-ಶರತ್ ಚಂದ್ರ
ಅಂದೊಂದು ಕಾಲವಿತ್ತು, ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೂಡಲೇ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದರು. ಕೆಲವೊಂದು ನಟಿಯರು ಮದುವೆಯಾದ ನಂತರ ಅಭಿನಯಿಸಿದರೂ ಕೂಡ, ನಿರ್ದೇಶಕರು ಗ್ಲಾಮರ್ ಪಾತ್ರಗಳನ್ನು ನೀಡುತ್ತಿದ್ದುದು ಬಹಳ ಕಡಿಮೆ.
ಆದರೆ ಈಗ ಕಾಲ ಬದಲಾಗಿದೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕಿಯಾ ರ ಅಡ್ವಾಣಿ, ನಯನತಾರ ಹೀಗೆ ಸಾಕಷ್ಟು ನಾಯಕಿಯರು ಮದುವೆ ನಂತರ ಕೂಡ ಸಾಕಷ್ಟು ಬೇಡಿಕೆಯ ನಟಿಯರಾಗಿ ಚಿತ್ರರಂಗವನ್ನು ಆಳುತ್ತಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಮದುವೆಯಾದ ನಂತರ ಚಿತ್ರರಂಗ ಪ್ರವೇಶಿಸಿರುವ ನಟಿಯರು ಕಡಿಮೆಯಾದರೂ ಕೂಡ,' ದಿಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಈಗ 'ಅಯ್ಯನ ಮನೆ ' ವೆಬ್ ಸೀರೀಸ್ ಮೂಲಕ ಮನೆ ಮಾತಾಗಿರುವ ಖುಷಿ ರವಿಯಂತಹ ನಟಿಯರು ಯಶಸ್ಸನ್ನು ಕಂಡಿದ್ದಾರೆ.
ಈಗ ಈ ಸಾಲಿಗೆ ಸೇರುವ ಕನ್ನಡದ ಇನ್ನೊಂದು ಪ್ರತಿಭೆ ಸ್ವಾತಿ ಲಿಂಗರಾಜ್. ದೆಹಲಿಯಲ್ಲಿ ನಡೆದ ಮಿಸ್ಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಎಲ್ಲ ರಾಜ್ಯಗಳ ಸ್ಪರ್ಧಿಗಳನ್ನು ಬದಿಗೊತ್ತಿ 'ಮಿಸ್ಸೆಸ್ ಇಂಡಿಯಾ ಅಲ್ಲುರಿಂಗ್' ಕಿರೀಟವನ್ನು ಮುಡಿಗೆರಿಸಿ, ಮಿಸ್ಸೆಸ್ ಇಂಟರ್ನ್ಯಾಷನಲ್ ಕ್ವೀನ್ ಆಗಿ ಫೈನಲ್ ಗೆ ತಲುಪಿದ್ದರು.
ಸ್ವಾತಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುವ ಮೊದಲು, ಕಣ್ಮಣಿ ಎಂಬ ತಮಿಳು ಆಲ್ಬಮ್ ಸಾಂಗ್ ನಲ್ಲಿ ಅಭಿನಯಿಸಿದ್ದರು.
ನಿರ್ಮಾಪಕ ಮಂಜುನಾಥ್ ನಿರ್ಮಿಸುತ್ತಿರುವ ಕೆ. ಶಂಕರ್ ನಿರ್ದೇಶನದ ತೆಲುಗಿನ ರಾಜ್ ಬಾಲ ನಾಯಕ ನಾಗಿ ನಟಿಸುತ್ತಿರುವ 'ಹಲೋ ಸಾರ್ ' ಚಿತ್ರದ ಮೂಲಕ ಈಗ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದಾರೆ. ಈ ಚಿತ್ರದಲ್ಲಿ ಸ್ವಾತಿಗೆ ನಾಯಕಿಯಾಗಿ ಅಭಿನಯಕ್ಕೆ ಅವಕಾಶವಿರುವ ಪಾತ್ರ ಸಿಕ್ಕಿದೆಯಂತೆ. ಚಿತ್ರದ ನಾಯಕ ಶಿಕ್ಷಕನನ್ನು ಪ್ರೀತಿಸುವ, ಆತನ ಪ್ರತೀ ಹೆಜ್ಜೆಯಲ್ಲಿ ಸಾಥ್ ಕೊಡುವ, ಪ್ಲಾಸ್ಟಿಕ್ ಬಳಕೆ ವಿರುದ್ಧ ಹೊರಡುವ ಯುವತಿಯಾಗಿ ಸ್ವಾತಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ
ಈ ಚಿತ್ರದಲ್ಲಿ ಅಭಿನಯಿಸುವ ಮುಂಚೆ 'ಭರ್ಜರಿ ಗಂಡು' ಖ್ಯಾತಿಯ ಪ್ರಸಿದ್ಧ್ ನಿರ್ದೇಶನ ದ 'ಶೇರ್ ' ಚಿತ್ರದಲ್ಲಿ ಗೌರವ ಪಾತ್ರ ಮಾಡಿದ್ದೂ ಈ ಚಿತ್ರ ಕೂಡ ಸಧ್ಯದಲ್ಲೇ ಬಿಡುಗಡೆ ಯಾಗಲಿದೆ.
ಹೆಣ್ಣು ಭ್ರೂಣಹತ್ಯೆಯ ಬಗ್ಗೆ ಸಾಮಾಜಿಕ ಸಂದೇಶ ಸಾರುವ 'ತಾಯವ್ವ' ಚಿತ್ರದಲ್ಲಿ ಸ್ವಾತಿ, ಹಳ್ಳಿ ಹುಡುಗಿಯ ಪ್ರಮುಖ ಪಾತ್ರ ನಿರ್ವಹಿಸಿದ್ದು ಈ ಚಿತ್ರ ಇದೇ ತಿಂಗಳ 30ನೇ ತಾರೀಕು ಬಿಡುಗಡೆ ಯಾಗಲಿದೆ.
ಕನ್ನಡವಲ್ಲದೇ ತಮಿಳು ಮತ್ತು ತೆಲುಗು ಭಾಷೆಗಳನ್ನು ನಿರರ್ಗ ಳ ವಾಗಿ ಮಾತಾಡುವ ಸ್ವಾತಿ ಈಗಾಗಲೇ PPD ಎಂಬ ಹಾರರ್ ಥ್ರಿಲರ್ ತೆಲುಗು ಚಿತ್ರದಲ್ಲಿ, ಮೂವರು ನಾಯಕಿಯರಲ್ಲೊಬ್ಬರಾಗಿ ನಟಿಸಿದ್ದಾರೆ.
ಒಂದಷ್ಟು ಹೊಸ ಅವಕಾಶಗಳು ಬರುತ್ತಿದ್ದರೂ ಕೂಡ ಪಾತ್ರಗಳ ಆಯ್ಕೆ ಯಲ್ಲಿ ಸ್ವಾತಿ ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದಾರಂತೆ. ಹೆಚ್ಚು ಸ್ಕ್ರೀನ್ ಸ್ಪೇಸ್ ಮತ್ತು ಅಭಿನಯಕ್ಕೆ ಅವಕಾಶವಿರುವ ಪಾತ್ರಗಳನ್ನು ಮಾತ್ರ ಮಾಡುವ ಇರಾದೆ ಸ್ವಾತಿಗಿದೆ.