-ರಾಘವೇಂದ್ರ ಅಡಿಗ ಎಚ್ಚೆನ್.

ಇತ್ತೀಚೆಗಷ್ಟೇ ಡಿಕೆಡಿ (ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್) ಕೊರಿಯೋಗ್ರಾಫರ್‌ ರುದ್ರ ಮಾಸ್ಟರ್ ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು. ಇದೀಗ ಅವ್ರ ಬೆಸ್ಟ್ ಫ್ರೆಂಡ್, ಡಿಕೆಡಿ ಕೊರಿಯೋಗ್ರಾಫರ್‌ ಅರುಣ್‌ ಮಾಸ್ಟರ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, 9 ವರ್ಷಗಳ ಪ್ರೀತಿಗೆ ಜಯ ಸಿಕ್ಕಿದೆ. ಹಾಗಾದ್ರೆ ಅರುಣ್‌ ಮಾಸ್ಟರ್‌ ಅವರ ಹುಡುಗಿ ಯಾರು?
ಅರುಣ್ ಮಾಸ್ಟರ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಕೊರಿಯೋಗ್ರಾಫರ್. ಡಿಕೆಡಿ ಸ್ಫರ್ಧಿಗಳಿಗೆ ಅದ್ಭುತವಾಗಿ ಡ್ಯಾನ್ಸ್ ಹೇಳಿಕೊಟ್ಟು ಮನೆಮಾತಾದವರು. ಅಲ್ಲದೇ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವರವರ ಮುಂದೆ ಪ್ರದರ್ಶನ ನೀಡಿ ಅವರ ಮೆಚ್ಚುಗೆ ಪಡೆದವ್ರು. ಇದೀಗ ಅರುಣ್ ಮಾಸ್ಟರ್, ನಿಶಾ ಜೊತೆ ಹೊಸ ಜೀವನದ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.  ಅರುಣ್‌ ಮಾಸ್ಟರ್‌ ಮತ್ತು ನಿಶಾರದ್ದು ಇಂದು ನಿನ್ನೆಯ ಪರಿಚಯವಲ್ಲ. 9 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಇದೀಗ ಮನೆಯವರನ್ನ ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೂ ಮುಂಚೆ ಅರುಣ್‌ ಮಾಸ್ಟರ್‌ ಕುಟುಂಬಸ್ಥರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಿಶಾರವರಿಗೆ ಹೂ ಮುಡಿಸುವ ಶಾಸ್ತ್ರವನ್ನ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ  9 years of love, patience, and memories.. finally turned into a lifetime  promise ಎಂದು ತಮ್ಮ ಸಂತೋಷ ಹಂಚಿಕೊಂಡಿದ್ರು.
ಜೊತೆಗೆ ಇಬ್ಬರು ಅದ್ದೂರಿಯಾಗಿ ಸಂಗೀತ ಕಾರ್ಯಕ್ರಮ ಕೂಡ ಮಾಡಿಕೊಂಡಿದ್ದು, ಸಖತ್ತಾಗಿ ಡ್ಯಾನ್ಸ್ ಮಾಡೋ ಮೂಲಕ ಮಿಂಚಿದ್ರು. ಈ ಸಂಗೀತ ಕಾರ್ಯಕ್ರಮದಲ್ಲಿ ಡಿಕೆಡಿ ಕೊರಿಯೋಗ್ರಾಫರ್ಸ್ ಸೇರಿ ಹಲವರು ಭಾಗಿಯಾಗಿದ್ರು. ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 9 ವರ್ಷಗಳ ಪ್ರೀತಿಗೆ ಜಯ ಸಿಕ್ಕಿದೆ.  ನಿಶಾ ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದು, ಹೆಚ್ಚಿನ ಮಾಹಿತಿಯನ್ನ ಅರುಣ್‌ ಮಾಸ್ಟರ್ರವರೇ ನೀಡಬೇಕಾಗಿದೆ. ಅರುಣ್‌ ಮಾಸ್ಟರ್‌ ಮದುವೆ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಜನ್ರು ಹೊಸ ಜೋಡಿಗೆ ಒಳ್ಳೆಯದಾಗ್ಲಿ ಎಂದು ಶುಭ ಹಾರೈಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ