ಕನ್ನಡಿಗರ ಮನೆ ಮಾತಾಗಿದ್ದ ಹಿರಿಯ ನಟಿ ರಕ್ಷಿತಾ ಪ್ರೇಮ್ ಜೀ ಕನ್ನಡ ರಿಯಾಲಿಟಿ ಶೋಗಳ ತೀರ್ಪುಗಾರರ ಸ್ಥಾನದಿಂದ ಹೊರ ನಡೆಯುವ ಮೂಲಕ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ರಕ್ಷಿತಾ ಪ್ರೇಮ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಕಾಮಿಡಿ ಕಿಲಾಡಿಗಳು' ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿದ್ದರು.ಈ ಬಗ್ಗೆ ತಮ್ಮ ಇನ್ಸ್​ಟಾಗ್ರಾಮ್ ಅಕೌಂಟ್​ನಲ್ಲಿ ಪೋಸ್ಟ್ ಹಾಕಿರುವ ರಕ್ಷಿತಾ, ನಾನು ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಒಂದು Perticular channel ನ ಒಂದು Perticular showಗೆ ಟ್ಯಾಗ್ ಮಾಡ್ತಿರೋ ಎಲ್ಲರಿಗೂ ನಾನು ಕ್ಲಾರಿಟಿ ಕೊಡೋಕೆ ಇಷ್ಟಪಡ್ತೀನಿ. ನನ್ನ ಜೀವನದಲ್ಲಿ ಬದಲಾವಣೆ ಬಯಸಿದ್ದು ಹಾಗೂ ಹೊಸದನ್ನೇನಾರು ಪ್ರಯತ್ನಿಸಲು ನಾನು ಇನ್ನುಮುಂದೆ ಆ ಚಾನೆಲ್​ನ ಭಾಗವಾಗಿರುವುದಿಲ್ಲ ಎಂದು ಭಾವುಕವಾಗಿ ತಿಳಿಸಿದ್ದಾರೆ.ಇಷ್ಟು ವರ್ಷ ಆ ಶೋಗಳಲ್ಲಿ ಸಂತೋಷದಿಂದ ನನ್ನನ್ನು ನೋಡಿ ಬೆಂಬಲಿಸಿದ್ದೀರಿ. ಈ 9 ವರ್ಷ ಜರ್ನಿಯಲ್ಲಿ ಅನೇಕ ಸುಂದರ ದಿನಗಳನ್ನು ನೀಡಿದ ನಿಮಗೂ ಹಾಗು ಆ ದೇವರಿಗೂ ಹೃದಯಪೂರ್ವಕ ಧನ್ಯವಾದಗಳು. ನಾನು ಯಾವುದೇ ಕೆಲಸ, ಸಿನಿಮಾನಲ್ಲಿ ನಿಮ್ಮ ಮುಂದೆ ಬಂದರೂ ಇದೇ ರೀತಿಯ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲಿರುತ್ತದೆ ಅಂತ ಭಾವಿಸಿದ್ದೇನೆ ಎಂದು ತಮ್ಮ ಭಾವನೆಗಳನ್ನು ಪೋಸ್ಟ್​ನಲ್ಲಿ ವ್ಯಕ್ತಪಡಿಸಿದ್ದು, ಕೊನೆಯ ಸಾಲಿನಲ್ಲಿ ಅಭಿಮಾನಿಗಳಿಗೆ ‘Love u guys’ ಎಂದು ಬರೆದುಕೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ