ಶರತ್ ಚಂದ್ರ
ಇತ್ತೀಚಿನ ಕೆಲವು ದಿನಗಳಿಂದ ಯಶ್ ಅಭಿನಯದ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿರುವ ಪ್ರಮುಖ ನಟಿಯರ ಒಂದೊಂದೇ ಪೋಸ್ಟರ್ ಗಳು ಬಿಡುಗಡೆಯಾಗಿರುವುದು ನಿಮಗೆಲ್ಲ ಗೊತ್ತಿದೆ. ಕಿಯಾರಾ ಅಡ್ವಾಣಿ, ಹ್ಯೂಮ ಖುರೇಶಿ ನಯನ್ ತಾರಾ, ತಾರಾ ಸುತೈರಾ ಅವರ ಫಸ್ಟ್ ಲುಕ್ ಗಳು ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆದಿವೆ.
ಈ ಎಲ್ಲಾ ನಟಿಯರ ಫಸ್ಟ್ ಲುಕ್ ಅನಾವರಣ ವಾದ ಬಳಿಕ ಈಗ ನಮ್ಮ ಕನ್ನಡದ ಇತ್ತೀಚಿನ ಎಲ್ಲರ ನೆಚ್ಚಿನ ನಟಿ ರುಕ್ಕು ಅಂದರೆ ರುಕ್ಮಿಣಿ ವಸಂತ್ ಲುಕ್ ಹೊರ ಬರಲು ಎಲ್ಲಾ ತುದಿ ಕಾಲಿನಲ್ಲಿ ನಿಂತಿದ್ದರು.

ಯಶ್ ಮತ್ತು ಚಿತ್ರ ತಂಡ ಇವತ್ತು ಬೆಳಿಗ್ಗೆ ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಆಕೆಯ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ಕಾಯುವಿಕೆಗೆ ತೆರೆ ಎಳೆದಿದ್ದಾರೆ.

ಇಡೀ ಚಿತ್ರದಲ್ಲಿ ಕನ್ನಡ ಮೂಲದ ನಾಯಕಿಯೆಂದರೆ ರುಕ್ಕು ಒಬ್ಬಳೇ. ಪೋಸ್ಟರ್ ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ರುಕ್ಕು ಎರಡು ಮೂರು ವರ್ಷಗಳಿಂದ ದಕ್ಷಿಣದ most happening ಹೀರೋಯಿನ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕಳೆದ ವರ್ಷ ಬಿಡುಗಡೆಯಾದ ಕಾಂತರ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದರೂ ಕೂಡ ತನ್ನ ನಟನೆ ಮತ್ತು ಸೌಂದರ್ಯ ಮೂಲಕ ಹೊಸ ನ್ಯಾಷನಲ್ ಕ್ರಶ್ ಅನಿಸಿಕೊಂಡಿದ್ದರು. ಒಟ್ಟಿನಲ್ಲಿ ಮೆಲ್ಲಿಸಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರುಕ್ಮಿಣಿ ವಸಂತ್ ಪಾತ್ರ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿದೆ.





