ಬಾಲಿವುಡ್​ನ ಟಾಪ್​ ಹೀರೊ ಸಲ್ಮಾನ್ ಖಾನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಭಾನುವಾರ ಮುಂಬೈನಲ್ಲಿ ನೆರವೇರಿತು.

ಸಿಕಂದರ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಶ್ಮಿಕಾ ಸೇರಿದಂತೆ ಚಿತ್ರ ತಂಡವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಚಿತ್ರದಲ್ಲಿ 59 ವರ್ಷದ ಸಲ್ಮಾನ್ ಖಾನ್ ಮತ್ತು 28 ವರ್ಷದ ರಶ್ಮಿಕಾ ಮಂದಣ್ಣ ಅವರ ಮಧ್ಯೆ ಇರುವ ವಯಸ್ಸಿನ ಅಂತರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಇದಕ್ಕೆ ಸಲ್ಮಾನ್ ಖಾನ್ ಅವರೇ ಪ್ರತಿಕ್ರಿಯೆ ನೀಡಿದ್ದು, ರಶ್ಮಿಕಾಗೆ ಇದರಿಂದ ಯಾವ ಸಮಸ್ಯೆ ಇಲ್ಲದಿರುವಾಗ ಬೇರೆಯವರು ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಸಲ್ಮಾನ್ ಪ್ರಶ್ನಿಸಿದರು.

ತಿರುಗೇಟು ನೀಡಿದ ಸಲ್ಮಾನ್

ವೇದಿಕೆಯಲ್ಲಿ ಸಂಭಾಷಣೆ ಸಮಯದಲ್ಲಿ, ತಮಗಿಂತ 31 ವರ್ಷ ಚಿಕ್ಕವರಾದ ರಶ್ಮಿಕಾ ಜೊತೆ ಅಭಿನಯಿಸಿರುವ ಬಗ್ಗೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ಖಾನ್, ಈ ಚಿತ್ರದಲ್ಲಿ ನನ್ನ ಮತ್ತು ನಾಯಕಿಯ ನಡುವೆ 31 ವರ್ಷಗಳ ವಯಸ್ಸಿನ ಅಂತರವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಹೇಳುತ್ತಾರೆ. ಈ ವಿಚಾರದಲ್ಲಿ ರಶ್ಮಿಕಾಗೆ ಹಾಗೂ ಅವರ ತಂದೆಗೆ ಸಮಸ್ಯೆಯಿಲ್ಲದಿರುವಾಗ, ನಿಮಗೇಕೆ ತಲೆಬಿಸಿ? ರಶ್ಮಿಕಾಗೆ ಮದುವೆಯಾಗಿ ಮಗಳು ಹುಟ್ಟಿದರೆ, ಆಕೆ ಜೊತೆ ಕೂಡ ನಟಿಸುತ್ತೇನೆ, ಆಗ ರಶ್ಮಿಕಾ ಅನುಮತಿ ಕೊಡಬೇಕಾಗಬಹುದು ಎಂದು ರಶ್ಮಿಕಾ ಮುಖ ನೋಡಿ ನಗುತ್ತಾ ಹೇಳಿದರು.

 

ಚಿತ್ರದಲ್ಲಿ ನೀವು ಚೆನ್ನಾಗಿ ಕಾಣುತ್ತಿದ್ದೀರಿ ಎಂದು ನಿರೂಪಕರು ಹೊಗಳಿದಾಗ, ಈ ಸಮಯದಲ್ಲಿ ವಿಚಾರಗಳು ಎಷ್ಟು ಗೊಂದಲಮಯವಾಗಿವೆಯೆಂದರೆ ನಾನು ಆರೇಳು ದಿನ ರಾತ್ರಿ ನಿದ್ದೆಯೇ ಮಾಡಲು ಸಾಧ್ಯವಾಗುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಜನ ನನ್ನ ಬೆನ್ನು ಬಿದ್ದಿದ್ದಾರೆ. ನಾನಿನ್ನೂ ಚಲಾವಣೆಯಲ್ಲಿದ್ದೇನೆ ಎಂದು ಜನರಿಗೆ ತೋರಿಸಬೇಕಾಗಿದೆ ಎಂದರು.

ರಶ್ಮಿಕಾರನ್ನು ಶ್ಲಾಘಿಸಿದ ಸಲ್ಮಾನ್

ರಶ್ಮಿಕಾ ಅವರ ಸಮರ್ಪಣೆಯನ್ನು ಶ್ಲಾಘಿಸಿದ ಸಲ್ಮಾನ್, ರಶ್ಮಿಕಾ ಅವರು 'ಪುಷ್ಪ 2' ಮತ್ತು 'ಸಿಕಂದರ್' ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲದಲ್ಲಿ ಭಾಗವಹಿಸುತ್ತಿದ್ದರು. ಹಗಲಿನಲ್ಲಿ ಸಿಕಂದರ್ ಮತ್ತು ರಾತ್ರಿ ಒಂಬತ್ತು ಗಂಟೆಯಿಂದ ಬೆಳಿಗ್ಗೆ ಆರು ಮೂವತ್ತರವರೆಗೆ ‘ಪುಷ್ಪ 2’ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಕಾಲಿನ ಗಾಯದ ಹೊರತಾಗಿಯೂ, ಅವರು ಶೂಟಿಂಗ್ ಮತ್ತು ಪ್ರಚಾರವನ್ನು ಮುಂದುವರೆಸಿದ್ದರು ಎಂದು ರಶ್ಮಿಕಾ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು.

ಸಲ್ಮಾನ್ ಖಾನ್ ನಾಯಕನಾಗಿ ನಟಿಸಿರುವ ಸಿನಿಮಾ ‘ಸಿಕಂದರ್’ ಚಿತ್ರವನ್ನು ತಮಿಳಿನ ಎಆರ್ ಮುರುಗದಾಸ್ ನಿರ್ದೇಶಿಸಿದ್ದು, ನಟಿ ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತ್ಯರಾಜ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಹಾಡುಗಳು ಆಕರ್ಷಕವಾಗಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ