ತಮಿಳು ನಟ ವಿಶಾಲ್‌ ಅವರ ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳೆಲ್ಲ ಚಿಂತಿತರಾಗಿದ್ದಾರೆ.

ದಕ್ಷಿಣ ಭಾರತದ ಸ್ಟಾರ್‌ ನಟ ವಿಶಾಲ್‌ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದವರು. ಇದೀಗ ವಿಶಾಲ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಲವು ತಿಂಗಳುಗಳಿಂದ ನಟ ವಿಶಾಲ್ ಅವರ ಆರೋಗ್ಯ ಸರಿಯಿಲ್ಲ ಎಂದು ತೋರುತ್ತದೆ. ಇತ್ತೀಚೆಗೆ ಚಲನಚಿತ್ರ ಕಾರ್ಯಕ್ರಮಗಳಲ್ಲಿ ಕೈ ಮತ್ತು ದೇಹ ನಡುಗುವುದನ್ನು ನೋಡಿ ಎಲ್ಲರೂ ಶಾಕ್‌ ಆಗಿದ್ದರು. ಆ ಬಳಿಕ ವಿಶಾಲ್‌ ಆರೋಗ್ಯದ ಬಗ್ಗೆ ಹಲವು ವಿಚಾರಗಳು ಹರಡಿದ್ದವು. ಇತ್ತೀಚೆಗೆ ವಿಶಾಲ್ ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿಶಾಲ್ ವೇದಿಕೆ ಮೇಲೆಯೇ ಬಿದ್ದು, ಅಲ್ಲಿ ಗದ್ದಲ ಉಂಟಾಯಿತು. ಅವರ ಸಹಾಯಕರು ಮತ್ತು ವ್ಯವಸ್ಥಾಪಕರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ತಮಿಳುನಾಡಿನ ವಿಲ್ಲುಪುರಂನಲ್ಲಿ ಭಾನುವಾರ ರಾತ್ರಿ ಮಿಸ್ ಟ್ರಾನ್ಸ್ಜೆಂಡರ್ 2025 ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಶಾಲ್ ಟ್ರಾನ್ಸ್ಜೆಂಡರ್ ಸೌಂದರ್ಯ ಸ್ಪರ್ಧೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ವೇದಿಕೆ ಮೇಲೆ ನಿಂತಿದ್ದ ನಟ ವಿಶಾಲ್‌ ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡರು. ಏನಾಯಿತು ಎಂದು ಎಲ್ಲರಿಗೂ ಗೊಂದಲವಾಯಿತು. ಒಂದೆರಡು ಕ್ಷಣದಲ್ಲಿ ವಿಶಾಲ್ ಕಣ್ಣು ತೆರೆದರು. ನಂತರ ವಿಶಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕೆಲವು ತಿಂಗಳ ಹಿಂದೆ, ವಿಶಾಲ್ ತಮ್ಮ 'ಮದ ಗಜ ರಾಜ' ಚಿತ್ರದ ಕಾರ್ಯಕ್ರಮದಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದರು. ಅವರು ಬಹಳ ಬಳಲಿದಂತೆ ಕಾಣಿಸಿಕೊಂಡಿದ್ದರಿಂದ ಅವರ ಆರೋಗ್ಯದ ಬಗ್ಗೆ ಚರ್ಚೆ ನಡೆಯಿತು. ಮುಖ ಕಳೆಗುಂದಿತ್ತು ಮತ್ತು ನಡೆಯಲು ಕಷ್ಟಪಡುತ್ತಿದ್ದರು. ಇನ್ನೊಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕೈಗಳು ಮತ್ತು ದೇಹ ನಡುಗುತ್ತಿತ್ತು. ನಾಲ್ಕು ಪದಗಳನ್ನು ಸರಿಯಾಗಿ ಮಾತನಾಡಲು ಅವರಿಂದ ಆಗುತ್ತಿರಲಿಲ್ಲ. ಇದು ಅವರ ಆರೋಗ್ಯದ ಬಗ್ಗೆ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ.

ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ವಿಶಾಲ್ ಅವರನ್ನು ಪರೀಕ್ಷಿಸಿದ್ದು, ಅವರ ಆರೋಗ್ಯದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಶಾಲ್‌ಗೆ ವೈರಲ್ ಜ್ವರ ತಗುಲಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದಿದ್ದಾರೆ. ವಿಶಾಲ್‌ಗೆ ಕೆಲವು ವರ್ಷಗಳ ಕಾಲ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದ್ದು, ವಿಶಾಲ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ