- ರಾಘವೇಂದ್ರ ಅಡಿಗ ಎಚ್ಚೆನ್.

ಈಗಾಗಲೇ  ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ "ಅಂದೊಂದಿತ್ತು ಕಾಲ" ಚಿತ್ರದ  'ಮುಂಗಾರು ಮಳೆಯಲ್ಲಿ ...' ಎಂಬ ಹಾಡು ಸೂಪರ್ ಹಿಟ್ ಆಗಿದ್ದು , ಯೂಟ್ಯೂಬ್ ನಲ್ಲಿ 36.4 ಮಿಲಿಯನ್ ವೀವ್ಸ್ ಆಗಿದೆ. ಹಾಗೆಯೇ ಈ ಸಾಂಗ್ ನ ರೀಲ್ಸ್  ಬಹಳಷ್ಟು ಅಭಿಮಾನಿಗಳು ಮಾಡಿ ಅಪ್ಲೋಡ್ ಕೂಡ ಮಾಡಿದ್ದಾರೆ. ಇದು ಇಡೀ ಚಿತ್ರತಂಡದ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಚಿತ್ರ ಯಶಸ್ವಿ ಆಗುವ ನಿರೀಕ್ಷೆಯಲ್ಲಿದ್ದಾರೆ. ಈಗ ತಮ್ಮ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡುವುದರ ಜೊತೆಗೆ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು ಚಿತ್ರತಂಡ. ವೇದಿಕೆಯ ಮೇಲೆ ಈ ಚಿತ್ರದ ಮೊದಲ ಹಾಡಿನ ಫೀಮೇಲ್ ವರ್ಷನ್ ರುಚಿತ ರಾಜೇಶ್ ಎಂಬ ಯುವ ಗಾಯಕಿ ಹಾಡಿ ಗಮನ ಸೆಳೆದರು. ತದನಂತರ ಎರಡನೇ ಗೀತೆಯನ್ನು ಇಡೀ ರಾಜ್ಯಕ್ಕೆ 10ನೇ ತರಗತಿಯಲ್ಲಿ ಫಸ್ಟ್ ಬಂದ ಮಲ್ಲಸಂದ್ರದಲ್ಲಿರುವ ಬಿ .ಎನ್. ಆರ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಂದ ರಿಲೀಸ್ ಮಾಡಿಸಿದ್ದು ಮತ್ತೊಂದು ವಿಶೇಷವಾಗಿದ್ದು , ಇದಕ್ಕೆ ಕಾರಣ ಏನು ಎಂಬುವುದು ಹಾಡಿನಲ್ಲಿ ತಿಳಿಯುತ್ತದೆ.

IMG-20250628-WA0012

ನಟ ವಿನಯ್ ರಾಜಕುಮಾರ್  ಮಾತನಾಡುತ್ತಾ ಈ ಚಿತ್ರದ  ಮೊದಲ ಸಾಂಗ್ ದೊಡ್ಡ ಹಿಟ್ ಆಗಿದೆ. ನಾನು ಕೂಡ ಸಾಂಗ್ ಅನ್ನು  ಫ್ಯಾನ್ಸುಗಳು ರೀಲ್ಸ್  ಮಾಡಿದ್ದು ನೋಡಿದೆ. ಮಿಲಿಯನ್ಸ್  ವಿವ್ಯೂ ರಿಚ್ ಆಗಿರೋದು ನಮ್ಮ ತಂಡಕ್ಕೂ ನನಗೂ ಖುಷಿ ಇದೆ. ಈಗ ನಮ್ಮ ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತಿದೆ, ಇದು ನನ್ನ ಪೆವರೇಟ್ ಗೀತೆ. ನಾನು ನಿರ್ದೇಶಕ ಕೀರ್ತಿ ಗೆ ಇದನ್ನೇ ಮೊದಲು ಬಿಡಿ ಎಂದಿದ್ದೆ. ಈ ಚಿತ್ರದಲ್ಲಿ ನಾನು 16ವರ್ಷದ ಹುಡುಗನ ಗೆಟಪ್ ನಲ್ಲಿ  ಮಾಡುವುದು ಚಾಲೆಂಜ್ ಆಗಿತ್ತು. ವೈಟ್ ಲಾಸ್ ಮಾಡುವುದು ಕಷ್ಟ ಆಗಿತ್ತು. ಹಾಡು ತುಂಬಾ ಚೆನ್ನಾಗಿ ಬಂದಿದೆ.  ಲೊಕೇಶನ್ , ಸಾಂಗ್ ಎಲ್ಲವೂ ಸೊಗಸಾಗಿದೆ. ಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆ. ಆದರೆ ನಿಜ ಜೀವನದಲ್ಲಿ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಮೂರು ಶೇಡ್ ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ನಿಮ್ಮ ಬೆಂಬಲ ಇರಲಿ ಎಂದರು. ಇನ್ನು ಈ ಚಿತ್ರದ ಶಾಲಾ ವಿದ್ಯಾರ್ಥಿಯ ಹಾಡಿನಲ್ಲಿ ಕಾಣಿಸಿಕೊಂಡಿರುವ ಯುವ ನಟಿ ನಿಶಾ ರವಿಕೃಷ್ಣನ್ ಮಾತನಾಡುತ್ತಾ ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಇಂಪಾರ್ಟೆಂಟ್ ಆಗಿದೆ. ನಿರ್ದೇಶಕರು , ನಿರ್ಮಾಪಕರು ತುಂಬಾ ಸಹಕಾರ ನೀಡಿದ್ದಾರೆ. ಅದೇ ರೀತಿ ನಟ ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸುಂದರ ಪ್ರಮುಖ ಪಾತ್ರವಾಗಿದ್ದು , ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದರು.

kn-bng-01-hadienaru-varshada-pathra-madodu-kastia-ayitu-vinayarajkumar-7204735_28062025112115_2806f_1751089875_727 (1)

ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡುತ್ತಾ ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ನಮ್ಮ ಚಿತ್ರದ ಮೊದಲ ಸಾಂಗ್ಸ್ ಮಿಲಿಯನ್ಸ್ ಗಟ್ಟಲೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಒಳ್ಳೆ ರೆಸ್ಪಾನ್ಸ್ ನಮಗೆ ಸಿಕ್ಕಿದೆ. ನಾವು ಆ ಸಾಂಗ್ ಶೂಟಿಂಗ್ ಮಾಡುವ ಬಹಳಷ್ಟು ಮಳೆ ಇತ್ತು, ಕೊರೋನಾ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದು , ಆಗ ಯುಗಾದಿಯ ಹಬ್ಬ , ನಿರ್ಮಾಪಕರು ನಮ್ಮ ಜೊತೆ ಇದ್ದು ಸಂಭ್ರಮಿಸಿದ್ದ ಕ್ಷಣ ಮರೆಯಲು ಸಾಧ್ಯವಿಲ್ಲ. ನಮಗೆ ಏನು ಬೇಕು ಅದೆಲ್ಲವನ್ನು ನಿರ್ಮಾಪಕ ಭುವನ್ ಸುರೇಶ್ ನೀಡಿದ್ದಾರೆ. ನಿರ್ಮಾಪಕರು ಚಿತ್ರ ಚೆನ್ನಾಗಿ ಬರಲು ಬಹಳಷ್ಟು ಸಪ್ಪೋರ್ಟ್ ಮಾಡುತ್ತಿದ್ದಾರೆ. ನಮ್ಮ ಚಿತ್ರದಲ್ಲಿ ವಿನಯ್ ರಾಜಕುಮಾರ್ ಬಹಳ ಸಪೋರ್ಟ್ ಮಾಡಿದ್ದು , ತುಂಬಾ ಸೈಲೆಂಟ್ ವ್ಯಕ್ತಿತ್ವ , ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ