ಶರತ್ ಚಂದ್ರ

ಕನ್ನಡ ಚಿತ್ರರಂಗದಲ್ಲಿ ನಟನೆ ಮತ್ತು ನಿರ್ದೇಶನ ಎರಡು ವಿಭಾಗದಲ್ಲಿ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿರುವ ಒಂದಷ್ಟು ನಟರನ್ನು ನೋಡಿದ್ದೇವೆ.. ಈ ಸಾಲಿಗೆ ಶ್ರೀನೀ ಕೂಡ ಸೇರುತ್ತಾರೆ. ಎಫ್ಎಂ ರೇಡಿಯೋದಲ್ಲಿ RJ ಆಗಿ ಕಾರ್ಯನಿರ್ವಹಿಸಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 'ಜಸ್ಟ್ ಮಾತ್ ಮಾತಲ್ಲಿ' 'ಚಿರು' ಟೋಪಿವಾಲಾ 'ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿ, ಶ್ರೀನಿವಾಸ ಕಲ್ಯಾಣ ಮೂಲಕ  ನಾಯಕ ನಾಗಿ  ಎಂಟ್ರಿ ಕೊಟ್ಟಿದ್ದ ಎಂ.ಜಿ ಶ್ರೀನಿವಾಸ್ ಅಲಿಯಾಸ್ ಶ್ರೀನೀ' ಬೀರ್ಬಲ್ Triology case no1 finding ವಜ್ರಮುನಿ 'ಎಂಬ ಕುತೂಹಲಕಾರಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನದಲ್ಲಿ ಕೂಡ ಗಮನ ಸೆಳೆದು ಸ್ಯಾಂಡಲ್ವುಡ್ ಗೆ ಒಬ್ಬ ವಿಭಿನ್ನ ನಿರ್ದೇಶಕನಾಗಿ

ಭರವಸೆ ಮೂಡಿಸಿದ್ದರು

ದಕ್ಷಿಣ ಭಾರತದ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಅವರನ್ನು ಶ್ರೀನೀ ಈ ಚಿತ್ರದ ಮೂಲಕ ಪರಿಚಯಿಸಿದ್ದರು.

1000602506

ಶ್ರೀನಿಯವರ ಆಗಾಧ ಪ್ರತಿಭೆಯನ್ನು ಗಮನಿಸಿ ಶಿವಣ್ಣ 'ಘೋಸ್ಟ್ 'ಚಿತ್ರದಲ್ಲಿ ಶ್ರೀನಿಗೆ ಅವಕಾಶ ನೀಡಿದ್ದು ಆ ಚಿತ್ರ ಯಶಸ್ವಿಯಾಗಿದ್ದು ಈಗ ಇತಿಹಾಸ.

1000602512

ಈ ಚಿತ್ರದ ನಂತರ ಶಿವಣ್ಣ ಅವರು ನಟಿಸುತ್ತಿರುವ ಪತ್ನಿ ಗೀತಾ ಶಿವರಾಜಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ' ಎ ಫಾರ್ ಆನಂದ್' ಚಿತ್ರದಲ್ಲಿ ಮತ್ತೆ ಅವಕಾಶ ನೀಡಿದ್ದು,,ಚಿತ್ರದ ಮುಹೂರ್ತ ಕೆಲವು ತಿಂಗಳ ಹಿಂದೆ ನಡೆದಿದ್ದು, ಚಿತ್ರೀಕರಣ ಈ ವರ್ಷದ ಕೊನೆಯಲ್ಲಿ ಆರಂಭಗೊಳ್ಳಲಿದೆ.

1000602519

ಈ ನಡುವೆ ಶ್ರೀನಿ ತಮ್ಮ ಮಹತ್ವಾಕಾಂಕ್ಷೆಯ ಚಿತ್ರವಾದ ಬೀರ್ಬಲ್ ಕೇಸ್ ನಂಬರ್ 2 ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ಚಿತ್ರಕ್ಕೆ ದಕ್ಷಿಣ ಭಾರತದ ದೊಡ್ಡ ನಿರ್ಮಾಣ ಸಂಸ್ಥೆ  KVN ಪ್ರೊಡಕ್ಷನ್ ಸಾಥ್ ನೀಡಲಿದೆ. ಸದ್ಯದಲ್ಲಿ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಬಹುದೆಂದು ಸುದ್ದಿ ಇದೆ. ಚಿತ್ರದ ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಕೂಡ ಸದ್ಯದಲ್ಲೇ ಮಾಹಿತಿ ಸಿಗಲಿದೆ.

1000602522

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಚಂದದ ಹುಡುಗ ಶ್ರೀನೀ ನಟನೆ ಮತ್ತು ನಿರ್ದೇಶನ ಹೀಗೆ ಎರಡೂ ವಿಭಾಗದಲ್ಲಿ ಬ್ಯುಸಿ ಆಗಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ