– ರಾಘವೇಂದ್ರ ಅಡಿಗ ಎಚ್ಚೆನ್.
ಸಿನಿಮಾ ಅನ್ನುವುದು ಅತ್ಯಂತ ಪವರ್ ಫುಲ್ ಮಾಧ್ಯಮ, ಅದು ಎಂತಹದನ್ನೂ ಬದಲಿಸಬಲ್ಲ ಶಕ್ತಿ ಹೊಂದಿದೆ. ಹಾಗಾಗಿ ಸಿನಿಮಾ ಮೂಲಕ ಯಾವುದೇ ಸ್ಥಳ, ಯಾವುದೇ ವ್ಯಕ್ತಿ ಏನನ್ನಾದರೂ ಪರಿಣಾಮಕಾರಿಯಾಗಿ ಬಿಂಬಿಸಬಹುದಾಗಿದೆ. ಪ್ರಪಂಚದ ಪ್ರತಿಯೊಂದು ವ್ಯಕ್ತಿ, ಪ್ರತಿ ಮನೆಯನ್ನೂ ಸಿನಿಮಾ ಮೂಲಕ ತಲುಪಬಹುದು. ನಮ್ಮ ನಾಡಿನ ಸಂಸ್ಕೃತಿ, ಸಾಮಾಜಿಕ ಜೀವನವನ್ನು ಸಿನಿಮಾ ಮೂಲಕ ತೋರಿಸಬಹುದು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಗೀತಪ್ರಿಯಾ ಹಾಗೂ ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿರುವ “ಅಪರಿಚಿತೆ” ಚಿತ್ರ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಿನಿಮಾಗೆ ಎಷ್ಟು ಶಕ್ತಿ ತುಂಬಿದರೂ ಕಡಿಮೆಯೇ. ಹಾಗಾಗಿ ಸಿನಿಮಾ ಮೂಲಕ ಒಂದು ಭಾಗ ಕಮರ್ಷಿಯಲ್ ಹಾಗೂ ಇನ್ನೊಂದು ಭಾಗದಲ್ಲಿ ಸಾಮಾಜಿಕ ಸಂದೇಶ ಸಾರುವ ಗುರಿ ಹೊಂದಿರಬೇಕು. ಅದರಲ್ಲಿಯೂ ಬೆಳೆಯುತ್ತಿರುವ ರಾಷ್ಟ್ರವಾದ ಬಾರತದಲ್ಲಿ ಸಾಮಾಜಿಕ ಸಂದೇಶ ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೆ ಜಾಗೃತಿ ಬೇಕಿರುತ್ತದೆ. ಹಾಗಾಗಿ ಗೀತಪ್ರಿಯಾ ಅವರಿಗೆ ನಿರ್ದೇಶಕರಿಗೆ ಈ ಒಳ್ಳೆ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ನಾನು ಶುಭ ಹಾರಿಸುತ್ತೇನೆ. ಸಾಮಾಜಿಕ ಸಂದೇಶ ಇರುವ ಸಿನಿಮಾ ಹಿಟ್ ಆಗಬೇಕೆನ್ನುವುದು ನನ್ನ ಉದ್ದೇಶ. ಹಾಗಾಗಿ ಈ ಸಿನಿಮಾ ಯಶಸ್ವಿಯಾಗಲಿ. ಎಂದು ಅವರು ಹೇಳಿದ್ದಾರೆ.
ಶ್ರೀನಾಥ್ ನಾನು ಮೊದಲ ಬಾರಿ ಚುನಾವಣೆಗೆ ನಿಂತಾಗಲೂ ಆಶೀರ್ವದಿಸಿದ್ದರು. ಅವರ ಜೊತೆ ಈಗ ಕುಳಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌ್ಭಾಗ್ಯ ಎಂದು ಅಶ್ವತ್ಥ್ ನಾರಾಯಣ ನುಡಿದರು.
ಅಪರಿಚಿತೆ ಚಿತ್ರದ ನಟಿ ಹಾಗೂ ನಿರ್ಮಾಪಕಿಯಾಗಿ ಗೀತಪ್ರಿಯಾ ಅವರಿದ್ದು ಅಮರ ಫಿಲಂಸ್ ಬ್ಯಾನರಿನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಚಿತ್ರಕ್ಕೆ ವಿಶ್ವನಾಥ್ ನಿರ್ದೇಶಕರಾಗಿದ್ದರೆ ಶ್ರೀನಾಥ್ ಹಾಗೂ ಅವರ ಪುತ್ರ ಪುರೋಹಿತ್ ಶ್ರೀನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ. ಅಲ್ಲದೆ ಆರ್.ಜೆ. ನಿಖಿತಾ ಸಹ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದಾರೆ.
ಗೀತಪ್ರಿಯಾ ಅವರು ಈ ಹಿಂದೆ ನಿರ್ಮಾಣ ಮಾಡಿದ್ದ “ತಾಯವ್ವ” ಸಿನಿಮಾ 25 ದಿನ ಪೂರೈಸಿ ಯಶಸ್ವಿಯಾಗಿತ್ತು.