ಶರತ್ ಚಂದ್ರ

ಇತ್ತೀಚೆಗೆ ಹರಿದಾಡುವ ಸುದ್ದಿಗಳ ಪ್ರಕಾರ  ಅಜಯ್ ರಾವ್ ಮತ್ತು ಸಪ್ನಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. 11 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ಅಜಯ್ ರಾವ್ ಪತ್ನಿ ಸಪ್ನಾ ನಿರ್ಧರಿಸಿದ್ದಾರೆ ಅಂತ ಮಾಧ್ಯಮಗಳಲ್ಲಿ ಬಂದಿತ್ತು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಸಪ್ನಾ ಅವರು ದೂರು ದಾಖಲಿಸಿದ್ದು, ಮಗಳ ಹೆಸರಲ್ಲಿ ಕೂಡ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.

1000644031

ಆದರೆ ಅಜಯ್ ರಾವ್ ತಮ್ಮ X ಖಾತೆ ಯಲ್ಲಿ ಪೋಸ್ಟ್ ಹಾಕಿ ‘ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವ್ಯಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ಮತ್ತು ಹರಡುವುದನ್ನು ದೂರವಿಡುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮಾಧ್ಯಮ ದವರಿಗೆ ಮನವಿ ಮಾಡಿಕೊಂಡಿದ್ದಾರೆ.

ಪತ್ನಿ ಸಪ್ನರಾವ್ ಕೂಡ ತಮ್ಮ instagram ನಲ್ಲಿ ಪೋಸ್ಟ್ ಹಾಕಿದ್ದು ತಾಯಿಯಾಗಿ ನನ್ನ ಮಗಳ ಸುರಕ್ಷತೆ,ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ಎಲ್ಲಾ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಈ ವಿಷಯವು ವೈಯಕ್ತಿಕ ಹಾಗೂ ಭಾವನಾತ್ಮಕ ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಿದ್ದಾಗಿದೆ ಎಂದು ಬರೆದು ಕೊಂಡಿದ್ದಾರೆ.

1000644013

ಅಜಯ್ ರಾವ್ ಯುದ್ಧ ಕಾಂಡ 2 ಚಿತ್ರವನ್ನು ನಿರ್ಮಿಸುವುದಕೋಸ್ಕರ ಮೈ ತುಂಬಾ ಸಾಲ ಮಾಡಿ ತಮ್ಮಲ್ಲಿದ್ದ ಕಾರನ್ನು ಕೂಡ ಮಾರಿದ್ದರು

ಕಾರು ಮಾರಾಟ ಮಾಡಿದ್ದಾಗ ಮಗಳು ಅಳುತ್ತಿದ್ದ  ವಿಡಿಯೋ ಕೂಡ ವೈರಲ್ ಆಗಿದ್ದು ನಿಮಗೆ ನೆನಪಿರಬಹುದು.

1000644071

ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಯುದ್ಧ ಕಾಂಡ 2  ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದರೂ ಕೂಡ ಹಾಗೂ ಚಿತ್ರ ಒಂದಷ್ಟು ವಾರಗಳು ಓಡಿದರೂ ಕೂಡ ಅಜಯ್ ರಾವ್ ಗೆ ಹಾಕಿದ ಬಂಡವಾಳ ವಾಪಸ್ ಬಂದಿರಲಿಲ್ಲ.

ಪತ್ನಿಯ  ಇಚ್ಚೆಗೆ ವಿರುದ್ಧ ಸಿನಿಮಾ ನಿರ್ಮಾಣ ಮಾಡಿ ಎಲ್ಲವನ್ನು ಕಳೆದುಕೊಂಡ ಅಜಯ್ ರಾವ್ ಅವರ ಬದುಕಲ್ಲಿ ಎಲ್ಲವು ಸರಿ ಇಲ್ಲ ಎಂಬುದು ಇತ್ತೀಚೆಗೆ ಸಾಬೀತಾಗಿತ್ತು.ಒಟ್ಟಿನಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾ ನಿರ್ಮಿಸಲು  ಹೋಗಿ ತಮ್ಮ ಸಾಂಸಾರಿಕ ಜೀವನವನ್ನು ಸ ರಿದೂಗಿಸುವ ವಿಷಯದಲ್ಲಿ ಅಜಯ್ ರಾವ್ ತೊಂದರೆಗೆ ಸಿಲುಕಿದ್ದಾರ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ