ಚಿತ್ರ: ಸಂಜು ವೆಡ್ಸ್ ಗೀತಾ 2
ನಿರ್ದೇಶನ: ನಾಗಶೇಖರ್
ನಿರ್ಮಾಣ: ಛಲವಾದಿ ಕುಮಾರ್
ತಾರಾಂಗಣ: ಶ್ರೀನಗರ ಕಿಟ್ಟು, ರಚಿತಾ ರಾಂ, ಸಂಪತ್ ಕುಮಾರ್, ಸಾಧುಕೋಕಿಕಾ, ತಬಲ ನಾಣಿ ಮತ್ತಿತರರು
ರೇಟಿಂಗ್: 2.25/5

- ರಾಘವೇಂದ್ರ ಅಡಿಗ ಎಚ್ಚೆನ್.
ಸಂಜು(ಶ್ರೀನಗರ ಕಿಟ್ಟಿ) ಶಿಡ್ಲಘಟ್ಟ ರೇಷ್ಮೆ ಸೀರೆಯ ವ್ಯಾಪಾರಿ. ಗೀತಾ (ರಚಿತಾ ರಾಮ್) ಓರ್ವ ಶ್ರೀಮಂತ ಉದ್ಯಮಿಯ ಮಗಳು ಗೀತಾ ಸಂಜು ಕೊಟ್ಟ ಒಂದು ಸೀರೆಯನ್ನು ಉಟ್ಟು “ಮಿಸ್ ಕರ್ನಾಟಕ” ಪ್ರಶಸ್ತಿ ಗೆಲ್ಲುತ್ತಾಳೆ. ಅವಳಿಗೆ ಸಂಜುವಿನ ಮೇಲೆ ಪ್ರೀತಿಯಾಗುತ್ತದೆ. ಗೀತಾಳ ಮನೆಯವರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗುತ್ತಾರೆ. . ಮುಂದೆ ಅವರ ಬದುಕು ಯಾವುದೆಲ್ಲಾ ತಿರುವು ಪಡೆಯುತ್ತದೆ? ಸಂಜು ಮತ್ತು ಗೀತಾ ಬಾಳು ಹಸನಾಯಿತಾ? ಇದೇ ಸಿನಿಮಾದ ಮುಖ್ಯ ತಿರುಳು., ನೀವದನ್ನು ಸಿನಿಮಾ ಮಂದಿರದಲ್ಲೇ ನೋಡಬೇಕು. ಹಾಗೆಯೇ ಇಡ್ಲಿ ಹಾಗೂ ಈ ಸಿನಿಮಾಗೆ ಒಂದು ವಿಶೇಷ ಸಂಬಂಧ ಇದೆ. ಚಿತ್ರದ ಪ್ರಾರಂಭದ ಕೆಲವು ದೃಶ್ಯಗಳಲ್ಲಿ ಸಹ ಇಡ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಆಹ್! ಏನಿದು ಎಂದು ಕೇಳಿದರೆ IDLY ಎಂದರೆ”ಐ ಡೀಪ್ಲಿ ಲವ್ ಯು! (I Deeply Love You!)” ಹೌದು ಇದರ ಆಳವನ್ನು ತಿಳಿಯುವ ಮನಸ್ಸಿದ್ದರೆ ನೀವು ಸಂಜು ವೆಡ್ಸ್ ಗೀತಾ 2 ಸಿನಿಮಾ ವೀಕ್ಷಿಸಬೇಕು.
ಸಂಜು ವೆಡ್ಸ್ ಗೀತಾ ಎನ್ನುವ ಈ ಹಿಂದೆ ತೆರೆಗೆ ಬಂದಿದ್ದ ಚಿತ್ರಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಆ ಶೀರ್ಷಿಕೆ ಮಾತ್ರವೇ ಇಲ್ಲಿ ಬಳಕೆ ಆಗಿದೆ. ಅಲ್ಲಿನ ಮುಖ್ಯ ಪಾತ್ರಧಾರಿಗಳ ಹೆಸರು ಹಾಗೂ ಅಲ್ಲಿಯೂ ಕಾಣಿಸಿಕೊಂಡಿದ್ದ ಕೆಲವಷ್ಟು ನಟರು ಇಲ್ಲಿಯೂ ಅಭಿನಯಿಸಿದ್ದಾರೆ ಎನ್ನುವುದು ಹೊರತು ಆ ಸಿನಿಮಾದ ಹೋಲಿಕೆ ಇಲ್ಲಿಲ್ಲ. ಮುಖ್ಯವಾಗಿ ಅಲ್ಲಿ ಹಾಡು ಹಾಗೂ ಛಾಯಾಗ್ರಹಣದ ಜೊತೆಗೆ ಮನಸ್ಸನ್ನು ಕಾಡುವ ಒಂದು ಕಥೆ ಇತ್ತು. ಆದರೆ ಇಲ್ಲಿ ಆ ಕಥೆ ಕಾಣೆಯಾಗಿದೆ. ಚಿತ್ರಕಥೆ ಮನಸ್ಸನ್ನು ತಟ್ಟುವುದಿಲ್ಲ. ಬಹುತೇಕ ಪೇಲವವಾಗಿದೆ ಎನ್ನಬಹುದು. ಸಂಭಾಷಣೆಯಲ್ಲಿ ಗಟ್ಟಿತನವಿಲ್ಲ, ಕಥಾ ನಿರೂಪಣೆ ಈ ಹಿಂದಿನ ಚಿತ್ರದಂತೆ ಬಿಗಿಯಾಗಿಲ್ಲದಿರುವುದು ಪ್ರೇಕ್ಷಕರ ತಳ್ಮೆ ಪರೀಕ್ಷಿಸುವಂತೆ ಮಾಡುತ್ತದೆ.
ಪ್ರೇಮಕಥೆಗಳನ್ನು ಹೇಳುವುದರಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದ ನಾಗಶೇಖರ್ ಈ ಬಾರಿ ಮನಸ್ಸನ್ನು ಕಾಡಬಲ್ಲ ಗಟ್ಟಿ ಕಥೆಯನ್ನು ಕೊಡುವಲ್ಲಿ ಸೋತಿದ್ದಾರೆ. ಒಟ್ತಾರೆ ಇಡೀ ಸಿನಿಮಾ ಕಥೆ ನೀರಸವಾಗಿ ಸಾಗಿದೆ.
ಈ ಚಿತ್ರವು ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳು ಸೇರಿದಂತೆ ರೇಷ್ಮೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ,ದೆ ಆದರೆ ಅದು ಕೇವಲ ಒಂದೆರಡು ದೃಶ್ಯಗಳಲ್ಲಿ ಮಾತ್ರ ಸೀಮಿತವಾಗಿದ್ದು ಉಳಿದಂತೆ ಇದರ ಸಂಬಂಧ ಯಾವ ಕೌತುಕವನ್ನು ಉಂಟುಮಾಡುವುದಿಲ್ಲ.
ಶ್ರೀನಗರ ಕಿಟ್ಟಿ, ಸಾಧು ಕೋಕಿಲಾ, ಸಂಪತ್ ಕುಮಾರ್ ಮೊದಲಾದವರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ ಆದರೂ ಕಥೆಯ ಕಾರಣಕ್ಕೆ ಇವರೆಲ್ಲರ ಪಾತ್ರ ಮನಮುಟ್ಟುವುದಿಲ್ಲ. ಸಾಧುಕೋಕಿಲಾ, ತಬಲಾ ನಾಣಿ ಹಾಸ್ಯ ಸಹ ವರ್ಕೌಟ್ ಆಗುವುದಿಲ್ಲ. ಇನ್ನು ರಚಿತಾ ರಾಮ್ ಅವರಿಗೆ ಸಿನಿಮಾದಲ್ಲಿ ಅತಿ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಅವರು ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಆದರೆ ಇಲ್ಲಿಯೂ ಸಹ ಕಥೆಯ ಕಾರಣಕ್ಕೆ ಅವರ ಪಾತ್ರದಲ್ಲಿಯೂ ಕೊರತೆ ಕಾಣಿಸುತ್ತದೆ. ಒಟ್ಟಾರೆ ಚಿತ್ರದಲ್ಲಿ ಯಾವ ನಟರಿಗೂ ನಟನೆಗೆ ಸಾಕಷ್ಟು ಸ್ಕೋಪ್ ಸಿಕ್ಕಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಹುದು. ರಾಗಿಣಿ ದ್ವಿವೇದಿಯ ಪಾತ್ರ ಚಿತ್ರದಲ್ಲಿ ಏಕೆದೆ? ಅದರ ಹಿನ್ನೆಲೆ ಏನೆನ್ನುವುದು ಪ್ರೇಕ್ಷಕರಿಗೆ ಕಡೆಗೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿಯಲಿದೆ.
ಹಾಗಾದರೆ ಚಿತ್ರದಲ್ಲಿ ಇರೋ ಪ್ಲಸ್ ಪಾಯಿಂಟ್ ಏನೆಂದು ಕೇಳುವುದುಆದರೆ ಅದು ಸತ್ಯ ಹೆಗಡೆಯವರ ಛಾಯಾಗ್ರಹಣ ಹಾಗೂ ಶ್ರೀಧರ್ ಸಂಭ್ರಮ್ ಸಂಗೀತದಲ್ಲಿ ಮೂಡಿ ಬಂದಿರುವ ಕವಿರಾಜ್ ಅವರ ಹಾಡುಗಳು. ಸತ್ಯ ಹೆಗಡೆ ಕ್ಯಾಮೆರಾದಲ್ಲಿ ಸ್ವಿಡ್ಜರ್ಲ್ಯಾಂಡಿನ ಪರಿಸರ ಸುಂದರ ಭೂದೃಶ್ಯಗಳನ್ನು ಮತ್ತಶ್ಟು ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ. :ಮಳೆಯಂತೆ ಬಾ”, “ಅವನು ಸಂಜು ಇವಳು ಗೀತಾ” ಸೇರಿದಂತೆ ಎಲ್ಲಾ ಹಾಡುಗಳೂ ನೋಡಲು, ಕೇಳಲು ಇಷ್ಟವಾಗುತ್ತದೆ.
ನಿರ್ಮಾಪಕರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸ್ವಿಡ್ಜರ್ಲ್ಯಾಂಡಿನ ದೃಶ್ಯಗಳು, ರೋಲ್ಸ್ ರಾಯ್ಸ್ ಕಾರು, ಹೆಲಿಕಾಪ್ಟರ್ ಎಲ್ಲವನ್ನೂ ಬಳಸಿ ಅದ್ದೂರಿತನವನ್ನು ತೆರೆ ಮೇಲೆ ತಂದಿದ್ದಾರೆ. ಆದರೆ ಇದೆಲ್ಲವೂ ಗಟ್ಟಿಯಾದ ಕಥೆ, ಚಿತ್ರಕಥೆ ಇಲ್ಲದ ಕಾರಣ ಸಿನಿಮಾದ ಒಂದು ಪಾತ್ರ ಸಂಭಾಷಣೆಯಲ್ಲಿ ಬರುವಂತೆ ಬಟ್ತೆಯಂಗಡಿಯ ಬೊಂಬೆಗೆ ಸೀರೆ ಉಡಿಸಿದಂತಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ