ನೆನ್ನೆ ಇಡೀ ದಿನ ಯಾವುದೇ ದೃಶ್ಯ ಮಾಧ್ಯಮ ಮತ್ತು ಫೇಸ್ ಬುಕ್ ವಾಲ್ ಗಳಲ್ಲಿ, ವಾಟ್ಸ್ಯಾಪ್ ಡಿಪಿಗಳಲ್ಲಿ ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿಪ್ಪಿರುವ ಸುದ್ದಿಯದೇ ಚರ್ಚೆ. ಅವನ ಸಾವಿನ ಪರ-ವಿರೋಧಗಳನ್ನು ತಮ್ಮ ತಮ್ಮ ಶೈಲಿಯಲ್ಲಿ ಸಂತಾಪಸೂಚಿಸುತ್ತಿದ್ದರು. ಅದರಲ್ಲೊಬ್ಬರು, ಕಳೆದ ವಾರ ಕನ್ನಡ ಚಿರಂಜೀವಿ ಸರ್ಜಾ ಈ ವಾರ ಸುಶಾಂತ್ ಮರಣ ಹೀಗೆ ಇಬ್ಬರು ಉದಯೋನ್ಮುಖ ಕಲಾವಿದರುಗಳು ವಿಧಿವಶರಾಗಿರುವುದು ನಿಜಕ್ಕೂ ದುಃಖಕರ ಎಂದು ವ್ಯಕ್ತಪಡಿಸಿದ್ದರು. ಅದನ್ನು ನೋಡಿದ ನಾನು ಕಳೆದವಾರ ವಿಧಿಯಾಟವಾದರೇ ಈ ವಾರ ಸ್ವಯಂಕೃತಾಪರಾಧ. ಮೊದಲನೆಯದ್ದಕ್ಕೆ ವಿಷಾಧವಿದೆ ಎರಡನೆಯದಕ್ಕೆ ವಿರೋಧವಿದೆ ಎಂದು ಪ್ರತಿಕ್ರಿಯಿಸಿದೆ.

su1

ಹಾಗೆಂದ ಮಾತ್ರಕ್ಕೆ ಸುಶಾಂತ್ ಸಾವನ್ನು ನಾನು ಸಂಭ್ರಮಿಸುತ್ತಿಲ್ಲ. ಅವನ ಅಕಾಲಿಕ ಮರಣದ ಬಗ್ಗೆ ದುಃಖವಿದೆಯಾದರೂ ಸಾವಿಗಾಗಿ ಆತನು ಆರಿಸಿಕೊಂಡ ವಿಧಾನದ ಬಗ್ಗೆ ಬೇಸರವಿದೆ ಮತ್ತು ವಿರೋಧವಿದೆ. 1986 ಜನವರಿ 21ರಂದು ಬಿಹಾರ್ ರಾಜ್ಯದ ಪಾಟ್ನಾ ದಲ್ಲಿ ಜನಿಸಿದ್ದ ಸುಶಾಂತ್ ಜನ್ಮತಃ ಸುರದ್ರೂಪಿ ಮತ್ತು ಬುದ್ಧಿವಂತ ಕೂಡ. AIEEEನಲ್ಲಿ 7ನೇ ರ್ಯಾಂಕ್ ಪಡೆದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ಅತನ ಕೆನ್ನೆಯಲ್ಲಿ ಬೀಳುವ ಗುಳಿಗಳಿಂದಲೇ ಎಲ್ಲರರನ್ನೂ ಆಕರ್ಶಿಸವಲ್ಲವನಾಗಿದ್ದರಿಂದಲೇ ತನ್ನ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದಾಗಲೇ ಮಾಡಲಿಂಗ್ ಪ್ರಪಂಚದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವ ನಂತರ ಹಿಂದಿ ಕಿರುತೆರೆಯಲ್ಲಿ ನಟನಾ ವೃತ್ತಿ ಆರಂಭಿಸಿಕಿಸ್ ದೇಶ್ ಮೆ ಹೇ ಮೇರಾ ದಿಲ್, ಪವಿತ್ರ ರಿಶ್ತಾ ಧಾರವಾಹಿಗಳಲ್ಲಿನ ಲವಲವಿಕೆಯ ಅಭಿನಯಾ ಮೂಲಕ ಬಲು ಬೇಗನೆ ಬಹಳಷ್ಟು ಪ್ರಸಿದ್ದಿ ಪಡೆದುಕೊಂಡಿದ್ದ.

Sushant-Singh-Rajput-dead

2013ರಲ್ಲಿ ಕಾಯ್ ಪೋ ಚೆ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಲಗ್ಗೆ ಹಾಕಿದ ಸುಶಾಂತ್ ಈ ಚಿತ್ರದ ಅದ್ಭುತ ನಟನೆಗಾಗಿ ಫಿಲ್ಮಫೇರ್ ಪ್ರಶಸ್ತಿಗೂ ನಾಮಿನೇಟ್ ಆಗಿದ್ದ. ನಂತರ ಶುದ್ಧ ದೇಸಿ ರೊಮ್ಯಾನ್ಸ್, ಡಿಟಿಕ್ಟಿವ್ ಬ್ಯೋಂಕೇಶ್ ಬಕ್ಷಿ ಚಿತ್ರದಲ್ಲಿ ನಟಿಸಿ, 2014ರಲ್ಲಿ ಅನುಷ್ಕಶರ್ಮನ ಜೋಡಿಯಾಗಿ ಪಿಕೆ ಚಿತ್ರದಲ್ಲಿ ಸರ್ಫರಾಜ್ ಆಗಿ ಕಾಣಿಸಿಕೊಂಡಿದ್ದು ಆತನಿಗೆ ದೊಡ್ಡ ಹೆಸರನ್ನು ತಂದು ಕೊಟ್ಟಿತು. ಆದಾದ ನಂತರ ಭಾರತೀಯ ಕ್ರಿಕೆಟ್ ಲೋಕದ ಯಶಸ್ವಿ ನಾಯಕನಾದ ಮಹೇಂದ್ರ ಸಿಂಗ್ ಜೀವನಾಧಾರಿತ ಚಿತ್ರ ಎಂ ಎಸ್ ಧೋನಿ, ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ನಾಯಕನದಾಗ ಎಲ್ಲರ ಗಮನ ಈತನತ್ತ ಹರಿಯತೊಡಗಿತು. ಆ ಚಿತ್ರಕ್ಕಾಗಿ ಹಲವರು ತಿಂಗಳುಗಳ ಕಾಲ ಆತನ ಪರಿಶ್ರಮ ವ್ಯರ್ಥವಾಗದೇ, ದೋನಿಯ ರೂಪದಲ್ಲಿ ಅತನ ಪರಕಾಯಪ್ರವೇಶ ಚಿತ್ರವನ್ನು ಯಶಸ್ವಿಗೊಳಿಸಿದ್ದಲ್ಲದೇ ದಿನಬೆಳಗಾಗುವುದರಲ್ಲಿ ಆತ ಅನಾಯಾಸವಾಗಿ ಸ್ಟಾರ್ ಪಟ್ಟಕ್ಕೇರಿಬಿಟ್ಟಿದ್ದ. 2019ರಲ್ಲಿ ತೆರೆಕಂಡ ನಂತರ ಕೇದಾರನಾಥ್ ಮತ್ತು ಚಿಚೋರೆ ಚಿತ್ರಗಳಲ್ಲಿನ ಆತನ ಅಭಿನಯದಿಂದಾಗಿ ಈತ ಹಿಂದೀ ಚಿತ್ರರಂಗದಲ್ಲಿ ಚಿರಕಾಲ ಮಿಂಚಬಲ್ಲ ತಾರೆ ಭರವಸೆ ಮೂಡಿಸಿದ್ದದ್ದು ಸುಳ್ಳಲ್ಲ.

ಯಾವಾಗ ಸ್ಟಾರ್ ಗಿರಿ ಆತನ ನೆತ್ತಿಗೇರಿತೋ ಆಗಲೇ ತನ್ನ ಮನದಾಳದಲ್ಲಿ ಮುಚ್ಚಿಟ್ಟುಕೊಂಡಿದ್ದ ಎಡಪಂಕ್ತೀಯ ಧೋರಣೆಯನ್ನು ಸಾರ್ವಜನಿಕವಾಗಿ ಪ್ರಕಟಿಸತೊಡಗಿದ. ತನ್ನ ಅಭಿನಯ ಮತ್ತು ಪರಿಶ್ರಮದ ಮೂಲಕ ಚಿತ್ರರಂಗದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಬದಲು ನಕಲಿ ಜಾತ್ಯಾತೀತರ ಬಕೆಟ್ ಹಿಡಿಯಲು ಆರಂಭಿಸಿದ.ಬಾಲಿವುಡ್ ಸಿನಿಮಾ ಜಗತ್ತನ್ನು ತನ್ನ ಕಬಂಧ ಬಾಹುಗಳಿಂದ ಖಾನ್ ಗಳ ಮೂಲಕ ಆಳುತ್ತಿರುವ ದಾವೂದ್ ಮತ್ತವನ ತಂಡಕ್ಕೆ ಬಹುಪರಾಕ್ ಹೇಳಿದರೆ ಹಿಂದಿ ಚಿತ್ರರಂಗದಲ್ಲಿ ಬಹಳ ಕಾಲ ಉಳಿಯಬಹುದೆಂಬ ಭ್ರಮೆಯನ್ನು ಕಾಣತೊಡಗಿದ. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಜಾವೇದ್ ಅಖ್ತರ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ಮುಂತಾದ ಖಾನ್ ಪ್ರಿಯರೊಂದಿಗೆ ಹೆಚ್ಚಾಗಿ ಗುರಿತಿಸಿಕೊಳ್ಳತೊಡಗಿದ್ದಲ್ಲದೇ, ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪಟ್ಟಕ್ಕೇರಿದ ಕೂಡಲೇ ಈತನಿಗೂ ಅಸಹಿಷ್ಣುತೆ ಆರಂಭವಾಗತೊಡಗಿತು. ಉತ್ತರ ಪ್ರದೇಶದ ಅಖ್ಲಾಕ್ ಸಾವಿಗೆ ಸಂತಾಪ ವ್ಯಕ್ತಪಡಿಸುವ ಭರದಲ್ಲಿ ತಾನು ರಜಪೂತ ವಂಶದಲ್ಲಿ ಹುಟ್ಟಿದ್ದಕ್ಕೇ ನನಗೆ ನಾಚಿಕೆ ಆಗುತ್ತಿದೆ ಎನ್ನುವ ಆತನ ಸಾರ್ವಜನಿಕ ಹೇಳಿಕೆ ಎಲ್ಲರ ಹುಬ್ಬನ್ನೇರಿಸಿತು. ನೆನ್ನೆ ಮೊನ್ನೆ ಪ್ರವರ್ಧಮಾನಕ್ಕೆ ಬರುತ್ತಿರುವ ನಟನ ಈ ರೀತಿಯ ಉದ್ಧಟತನದ ಹೇಳಿಕೆ ಸಾರ್ವಜನಿಕವಾಗಿ ಅನೇಕ ವಿರೋಧಾಭಾಸವನ್ನು ಎದುರಿಸಬೇಕಾಯಿತು. ವಿದೇಶಿ ಹವಾಲಾದ ಬಗ್ಗೆ ಕಠಿಣ ನಿರ್ಧಾರ ಮತ್ತು ನೋಟ್ ಬ್ಯಾನ್ ಮಾಡಿದ ಮೇಲಂತೂ ಬಾಲಿವುಡ್ದಿನಲ್ಲಿ ಅರ್ಥಿಕ ತೊಂದರೆಗಳನ್ನು ಎದುರಿಸಬೇಕಾಯಿತು. ಅದಲ್ಲದೇ ಖಾನ್ ಗಳ ಚಿತ್ರ ಯಾವಾಗ ಮೇಲಿಂದ ಮೇಲೆ ಸೋಲನ್ನನುಭಿಸತೊಡಗಿತೋ ಆಗ ಅವರನ್ನು ಕೇಳೋರೆ ಇಲ್ಲವಾಯ್ತು. ಕಾಳ ಧನ ಬಿಳಿ ಮಾಡುವ ಅವಕಾಶ ಇಲ್ಲದೆ ಹೋದಾಗ ಸುಶಾಂತ್ ರಜಪೂತ್ ನಂತರ ಹೊಸಾ ನಟರಿಗೂ ಚಿತ್ರಗಳು ಸಿಗದಂತಾದಾಗ ಮೋದಿಯ ಆಡಳಿತವನ್ನು ವಿರೋಧಿಸುತ್ತಾ ಹಿಂದೂಧರ್ಮವನ್ನೇ ಹೀಯಾಳಿಸೋ ವೃತ್ತಿಗೆ ಅವರೆಲ್ಲರೂ ಇಳಿದಾಗ ಗುಂಪಿನಲ್ಲಿ ಗೋವಿಂದಾ ಎನ್ನುವಂತೆ, ದೇಶದ ಇತಿಹಾಸದಲ್ಲಿ ಕ್ಷಾತ್ರತೇಜಕ್ಕೆ ಹೆಸರಾಗಿದ್ದ ರಜಪೂತರ ವಂಶದವನಾಗಿ ರಜಪೂತರನ್ನೇ ದೂಷಿಸುವ ಮಟ್ಟಕ್ಕೆ ಹೋಗಿದ್ದದ್ದೇ ಅಕ್ಷ್ಮಮ್ಯ ಅಪರಾಧ ಎನಿಸಿತಲ್ಲದೆ ಆತನ ಅವನತಿಗೆ ಕಾರಣವಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ