ಎಸ್. ಜೆ.

ಆರಕ್ಕೇರದೆ ಮೂರಕ್ಕಿಳಿಯದೇ ಸಿನಿಮಾ ರಂಗಕ್ಕೆ ಬಂದಾಗಿನಿಂದ  ಒಂದೇ ಸ್ಟೇಟಸ್ ಮೆಂಟೇನ್ ಮಾಡಿರುವ ನಟಿ ಶಾನ್ವಿ ಶ್ರೀವಾತ್ಸವ್  ಹನ್ನೆರಡು ವರ್ಷಗಳ  ಫಿಲಂ ಜರ್ನಿ ಮುಗಿಸಿದ್ದಾಳೆ..

ಒಂದಷ್ಟು ಒಳ್ಳೆ ಪಾತ್ರಗಳನ್ನೂ ಮಾಡಿದ್ದಾಳೆ. ದರ್ಶನ ಜೊತೆ ತಾರಕ್ ಸಿನಿಮಾದಲ್ಲಿ ಶಾನ್ವಿ ಸಾಕಷ್ಟು ಗಮನ ಸೆಳೆದಿದ್ದಳು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲೂ ಅಷ್ಟೇ..

ಇದೀಗ ಅಮೇರಿಕಾ ಅಮೇರಿಕಾ 2 ಸಿನಿಮಾ ಮೂಲಕ ನಾಗತಿಹಳ್ಳಿ ಚಂದ್ರಶೇಖರ ಗರಡಿಯಲ್ಲಿ ಪಳಗಳಿದ್ದಾಳೆ..

ಹಿಂದಿ ಮಾತೃ ಭಾಷೆಯಾದರೂ ಕರ್ನಾಟಕ, ಕನ್ನಡ ಸಿನಿಮಾ ರಂಗ ನನ್ನ ತವರು ಮನೆ ಎನ್ನುವ ಶಾನ್ವಿ  ಬಾಲಿವುಡ್ ವ್ಯಾಮೋಹ ತನಗಿಲ್ಲ ಎನ್ನುತ್ತಾಳೆ.

ಮೊದಲ ಆದ್ಯತೆ ಕನ್ನಡ ಸಿನಿಮಾಗೆ ಅಂತೆ. ಬೆಂಗಳೂರು ಈ ಹನ್ನೆರಡು ವರ್ಷಗಳು ನನ್ನನ್ನು ಅಪಾರ ಪ್ರೀತಿಯಿಂದ ನೋಡಿಕೊಂಡಿದೆ. ಇಲ್ಲಿಯ ಜನರು, ಊಟ, ಆತ್ಮೀಯತೆ ಎಲ್ಲವೂ ನನ್ನ ಸೆಳೆದುಬಿಟ್ಟಿದೆ.

IMG-20260804-WA0075

ಇಲ್ಲಿಯವರೆಗೆ ಶಾನ್ವಿ ಸಿನಿಮಾ ರಂಗದಲ್ಲಿ ಕೆಟ್ಟ ಹೆಸರು ಪಡೆದುಕೊಂಡಿಲ್ಲ  ಕಾರಣ ನಾನು ಸಿನಿಮಾ ರಂಗಕ್ಕೆ ಬರುವ ಮುನ್ನ  ರೂಲ್ಸ್ ಗಳನ್ನು, ಕಂಡೀಶನ್ಸ್ ಗಳನ್ನ ಹಾಕಿಕೊಂಡು ಬಂದವಳಲ್ಲ. ಒಳ್ಳೆ ನಿರ್ದೇಶಕರು, ನಿರ್ಮಾಪಕರು, ನಾವು ಆರಿಸಿಕೊಳ್ಳುವ ಪಾತ್ರಗಳು ಅದಾಗೇ ಬಂದವು.

ನಾನು ಕೂಡ ಅದೇ ಇಮೇಜನ್ನು ಕಾಪಾಡಿಕೊಂಡು ಬಂದಿದ್ದೇನೆ.

ಶಾನ್ವಿ ವಾರಣಾಸಿ ಮೂಲದವಳು.. ಹಾಗಾಗಿ ಆಗಾಗ್ಗೆ ಅಲ್ಲಿಗೆ ವಿಸಿಟ್ ಕೊಟ್ಟು ಮನೆಯವರೊಂದಿಗೆ ಒಳ್ಳೆ ಸಮಯ ಕಳೆದು ಬರುತ್ತಾಳಂತೆ.

ಮುಂಬೈಯಲ್ಲಿ ಮನೆ ಮಾಡಿದ್ದರೂ ವಾರಣಾಸಿ, ಬೆಂಗಳೂರಿಗೆ ಹೆಚ್ಚು ಅಟ್ಯಾಚ್ ಆಗಿದ್ದಾಳಂತೆ.

ಅಮೇರಿಕಾ ಅಮೇರಿಕಾ 2 ಬಗ್ಗೆ ತುಂಬಾ ನಿರೀಕ್ಷೆ ಇರುತ್ತದೆ..

ಮೊದಲ ಚಿತ್ರ ಬಂದು ಮೂವತ್ತು ವರ್ಷಗಳಾಗಿವೆ.. ನಾಗತಿಹಳ್ಳಿಯವರಂಥ ಲೆಜೆಂಡ್ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದೇ ನನ್ನ ಅದೃಷ್ಟ.. ಎಂದು ಶಾನ್ವಿ ತುಂಬಾ ಉತ್ಸುಕಳಾಗಿದ್ದಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ