ನೇಹಾ ಬೋಲ್ಡ್ ನೆಸ್ ಗೆ ಗಳಿಸಿದಷ್ಟು ಖ್ಯಾತಿಯನ್ನು ತನ್ನ ನಟನೆಯಲ್ಲಿ ಗಳಿಸಿಲ್ಲ ಎಂಬುದು ಕಹಿ ಸತ್ಯ. ಇತ್ತೀಚೆಗಂತೂ ಅವಳ ಯಾವುದಾದರೊಂದು ಬೋಲ್ಡ್ ಇಮೇಜ್ FB ನಲ್ಲಿ ವೈರಲ್ ಆಗಿ ರಾಲಾಜಿಸುತ್ತಿರುತ್ತದೆ. ಯಾರಾದರೂ ಈಕೆಗೆ ಬಾಲಿವುಡ್ ನಲ್ಲಿ ಬೋಲ್ಡ್ ನೆಸ್ ಗೆ ಎಕ್ಸ್ ಪೈರಿ ಡೇಟ್ ಫಿಕ್ಸ್ ಆಗಿರುತ್ತೆ, ನಟನೆಗಲ್ಲ ಅಂತ ಅನ್ನುವುದನ್ನು ಮನವರಿಕೆ ಮಾಡಿಕೊಡಬೇಕಷ್ಟೆ. ಇನ್ನೂ ಟೈಂ ಇದೆ ಬೇಬಿ, ಬೆಟರ್ ಲರ್ನ್! ಅಂತಿದ್ದಾರೆ ಫ್ಯಾನ್ಸ್.
ಕೆರಿಯರ್ ನಲ್ಲೂ ಪರಿಣೀತಿ ಉನ್ನತಿಗೇರುವಳೇ?
`ಊಂಚಾಯಿ' (ಔನ್ನತ್ಯ) ಚಿತ್ರದಲ್ಲಿ ಬಿಗ್ ಬಿ, ಅನುಪಮ್ ಖೇರ್, ಬೋಮನ್ ಇರಾನಿಯಂಥ ಘಟಾನುಘಟಿಗಳ ಜೊತೆ ನಟಿಸಿಯೂ ಪರಿಣೀತಿ ಚೋಪ್ರಾ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾಳೆ. ಈ ಚಿತ್ರದಲ್ಲಿ ಇವಳದು ಮಹತ್ತರ ಪಾತ್ರವೇನೂ ಅಲ್ಲ, ಆದರೆ ಪ್ರಭಾಶಾಲಿ ಎಂಬುದಂತೂ ನಿಜ. ಇದಾದ ನಂತರ ಈಕೆ ಇಮ್ತಿಯಾಜ್ ಅಲಿಯ ಮುಂದಿನ `ಚಮ್ಕೀಲಾ' ಚಿತ್ರದಲ್ಲಿ ನಟಿಸಲಿದ್ದಾಳೆ. ಹಾಗಿದ್ದರೆ ಪರಿಣೀತಿ ತನ್ನ ಕೆರಿಯರ್ ನಲ್ಲೂ `ಊಂಚಾಯಿ' (ಉನ್ನತಿ)ಗೇರುತ್ತಿದ್ದಾಳೆ ಅಂದುಕೊಳ್ಳೋಣವೇ?
ರಣಬೀರ್ ನ ಮುಗಿಯದ ಚಿಂತೆ
ಹೊಸದಾಗಿ ತಂದೆ ಆಗಿರುವ ರಣಬೀರ್ ಕಪೂರ್ ಅದರಿಂದ ಬಲು ಖುಷ್, ಆದರೆ ಭೀ ಚಿಂತೆಯಲ್ಲಿ ಮುಳುಗಿ ಹೋಗಿದ್ದಾನೆ. 40+ನಲ್ಲಿ ತಾನು ಮದುವೆಯಾಗಿ ತಂದೆ ಅಂತೂ ಆದೆ, ಆದರೆ ಮುಂದೆ ಮಗಳು 20+ ಆದಾಗ, ತಾನು 60+ ಆಗಿರುತ್ತೇನೆ, ಹಾಗಾಗಿ ಜನರೇಶನ್ ಗ್ಯಾಪ್ ಹೆಚ್ಚಿರುತ್ತದೆ ಅಂತ. ಅಷ್ಟು ಹೊತ್ತಿಗೆ ತನಗೆ ಹೆಚ್ಚು ಎನರ್ಜಿ ಇರುವುದೂ ಇಲ್ಲ ಎಂಬುದು ಮತ್ತೊಂದು ಚಿಂತೆ. ಒಬ್ಬ ಪ್ರೌಢ ತಂದೆ ತನ್ನ ಟೀನೇಜ್ ಮಗಳ ಜೊತೆ ಜೀವನ ಎಂಜಾಯ್ ಮಾಡುವಂತೆ ತನ್ನ ಪಾಡು ಇರುವುದಿಲ್ಲ ಎಂಬುದೇ ದೊಡ್ಡ ಚಿಂತೆ. ವಿಷಯ ಏನೋ ಸರಿ, ಆದರೆ ಉತ್ತಮ ಕೆರಿಯರ್ ರೂಪಿಸಿಕೊಳ್ಳಲು ಏನೋ ಒಂದನ್ನು ತ್ಯಾಗ ಮಾಡಲೇಬೇಕಲ್ಲವೇ.....?
ಕರಣ್ ನ ಮೋಡಿ
`ಏಕ್ ಹಜಾರೋಂ ಮೇ ಮೇರಿ ಬೆಹ್ನಾ ಹೈ, ರಂಗ್ ಬದಲ್ತೀ ಓಡ್ನಿ' ಮುಂತಾದ ಟಿವಿ ಧಾರಾವಾಹಿಗಳಿಂದ ಖ್ಯಾತಿ ಪಡೆದು, ಆ್ಯಂಕರ್ ಆಗಿ ಯಶಸ್ಸು ಗಳಿಸಿದ ನಟ ಕರಣ್, ತನ್ನದೇ ವಿಶಿಷ್ಟ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾನೆ. ಇತ್ತೀಚೆಗೆ ಆತ ಮುಂದುವರಿದು ವೆಬ್ ಸೀರೀಸ್ ನ `ಸ್ಪೆಷಲ್ ಆಪ್ಸ್'ನಲ್ಲಿ ಜಬರ್ದಸ್ತ್ ಪಾತ್ರ ನಿಭಾಯಿಸಿದ. ಈಗ ಈತ ಹಿಂತಿರುಗಿ ನೋಡುವ ಅಗತ್ಯವಿಲ್ಲ. ಈತನ ಲೇಟೆಸ್ಟ್ ವೆಬ್ ಸೀರೀಸ್ ಶೋ `ಖಾಕಿ ದಿ ಬಿಹಾರ್ ಚ್ಯಾಪ್ಟರ್' ಬಲು ಚರ್ಚೆಯಲ್ಲಿದೆ. ಇದರಲ್ಲಿ ಈತ ಒರಿಜಿನಲ್ ಪೊಲೀಸ್ ಅಧಿಕಾರಿ ಅಮಿತ್ ಲೊಂಢಾರ ಪಾತ್ರ ಮಾಡಿದ್ದಾನೆ. ಈ ಸೀರೀಸ್ ನ ಕಥೆ ಹೆಚ್ಚು ಥ್ರಿಲ್ಲಿಂಗ್ ಆಗಿದೆ, ಅದರಲ್ಲಿ ಕರಣ್ ನ ಪಾತ್ರ ದಿ ಬೆಸ್ಟ್! ಕ್ರೈಂ ಆಧಾರಿತ ಕಥೆಯಾದರೂ ಇಲ್ಲಿ ಅವಾಚ್ಯ ಶಬ್ದಗಳ ಬಳಕೆ ಇಲ್ಲ ಎಂಬುದೇ ವಿಶೇಷ.
ಎಲ್ಲಿ ಹೋಯ್ತು ಭೇಡಿಯಾ?
ವರುಣ್ ಧವನ್ ನ ಹೊಸ `ಭೇಡಿಯಾ' (ತೋಳ) ಚಿತ್ರ ಕಾಡಿನಲ್ಲಿ ಅದು ಹೇಗೆ ಕಣ್ಮರೆ ಆಯ್ತೋ ಗೊತ್ತಾಗುತ್ತಿಲ್ಲ! ಅತಿ ಚೀಪ್ ಖೌ ಟ್ರಿಕ್ಸ್ ಅತಿ ಸಡಿಲ ಕಥಾಹಂದರ ಹೊಂದಿದ್ದ ಈ ಚಿತ್ರ ಥಿಯೇಟರ್ ನಲ್ಲಿ ರಿಲೀಸ್ ಆದದ್ದೇ ಹೆಚ್ಚು. ಆದರೆ ರಿಲೀಸ್ ಆದ 1-2 ದಿನಗಳಲ್ಲೇ ಈ ಚಿತ್ರದ ವೀಕ್ಷಕರು ಕಣ್ಮರೆ ಆಗತೊಡಗಿದರು. ವರುಣ್ ತಾನು ತೋಳನಾಗಿ ಬಂದು ಎಲ್ಲರನ್ನೂ ಸೆಳೆದುಬಿಡುವೆ ಎಂದೇ ಭ್ರಮಿಸಿದ್ದ. ಹಿಂದೆ ಇದೇ ತರಹ ರಾಹುಲ್ ರಾಯ್ (ಆಶಿಕಿ ಖ್ಯಾತಿ) ಹುಲಿಯಾಗಿ ಬಂದು `ಜುನೂನ್' ಮೂಲಕ ಮುಗ್ಗರಿಸಿದ್ದು ನೆನಪಿದೆಯೇ? ಆದರೆ `ಭೇಡಿಯಾ'ದ ನಿರ್ಮಾಪಕರು ಅಸಲಿ ಜಂಗಲ್ ನ ಹುಲಿಗಳೆಂದರೆ ವೀಕ್ಷಕರು ಎಂಬುದನ್ನೇ ಮರೆತಂತಿದೆ. ಚಿತ್ರ ಉಳಿಸುವುದು, ಕಿತ್ತೊಗೆಯುವುದಂತೂ ಅವರ ಕೈಲಿ ತಾನೇ ಇದೆ? ಇದರಿಂದಾಗಿ ಕೃತಿ ಸೇನನ್ ಳಿಗಿದ್ದ ಬ್ರಾಂಡ್ ವ್ಯಾಲ್ಯೂ ಸಹ ತೋಪಾಯಿತು. ಕೃತಿ ವರುಣ್ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.