ಮೋಹಕ ತಾರೆ ರಮ್ಯಾ ಇದೀಗ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ಲಾಕ್ ಜರ್ಕಿನ್ ಓವರ್ ಕೋಟ್ ರೀತಿಯ ಡ್ರೆಸ್ ಧರಿಸಿ ಕಂಗೊಳಿಸಿದ್ದಾರೆ ರಮ್ಯಾ.
ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ರಮ್ಯಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಆರೋಪಿಗಳನ್ನು ಸೈಬರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 43 ಅಕೌಂಟ್ಗಳ ವಿರುದ್ಧ ನಟಿ ರಮ್ಯಾ ದೂರು ದಾಖಲಿಸದ್ದರು. ಸೈಬರ್ ಪೊಲೀಸರು 4 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಇನ್ನುಳಿದ ಅಕೌಂಟ್ಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಇದರ ಮಧ್ಯೆ ರಮ್ಯಾ ಹೊಸ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಬ್ಲಾಕ್ ಜರ್ಕಿನ್ ಓವರ್ ಕೋಟ್ ರೀತಿಯ ಡ್ರೆಸ್ ಧರಿಸಿದ್ದಾರೆ. ಆ ಕಾಸ್ಟ್ಯೂಮ್ಗೆ ಮ್ಯಾಚ್ ಆಗುವಂತಹ ಹೀಲ್ಸ್ ಶೂ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಶೇರ್ ಮಾಡಿಕೊಂಡ ಎರಡು ಗ್ಲಾಮರಸ್ ಫೋಟೋಗಳು ಎಲ್ಲರನ್ನು ಸೆಳೆಯುತ್ತಿವೆ. ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಸುದ್ದಿಯಲ್ಲಿ ಇರುತ್ತಾರೆ.