-ರಾಘವೇಂದ್ರ ಅಡಿಗ ಎಚ್ಚೆನ್.

‘ಪುಷ್ಪ 2’ ಭರ್ಜರಿ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾ ಬಗ್ಗೆ ಅಪಾರ ನಿರೀಕ್ಷೆ ಮೂಡಿದೆ. ಇದೀಗ ಅವರು ರಾಕಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಅವರ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಬಿಡುಗಡೆಯಾಗಿ ಸದ್ದು ಮಾಡಿದೆ.
ಈ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡುತ್ತಿರುವುದು ವಿಶೇಷ. ಮೊದಲ ಬಾರಿಗೆ ಈ ಕಾಂಬಿನೇಶನ್ ಒಂದಾಗಿರುವುದರಿಂದಲೇ ಚಿತ್ರದ ಮೇಲೆ ಹೈಪ್ ಜಾಸ್ತಿಯಾಗಿದೆ. ಫಸ್ಟ್ ಲುಕ್‌ನಲ್ಲಿ ಅರ್ಧ ಮೃಗ–ಅರ್ಧ ಮನುಷ್ಯನಂತೆ ಕಾಣಿಸಿದ ಅಲ್ಲು ಅರ್ಜುನ್ ಅವರ ಗೆಟಪ್ ಅಭಿಮಾನಿಗಳ ಗಮನ ಸೆಳೆದಿದೆ.
ಈ ವಿಭಿನ್ನ ಲುಕ್‌ಗಾಗಿ ಅಲ್ಲು ಅರ್ಜುನ್ ಅವರು ಪ್ರತಿದಿನ 3 ರಿಂದ 4 ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ ಎನ್ನುವುದು ಈಗ ಬಹಿರಂಗವಾಗಿದೆ. ಸ್ಟಾರ್ ನಟನಾಗಿದ್ದರೂ ಪ್ರತಿಯೊಂದು ಪಾತ್ರಕ್ಕೂ ಇಷ್ಟೊಂದು ಬದ್ಧತೆಯಿಂದ ಕೆಲಸ ಮಾಡುವುದೇ ಅವರ ಯಶಸ್ಸಿನ ಗುಟ್ಟು ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಫಸ್ಟ್ ಲುಕ್ ಬಿಡುಗಡೆಯಾದ ಬಳಿಕ ‘ರಾಕಾ’ ಕ್ರೇಜ್ ಮತ್ತಷ್ಟು ಏರಿದೆ. ‘ಪುಷ್ಪ’ ಸಿನಿಮಾದ ‘ತಗ್ಗೆದೆ ಲೇ’ ಸ್ಟೈಲ್ ಹೇಗೆ ಟ್ರೆಂಡ್ ಆಗಿತ್ತೋ, ಅದೇ ರೀತಿಯಲ್ಲಿ ‘ರಾಕಾ’ ಕೂಡ ಟ್ರೆಂಡ್ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಇತ್ತೀಚೆಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ಇದೇ ಸ್ಟೈಲ್‌ನಲ್ಲಿ ಪೋಸ್ ಕೊಟ್ಟಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಭಾರಿ ಬಜೆಟ್ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಇನ್ನಷ್ಟು ಅಪ್ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ