ಚಿತ್ರ: ರಕ್ಕಸಪುರದೋಳ್
ನಿರ್ಮಾಣ: ರವಿವರ್ಮಾ
ನಿರ್ದೇಶನ: ರವಿ ಸಾರಂಗ
ತಾರಾಂಗಣ: ರಾಜ್ ಬಿ. ಶೆಟ್ಟಿ, ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಜಹಾಂಗೀರ್, ಬಿ. ಸುರೇಶ, ಅನಿರುದ್ಧ್ ಭಟ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು.
ರೇಟಿಂಗ್: 3.5/5

ರಕ್ಕಸಪುರ ಅನ್ನೋ ಊರು. ಆದರೆ ಅಲ್ಲಿ ಯಾವುದೇ ಅಪರಾಧಗಳು ನಡೆಯುವುದಿಲ್ಲ ಪೊಲೀಸ್ ಸ್ಟೇಷನ್‌ ಇದ್ದರೂ ಅಲ್ಲಿನ ಪೋಲೀಸರಿಗೆ ಕೆಲಸವೇ ಇರಲ್ಲ. ಇಂತಹಾ ಊರಿಗೆ ಪೋಲೀಸ್ ಅಧಿಕಾರಿಯಾಗಿ  ಶಿವ (ರಾಜ್‌ ಬಿ ಶೆಟ್ಟಿ). ಎಂಟ್ರಿ ಕೊಡುತ್ತಾನೆ. ಅವನೊಬ್ಬ ಸಾಮಾನ್ಯ ಪೋಲೀಸ್ ಅಧಿಕಾರಿಯಾಗಿರದೆ ಓರ್ವ ಮಾನಸಿಕ ಸಮಸ್ಯೆ ಹೊಂದಿರುವ ವ್ಯಕ್ತಿಯಾಗಿದ್ದಾನೆ. ಜೊತೆಗೆ ದಿನವೂ ಸದಾಕಾಲ ಮದ್ಯ ಸೇವಿಸಿಕೊಂಡಿರುವುದು ಅವನ ಕಾಯಕದಲ್ಲಿ ಒಂದು. ಅಂತಹಾ ಯಾವಾಗಲೂ ನಶೆಯಲ್ಲಿ ಇರುವ ಅಧಿಕಾರಿಗೆ ಊರಿನಲ್ಲಿ ನಡೆಯುವ ಹೆಣ್ಣುಮಕ್ಕಳ ಸರಣಿ ಹತ್ಯೆ ಸವಾಲಾಗುತ್ತದೆ. ಆ ಸಾವುಗಳಿಗೂ, ಕಥಾನಾಯಕನಿಗೂ ಏನಾದರೂ ಸಂಬಂಧ ಇದೆಯಾ? ಅದು ಭೂತದ ಕಾಟವಾ? ಮನುಷ್ಯರ ಕುಮ್ಮಕ್ಕಿನಿಂದ ಆದ ಕೊಲೆಗಳಾ?  ಕೊಲೆಗಳ ರಹಸ್ಯ ಏನು? ಆ ಊರಿಗೆ ಇದ್ದಕ್ಕಿದ್ದಂತೆ ಬಂದ ಆ ರಾಕ್ಷಸ ಯಾರು? ಗೊತ್ತಾಗಲು ನೀವು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಬೇಕು.
ರಕ್ಕಸಪುರದೋಳ್ ಒಂದು  ಕ್ರೈಂ ಥ್ರಿಲ್ಲರ್ ಕಥೆ  ಟ್ಟಿಯಾದ ಕಥೆ ಮತ್ತು ಉತ್ತಮವಾದ ಮೇಕಿಂಗ್ ಚಿತ್ರದ ಹೈಲೈಟ್.ಚೊಚ್ಚಲ ನಿರ್ದೇಶನದ ಚಿತ್ರದಲ್ಲೇ ರವಿ ಸಾರಂಗಭರವಸೆ ಹುಟ್ಟಿಸಿದ್ದಾರೆ. ಕಡೆಯವರೆಗೆ ಕುತೂಹಲ ಜೊತೆಗೆ ಟ್ವಿಸ್ಟ್ ಗಳಿಂದ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಬಲ್ಲ ಸಿನಿಮಾ ಇದಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಕಾಮಿಡಿ  ಅಂಶದೊಡನೆಯೇ ಮೂಢನಂಬಿಕೆ ಮತ್ತು ವಿಜ್ಞಾನದ ವಿಚಾರಗಳೂ ಇಲ್ಲಿದೆ. ನಿರ್ದೇಶನದ ಜೊತೆಗೆ  ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತಸಹ ಚಿತ್ರದ ಪ್ಲಸ್ ಪಾಯಿಂಟ್.  ನಿರ್ಮಾಪಕ ರವಿ ವರ್ಮ, ಸಾಹಸ ಸನ್ನಿವೇಶಗಳನ್ನು ಕೂಡ ಚನ್ನಾಗಿ ಸಂಯೋಜಿಸಿದ್ದಾರೆ.
ಈವರೆಗೂ ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಾಜ್ ಬಿ. ಶೆಟ್ಟಿ ಕೆಲವೊಮ್ಮೆ ವಿಲನ್ ಆಗಿ ಸಹ ಅಭಿನಯಿಸಿದ್ದಿದೆ. ಆದರೆ ಇದೇ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿ ಆಗಿ ಮಿಂಚಿದ್ದಾರೆ.   ಇನ್ನು  ಅನಿರುದ್ಧ್‌ ಭಟ್‌ಗೆ  ಈ ಚಿತ್ರ ಅವರ ವೃತ್ತಿಬದುಕಿನ ಬಹುದೊಡ್ಡ ಗೆಲುವು ತರಲಿದೆ. ಅಲ್ಲದೆ ಅವರಿಗೆ ಈ ಚಿತ್ರದ ನಂತರ ಹಲವಾರು ಅವಕಾಶಗಳು ಅರಸಿ ಬರುವುದು ಖಚಿತ. ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ, ಜಹಾಂಗೀರ್, ಗೋಪಾಲ್ ದೇಶಪಾಂಡೆ ಎಲ್ಲರೂ ತಮ್ಮ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ.
ಒಟ್ಟಾರೆ ಇದೊಂದು ಹೊಸ ಸಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯ ಸಿನಿಮಾ ಆಗಿದ್ದು ರಾಜ್ ಬಿ. ಶೆಟ್ಟಿ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಿನಿಮಾ ಪ್ರೇಮಿಗಳಿಗೆ ‘ರಕ್ಕಸಪುರದೋಳ್’ ಚಿತ್ರ ಒಂದು ಉತ್ತಮ ಆಯ್ಕೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ