ಶಿಖಾ ಶರ್ಮ ಕ್ರಿಯೇಟಿವ್ ಹೆಡ್ಪ್ರೊಡ್ಯೂಸರ್

ಮನರಂಜನೆಯ ಪ್ರಪಂಚದಲ್ಲಿ ಕ್ರಿಯೇಟಿವ್ ಹೆಡ್‌ ಪ್ರೊಡ್ಯೂಸರ್‌ ಆಗಿರುವ ಶಿಖಾ ಶರ್ಮಾಳಿಗೆ ಸದಾ ಉತ್ತಮ ಹಾಗೂ ಮನರಂಜನೀಯ ಕಥೆಗಳನ್ನು ಹೇಳುವ ಷೋಕಿ ಇದೆ. ಇದಕ್ಕಾಗಿ ಆಕೆ ಮೊದಲು ಹಲವು ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಕೆಲಸ ಮಾಡಿದಳು.

ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆಯುವುದರಿಂದ ಹಿಡಿದು ಬಿಡುಗಡೆ ಆಗುವವರೆಗೂ, ವೀಕ್ಷಕರ ರಿವ್ಯೂ ಅರ್ಥ ಮಾಡಿಕೊಳ್ಳುವವರೆಗೂ ಕೆಲಸ ಮಾಡಿದಳು. ಆಕೆ ಮುಂದೆ ಅಂಥದೇ ಕಥೆಗಳನ್ನು ಬೆಳ್ಳಿ ಪರದೆಗೆ ತರಲು ಪ್ರಯತ್ನಿಸಿದಾಗ ಸಾಕಷ್ಟು ಹೆಣಗಬೇಕಾಯಿತು, ಜೊತೆಗೆ ಅಕ್ಕಪಕ್ಕ ಅಲ್ಲಿ ಇಲ್ಲ ಕಂಡಂಥ, ಕೇಳಿದಂಥ ಸತ್ಯ ಕಥೆಗಳನ್ನೇ ಚಿತ್ರವಾಗಿ ಆರಿಸಿಕೊಳ್ಳತೊಡಗಿದಳು.

ಈ ಸೀರೀಸ್‌ ನಲ್ಲಿ ಶಿಖಾ ಮೊದಲು `ಮಕ್ಬೂಲ್‌' ಚಿತ್ರಕ್ಕಾಗಿ ಪೋಸ್ಟ್ ಪ್ರೊಡಕ್ಷನ್‌ ಅಸಿಸ್ಟೆಂಟ್‌, ನಂತರ `ಶೇರ್‌ ನಿ, ಛೋರಿ, ಶಕುಂತಲಾ ದೇವಿ, ದುರ್ಗಾವತಿ, ಹಶ್‌ ಹಶ್‌, ನೂರ್‌' ಇತ್ಯಾದಿ ಹಲವು ಚಿತ್ರಗಳಿಗೆ ಲೇಖನ, ಕಥೆ, ಸಂಭಾಷಣೆ ಸಿದ್ಧಪಡಿಸಿದಳು.

Shikha-1

ಗೃಹಶೋಭಾ ಪ್ರತಿನಿಧಿಯೊಂದಿಗೆ ಸುದೀರ್ಘ ಸಂದರ್ಶನ ನೀಡಿದ ಶಿಖಾ, ಬಾಲಿವುಡ್‌ ನ ಕೆಲವು ವಿಶಿಷ್ಟ ಸಂಗತಿಗಳನ್ನು ಹಂಚಿಕೊಂಡಳು. ಯಾವ ರೀತಿ ಒಬ್ಬ ಗಂಡಸನ್ನು ಮುಂದೆ ತರಲು ಹೆಣ್ಣಿನ ಪಾತ್ರ ಪ್ರಮುಖವಾಗುತ್ತದೋ, ಅದೇ ರೀತಿ ನನ್ನ ಯಶಸ್ಸಿನಲ್ಲಿ ನನ್ನ ಪತಿಯ ಬಹು ದೊಡ್ಡ ಪಾತ್ರವಿದೆ ಎಂದು ಹೆಮ್ಮೆಯಿಂದ ಹೇಳುತ್ತಾಳೆ ಶಿಖಾ.

ಮೂಲ ಪ್ರೇರಣೆ

ಈ ಕ್ಷೇತ್ರಕ್ಕೆ ಬರಲು ಮುಖ್ಯ ಪ್ರೇರಣೆ ಎಂದರೆ, ಶಿಖಾ ಹೀಗೆ ವಿವರಿಸುತ್ತಾಳೆ, ``ಬಾಲ್ಯದಿಂದಲೇ ನನಗೂ ನನ್ನ ಪೇರೆಂಟ್ಸ್ ಗೂ ಸಿನಿಮಾ ನೋಡು ಹವ್ಯಾಸ ಹೆಚ್ಚಾಗಿತ್ತು. ಬಾಲ್ಯದಲ್ಲಿ ನಾನು ಪ್ರತಿ ಶುಕ್ರವಾರ ಸಂಜೆ ಬಿಡುಗಡೆಯಾದ ಬಹುತೇಕ ಚಿತ್ರಗಳನ್ನು ನೋಡುತ್ತಿದ್ದೆ. ಹೀಗಾಗಿಯೇ ಅದನ್ನೇ ನನ್ನ ಓದಿನಲ್ಲಿ ಅಳವಡಿಸಿಕೊಳ್ಳಬೇಕೆಂದು, ಫಿಲ್ಮ್ ಮೇಕಿಂಗ್‌ ನ್ನೆ ಮುಖ್ಯ ವಿಷಯವಾಗಿಸಿಕೊಂಡು ಡಿಗ್ರಿ ಪಡೆದೆ. ಹೀಗಾಗಿ ಕ್ರಿಯೇಟಿವ್ ‌ಹೆಡ್‌ ರೂಪದಲ್ಲಿ ಒಂದು ಕಾರ್ಪೊರೇಟ್‌ ಕಂಪನಿಯಲ್ಲಿ ಹಲವು ವರ್ಷ ಕೆಲಸ ಮಾಡಿದೆ.

ಆದರೆ ಇಂಪ್ಯಾಕ್ಟ್ ಫುಲ್ ಪ್ಯಾಕ್ಟ್ ನ್ನು ವೀಕ್ಷಕರೆದುರು ತರಲು ಆಗಲಿಲ್ಲ. ಅದನ್ನು ಗಮನದಲ್ಲಿರಿಸಿಕೊಂಡೇ ನಾನು `ಮಕ್ಬೂಲ್, ಮಂಗಲ್ ಪಾಂಡೆ' ಚಿತ್ರಗಳಿಗೆ ಪ್ರೊಡಕ್ಷನ್‌ ಎಗ್ಸಿಕ್ಯುಟಿವ್ ‌ಆಗುವ ಅವಕಾಶ ಬಂದಾಗ ತಕ್ಷಣ ಕೆಲಸ ಬಿಟ್ಟು ಅದನ್ನು ಒಪ್ಪಿಕೊಂಡೆ.

``ಇದಾದ ನಂತರ ಮತ್ತೊಂದು ಕಂಪನಿಯಲ್ಲಿ ನನಗೆ ಕಂಟೆಂಟ್‌ ಡೆವಲಪ್‌ ಮಾಡುವ ಅವಕಾಶ ಸಿಕ್ಕಿತು. ಹೀಗಾಗಿ ನಾನು `ಶೋರ್‌ ಇನ್‌ ದಿ ಸಿಟಿ, ದಿ ಡರ್ಟಿ ಪಿಕ್ಚರ್‌, ಕ್ಯಾ ಸೂಪರ್‌ ಕೂಲ್ ‌ಹೈ ಹಮ್' ಇತ್ಯಾದಿ ಚಿತ್ರಗಳಿಗೆ ಇದರ ಕಂಟೆಂಟ್‌ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡಿದೆ.''

ಕಥೆ ಹೇಳುವ ಕಿಶಿಖಾ ಮುಂದುವರಿಸುತ್ತಾ ಹೇಳುತ್ತಾಳೆ, ``ನಾನು ಮೂಲತಃ ದೆಹಲಿಯಲ್ಲಿ ಹುಟ್ಟಿ ಬೆಳೆದಳು. ನನ್ನ ತಂದೆ ಸದಾ ವರ್ಗಾವಣೆಯ ನೌಕರಿಯಲ್ಲಿದ್ದರು. ಹೀಗೆ ಉತ್ತರ ಭಾರತದ ಅನೇಕ ರಾಜ್ಯಗಳ ರಾಜಧಾನಿಗಳಲ್ಲಿ ಕಲಿತು ಕೊನೆಗೆ ಮುಂಬೈಗೆ ಬರುವಂತಾಯಿತು. ಅಲ್ಲೇ ಸೆಟಲ್ ಆದ ನಾನು ಕಳೆದ 18 ವರ್ಷಗಳಿಂದ ಮುಂಬೈನಲ್ಲೇ ಕೆಲಸ ಮಾಡುತ್ತಿದ್ದೇನೆ. ಈ ಕ್ಷೇತ್ರಕ್ಕೆ ಬರುವ ಮೊದಲು ನಾನು ಒಂದು ಶಾರ್ಟ್‌ ಫಿಲ್ಮ್ ತಯಾರಿಸಿದ್ದೆ. ಕ್ಯಾಂಪಸ್‌ ಪ್ಲೇಸ್ಮೆಂಟ್‌ ನಿಂದಲೇ ನನಗೆ ಈ ಕೆಲಸ ಸಿಕ್ಕಿತು. ಹೀಗೆ ನಾನು ಮುಂದುವರಿಯುತ್ತಾ ಹೋದೆ. ನಾನು ಸದಾ ಅರ್ಥಬದ್ಧ, ಪ್ರೇರಣಾದಾಯಕ ಕಥೆಗಳನ್ನೇ ಹೇಳಬಯಸುತ್ತೇನೆ. ಇದರಲ್ಲಿ ಮನರಂಜನೆ ಜೊತೆ ಜೊತೆಗೆ ಸಮಾಜಕ್ಕೆ ಏನಾದರೂ ಒಂದು ಸಂದೇಶ ಇರಬೇಕೆಂದು ನಾನು ಬಯಸುತ್ತೇನೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ