- ರಾಘವೇಂದ್ರ ಅಡಿಗ ಎಚ್ಚೆನ್.
ಆಟೋ ಚಾಲಕರ ವೈಯಕ್ತಿಕ ಜೀವನದ ನೋವು ನಲಿವು, ಪ್ರೀತಿ ಪ್ರೇಮದ ಬದುಕನ್ನು ತೆರೆದಿಡುವ ಚಿತ್ರ ರಿಕ್ಷಾ ಚಾಲಕ. ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಯುವನಟ ಚಿರಂತ್ ಈ ಚಿತ್ರದಲ್ಲಿ ರಿಕ್ಷಾ ಚಾಲಕನಾಗಿ ನಟಿಸಿದ್ದು, ನಂದಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಆಯುಷ್ ಶಶಿಕುಮಾರ್ ಅವರ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಶರಾವತಿ ಶಶಿಕುಮಾರ್ ಅವರು ನಿರ್ಮಿಸಿದ್ದಾರೆ,
ಕೊರೋನಾ ಲಾಕ್ಡೌನ್ ಸಮಯದಲ್ಲಿ ಆಟೋ ಚಾಲಕರುಗಳು ಎದುರಿಸಿದ ಸಂಕಷ್ಟ, ತೊಂದರೆಗಳನ್ನು ಆಯುಷ್ ಈ ಸಿನಿಮಾ ಮೂಲಕ ಹೇಳ ಹೊರಟಿದ್ದಾರೆ, ಒಳ್ಳೇ ಆಟೋ ಚಾಲಕನೊಬ್ಬ ಸಮಾಜದಲ್ಲಿ ಏನೆಲ್ಲ ಕಷ್ಟ ಎದುರಿಸುತ್ತಾನೆ, ಆಟೋ ಟ್ರೈವರ್‌ಗಿರುವ ಕಷ್ಟಗಳೇನೆಂದು ಈ ಚಿತ್ರದಲ್ಲಿ ಹೇಳಲಾಗಿದೆ.
ಇದೊಂದು ಆಕ್ಷನ್ ಫ್ಯಾಮಿಲಿ ಡ್ರಾಮಾ ಕಥೆಯಾಗಿದ್ದು, ಮೈಸೂರು, ವರುಣಾ, ಕೆಆರ್.ನಗರ, ಸಾಲಿಗ್ರಾಮ ಹಾಗೂ ಮುರುಡೇಶ್ವರದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಧರ್ಮಾಚಾರಿ ಅವರ ಸಹ ನಿರ್ಮಾಣ, ವಂಶಿ ಅವರ ಸಂಕಲನ, ಆನಂದ್ ಅವರ ಛಾಯಾಗ್ರಹಣ ವೇದಾಂತ್ ಅತಿಶಯ್ ಜೈನ್ ಅವರ ಸಂಗೀತ
ರಿಕ್ಷಾ ಚಾಲಕ' ಚಿತ್ರಕ್ಕಿದ್ದು, ಕಥೆ, ಸಾಹಿತ್ಯವನ್ನು ಶಶಿ ಆರಕ್ಷಕ್ ಬರೆದಿದ್ದಾರೆ.
ಈ ಚಿತ್ರದಲ್ಲಿ ಚಿರಂತ್ ಒಬ್ಬ ಆಟೋಚಾಲಕನಾಗಿ ನಟಿಸಿದ್ದು ಉಳಿದ ತಾರಾಗಣದಲ್ಲಿ ನಂದಿನಿ, ದರ್ಶನ್, ಬಲ ರಾಜವಾಡಿ, ಚಂದ್ರಪ್ರಭ, ಮಿಮಿಕ್ರಿ ಗೋಪಿ, ರಜನಿ, ಹರೀಶ್, ಮುನಿಸ್ವಾಮಿ, ನವೀನ್ ಕುಮಾರ್ ಮುಂತಾದವರು ನಟಿಸಿದ್ದಾರೆ,