- ರಾಘವೇಂದ್ರ ಅಡಿಗ ಎಚ್ಚೆನ್.
ಹ್ಯಾಟ್ರಿಕ್ ಹೀರೋ ಶಿವಣ್ಣ ನಿವಾಸಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಭೇಟಿ ನೀಡಿದ್ದಾರೆ. ಶಿವಣ್ಣ ಆರೋಗ್ಯದಲ್ಲಿ ಚೇತರಿಕೆಯ ನಂತರ ಮೊದಲ ಬಾರಿಗೆ ಯಶ್ ದಂಪತಿ ಭೇಟಿ ಕೊಟ್ಟಿದ್ದಾರೆ.
ಇತ್ತೀಚೆಗೆ ಚಿಕಿತ್ಸೆಗಾಗಿ ಶಿವಣ್ಣ  ಅಮೆರಿಕಗೆ ಹೊರಟ ಸಂದರ್ಭದಲ್ಲಿ ಯಶ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಿದ್ದರು. ಆ ನಂತರ ಗುಣಮುಖರಾಗಿ ವಿದೇಶದಿಂದ ಬಂದ್ಮೇಲೆಯೂ ಶಿವಣ್ಣರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ನಟನ ವಿವಾಸಕ್ಕೆ ಯಶ್ ಮತ್ತು ರಾಧಿಕಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಶಿವಣ್ಣರನ್ನು ಭೇಟಿಯಾಗಲೆಂದೇ ಯಶ್ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಹಾಕಿದ್ದಾರೆ. ಶಿವರಾಜ್ ಕುಮಾರ್ ಅವರ ಮಾನ್ಯತಾ ಟೆಕ್​ಪಾರ್ಟ್​ನ ನಿವಾಸಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಇಂದು ಸಂಜೆ 5 ಗಂಟೆ ಸುಮಾರಿಗೆ ಆಗಮಿಸಿದರು. ಹಲವು ಸಮಯ ಮನೆಯಲ್ಲಿದ್ದು ಮಾತು-ಕತೆ ನಡೆಸಿದ್ದಾರೆ.
ನಟ ಸುದೀಪ್ ಸೇರಿದಂತೆ ಹಲವು ನಟರು ಶಿವಣ್ಣನ ಮನೆಗೆ ಆಗಮಿಸಿದ್ದರು. ಶಿವರಾಜ್ ಕುಮಾರ್ ಅಮೆರಿಕಕ್ಕೆ ತೆರಳುವ ಮುಂಚೆ ಹಲವಾರು ನಟರು ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಎಲ್ಲರಿಗೂ ನನ್ನ ಮೇಲೆ ಪ್ರೀತಿ ಇದೆ. ಎಲ್ಲರಿಗೂ ಈ ಬಗ್ಗೆ ಬೇಸರ ಇದೆ. ಯಶ್​ಗೆ ಪಾಪ ನನಗೆ ಫೋನ್ ಮಾಡಿ ಮಾತನಾಡಲು ಸಹ ಬೇಸರ ಎಂದಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ