- ರಾಘವೇಂದ್ರ ಅಡಿಗ ಎಚ್ಚೆನ್.
‘ನಮ್ಮನೆ ಯುವರಾಣಿ’ ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಅಂಕಿತಾ ಅಮರ್ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿಗೆ ಬಿಗ್ ಆಫರ್‌ವೊಂದು ಅರಸಿ ಬಂದಿದೆ. ರಿಯಲ್ ಸ್ಟಾರ್ ಉಪೇಂದ್ರಗೆ ಅಂಕಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಾಗಣ್ಣ ನಿರ್ದೇಶನದ, ಸೂರಪ್ಪ ಬಾಬು ನಿರ್ಮಾಣದ ‘ಭಾರ್ಗವ’ ಚಿತ್ರಕ್ಕೆ ನಾಯಕಿಯಾಗಿ ಅಂಕಿತಾ ಸೆಲೆಕ್ಟ್ ಆಗಿದ್ದಾರೆ. ಈ ಸಿನಿಮಾದಲ್ಲಿ ನಟಿಗೆ ಉತ್ತಮ ಪಾತ್ರವೇ ಸಿಕ್ಕಿದೆ. ಉಪೇಂದ್ರ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಅಂಕಿತಾ ನಟನೆ ನೋಡಿ ‘ಭಾರ್ಗವ’ ಚಿತ್ರಕ್ಕೆ ಇವರೇ ಸೂಕ್ತ ಎಂದು ಹೇಳಿದ್ದರು. ಹೀಗಾಗಿ ಅಂಕಿತಾಗೆ ಉಪೇಂದ್ರ ಜೊತೆ ನಟಿಸುವ ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಶೈನ್ ಶೆಟ್ಟಿ ‘ಜಸ್ಟ್ ಮ್ಯಾರೀಡ್’, ಪೃಥ್ವಿ ಅಂಬರ್ ಜೊತೆ ‘ಅಬ ಜಬ ದಬ’ ಸಿನಿಮಾಗಳು ನಟಿಯ ಕೈಯಲ್ಲಿವೆ. ಕಳೆದ ವರ್ಷ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ವಿಹಾನ್‌ಗೆ ನಾಯಕಿಯಾಗಿ ನಟಿಸಿದ್ದರು ಅಂಕಿತಾ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ