ಜೀ಼ ಕನ್ನಡದ ಅಭೂತಪೂರ್ವ ಯಶಸ್ಸಿನ ನಂತರ ಈಗ ZEEL ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ವಾಹಿನಿ “ಜೀ಼ ಪವರ್” ಮೂಲಕ ಕನ್ನಡ ಮನರಂಜನೆ ಜಗತ್ತಿನಲ್ಲಿ ಮತ್ತೊಂದು ಅಲೆ ಸೃಷ್ಟಿಸಲು ಸಜ್ಜಾಗಿದೆ. ಆಗಸ್ಟ್ 23 ರಂದು ಪ್ರಾರಂಭವಾಗಲಿರುವ ಜೀ಼ ಪವರ್ ಮನರಂಜನೆಯಲ್ಲಿ ಹೊಸ ಯುಗವನ್ನು ಆರಂಭಿಸಲಿದೆ.
ವೀಕ್ಷಕರು ತಮ್ಮ ದಿನವನ್ನು ಜೀ಼ ಪವರ್ ನ ಭವಿಷ್ಯ ದರ್ಶನದೊಂದಿಗೆ ಪ್ರಾರಂಭಿಸಬಹುದು. ಪ್ರತಿದಿನ ಬೆಳಿಗ್ಗೆ 7:30 ರಿಂದ 9:00 ರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ಜ್ಯೋತಿಷ್ಯ ಮತ್ತು ದೈವಿಕ ಚಿಂತನೆಯನ್ನು ವೀಕ್ಷಕರ ಮುಂದಿಡುವುದು ಮಾತ್ರವಲ್ಲೇ ದಿನಭವಿಷ್ಯದ ಮುಖಾಂತರ ಅವರ ದಿನ ಹೇಗಿರಲಿದೆ ಎಂಬುದನ್ನು ತೋರಿಸಿಕೊಡಲಿದೆ. ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಶರ್ಮ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ರಾಜಕುಮಾರಿ-ಸಿಟಿ ಜೀವನಕ್ಕೆ ಹೊಂದಿಕೊಳ್ಳುವ ಧೈರ್ಯಶಾಲಿ ಹಳ್ಳಿ ಹುಡುಗಿಯ ಕಥೆ.
ಶಾಲೆಯ ಮೆಟ್ಟಿಲೇರದಿದ್ದರೂ ಈ ಹುಡುಗಿ ಹೇಗೆ ತನ್ನ ಆಸೆ, ಕನಸಿನಂತೆ ಚಾಣಾಕ್ಷತನದಿಂದ ಯಶಸ್ವಿ ಮಹಿಳಾ ಉದ್ಯಮಿಯಾಗುವ ಕನಸನ್ನು ಮಿಠಾಯಿ ಅಂಗಡಿ ಇಡುವ ಮೂಲಕ ಸಾಧಿಸುತ್ತಾಳೆ ಎಂಬುದರ ಕುರಿತಾಗಿದೆ. ಈ ಧಾರಾವಾಹಿ ಪ್ರತಿದಿನ ಸಂಜೆ 7 ಗಂಟೆಗೆ, ಆಗಸ್ಟ್ 25 ರಿಂದ ಪ್ರಸಾರವಾಗಲಿದೆ.
'ಗೌರಿ' ಧಾರಾವಾಹಿ ಸಂಬಂಧಗಳನ್ನೇ ಸರ್ವಸ್ವ ಅಂದುಕೊಂಡಿರುವ ತಂಗಿ ಮತ್ತು ಸಂಬಂಧಕ್ಕೆ ಬೆಲೆಯೇ ಕೊಡದ ಅಕ್ಕ. ತಂಗಿ ಹೇಗೆ ಎಲ್ಲಾ ಕಷ್ಟಗಳನ್ನು ನಗುನಗುತ್ತಲೇ ಎದುರಿಸುತ್ತಾಳೆ ಎಂಬುದನ್ನು ತೋರಿಸುತ್ತದೆ.
ಶಿಕ್ಷಣವೇ ಸರ್ವಸ್ವ ಎಂಬ ಅಕ್ಷರಾ ಮತ್ತು ಹಣವೇ ಸರ್ವಸ್ವ ಎಂದು ನಂಬುವ ಗ್ರಾಮದ ಮುಖ್ಯಸ್ಥೆ ಭುವನೇಶ್ವರಿ ನಡುವಿನ ಸೈದ್ಧಾಂತಿಕ ಘರ್ಷಣೆಯ ಬಗೆಗಿನ ಧಾರಾವಾಹಿಯೇ 'ಜೋಡಿಹಕ್ಕಿ'. ಹಾಗೆಯೇ ಭುವನೇಶ್ವರಿ ಗೆ ವಿದ್ಯೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವೀ ಆಗ್ತಾಳಾ ಅಕ್ಷರ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಈ ಧಾರಾವಾಹಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ರಾತ್ರಿ 8:30 ಕ್ಕೆ ಪ್ರಸಾರವಾಗುವ ಶುಭಸ್ಯ ಶೀಘ್ರಂ, ತನ್ನ ನಾಲ್ವರು ಹೆಣ್ಣುಮಕ್ಕಳು ಉತ್ತಮವಾದ ಮನೆಗೆ ಸೊಸೆಯಾಗಿ ಹೋಗಲಿ ಎಂದು ಬಯಸುವ ತಾಯಿಯ ಕುರಿತಾದ ಕೌಟುಂಬಿಕ ಧಾರಾವಾಹಿ. ತನ್ನ ಕಿವಿ ಕೇಳದೆ ಇರುವ ಅಕ್ಕನ ಮದುವೆ ಜವಾಬ್ದಾರಿಯನ್ನು ಹೊತ್ತ ಶುಭ ಮದುವೆ ಬಗ್ಗೆ ಅಪಾರ ನಂಬಿಕೆ ಹೊತ್ತಿರುತ್ತಾಳೆ ಮತ್ತು ಆಕೆ ಹೇಗೆ ಮದುವೆ ಬಗ್ಗೆ ನಂಬಿಕೆಯೇ ಇಲ್ಲದ ಯುವರಾಜ್ ಅರಸು ನ ಯಾಕೆ ಮದುವೆಯಾಗುತ್ತಾಳೆ ಎನ್ನುವುದು ಈ ಧಾರಾವಾಹಿಯಲ್ಲಿ ಕಾಣಿಸಲಿರುವ ಕುತೂಹಲ. ಇನ್ನು ಈ ಧಾರಾವಾಹಿಯಲ್ಲಿ ವಿಕಲಚೇತನರನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ, ಮಧ್ಯಮ ವರ್ಗದ ಜನರು ಎದುರಿಸುವ ತೊಂದರೆಗಳನ್ನು ಬಹಳ ಚೆಂದವಾಗಿ ತೋರಿಸಲಾಗಿದೆ.
ಪ್ರತಿದಿನ ರಾತ್ರಿ 9 ಗಂಟೆಯಿಂದ 10 ಗಂಟೆಗೆ ಪ್ರಸಾರ ಆಗಲಿರುವ 'ಹಳ್ಳಿ ಪವರ್' ರಿಯಾಲಿಟಿ ಶೋವನ್ನು ಅಕುಲ್ ಬಾಲಾಜಿ ನಿರೂಪಣೆ ಮಾಡಲಿದ್ದು, ಇದರಲ್ಲಿ ಸಿಟಿ ಹುಡುಗಿಯರು ಹಳ್ಳಿ ಜೀವನವನ್ನು ಹೇಗೆ ನಡೆಸಲಿದ್ದಾರೆ ಹಾಗೂ ಅವರು ಎದುರಿಸುವ ಸವಾಲುಗಳು ಏನೆಂದು ತೋರಿಸಲಿದೆ. ಅಷ್ಟೇ ಅಲ್ಲದೇ ನಮಗೆ ಒಂದು ವಸ್ತುವನ್ನು ಕಳೆದುಕೊಂಡಾಗಲೇ ಅದರ ಮಹತ್ವ ಅರಿವಾಗೋದು ಎಂಬ ಅಂಶ ಈ ರಿಯಾಲಿಟಿ ಶೋ ನಲ್ಲಿ ಕಾಣಸಿಗುವುದರಿಂದ ಇದು ಎಮೋಷನಲಿ ವೀಕ್ಷಕರಿಗೆ ಹತ್ತಿರವಾಗಲಿದೆ.





