*ಕನ್ನಡದ ಚಿತ್ರಲೋಕದ ನಟ ಸಾರ್ವಭೌಮ, ಪ್ರಪ್ರಥಮವಾಗಿ ಅಮೇರಿಕಾದ ಕೆಂಟಕಿ ಕರ್ನಲ್ ಪ್ರಶಸ್ತಿ ಪುರಸ್ಕೃತರಾದ ಡಾ/ ರಾಜ್ ಕುಮಾರ್ ನಮ್ಮಿಂದ ದೂರವಾಗಿ ಇಂದಿಗೆ 19ವರ್ಷಗಳು ಕಳೆದರೂ ಅವರ ಅಮೋಘ ಸೇವೆ, ಸಾಧನೆ,ಸದಾ ಸುಸ್ಮಣೀಯ.ರಾಜಕುಮಾರ್ ಗೆ ರಾಜಕುಮಾರರೇ ಸಾಟಿ.ಇವರು ರಂಗಭೂಮಿ, ಹಾಗೂ ಚಲನಚಿತ್ರ ನಟರಷ್ಟೇ ಅಲ್ಲ "ಕನ್ನಡ ನಾಡು, ನುಡಿ, ಸಂಸ್ಕೃತಿ,ಉಳಿವಿಗಾಗಿ ಹೋರಾ ಡಿದ ಮಹಾನ್ ಧೀಮಂತ ಕಲಾವಿದರು, ಸಾಕ್ಷಾತ್ ಸರಸ್ವತಿ ಪುತ್ರರು ಎಂದರೂ ತಪ್ಪಾಗಲಾರದು,ಹಾಗೆಯೇ ಸಾಮಾಜಿಕ ಕನ್ನಡ ಚಲನಚಿತ್ರದ ಮೂಲಕ ಇಡೀ ಜಗತ್ತಿಗೆ ನಟನೆಯ ಅಪ್ರತಿಮ ಕಲಾವಿದ ಎಂದು ತೋರಿಸಿಕೊಟ್ಟವರು, ಇವರು ಯಾವುದೇ ನಟನೆಗೆ ನೈಜ ಜೀವ ತುಂಬಿ ನಟಿಸುವುದರ ಮೂಲಕ ಕನ್ನಡ ಕಲಾ ಭಿಮಾನಿಗಳ ಹೃದಯ ಗೆದ್ದ ದೇವರು, ಬರೀ ನಟನೆ ಅಲ್ಲ ಅವರ ಕಂಠ ಗಾನ ಕೋಗಿಲೆ ಇವರು ಹಾಡಿರುವ ಭಕ್ತಿ ಗೀತೆಗಳು, ಭಾವಗೀತೆಗಳು, ಚಿತ್ರಗೀತೆಗಳು, ಕೇಳುತ್ತಿದರೆಕಿವಿಗೆ ಇಂಪು, ಮನಸಿನ ಭಾವನೆಗಳಿಗೆ ತಂಪು,*
*ಇವರು ಚಾಮರಾಜನಗರ ಜಿಲ್ಲೆಯ ದೊಡ್ಡ ಗಾಜನೂರು ಗ್ರಾಮದ "ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ಕಲಾವಿದ ದಂಪತಿಗಳ ಮಗನಾಗಿ "1929 ಏಪ್ರಿಲ್ 24" ರಂದು ಕನ್ನಡ ಕುವರನ ಜನನವಾಯಿತು." ಇವರ ವಿದ್ಯಾಭ್ಯಾಸ 4ನೇ ತರಗತಿವರೆಗೆ ಕಲಿತದ್ದು ಆದರೆ ಸಾಧನೆ ಅಪಾರ.ಇವರ ತಂದೆಯವರು ಮೂಲತಃ ರಂಗಭೂಮಿ ಕಲಾವಿದರು,ತಂದೆಯವರ ಕಲೆಯ ಗೀಳು ಇವರನ್ನು ಕೈ ಬೀಸಿ ಕರೆಯಿತು.ಮೊದಲಿಗೆ ನಾಟಕ ಕಂಪನಿಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡಿ ಒಳ್ಳೆಯ ಹೆಸರನ್ನು ಗಳಿಸಿದರು.ಇದರ ಫಲವಾಗಿ ಇವರಿಗೆ ಶ್ರೀ ನಿವಾಸ ಕಲ್ಯಾಣ(1952) ಚಿತ್ರದಲ್ಲಿ ಋಷಿಯ ಪಾತ್ರದಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡರು.ಇವರ ನಾಟಕದ ಪಾತ್ರವನ್ನು ನೋಡಿ ಮೆಚ್ಚುಕೊಂಡ ಚಿತ್ರ ನಿರ್ದೇಶಕ ಹೆಚ್.ಎಲ್.ಎನ್.ಸಿಂಹ ರವರಿಗೆ ಮುತ್ತುರಾಜ್ ಹೆಸರನ್ನು ಬದಲಾಯಿಸಿ,"ರಾಜಕುಮಾರ" ಅಂತಾ ನಾಮಕರಣ ಮಾಡಿ,1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅವರಿಗೆ ಮೊದಲ ಅವಕಾಶ ನೀಡಿದರು.ಓಹಿಲೇಶ್ವರ ಚಿತ್ರದಲ್ಲಿ ಮೊದಲಿಗೆ ಹಾಡನ್ನು ಹಾಡಿದರು.ನಂತರ ಅವರು ಭಕ್ತಿ ಪ್ರಧಾನ,ಜೆಮ್ಸ್ ಬಾಂಡ್,ಐತಿಹಾಸಿಕ, ಸಾಮಾಜಿಕ,ಪೌರಾಣಿಕ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಕಲಾಭಿಮಾನಿಗಳ ದೇವರೆನಿಸಿದರು.ಇವರ ಸಾಧನೆ,ಸೇವೆಗಳಿಂದ ಅನೇಕ ಪ್ರಶಸ್ತಿಗಳನ್ನು ಗಳಿಸಿದರು.ಇವರು ಬೇಡರಕಣ್ಣಪ್ಪ(1954) ಚಿತ್ರದಿಂದ ಶಬ್ಧವೇದಿ(2000) ಚಿತ್ರದವರೆಗೆ ಒಟ್ಟು 205 ಚಿತ್ರಗಳಲ್ಲಿ ಅಭಿನಯಿಸಿ 2006 ಏಪ್ರಿಲ್ 12 ರಂದು ತಮ್ಮ 76ನೇ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಅಗಲಿದರು.ಇವರ ಸ್ಮರಣಾರ್ಥ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇವರ ಸಮಾಧಿ ಸ್ಮಾರಕ ಭವನವನ್ನು ಕರ್ನಾಟಕ ಸರ್ಕಾರವು ನಿರ್ಮಿಸಿದೆ.ಈ ದಿನ ಇವರ ಸ್ಮರಿಸುತ್ತಾ ಎಲ್ಲಾ ಕನ್ನಡ ಕಲಾಭಿಮಾನಿಗಳು ಮೃತರಿಗೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿಗಳನ್ನು ಅರ್ಪಿಸೋಣ....*.
*ಭಕ್ತಿಪೂರ್ವಕ ಪುಣ್ಯ ಸ್ಮರಣೆ ಯೊಂದಿಗೆ*
*ಕೆ, ಶಾಂತರಾಜ್, ಮೇದಾರ್*
*ಹೊಸಪೇಟೆ, ವಿಜಯನಗರ*