- ರಾಘವೇಂದ್ರ ಅಡಿಗ ಎಚ್ಚೆನ್.
ಆಪರೇಷನ್ ಸಿಂಧೂರ: ನಟ ಪ್ರೇಮ್, ನಟಿ ತಾರಾ ಅನುರಾಧ ಹೀಗೆಂದ್ರು
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿ, ಉಗ್ರರ ಹುಟ್ಟಡಗಿಸಿದೆ. ಭಾರತೀಯ ಸೇನೆಯ ಈ ದಿಟ್ಟ ಆಪರೇಷನ್ ಸಿಂಧೂರ ದಾಳಿಯ ಬಗ್ಗೆ ಇಡೀ ದೇಶವೆ ಹೆಮ್ಮೆ ಪಡುತ್ತಿದೆ. ಕನ್ನಡ ಚಿತ್ರರಂಗದ ಕೆಲ ಗಣ್ಯರು ಸಹ ಸೇನೆಯ ಈ ದಿಟ್ಟ ಉತ್ತರವನ್ನು ಮನಸಾರೆ ಕೊಂಡಾಡಿದ್ದಾರೆ. ನಟ ಪ್ರೇಮ್ ಸಹ ಈ ಬಗ್ಗೆ ಮಾತನಾಡಿದ್ದು, ಸೇನೆಗೆ ಅಭಿನಂದನೆ ಸಲ್ಲಿಸಿರುವ ಜೊತೆಗೆ ಪಾಕಿಸ್ತಾನವು ಮರಳಿ ಭಾರತದ ಮೇಲೆ ಆಕ್ರಮಣ ಮಾಡುವ ಉದ್ಧಟತನ ಪ್ರದರ್ಶಿಸಬಾರದು ಎಂದಿದ್ದಾರೆ.
ಇನ್ನು ನಟೊ ತಾರಾ ಅನುರಾಧಾ ನಟಿ ತಾರಾ ಸಹ ಸೇನೆಯ ಕಾರ್ಯಾಚರಣೆಯನ್ನು ಕೊಂಡಾಡಿದ್ದಾರೆ. ಜೊತೆಗೆ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವವನ್ನು ಹೊಗಳಿದ್ದು, ಸಮರ್ಥ ನಾಯಕರಿಂದಾಗಿಯೇ ಈ ಸಮರ್ಥ ಕಾರ್ಯ ಸಾಧ್ಯವಾಗಿದೆ ಎಂದಿದ್ದಾರೆ.
ಭಾರತ ಕ್ಷಮಿಸಲ್ಲ! ಭಾರತ ಮರೆತಿಲ್ಲ.. ಎಂದ ಕಿಚ್ಚ
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಭಾರತೀಯ ಸೇನೆಗೆ ಗೌರವ ಸಲ್ಲಿಸಿ, ‘ಭಾರತ ಕ್ಷಮಿಸಲ್ಲ, ಮರೆಯಲ್ಲ’ ಎಂಬ ಕಿಚ್ಚಿನ ಮಾತನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ ಕಿಚ್ಚ ಸುದೀಪ್ ಅವರು ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿ ತೀವ್ರವಾಗಿ ಖಂಡಿಸಿದ್ದರು. 2025 ರ ಏಪ್ರಿಲ್ 22 ರಂದು 26 ಮುಗ್ಧ ನಾಗರಿಕರು ಕೊಲ್ಲಲ್ಪಟ್ಟ ಈ ಕ್ರೂರ ಘಟನೆಯ ಬಗ್ಗೆ ಟ್ವೀಟ್ ಮೂಲಕ ನೋವು ವ್ಯಕ್ತಪಡಿಸಿದ್ದರು. ಈಗ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಒಬ್ಬ ಭಾರತೀಯನಾಗಿ, ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್‌ನಲ್ಲಿ ನಡೆದ ಘಟನೆಯಿಂದ ನೋವಿನ ನಡುಕವನ್ನು ಅನುಭವಿಸಿದೆ. ಇಂದು, ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ,” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. ಕಿಚ್ಚ ಸುದೀಪ್ ಅವರು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಕೇವಲ ಧ್ಯೇಯವಲ್ಲ, ಪವಿತ್ರ ಪ್ರತಿಜ್ಞೆ ಎಂದು ಕೊಂಡಾಡಿದ್ದಾರೆ. “ಭಾರತದ ಸಿಂಧೂರದಲ್ಲಿ ಕಲೆಯಾಗಿತ್ತು. ನಮ್ಮ ಧೈರ್ಯಶಾಲ ಸೈನಿಕರು ಧೈರ್ಯ ಮತ್ತು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದರು. ನಮ್ಮ ಸಶಸ್ತ್ರ ಪಡೆಗಳಿಗೆ, ನನ್ನ ವಂದನೆ,” ಎಂದು ಅವರು ಹೇಳಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ತೀಕ್ಷ್ಣ ಮತ್ತು ಘನತೆಯ ಮಾಹಿತಿಗಾಗಿ ವಂದನೆ ಸಲ್ಲಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿಯನ್ನು ಕಿಚ್ಚ ಸುದೀಪ್ ಹೃದಯ ವಿದ್ರಾವಕ ಎಂದು ಕರೆದಿದ್ದಾರೆ. “ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ನಮ್ಮ ರಾಷ್ಟ್ರದ ಚೈತನ್ಯದ ಮೇಲಿನ ದಾಳಿ. ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡಬೇಕಾದ ಸಮಯ,” ಎಂದು ಅವರು ಒತ್ತಿ ಹೇಳಿದ್ದಾರೆ. ಈ ಹೇಡಿತನದ ಹಿಂದಿರುವವರನ್ನು ತ್ವರಿತವಾಗಿ ಮತ್ತು ದೃಢವಾಗಿ ನ್ಯಾಯದ ಮುಂದೆ ತರಬೇಕು ಎಂದು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.