- ರಾಘವೇಂದ್ರ ಅಡಿಗ ಎಚ್ಚೆನ್.

ಯುವ ನಟ ಸಚಿನ್ ಚಲುವರಾಯಸ್ವಾಮಿ ಮತ್ತು ಪ್ರತಿಭಾನ್ವಿತ ನಟಿ ಸಂಗೀತ ಭಟ್ ಜೋಡಿ ಜೊತೆಯಾಗಿ ಕಾಣಿಸಿಕೊಂಡಿರುವ “ ಕಮಲ್ ಶ್ರೀದೇವಿ” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕಮಾಲ್ ಮಾಡಿದೆ, ಹೀಗಾಗಿ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆಯನ್ನು ಸಹಜವಾಗಿ ದುಪ್ಪಟ್ಟು ಮಾಡಿದೆ. “ಕಮಲ್ ಶ್ರೀದೇವಿ” ಈ ಚಿತ್ರದ ಅಧಿಕೃತ ಟೀಸರ್ ಹಿರಿಯ ನಟ ಎಂ . ಎಸ್ . ಉಮೇಶ್ ರವರು ಬಿಡುಗಡೆ ಮಾಡಿದರು. ಒಂದು ಸಿನಿಮಾ ಯಶಸ್ವಿಯಾಗಬೇಕಾದರ ಅದರ ಟೈಟಲ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ "ಕಮಲ್ ಶ್ರೀದೇವಿ" ಚಿತ್ರದ ಪ್ರಚಾರದ ಭಾಗವಾಗಿ ಈಗ ಟೀಸರ್ ಬಿಡುಗಡೆ ಆಗಿದ್ದು ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಸೆಪ್ಟೆಂಬರ್ 19 ರಂದು ತೆರೆಗೆ ಬರಲಿದೆ.

sridevi 1

ಕೃಷಿ ಸಚಿವ ಚೆಲುವರಾಯಸ್ವಾಮಿ ಪುತ್ರ ಪ್ರಮುಖ ಪಾತ್ರದಲ್ಲಿದ್ದು ವಿಎ ಸುನಿಲ್ ಕುಮಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ರಮೇಶ್ ಇಂದಿರಾ, ಮಿತ್ರ ಮತ್ತು ಉಮೇಶ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಸ್ವರ್ಣಾಂಬಿಕಾ ಪಿಕ್ಚರ್ಸ್ ಅಡಿಯಲ್ಲಿ ಬಿಕೆ ಧನಲಕ್ಷ್ಮಿ ನಿರ್ಮಿಸಿದ್ದಾರೆ.
ರಾಜವರ್ಧನ್ ಸಹ-ನಿರ್ಮಾಣ, ಕೀರ್ತನ್ ಸಂಗೀತ ಸಂಯೋಜಿಸಿದ್ದಾರೆ. ನಾಗೇಶ್ ವಿ ಆಚಾರ್ಯ ಛಾಯಾಗ್ರಾಹಕರಾಗಿ ತಮ್ಮ ಕೈಚಳಕ ತೋರಿಸಿದ್ದಾರೆ. ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟ ಕಿಶೋರ್ ಅವರು ನಟಿಸಿದ್ದು, ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. "ಕಮಲ್ ಶ್ರೀದೇವಿಯ ಭಾಗವಾಗಲು ನನಗೆ ಸಂತೋಷವಾಗಿದೆ. ಏಕೆಂದರೆ ಇವತ್ತಿಗೆ ಬಹಳ ಪ್ರಸ್ತುತವಾದ ವಿಷಯ ಈ ಸಿನಿಮಾದಲ್ಲಿದೆ. ಅತ್ಯಾಚಾರ, ಕೊಲೆ ಎನ್ನುವುದು ಪ್ರತಿನಿತ್ಯದ ಸುದ್ದಿಯಾಗಿದೆ. ಇದು ಬಹಳ ಸಹಜ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದು ಅಪಾಯಕಾರಿ. ಇಂತಹ ಘಟನೆಗಳು ನಮ್ಮಲ್ಲೇ ಒಬ್ಬರಿಗೆ ಆದಾಗ ಅದರ ಪರಿಣಾಮ ತಿಳಿಯುತ್ತದೆ. ಅಲ್ಲಿಯವರೆಗೂ ಕಾಯಬೇಕೇ ಅಥವಾ ಅದರ ಮೊದಲೇ ದನಿ ಎತ್ತಬೇಕೇ ಎಂದು ಯೋಚಿಸಬೇಕು.

sridevi 2

ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣವಾಗಿ 12 ವರ್ಷವಾಯಿತು. ಇದೂ ದೊಡ್ಡ ಮಟ್ಟದ ಸುದ್ದಿಯಾಯಿತು. ಆದರೆ, ಇನ್ನೂ ನ್ಯಾಯ ಸಿಕ್ಕಿಲ್ಲ ಎನ್ನುವಾಗ ನಮ್ಮ ನ್ಯಾಯದ ವ್ಯವಸ್ಥೆ, ಪೊಲೀಸ್‌ ವ್ಯವಸ್ಥೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಬರುತ್ತದೆ. ನಮ್ಮನ್ನು ದನಿ ಎತ್ತುವುದಕ್ಕೆ ಈ ಸಿನಿಮಾ ಪ್ರೇರೇಪಿಸುತ್ತದೆ. ಹೀಗಾಗಿ, ನಾನು ಈ ಸಿನಿಮಾ ಒಪ್ಪಿಕೊಂಡೆ. ಸಮಾಜದ ಬೇರೆ ಬೇರೆ ವರ್ಗಗಳಿಂದ ಬಂದ ಪಾತ್ರಗಳು ಒಂದು ಹೆಣ್ಣನ್ನು ನೋಡುವ ದೃಷ್ಟಿಕೋನ ಆ ಹೆಣ್ಣಿನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದ ಮೂಲಕ ನಾವು ಕೇವಲ ನಟನೆ ಮಾಡುತ್ತಿಲ್ಲ, ಧ್ವನಿ ಎತ್ತುತ್ತಿದ್ದೇವೆ. ಮೌನ ಯಾರಿಗೂ ಸಹಾಯ ಮಾಡುವುದಿಲ್ಲ ಎಂದು ಹೇಳಿದರು.
ನಾನು 11 ವರ್ಷಗಳಿಗೂ ಹೆಚ್ಚು ಕಾಲ ಕೀರ್ತನ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರದಲ್ಲಿ ಅವರ ಕೆಲಸವು ಶಕ್ತಿಯುತವಾಗಿದೆ. ಇದು ಅವರಿಗೆ ನಿಜವಾಗಿಯೂ ಮನ್ನಣೆಯನ್ನು ಗಳಿಸಿಕೊಡುತ್ತದೆ ಎಂಬ ವಿಶ್ವಾಸವಿದೆ.
ನಾಯಕನಾಗಿ ನಟಿಸಿರುವ ಸಚಿನ್ ಚೆಲುವರಾಯಸ್ವಾಮಿ ಅವರು ಮಾತನಾಡಿ, ಯೋಜನೆಯು ಸರಳ, ಶಕ್ತಿಯುತ ಕಲ್ಪನೆಯೊಂದಿಗೆ ಪ್ರಾರಂಭವಾಯಿತು. ಅದು ಕ್ರಮೇಣ ಬೆಳೆಯಿತು. ರಾಜವರ್ಧನ್ ಸರಿಯಾದ ಅಂಶಗಳನ್ನು ಒಟ್ಟಿಗೆ ತಂದರು. ನಿರ್ದೇಶಕ ಸುನಿಲ್ ಅವರ ಸ್ಪಷ್ಟತೆ ಮತ್ತು ತಂಡದ ಸಮರ್ಪಣೆ ಪ್ರಕ್ರಿಯೆಯ ಪ್ರತಿಯೊಂದು ಹೆಜ್ಜೆಯನ್ನು ಸಾರ್ಥಕಗೊಳಿಸಿದೆ ಎಂದು ಹೇಳಿದರು.
ನಿರ್ಮಾಪಕ ರಾಜವರ್ಧನ್ ಮಾತನಾಡಿ, ಕಾರಿನಲ್ಲಿ ಹೋಗುತ್ತಿರುವಾಗ ‘ನೀನೆಂದರೆ ನನಗೆ ಆಸೆಯೂ ಅಲ್ಲ, ಆಕರ್ಷಣೆಯೂ ಅಲ್ಲ. ಮನದಲ್ಲಿ ಮೂಡಿದ ಮಧುರ ಭಾವನೆಯಷ್ಟೇ’ ಎಂದು ಆಟೋ ಹಿಂದೆ ಚಾಲಕನೊಬ್ಬ ಬರೆದಿದ್ದನ್ನು ನೋಡಿದ್ದೆ. ಈ ಒನ್‌ಲೈನ್‌ ಅನ್ನೇ ಇದೀಗ ಸಿನಿಮಾ ಮಾಡಿದ್ದೇವೆ. ಕಮಲ್‌ಗೆ ಶ್ರೀದೇವಿ ಆಸೆಯೂ ಅಲ್ಲ, ಆಕರ್ಷಣೆಯೂ ಅಲ್ಲ. ಆಕೆ ಅವನ ಮನದಲ್ಲಿ ಮೂಡಿದ ಮಧುರ ಭಾವನೆಯಷ್ಟೇ. ಅವಳ ಮೇಲೆ ಈ ಸಿನಿಮಾದ ಕಥೆ ಇದೆ’ ಎಂದರು.
ಳೆದ ಆರು ತಿಂಗಳಿಂದ ಕನ್ನಡ ಚಿತ್ರರಂಗ ಕುಗ್ಗಿತ್ತು. ಈಗ ಚೇತರಿಸಿಕೊಂಡಿತು. ಯಾಕೆ ಚೆನ್ನಾಗಿರಲಿಲ್ಲ, ಏಕೆ ಚೆನ್ನಾಗಿ ಆಗುತ್ತಿದೆ ಎನ್ನುವುದಕ್ಕೂ ನಮ್ಮ ಸಿನಿಮಾಗಳೇ ಕಾರಣ. ಸುಗ್ಗಿ ಕಾಲ ಆರಂಭವಾಗಿದೆ. ಈ ಅವಧಿಯಲ್ಲೇ ನಮ್ಮ ಕಾಂಟೆಂಟ್‌ಗಳನ್ನು ಜನರ ಮುಂದೆ ಇಡಬೇಕಿದೆ. ಕಥೆ ಕಾರಣಕ್ಕಾಗಿಯೇ ಜನರು ಮತ್ತೆ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಚಿತ್ರರಂಗದ ಎಲ್ಲಾ ಪ್ರಶ್ನೆಗಳಿಗೆ ನಮ್ಮಲ್ಲೇ ಉತ್ತರವಿದೆ. ಇನ್ನು ಮೇಲೆ ಸಿನಿಮಾ ಮಾಡುವವರು ಸ್ಕ್ರಿಪ್ಟ್‌ ಬಗ್ಗೆ ಗಂಭೀರವಾಗಬೇಕು.
ನಟನೆಯ ಜೊತೆಗೆ ಹಲವರು ಸಿನಿಮಾ ನಿರ್ದೇಶನ, ನಿರ್ಮಾಣ ಹೀಗೆ ಎರಡು ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಸೇರುವ ಅನಿವಾರ್ಯ ನನಗೂ ಇತ್ತು. ವಾಣಿಜ್ಯ ಮಂಡಳಿಯೂ ಒಂದೇ ದಿನ ಆರೇಳು ಸಿನಿಮಾ ಬಿಡುಗಡೆಗೆ ಕೊಂಚ ಕಡಿವಾಣ ಹಾಕಬೇಕಿದೆ. ಸಿನಿಮಾ ತಂಡದ ಶ್ರಮ ಒಂದೇ ಶುಕ್ರವಾರದಲ್ಲಿ ಹಾಳಾಗಬಾರದು ಎಂದರು.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಗೀತಾ ಭಟ್ ಅವರು ಮಾತನಾಡಿ, ಶ್ರೀದೇವಿಯಂತಹ ಪಾತ್ರವನ್ನು ನಾನು ಮಾಡಬಹುದೇ ಎಂಬ ಬಗ್ಗೆ ನಿರ್ದೇಶಕರಿಗೆ ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಇತ್ತು. ಆದರೆ, ಚಿತ್ರೀಕರಣದ ಬಳಿಕ ಇದೀಗ ಅವರು ತೃಪ್ತರಾಗಿದ್ದಾರೆ. ರಾಜವರ್ಧನ್ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ನಿರ್ದೇಶಕ ಸುನಿ ಮತ್ತು ಇಡೀ ತಂಡ ನನಗೆ ಉತ್ತಮ ಸ್ಥಾನ ನೀಡಿದರು. ಚಿತ್ರವು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ