ಇವತ್ತಿನ ನಮ್ಮ ಕನ್ನಡದ ಕಲಿಗಳು ಕಥಾನಾಯಕರನ್ನು ಹೇಗೆ ಪರಿಚರಿಸಿಕೊಡುವುದು ಎಂಬ ಗೊಂದಲ ನನ್ನ ಮನಸ್ಸಿನಲ್ಲಿ ಮೂಡುತ್ತಿದೆ. ಇವರು ತಮ್ಮ ಜೀವನ ಆರಂಭಿಸಿದ್ದು, ಕೂಲೀ ಕಾರ್ಮಿಕನಾಗಿ ನಂತರ ಹೊಟೇಲ್ ಮಾಲಿಕ, ತದನಂತರ ಸ್ವಾತಂತ್ರ್ಯ ಹೋರಾಟಗಾರ, ಆನಂತರ ಚಲನಚಿತ್ರ ಪ್ರದರ್ಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ಹೀಗೆ ಹಿಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಜನರ ಮನವನ್ನು ಸೂರೆಗೊಂಡ ಅಪ್ರತಿಮ ಛಲಗಾರ ಬಿ. ವಿಠಲಾಚಾರ್ಯರು.

ವಿಠಲಾಚಾರ್ಯರು ಎಂದರೆ ನಮಗೆ ಥಟ್ ಅಂತಾ ನೆನಪಾಗೋದೇ ಪೌರಾಣಿಕ ಇಲ್ಲವೇ ಕ್ರಾಂತಿಕಾರಿ ಸಿನಿಮಾಗಳೇ. ಇಂದಿನ ಕಾಲದಲ್ಲಿ ಗ್ರಾಫಿಕ್ ತಂತ್ರಜ್ಞಾನ ಬಳಸಿಕೊಂಡು ಯಾವುದೇ ರೀತಿಯ ಎಫೆಕ್ಟ್ಗಳನ್ನು ಸುಲಭವಾಗಿ ಮಾಡಬಹುದು. ಅದ್ಧೂರಿಯ ಯುದ್ದ ಭೂಮಿಯ ಚಿತ್ರೀಕರಣವನ್ನು ಮಾಡದಯೇ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕುಳಿತು ಗ್ರಾಫಿಕ್ಸ್ ಸಹಾಯದಿಂದ ಸುಲಭವಾಗಿ ತಯಾರಿಸಿಬಿಡಬಹುದು. ಈ ರೀತಿಯ ಯಾವುದೇ ತಂತ್ರಜ್ಞಾನವೂ ಇಲ್ಲದಿದ್ದ 50-60ರ ದಶಕದಲ್ಲಿಯೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿ, ಚಿಕ್ಕಮಕ್ಕಳಂತೂ ಚೆಟ್ಟಿಯನ್ನೇ ಒದ್ದೆ ಮಾಡಿಕೊಳ್ಳುವಷ್ಟು ರೋಚಕವಾಗಿ ತೋರಿಸುತ್ತಿದ್ದ ಕನ್ನಡಿಗನಾಗಿದ್ದರೂ, ಅಚಾನಕ್ಕಾಕಿ ಮದ್ರಾಸಿಗೆ ಹೋಗಿ ಕಡೆಗೆ ಯಶಸ್ವೀ ತೆಲುಗು ಮತ್ತು ತಮಿಳು ಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡ ಬಿ ವಿಠಲಾಚಾರ್ಯರ ಸಿನಿಮಾ ಪಯಣ ನಿಜಕ್ಕೂ ಬಲು ರೋಚಕವಾಗಿದೆ.

ದಕ್ಷಿಣ ಕರ್ನಾಟಕದ ದೇವಾಲಯಗಳ ನಗರೀ ಎಂದೇ ಖ್ಯಾತವಾಗಿರುವ ಉಡುಪಿಯ ಆಯುರ್ವೇದ ವೈದ್ಯರೊಬ್ಬರ ಮಗನಾಗಿ ಉದ್ಯಾವರದಲ್ಲಿ ಮಧ್ಯಮ ವರ್ಗದ ಸಂಪ್ರದಾಯಸ್ಥರ ಕುಟುಂಬದ ಏಳನೆಯ ಮಗುವಾಗಿ ವಿಠಲಾಚಾರ್ಯರು ಜನವರಿ 20, 1920 ರಲ್ಲಿ ಜನಿಸುತ್ತಾರೆ. ಅವರಿಗೆ ಬಾಲ್ಯದಿಂದಲೂ ಯಕ್ಷಗಾನ, ನಾಟಕ ಮತ್ತು ಬಯಲಾಟಗಳಲ್ಲಿಯೇ ಆಸಕ್ತಿಯಿದ್ದ ಕಾರಣ, ಮೂರನೇ ತರಗತಿಯವರಗೇ ಓದಿ ನಂತರ ಶಾಲೆಯನ್ನೂ ಊರನ್ನೂ ಬಿಟ್ಟು ಜೀವನದ ಪಾಠವನ್ನು ಕಲಿಯಲಾರಂಭಿಸುತ್ತಾರೆ. ಹಾಗೇ ಸಾಗುತ್ತಲೇ ಹೋಗಿ ಹಾಸನ ಜಿಲ್ಲೆಯ ಅರಸೀಕೆರೆ ತಲುಪಿ ಅಲ್ಲಿ ಕೂಲೀ ಕೆಲಸದಿಂದ ಹಿಡಿದು ನಾನಾ ರೀತಿಯ ಕೆಲಸಗಳನ್ನು ಮಾಡುತ್ತಲೇ ಕೂಡಿಟ್ಟ ಅಲ್ಪ ಸ್ವಲ್ಪ ಹಣದಿಂದ ತಮ್ಮ ಸೋದರ ಸಂಬಂಧಿಯೊಬ್ಬರು ನಡೆಸುತ್ತಿದ್ದ ಉಡುಪಿ ಹೋಟೆಲೊಂದನ್ನು ಖರೀದಿಸಿ ಅದನ್ನು ಯಶಸ್ವಿಯಾಗಿ ನಡೆಸುತ್ತಾ ಜೀವನ ಇನ್ನೇನು ನೆಲೆಗೊಂಡಿತ್ತು ಎಂದು ತಿಳಿಯುತ್ತಿರುವಾಗಲೇ ದೇಶಾದ್ಯಂತ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಭಿಯಾನ ನಡೆಯುತ್ತಿದ್ದದ್ದನ್ನು ನೋಡಿ ಅವರಲ್ಲಿದ್ದ ದೇಶಾಭಿಮಾನ ಜಾಗೃತಗೊಂಡು ಕೆಲವು ಸ್ನೇಹಿತರೊಂದಿಗೆ ಬ್ರಿಟಿಷ್ ಸರ್ಕಾರದ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿದ ಕಾರಣ, ಪೋಲೀಸರು ಅವರನ್ನು ಬಂಧಿಸಿ ಸೆರಮನೆಗೂ ತಳ್ಳಲ್ಪಡುತ್ತಾರೆ. ಸೆರೆಮನೆಯಿಂದ ಬಿಡುಗಡೆಯಾಗಿ ಹೊರಗೆ ಬಂದಾಗ ಅವರ ತಮ್ಮ ಹೋಟೇಲನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ತಮ್ಮ ಹೋಟೆಲ್ ಉದ್ಯಮವನ್ನು ಸಹೋದರನಿಗೇ ಹಸ್ತಾಂತರಿಸಿ, ತನ್ನ ಸ್ನೇಹಿತರಾಗಿದ್ದ ಡಿ. ಶಂಕರ್ ಸಿಂಗ್ ಮತ್ತಿತರ ಜೊತೆಯಲ್ಲಿ ಅರಸೀಕೆರೆಯಲ್ಲಿಯೇ ಟೂರಿಂಗ್ ಟಾಕೀಸ್ ಅನ್ನು ಆರಂಭಿಸುತ್ತಾರೆ. ಟೂರಿಂಗ್ ಟಾಕೀಸ್ ಉದ್ಯಮ ಚೆನ್ನಾಗಿ ಕೈ ಹಿಡಿದ ಕಾರಣ ಅಕ್ಕ ಪಕ್ಕ ಊರುಗಳಲ್ಲಿಯೂ ಇನ್ನೂ ಮೂರ್ನಾಲ್ಕು ಟೂರಿಂಗ್ ಟಾಕೀಸ್ಗಳನ್ನು ಅರಂಭಿಸಿ ಯಶಸ್ವೀ ಪ್ರದರ್ಶಕರಾಗುತ್ತಾರೆ. ಇದೇ ಸಮಯದಲ್ಲಿಯೇ ಕೆ.ಆರ್.ಪೇಟೆಯ ರಾಮದಾಸ ಆಚಾರ್ಯರ ಮೂರನೇ ಮಗಳಾದ ಜಯಲಕ್ಷ್ಮಿಯೊಂದಿಗೆ ಮದುವೆಯಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ