- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಸಾಹಿತ್ಯದಲ್ಲಿ ಬಸವಣ್ಣನವರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ. ಪ್ರತಿಯೊಬ್ಬರಿಗೂ ಪ್ರಿಯ. ಇಂತಹಾ ಬಸವಣ್ಣನವರ ವಚನ ಸಾಹಿತ್ಯದ ಸರಳ ಸುಂದರವಾದ ಸಾಲುಗಳನ್ನು ಇಟ್ಕೊಂಡು ಒಂದು ವಿಡಿಯೋ ಸಾಂಗ್ ಮಾಡಿದರೆ ಹೇಗೆ ಅನ್ನುವ ಕಲ್ಪನೆಯಲ್ಲಿ, ಇವತ್ತಿನ ಜೆನ್ ಝೀ ಜನರೇಷನ್ ಗೂ ಮುಟ್ಟಿಸುವ ಸಲುವಾಗಿ ದೃಶ್ಯಕಾವ್ಯವೊಂದು ಬಿಡುಗಡೆಯಾಗಿದೆ.
ಸ್ಯಾಂಡಲ್ ವುಡ್‌ನ ಹೊಸ ತಲೆಮಾರಿನ ಸಂಗೀತಗಾರರಾದ ಜೆ.ಅನೂಪ್ ಸೀಳಿನ್ ಸಿನಿಮಾ ಹಾಡು,ಭಕ್ತಿಗೀತೆ ಹಾಗೂ ಭಾವಗೀತೆ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆಯನ್ನ ನೀಡಿದ್ದಾರೆ. ಇದೀಗ ಅವರು ವಚನ ಸಾಹಿತ್ಯ ಭಂಡಾರದಿಂದ ವಚನವೊಂದನ್ನು ಹೆಕ್ಕಿ ಸಂಗೀತ ಲೋಕಕ್ಕೆ ಅರ್ಪಿಸಿದ್ದಾರೆ. ಅದುವೇ ‘‘ಉಳ್ಳವರು ಶಿವಾಲಯವ’’ ವಿಡಿಯೋ ಸಾಂಗ್.
"ಉಳ್ಳವರು ಶಿವಾಲಯವ ಮಾಡುವರು,
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ , ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ."
12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಈ ಸರಳ ಸುಂದರ ವಚನವನ್ನು ತಮ್ಮ ಇಷ್ಟಲಿಂಗ ಸ್ವರೂಪಿ ಶಿವನಿಗೆ ಅರ್ಪಿಸಿದರು. ಇಂದು ಅನೂಪ್ ಸೀಳಿನ್ ಕನ್ನಡ ಸಂಗೀತ ಲೋಕಕ್ಕೆ ಮನಮುಟ್ಟುವ ಕಣ್ಣಿಗೆ ಹಬ್ಬ ನೀಡುವ ದೃಶ್ಯಕಾವ್ಯವನ್ನು ಅರ್ಪಿಸಿದ್ದಾರೆ. ಇವರು ಕನಸಿಗೆ ಅನೂಪ್ ಅವರ ಅರ್ಧಾಂಗಿ ಕೃತಿ.ಬಿ ಶೆಟ್ಟಿ ಹಣದ ಜೊತೆ ತನ್ನ ಕಥಕ್ ಶೈಲಿಯ ನೃತ್ಯದ ಮೂಲಕ ಮೆರುಗು ತಂದಿದ್ದಾರೆ.
‘ಉಳ್ಳವರು ಶಿವಾಲಯವ’ ವಚನ ಸಾಲುಗಳಿಗೆ ರಾಗ ಸಂಯೋಜಿಸಿ ತಾವೇ ರಾಗಕ್ಕೆ ಗಾಯನ ಪ್ಲಸ್ ಅಭಿನಯವನ್ನೂ ಕೊಟ್ಟ.ಅನೂಪ್ ಸಿಳಿನ್ ಈ ಮೂಲಕ ಹೊಸತನ ಮೆರೆದಿದ್ದಾರೆ. ದೊಡ್ಡ ಮಟ್ಟಕ್ಕೆ ವಿಶೇಷವಾದ ಲೈಟಿಂಗ್ ಮಾಡಿ ಅದಕ್ಕೆ ತಕ್ಕನಾದ ಸ್ಟುಡಿಯೋ ಬ್ಯಾಕ್ ಡ್ರಾಪಿನಲ್ಲಿ ಹಾಡು ಮೂಡಿಬಂದಿದ್ದು ಛಾಯಾಗ್ರಹಣ ಮತ್ತು ನಿರ್ದೇಶನವನ್ನು ಚೆನ್ನೈ ಮೂಲದ ಮಸಾನಿ ನಿಭಾಯಿಸಿದ್ದಾರೆ.
ಈ ಹಿಂದೆ ‘ಕಾಫಿ’ ಅನ್ನೋ  ವಿಡಿಯೋ ಸಾಂಗ್ ಬಿಟ್ಟು ಗೆದ್ದಿರುವ ಜೆ.ಪಿ ಮ್ಯೂಸಿಕ್ ಬ್ಯಾನರ್ ಅಡಿ ಈ ಹಾಡು ಮೂಡಿಬಂದಿದೆ.  ‘ಉಳ್ಳವರು ಶಿವಾಲಯವ’ ವಿಡಿಯೋ ಹಾಡನ್ನು ನೀವು ಎಲ್ಲಾ ಫ್ಲಾಟ್ ಫಾರ್ಮ್ ಗಳಲ್ಲು ಕೇಳಿ ಆನಂದಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ