ಸನೀ ಲಿಯೋನ್
``ಸೌಂದರ್ಯ ಎಂಬುದು ಪರ್ಫೆಕ್ಟ್ ಫಿಗರ್‌ನಲ್ಲಿ ಅಲ್ಲ... ಫಿಟ್ ಫಿಗರ್‌ನಲ್ಲಿ ಅಡಗಿದೆ!'' ಎನ್ನುತ್ತಾಳೆ ಸದಾ ಪಡ್ಡೆ ಹುಡುಗರ ನಿದ್ದೆಗೆಡಿಸುವ ಸೆಕ್ಸೀ ಐಟಂ ಗರ್ಲ್ ಸನೀ ಲಿಯೋನ್. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ಆಟೊಮೆಟಿಕಲಿ ನಿಮ್ಮ ಚರ್ಮದಲ್ಲಿ ಹೊಳಪು ಹಾಗೂ ವ್ಯಕ್ತಿತ್ವದಲ್ಲಿ ಫಿಟ್‌ನೆಸ್ ತಾನಾಗಿ ಉಕ್ಕುತ್ತದೆ ಎನ್ನುತ್ತಾಳೆ ಸನೀ. ಹೀಗಾಗಿ ಎಲ್ಲಕ್ಕೂ ಮಿಗಿಲಾಗಿ ನಿಮ್ಮ ಫಿಟ್‌ನೆಸ್‌ಗೆ ಮಹತ್ವ ಕೊಡಿ ಎಂದು ಇಂದಿನ ಕಾಲೇಜು ಕಿಶೋರಿಯರಿಗೆ ಕಿವಿಮಾತು ಹೇಳುತ್ತಾಳೆ. ಈಕೆಯ ಗ್ಲಾಮರಸ್ ಎವರ್‌ಗ್ರೀನ್ ಫ್ಯಾಷನೆಬಲ್ ವ್ಯಕ್ತಿತ್ವಕ್ಕೆ ಮಾರುಹೋಗದವರೇ ಇಲ್ಲ.
ಬಾಲಿವುಡ್‌ನ ಚಿತ್ರಗಳಲ್ಲಿ ರಾರಾಜಿಸಿ ಈಗ ದಕ್ಷಿಣಕ್ಕೆ ಲಗ್ಗೆ ಇಟ್ಟಿದ್ದಾಳೆ ಈಕೆ. ಸನೀ ಇನ್ನೂ ಮಿಸ್ ಆಗಿರಬಹುದಲ್ಲವೇ ಅಂದಿರಾ? ಖಂಡಿತಾ ಅಲ್ಲ, ಈಕೆ ಕೆನಡಾದ ಡೇನಿಯಲ್ ಲೇಬರ್‌ನ ಪತ್ನಿ. ಪೋರ್ನ್ ಚಿತ್ರಗಳ ಆರ್ಟಿಸ್ಟ್ ಬಾಲಿವುಡ್‌ಗೆ ತಕ್ಕವಳೇ ಎಂದೆಲ್ಲ ಸಡ್ಡು ಹೊಡೆದ ರಾಖಿ ಸಾವಂತ್‌ಗೆ ತಲೆಯ ಮೇಲೆ ಹೊಡೆದಂತೆ ಸಾಲು ಸಾಲಾಗಿ ಹಿಂದಿ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿದ ಸನೀ, ಇದೀಗ ಶಾರೂಖ್ ಖಾನ್‌ನ `ರಯೀಸ್' ಚಿತ್ರದಲ್ಲಿ ಐಟಂ ಗರ್ಲ್ ಆಗಿ `ಖುರ್ಬಾನಿ'ಯ `ಲೈಲಾ ಓ ಲೈಲಾ....' ಹಾಡಿನ ರೀಶೂಟ್‌ನಲ್ಲಿ ಮಿಂಚಲಿದ್ದಾಳೆ ಎಂದರೆ ಅವಳ ಲೆವೆಲ್ ಯಾವ ಮಟ್ಟ ಮುಟ್ಟಿದೆ ಎಂದ ಊಹಿಸಬಹುದು. ದಕ್ಷಿಣಕ್ಕೆ ದಾಂಗುಡಿ ಇಟ್ಟ ಸನೀ, ತೆಲುಗು ಚಿತ್ರಗಳಲ್ಲಿ ಐಟಂ ಸಾಂಗ್ಸ್ ನಲ್ಲಿ ರಾರಾಜಿಸಿ ಇದೀಗ ಪ್ರೇಮ್ ನಿರ್ದೇಶಿಸಿ ನಟಿಸಿರುವ ಕನ್ನಡ ಚಿತ್ರದಲ್ಲೂ ಮಿಂಚುತ್ತಿದ್ದಾಳೆ ಎಂದ ಮೇಲೆ ಕೇಳಬೇಕೇ? ಸನೀ ಜೊತೆ ನಡೆಸಿದ ಸಂಭಾಷಣೆಯ ಮುಖ್ಯಾಂಶಗಳು :
ಸನೀಗೆ ಪರ್ಫೆಕ್ಟ್ ಬಾಡಿಗಿಂತ ಫಿಟ್ ಬಾಡಿ ಬಗ್ಗೆ ಹೆಚ್ಚಿನ ಒಲವಂತೆ....
ನಾನು ಪರ್ಫೆಕ್ಟ್ ಗಿಂತ ಫಿಟ್ ಬಾಡಿ ಕುರಿತಾಗಿ ಹೆಚ್ಚಿನ ವಿಶ್ವಾಸ ಹೊಂದಿದ್ದೇನೆ. ನಾನು ನೋಡಿದಂತೆ ಹೆಚ್ಚು ಹುಡುಗಿಯರು ಸೆಕ್ಸೀ ಫಿಗರ್, ಝೀರೊ ಫಿಗರ್ ಅಂತೆಲ್ಲ ಹಪಹಪಿಸುತ್ತಾ ಸದಾ ಡಯೆಟಿಂಗ್ ಮಾಡುತ್ತಾರೆ. ಇದರಿಂದ ಅವರು ತೆಳು ಟ್ಯೂಬ್‌ಲೈಟ್ಸ್ ಆಗಿ ರೋಗಿಷ್ಟರಂತೆ ಕಾಣುತ್ತಾರೆ. ನನ್ನ ಸಲಹೆ ಎಂದರೆ ಡಯೆಟಿಂಗ್ ಬದಲಿಗೆ ಹೆಲ್ದಿ ಆಹಾರ ಸೇವಿಸಿ. ಉತ್ತಮ ಆರೋಗ್ಯದ ರಹಸ್ಯ, ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವನೆ ಅಂದರೆ ನೀವು ನಂಬುತ್ತೀರಾ...?
ಏನನ್ನು ಸೇವಿಸಬೇಕು ಅಥವಾ ಬಾರದು ಅಂತೀರಾ?
ಜೀವನದಲ್ಲಿ ನಾವು ರುಚಿರುಚಿಯಾದ ಆಹಾರ ತ್ಯಜಿಸಲು ಕಲಿತೆವು ಅಂದ್ರೆ, ಸ್ವಸ್ಥ ಜೀವನಕ್ಕೆ ಬುಕ್ ಆಗಿದ್ದೇವೆ ಅಂತಲೇ ಅರ್ಥ. ನಾಲಿಗೆಗೆ ಹೆಚ್ಚು ಟೇಸ್ಟಿ ಅನಿಸುವ ಡಿಶೆಸ್ ಆರೋಗ್ಯಕ್ಕೆ ಖಂಡಿತಾ ಹಾನಿಕರ ಆಗಿರುತ್ತವೆ. ಅಂದ್ರೆ ಜಂಕ್ ಫುಡ್ಸ್, ಸ್ವೀಟ್ಸ್, ಚಾಕಲೇಟ್, ಐಸ್‌ಕ್ರೀಂ, ಪೇಸ್ಟ್ರಿ.... ಇತ್ಯಾದಿ. ನಾನಂತೂ ಇವನ್ನೆಲ್ಲ ಮುಟ್ಟೋದೂ ಇಲ್ಲ! ನನ್ನ ಡಯೆಟ್ ಪ್ಲಾನ್ ನಿಮಗೆ ಬೋರಿಂಗ್ ಅನಿಸಬಹುದು, ಆದರೆ ಹೆಲ್ದಿ ಅನ್ನೋದು ನಿಜ. ಬೆಳಗ್ಗೆ ಮೊದಲು ಒಂದು ಎಳನೀರು ಕುಡೀತೀನಿ, ಟೀ ಬದಲು ಬ್ಲ್ಯಾಕ್ ಕಾಫಿ ತೆಗೆದುಕೊಳ್ಳುವೆ. ತಿಂಡಿಗೆ ಎಗ್ ವೈಟ್ ವಿತ್ ಟೋಸ್ಟ್, ಎಣ್ಣೆರಹಿತ ದೋಸೆ, ಇಡ್ಲಿ ಇತ್ಯಾದಿ.