ಟೀಚರಮ್ಮ ಶ್ರದ್ಧಾ

`ಆಪರೇಷನ್‌ ಅಲಮೇಲಮ್ಮ' ಸುನಿ ನಿರ್ದೇಶನದ ಹೊಸ ಸಿನಿಮಾ. ಎಂದಿನಂತೆ ತಮ್ಮ ಟೀಸರ್‌ ಮೂಲಕ ಎಲ್ಲರ ಗಮನಸೆಳೆಯುತ್ತಿರುವ ಈ ಚಿತ್ರದಲ್ಲಿ ಯೂಟರ್ನ್‌ ಹುಡುಗಿ ಶ್ರದ್ಧಾ ಶ್ರೀನಾಥ್‌ ಟೀಚರಮ್ಮ ಆಗಿ ಕಾಣಿಸಿಕೊಂಡು ಸಾಕಷ್ಟು ಮಿಂಚುತ್ತಿದ್ದಾಳೆ. ಅನನ್ಯಾ ಟೀಚರ್‌ ಪಾತ್ರ ಟ್ರೆಂಡ್‌ ಸೆಟಲ್ ಆಗುತ್ತಿದೆ. ಆಕೆಯ ನಡವಳಿಕೆ, ಸ್ಟೈಲು, ಮಾತಿನ ಝಲಕ್‌ನ್ನು ಟೀಸರ್‌ ವಿವರಿಸುತ್ತಿದೆ. ಹಾಗೆಯೇ ಎಲ್ಲರಿಗೂ ಈ ಟೀಸರ್‌ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ. ಜನಪ್ರಿಯ ನಾಯಕರೆಲ್ಲರೂ ಈ ಟೀಸರ್‌ನ್ನು ಶೇರ್‌ ಮಾಡಿಕೊಂಡು ಸುನಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. `ಆಪರೇಷನ್‌ ಅಲಮೇಲಮ್ಮ' ಕ್ರೈಂ ಥ್ರಿಲ್ಲರ್‌ ಜೊತೆಗೆ ಸುಂದರಾದ ಪ್ರೇಮ್ ಕಹಾನಿ ಈ ಚಿತ್ರದಲ್ಲಿ ಕಾಣಬಹುದು ಎಂದು ಸುನಿ ಹೇಳುತ್ತಾರೆ.

ಭಾವನಾಳಿಗೆ ಇರುಸುಮುರುಸು

ಮಲೆಯಾಳಿ ನಟಿ ಭಾವನಾ ದಕ್ಷಿಣ ಭಾರತದ ಜನಪ್ರಿಯ ತಾರೆ. ಕನ್ನಡದಲ್ಲೂ ಅಷ್ಟೇ ಜನಪ್ರಿಯ. ತನ್ನ ಸಿಂಪಲ್ ಲುಕ್ಕಿನಿಂದ ಗಮನ ಸೆಳೆದಿರುವ ಭಾವನಾ ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಗಣೇಶ್‌ ಮುಂತಾದ ನಾಯಕರ ಜೊತೆ ನಟಿಸಿರುವಂಥ ತಾರೆ. ಇದೀಗ ಗಣೇಶ್‌ ಜೋಡಿಯಾಗಿ `ಮುಗುಳುನಗೆ' ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಯೋಗರಾಜ್‌ ಭಟ್ಟರ ನಿರ್ದೇಶನವಿದೆ. `ಚೌಕ' ಬಿಡುಗಡೆಯಾಗಲಿದೆ. ಕನ್ನಡ ಚಿತ್ರ ನಿರ್ಮಾಪಕ, ಬಿಸ್‌ನೆಸ್‌ ಮ್ಯಾನ್‌ ನವೀನ್‌ರೊಂದಿಗೆ ವಿವಾಹವಾಗಿದ್ದಾಳೆಂಬ ಸುದ್ದಿಯೂ ಕನ್‌ಫರ್ಮ್ ಆಗಿದೆ. ಆದರೆ ಯಾವಾಗ ಎಂಬುದು ಇನ್ನೂ ಫಿಕ್ಸ್ ಆಗಿಲ್ಲ. ಆದರೆ ಅದಕ್ಕೂ ಮೊದಲೇ ಭಾವನಾಳ ಮದುವೆ ದಿನ ಒಬ್ಬೊಬ್ಬರೂ ಒಂದೊಂದು ರೀತಿ ಫಿಕ್ಸ್ ಮಾಡುತ್ತಿರುವುದು ಈ ತಾರೆಗೆ ಸಾಕಷ್ಟು ಕಿರಿಕ್‌ ಉಂಟು ಮಾಡುತ್ತಿದೆ. ``ನಾನು ನನ್ನ ಮದುವೆ ಯಾವಾಗ ಅಂತ ನಿರ್ಧಾರವಾದ ಮೇಲೆ ಹೇಳ್ತೀನಿ. ಅಲ್ಲಿಯವರೆಗೂ ಇಲ್ಲಸಲ್ಲದ ಡೌಟ್ಸ್ ಕೊಟ್ಟು ಇರುಸುಮುರುಸಾಗುವಂತೆ ಮಾಡಬೇಡಿ,'' ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾಳೆ.

ಜಿಲ್ಕಾ ಜಿಲ್ಕಾರೇ.....

ಬುಲ್ ಬುಲ್‌ ಖ್ಯಾತಿಯ ರಚಿತಾ ರಾವ್‌ ಕನ್ನಡದ ಇತ್ತೀಚಿನ ಅತ್ಯಂತ ಸುಂದರವಾದ ನಟಿ. ರಚಿತಾ ಕನ್ನಡದ ಎಲ್ಲಾ ಜನಪ್ರಿಯ ನಾಯಕರ ಜೊತೆ ನಟಿಸಿರುವಂಥ ಲಕ್ಕಿ ತಾರೆ. ಇತ್ತೀಚೆಗೆ `ಪುಷ್ಪಕ ವಿಮಾನ' ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರ ಮಗಳಾಗಿ ನಟಿಸಿದ್ದಳು. ಈ ಚಿತ್ರದಲ್ಲಿನ ಜಿಲ್ಕಾ ಜಿಲ್ಕಾರೇ.... ಜನಪ್ರಿಯ ಹಾಡು ಜ್ಯೂಹಿ ಚಾವ್ಲಾ ಮೇಲೆ ಚಿತ್ರೀಕರಿಸಲಾಗಿತ್ತು. ಈ ಹಾಡು ರಚಿತಾಳ ಫೇವರಿಟ್‌ ಕೂಡಾ ಆಗಿತ್ತು. ಇಂಥ ಒಂದು ಸುಮಧುರ ಹಾಡಿಗೆ ತಾನೂ ಹೆಜ್ಜೆ ಹಾಕಿದ್ದಿದ್ದರೆ ಅಂತ ಕನಸು ಕಾಣುತ್ತಿದ್ದ ರಚಿತಾಳಿಗೆ ಇದೇ ಹಾಡಿನ ರೀಮಿಕ್ಸ್ ಅವತರಣಿಕೆಯಲ್ಲಿ ಸಖತ್‌ ಸ್ಟೆಪ್‌ ಹಾಕುವ ಅವಕಾಶ ಒದಗಿಬಂತು. ಪ್ರದೀಪ್‌ ಅವರ ಸಖತ್‌ ಸ್ಟುಡಿಯೋ ಜೊತೆ ಈ ಹಾಡಿಗಾಗಿ ನರ್ತಿಸಿದ್ದು ರಚಿತಾಳಿಗೆ ಹೊಸ ಅನುಭವ ನೀಡಿದೆಯಂತೆ. ಸಚಿನ್‌ ಎಂಬುವರ ನೃತ್ಯ ಸಂಯೋಜನೆಯಲ್ಲಿ ಈ ಹಾಡು ಹೊಸ ರೂಪ ಕಂಡುಕೊಂಡಿದೆ. ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ ಸದ್ದು ಮಾಡಿದೆ.

ಚಿನಕುರುಳಿ ಸಂಯುಕ್ತಾ......

ಸಂಯುಕ್ತಾ ಹೆಗ್ಡೆ ಎಂಬ ಹೊಸತಾರೆ ತನ್ನ ಮೊದಲ ಚಿತ್ರ `ಕಿರಿಕ್‌ ಪಾರ್ಟಿ' ಮೂಲಕ ಸ್ಟಾರ್‌ ಆದಂಥ ಹುಡುಗಿ. ತನ್ನ ತುಂಟತನದ ಲುಕ್ಕಿನಿಂದ ಗಮನಸೆಳೆದಿರುವ ಸಂಯುಕ್ತಾ, ಉತ್ತಮ ನೃತ್ಯಪಟು, ನೃತ್ಯ ಸಂಯೋಜಕಿ ಹಾಗೂ ಉತ್ತಮ ನಟಿ ಅನಿಸಿಕೊಂಡಿದ್ದಾಳೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಸಂಯುಕ್ತಾ, ಜೈನ್‌ ಕಾಲೇಜಿನ ವಿದ್ಯಾರ್ಥಿನಿ. ಫೇಸ್‌ಬುಕ್‌ನಲ್ಲಿ ಈ ಹುಡುಗಿ ಫೋಟೋ ಕಂಡು ರಿಷಬ್‌ ಶೆಟ್ಟಿ ತಮ್ಮ ನಿರ್ದೇಶನದ `ಕಿರಿಕ್‌ ಪಾರ್ಟಿ'ಗಾಗಿ ಆಯ್ಕೆ ಮಾಡಿದ್ದರು. ಹದಿನೇಳು ವರ್ಷದ ಈ ಬಾಲೆ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವಂಥ ಹೊಸ ಪ್ರತಿಭೆ. ಆ್ಯಕ್ಟಿಂಗ್‌ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಇಂಥಿಂದು ಆಫರ್‌ ಬರುತ್ತದೆ ಅಂತ ಖಂಡಿತಾ ನಿರೀಕ್ಷಿಸಿರಲಿಲ್ಲ ಎನ್ನುವ ಸಂಯುಕ್ತಾಳಿಗೆ ನೃತ್ಯ ಅಂದರೆ ಪ್ರಾಣ. ಭವಿಷ್ಯದಲ್ಲೂ ನಾನು ಉತ್ತಮ ಡ್ಯಾನ್ಸರ್‌ ಆಗಲು ಬಯಸುತ್ತೇನೆ ಎನ್ನುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ