ದೂರದ ತಮಿಳುನಾಡಿನಿಂದ ಕೆಲಸ ಹುಡುಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿ ಚಲನಚಿತ್ರಗಳ ಬಾಕ್ಸ್ ಗಳನ್ನು ಊರಿಂದ ಊರಿಗೆ ತಲುಪಿಸುತ್ತಿದ್ದ ವ್ಯಕ್ತಿ ಮುಂದೆ ಚಿತ್ರ ವಿತರಕರಾಗಿದ್ದಲ್ಲದೇ ಈಶ್ವರಿ ಪ್ರೊಡಕ್ಷನ್ಸ್‌ ಸಂಸ್ಥೆಯನ್ನು ಸ್ಥಾಪಿಸಿ. ಅದರ ಮುಖಾಂತರ ಹತ್ತಾರು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿ ಅತ್ಯಂತ ಯಶಸ್ವೀ ನಿರ್ಮಾಪಕರರಾಗಿ ಪ್ರಖ್ಯಾತರಾದ ಶ್ರೀ ಎನ್‌. ವೀರಾಸ್ವಾಮಿ ಯವರ ಯಶೋಗಾಥೆ ಕನ್ನಡದ ಕಲಿಗಳು ಮಾಲಿಕೆಯ ಮೂಲಕ ಇದೋ ನಿಮಗಾಗಿ

v2

ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಒಟ್ಟೇರಿ ಗ್ರಾಮದ ಶ್ರೀ ನಾಗಪ್ಪ ಮತ್ತು ಶ್ರೀಮತಿ ಕಾಮಾಕ್ಷಮ್ಮ ದಂಪತಿಗಳಿಗೆ 17 ಏಪ್ರಿಲ್ 1932 ರಂದು ವೀರಾಸ್ವಾಮಿಯವರು ಜನಿಸುತ್ತಾರೆ. ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದು ಕೆಲಸವನ್ನು ಅರಸಿಕೊಂಡು . 1950ರ ದಶಕದಲ್ಲಿ ಬೆಂಗಳೂರಿಗೆ ಆಗಮಿಸಿ ನಾನಾ ವಿಧದ ಕೆಲಸಗಳನ್ನು ಮಾಡುತ್ತಲೇ ಅಂತಿಮವಾಗಿ ಗಾಂಧಿನಗರದ ಡ್ರೀಮ್ ಲ್ಯಾಂಡ್ ಚಲನಚಿತ್ರ ನಿಗಮದಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ಮೂಲಕ ಚಲನಚಿತ್ರರಂಗದೊಂದಿಗಿನ ಅವರ ನಂಟು ಅರಂಭವಾಗುತ್ತದೆ. ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಚಲನ ಚಿತ್ರಗಳ ವಿತರಣೆಯನ್ನು ನಡೆಸುತ್ತಿದ್ದು ವೀರಾಸ್ವಾಮಿಯವರು ಚಲನಚಿತ್ರಗಳ ರೀಲ್ ಬಾಕ್ಸುಗಳನ್ನು ಊರಿಂದ ಊರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ತಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದಾಗಿ ಕಂಪನಿಯಲ್ಲಿ ಬಲು ಬೇಗನೇ ಉತ್ತಮವಾದ ಗೌರವವನ್ನು ಗಳಿಸಿರುತ್ತಾರೆ. ನಾನಾ ಕಾರಣಗಳಿಂದಾಗಿ ಅವರ ಸಂಸ್ಥೆ ಬೆಂಗಳೂರಿನಲ್ಲಿದ್ದ ತಮ್ಮ ಕಛೇರಿಯನ್ನು ಮುಚ್ಚಬೇಕಾಗಿ ಬಂದಾಗ ಅವರ ಬಳಿಯಿದ್ದ ಸುಮಾರು ಇಂಗ್ಲೀಶ್, ಕನ್ನಡ ತಮಿಳು ಚಿತ್ರಗಳ ರೀಲ್ಗಳನ್ನು ತಮ್ಮ ಸಂಸ್ಥೆಗೆ ನಿಷ್ಟಾವಂತವಾಗಿ ದುಡಿದಿದ್ದ ವೀರಾಸ್ವಾಮಿಯವರಿಗೇ ಬಿಟ್ಟು ಹೋಗುತ್ತಾರೆ.

v7

ಅದಾಗಲೇ ಚಿತ್ರವಿತರಣೆಯಲ್ಲಿ ಅನುಭವವನ್ನು ಹೊಂದಿದ್ದ ವೀರಾಸ್ವಾಮಿಗಳು, ತಮ್ಮೊಡನೆ ಸಹೋದ್ಯೋಗಿಯಾಗಿದ್ದ ಸ್ನೇಹಿತ ಗಂಗಪ್ಪ ಅವರೊಡನೆ ಸೇರಿ 1955ರಲ್ಲಿ ಉದಯ ಪಿಕ್ಚರ್ಸ್ ಆರಂಭಿಸಿ ಅದರ ಅಡಿಯಲ್ಲಿ ಚಿತ್ರ ವಿತರಣೆ ಆರಂಭಿಸಿ ತಮ್ಮ ಬಳಿಯಿದ್ದ ಚಿತ್ರಗಳ ಬಾಕ್ಸ್ ಗಳನ್ನು ಹಳ್ಳಿ ಹಳ್ಳಿಗಳ ಟೂರಿಂಗ್ ಟಾಕೀಸುಗಳಿಗೆ ತೆಗೆದುಕೊಂಡು ಹೋಗಿ ಪ್ರದರ್ಶನ ಮಾಡುತ್ತಾ ಕಠಿಣ ಪರಿಶ್ರಮದ ಮೂಲಕ ಕಸದಿಂದಲೂ ರಸವನ್ನು ತೆಗೆಯುವಂತೆ ಅಧ್ಭುತವಾದ ಯಶಸ್ಸನ್ನು ಕಾಣುತ್ತಾರೆ1962 ರಲ್ಲಿ ವೀರಾಸ್ವಾಮಿಯವರು ತಮ್ಮ ಕನಸಿನ ಕೂಸಾದ ಈಶ್ವರೀ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಇಷ್ಟರ ವೇಳೆಗೆ ತಮ್ಮ ಸ್ನೇಹಪರತೆಯ ಗುಣದಿಂದಾಗಿ ಗಾಂಧೀನಗರದ ಅಂದಿನ ಬಹುತೇಕ ತಂತ್ರಜ್ಞರ ಪರಿಚಯ ಅವರಿಗಿರುತ್ತದೆ. ಅದೇ ಪರಿಚಯದ ಮೂಲಕವೇ, 1971ರಲ್ಲಿ ತಮ್ಮ ಸಂಸ್ಥೆಯ ಮೊದಲ ಚಿತ್ರವಾಗಿ ವರನಟ ರಾಜಕುಮಾರ್ ಮತ್ತು ಲೀಲವತಿ ಅವರು ಪ್ರಮುಖ ಪಾತ್ರದಲ್ಲಿದ್ದ ಕುಲಗೌರವ ಚಿತ್ರವನ್ನು ನಿರ್ಮಾಣ ಮಾಡಿ ಅಭೂತಪೂರ್ವ ಯಶಸ್ಸನ್ನು ಗಳಿಸುತ್ತಾರೆ.

v5

ಅದಾಗಿ ಎರಡು ವರ್ಷದ ನಂತರ ತರಾಸು ಅವರ ಕಾದಂಬರಿಯಾಧಾರಿತ, ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲ್ ನಿರ್ದೇಶನದ, ಹೊಸ ಪರಿಚಯವಾಗಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಜೊತೆಗೆ ಹಿರಿಯ ನಟರಾದ ಶ್ರೀ ಅಶ್ವತ್ ಮತ್ತು ಲೀಲಾವತಿ ಅವರುಗಳು ನಟಿಸಿದ್ದ ಚಿತ್ರದುರ್ಗದಲ್ಲಿ ಚಿತ್ರತವಾಗಿದ್ದ ನಾಗರಹಾವು ಚಿತ್ರವನ್ನು 1972ರಲ್ಲಿ ಬಿಡುಗಡೆ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಇಬ್ಬರು ಶ್ರೇಷ್ಠ ನಟರುಗಳನ್ನು ಕೊಡುಗೆಯಾಗಿ ನೀಡುತ್ತಾರೆ.

1974ರಲ್ಲಿ ಗೊರೂರು ರಾಮಸ್ವಾಮೀ ಐಯ್ಯಂಗಾರರ ಕಾದಂಬರಿ ಅಧಾರಿತ ವಿಷ್ಣುವರ್ಥನ್, ಲೋಕೇಶ್, ಲೋಕನಾಥ್ ಪ್ರಮುಖರಾಗಿ ನಟಿಸಿದ್ದ ಭೂತಯ್ಯನ ಮಗ ಅಯ್ಯು ಸಹಾ ಯಶಸ್ವಿಯಾಗುವ ಮೂಲಕ ವೀರಾಸ್ವಾಮಿಯವರು ನಿರ್ಮಾಪಕರಾಗಿ ಕನ್ನಡಿಗರ ಮನೆಗಳಲ್ಲಿ ಮನ ಮಾಡುವುದಲ್ಲದೇ ಅವರ ನಿರ್ಮಾಣದ ಸಂಸ್ಥೆ ಗಾಂಧಿನಗರದ ಪ್ರತಿಷ್ಠಿತ ಸಂಸ್ಥೆಯಾಗಿ ಖ್ಯಾತಿಯನ್ನು ಪಡೆಯುವುದಲ್ಲದೇ, ಗಾಂಧಿನಗರದ ಅನೇಕ ಸಮಸ್ಯೆಗಳಿಗೆ ವೀರಾಸ್ವಾಮಿಯವರ ಬಳಿ ಪರಿಹಾರ ಕಂಡುಕೊಳ್ಳುವ ಪರಿಪಾಠವನ್ನು ಗಾಂಧೀನಗರದವರು ಬೆಳಸಿಕೊಳ್ಳುವ ಮೂಲಕ ಅವರಿಗೆ ಅರಿವಿಲ್ಲದಂತೆ ಗಾಂಧೀನಗರದಲ್ಲಿ ಅವರೊಬ್ಬ ಪ್ರತಿಷ್ಥಿತ ವ್ಯಕ್ತಿಯಾಗಿ ಬಿಡುತಾರೆ. ಇದೇ ಸಮಯದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ವಿಷ್ಣುವರ್ಧನ್ ಅವರಿಗೆ ಹೊದ ಬಂದ ಕಡೆಯಲ್ಲಾ ಕೆಲವು ಕಾಣದ ಕೈಗಳು ತೊಂದರೆ ಕೊಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ವಾರಾನು ಗಟ್ಟಲೆ ಈಶ್ವರೀ ಸಂಸ್ಥೆಯೇ ಆಶ್ರಯ ನೀಡಿದ್ದಲ್ಲದೇ ಆ ಸಮಸ್ಯೆಗೆ ಅಲ್ಪವಿರಾಮವನ್ನು ಹಾಕಿಸುವುದರಲ್ಲಿ ವೀರಸ್ವಾಮಿಗಳು ಸಫಲರಾಗುತ್ತಾರೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ