ಇಂದು ನೀವು ಯಾವುದೇ ಕಾಲೇಜು ಹುಡುಗರನ್ನು ಕೇಳಿನೋಡಿ, ನಿಮಗೆಂಥ ಹುಡುಗಿ ಇಷ್ಟ ಅಂತ. ಅವರು ಥಟ್ಟನೆ ಹೇಳೋದು `ರಶ್ಮಿಕಾ ಮಂದಣ್ಣ' ಹೆಸರು. `ಕಿರಿಕ್‌ ಪಾರ್ಟಿ' ಚಿತ್ರ ಬಿಡುಗಡೆಯಾದಾಗಿನಿಂದ ಎಲ್ಲರಿಗೂ ಉಳಿದ ನಾಯಕಿಯರನ್ನು ಮರೆತು ಹೋಗುವಷ್ಟು ಹವಾ ಬೀಸಿದ್ದಾಳೆ ಈ ರಶ್ಮಿಕಾ....

ಈ ಕೂರ್ಗಿ ಬೆಡಗಿಯದು ಅದೆಂಥ ಲುಕ್‌ ಅಂದ್ರೆ `ಕಿರಿಕ್‌ ಪಾರ್ಟಿ' ಯಶಸ್ವಿಯಾದಂತೆ ರಶ್ಮಿಕಾ ಕೂಡಾ ದಿನದಿಂದ ದಿನಕ್ಕೆ ಎತ್ತರವಾಗಿ ಬೆಳೆಯುತ್ತಿದ್ದಾಳೆ. ಈ ದಿಢೀರ್‌ ಯಶಸ್ಸಿಗೆ ಕಾರಣವೇನು? ಈ ರಶ್ಮಿಕಾ ಏಕೆ ಎಲ್ಲರಿಗೂ ಅಷ್ಟೊಂದು ಇಷ್ಟವಾಗ್ತಿದ್ದಾಳೆ? ಅವಳನ್ನೇ ಕೇಳೋಣ....

ಸಿನಿಮಾರಂಗಕ್ಕೆ ಬಂದದ್ದು ಹೇಗೆ?

`ಕಿರಿಕ್‌ ಪಾರ್ಟಿ' ನಿರ್ಮಾಪಕರು, ನಿರ್ದೇಶಕರು ನಾನು ಕಾಲೇಜ್‌ ಸ್ಪರ್ಧೆಯಲ್ಲಿ ಡ್ಯಾನ್ಸ್ ಮಾಡುತ್ತಿರುನ ಫೋಟೋ ನೋಡಿದ್ದರಷ್ಟೆ. ಬಹುಶಃ ಅವರಿಗೆ ನಾನು ಆ ಪಾತ್ರಕ್ಕೆ ಸೂಟ್‌ ಆಗ್ತಿನೇನೊ ಅನ್ನಿಸಿರಬೇಕು. ಅಪ್ರೋಚ್‌ ಮಾಡಿದರು. ನನಗೂ ಸಿನಿಮಾದಲ್ಲಿ ನಟಿಸುವ ಆಸೆ ಬಹಳ ದಿನಗಳಿಂದ ಇತ್ತು. ಹಾಗಾಗಿ ಈ ಚಿತ್ರಕ್ಕೆ ನಾಯಕಿಯಾಗಿ ಬಂದೆ.

ಹೇಗಿತ್ತು ಅನುಭವ?

ನನ್ನನ್ನು ಮಕ್ಕಳ ಹಾಗೆ ನೋಡಿಕೊಳ್ತಿದ್ದರು. ತುಂಬಾ ಮುದ್ದು ಮಾಡಿ ಪ್ಯಾಂಪರ್‌ ಮಾಡಿಬಿಟ್ಟಿದ್ದರು. ಮೊದಲ ಚಿತ್ರವಾದರೂ ನನಗದು ಮನೆಯಂತೆ ಇತ್ತು. ಸಿನಿಮಾರಂಗ ಅಂದ್ರೆ ಹತ್ತಾರು ಜನ, ಹತ್ತಾರು ತರಹ ಕಥೆ ಹೇಳ್ತಾರೆ. ಆದರೆ ನಮಗ್ಯಾರಿಗೂ ಅಂಥ ಫೀಲಿಂಗ್‌ ಬರಲಿಲ್ಲ. ಅದೊಂದು ಕಾಲೇಜು ಕ್ಯಾಂಪಸ್‌ನಂತಿತ್ತು. ಕನ್ನಡವನ್ನು ಚೆನ್ನಾಗಿ ಕಲಿತೆ. ತಾಳ್ಮೆ ಕಲಿಸಿಕೊಟ್ಟಿತು. ಹೊಸದಾಗಿ ಏನಾದರೂ ಮಾಡಬೇಕೆಂಬ ಹುಮ್ಮಸ್ಸು ತುಂಬಿ ಕಳಿಸಿದರು. ಸಿನಿಮಾ ಯಶಸ್ವಿಯಾಗಿದೆ. ಜನರಿಂದ ಪ್ರೀತಿ, ಪ್ರೋತ್ಸಾಹ ಎರಡೂ ಸಿಕ್ತಿದೆ. ಈ ರೀತಿಯ ಸ್ವಾಗತ ಸಿಗುತ್ತೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಟೀಕೆ, ಹೊಗಳಿಕೆ ಎರಡನ್ನೂ ಸಮನಾಗಿ ಸ್ವೀಕರಿಸುತ್ತಾ ಮುಂದೆ ಹೋಗ್ತಿದ್ದೀನಿ.

ಸಿನಿಮಾ ಇಂಡಸ್ಟ್ರಿಯಿಂದಲೂ ಸ್ವಾಗತ ಸಿಗ್ತಿದ್ಯಾ?

ನನಗೆ ಎಲ್ಲ ತರಹದ ಪಾತ್ರ ಮಾಡುವಾಸೆ. ಜನ ಅದನ್ನು ಇಷ್ಟಪಡುವಂತೆ ನಾನು ಪ್ರಯತ್ನಪಡ್ತೀನಿ. ಖ್ಯಾತ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲೂ ನನ್ನದು ಬಹಳ ವಿಭಿನ್ನ ರೀತಿಯ ಪಾತ್ರ.

ಪ್ರತಿನಿತ್ಯ ಒಂದೊಂದು ಹೊಸ ಚಿತ್ರಕ್ಕೆ ಸಹಿ ಹಾಕ್ತಿದ್ದೀಯಂತೆ! ನಿಜವೇ?

(ರಶ್ಮಿಕಾ ಜೋರಾಗಿ ನಗುತ್ತಾ....) ಹಾಗೇನಿಲ್ಲ, ದೊಡ್ಡ ದೊಡ್ಡ ಸ್ಟಾರ್ಸ್ ಜೊತೆ ಸಿನಿಮಾ ಮಾಡ್ತಿರೋದೇ ಒಂದು ದೊಡ್ಡ ಸುದ್ದಿ. ದರ್ಶನ್‌ ಅವರ ನಂತರ ಸುನಿ ನಿರ್ದೇಶನದ `ಚಮಕ್‌' ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೋಡಿಯಾಗಿ ನಟಿಸುತ್ತಿದ್ದೇನೆ. ಆಮೇಲೆ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರಿವೊಂದಕ್ಕೆ ಸಹಿ ಹಾಕಿದೆ. ಹರ್ಷ ನಿರ್ದೇಶನದ ಇನ್ನೊಂದು ಹೊಸ ಚಿತ್ರ.... ನಾನು ಸಿನಿಮಾ ನಟಿಯಾಗಬೇಕು, ಒಳ್ಳೆ ಹೆಸರನ್ನು ಮಾಡಬೇಕು ಅಂತ ಸಿಂಪಲ್ಲಾಗಿ ಒಂದು ಕನಸು ಕಂಡಿದ್ದೆ ಅಷ್ಟೆ, ಅದರೆ ಈ ಪಾಟಿ ಅದು ಗ್ರಾಂಡಾಗಿ ಈಡೇರುತ್ತೆ ಅಂತ ಅಂದುಕೊಂಡಿರಲಿಲ್ಲ.

ಅದೃಷ್ಟದ ಬಗ್ಗೆ ನಂಬಿಕೆ ಇದ್ಯಾ?

ಅದೃಷ್ಟ ಮತ್ತು ಪ್ರತಿಭೆ ಎರಡರ ಬಗ್ಗೆಯೂ ನಂಬಿಕೆ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ