ದೃಶ್ಯಕಾವ್ಯ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಕಡೆಗೂ ತಲುಪುವಂತಾಗಲಿ. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ಎಂದರು.

punya

ನಾನು ಓದಿದ್ದ ಶಾಲೆಯ ಪ್ರಿನ್ಸಿಪಲ್ ರೂಮ್ ನಲ್ಲಿ ಒಂದು ಪೇಂಟಿಂಗ್. ಆ ಪೇಂಟಿಂಗ್ ನಲ್ಲಿ ಪಿಂಕ್ ಸೀರೆ ಉಟ್ಟು ಹಣತೆ ಹಿಡಿದು ನಗುತ್ತಿರುವ ಹೆಣ್ಣಮಗಳ ಫೋಟೊ. ಅದರ ಕೆಳಗೆ ಲೇಡಿ ವಿತ್ ದ ಲ್ಯಾಂಪ್ ಎಂದು ಬರೆದಿತ್ತು. ಆ ಫೋಟೊ ನೋಡಿದಾಗಲೆಲ್ಲ ನನಗೆ ಸುಧಾಮೂರ್ತಿ ಅವರು ನೆನಪಾಗುತ್ತಾರೆ. ಅವರ ಬರವಣಿಗೆ ಮೂಲಕ, ಚಾರಿಟಿಯ ಮೂಲಕ‌ ಸುಧಾಮೂರ್ತಿ ಅವರು ಬೆಳಕನ್ನು ಚೆಲ್ಲುತ್ತಿದ್ದಾರೆ. ಅಂತಹ ಸುಧಾಮೂರ್ತಿ ಅವರು ಈ ದೃಶ್ಯಕಾವ್ಯವನ್ನು ಬಿಡುಗಡೆ ಮಾಡಿಕೊಟ್ಟಿದ್ದಾರೆ ಅವರಿಗೆ ಧನ್ಯವಾದ. ಕೆ.ಎನ್‌. ಗಣೇಶಯ್ಯ ಅವರು ವಿಜ್ಞಾನವನ್ನು ಹಿಸ್ಟರಿ ಜೊತೆಗೆ ಸೇರಿಸಿ,‌‌ ಫಿಲಾಸಫಿಯನ್ನೂ ಸೇರಿಸಿ ನಮಗೆ ಮೂರು ದಶಕಗಳಿಂದ ಕುತೂಹಲವಾದ ಕಥೆಗಳನ್ನು ಕೊಡುತ್ತಿದ್ದಾರೆ. ನಾನು ಅವರ "ಕನಕ ಮುಸುಕು" ಹಾಗೂ "ಕರಿಸಿರಿಯಾನ" ಎರಡನ್ನು ಸೇರಿಸಿ ಚಿತ್ರಕಥೆ ಮಾಡಿ ಒಂದು ಚಿತ್ರ‌ಮಾಡಬೇಕೆಂದು ಕಾಯುತ್ತಿದ್ದೇನೆ. ಈ ದೃಶ್ಯಕಾವ್ಯವನ್ನು ಗಣೇಶಯ್ಯ ಅವರು ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನೂ ಈ ದೃಶ್ಯಕಾವ್ಯದ ಅನಿಮೇಶನ್ ಅಂತೂ ಅದ್ಭುತ. ಒಂದು ಹಸುವಿನ ಮೇಲೆ ಹುಲಿ ಕುಳಿತು ಬರುವುದನ್ನು ನಾನು ಇಲ್ಲಿವರೆಗೂ ನೋಡೆ ಇಲ್ಲ. ನಿರ್ದೇಶಕ ಬಾಲು ಅವರೆ ಕಲ್ಪನೆಗೆ ಧನ್ಯವಾದ. ಸಾಮೂಹಿಕವಾಗಿ ನೆನಪಲ್ಲಿರುವ ಒಂದು ಕಥೆಯನ್ನು ತೆಗೆದುಕೊಂಡು ಇದು ಅಷ್ಟೇ ಅಲ್ಲ. ಅದರ ಹಿಂದೆ ಇನ್ನೊಂದು ಕಥೆ ಇದೆ ಎಂದು ಈ ದೃಶ್ಯಕಾವ್ಯದ ಮೂಲಕ ಹೇಳಿರುವ ಗಣೇಶಯ್ಯ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಕಡೆಯಿಂದ ಮತ್ತೊಮ್ಮೆ ಧನ್ಯವಾದ ಎಂದರು‌ ನಟ ರಮೇಶ್ ಅರವಿಂದ್.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ