ಯುವತಿಯರಾಗಲೀ ಅಥವಾ ವಯಸ್ಕರಾಗಲೀ ಎಲ್ಲರೂ ಸುಂದರವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ. ಸೌಂದರ್ಯ ಹೆಚ್ಚಿಸುವಲ್ಲಿ ಫ್ಯಾಷನ್‌ನಿಂದ ಬಹಳ ಸಹಾಯವಾಗುತ್ತದೆ. ಫ್ಯಾಷನ್‌ನಲ್ಲಿ ಬಹಳ ಪ್ರಮುಖವಾದದ್ದು ಉಡುಪುಗಳು. ಅವು ಆಕರ್ಷಕವಾಗಿರುವುದು ಬಹಳ ಅಗತ್ಯ. ಪಾರಂಪರಿಕ ಉಡುಪುಗಳ ಬಗ್ಗೆ ಮಾತಾಡುವಾಗ ಸೀರೆಯ ಹೆಸರು ಎಲ್ಲಕ್ಕೂ ಮೊದಲು ಬರುತ್ತದೆ. ಇದು ಯಾವಾಗಲೂ ಹೊಸ ಟ್ರೆಂಡ್‌ನ್ನು ಒಳಗೊಂಡಿರುತ್ತದೆ ಹಾಗೂ ಇದನ್ನು ಆಕರ್ಷಕಗೊಳಿಸುವುದು ಇದರ ಬ್ಲೌಸ್.

ಈಗ ಡಿಸೈನರ್‌ ಬ್ಲೌಸ್‌ನ ಕ್ರೇಝ್ ಇದೆ. ಡಿಸೈನರ್‌ ಆದಿತ್ಯ ಕಳೆದ 16 ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದು ಪ್ರತಿ ವರ್ಷ ಬ್ಲೌಸ್‌ಗಳ ಹೊಸ ಹೊಸ ಸಂಗ್ರಹಗಳನ್ನು ಮಾರುಕಟ್ಟೆಯಲ್ಲಿ ಬಿಡುತ್ತಿದ್ದಾರೆ.

ಚಿಕ್ಕಂದಿನಿಂದಲೇ ಫ್ಯಾಷನ್‌ ಕ್ಷೇತ್ರಕ್ಕೆ ಬರಲು ಇಚ್ಛಿಸಿದ್ದ ದೇವಾರುನ್‌ ಲಂಡನ್‌ ಕಾಲೇಜ್‌ ಆಫ್‌ ಫ್ಯಾಷನ್‌ನಲ್ಲಿ ತಮ್ಮ ಫ್ಯಾಷನ್ ಡಿಸೈನಿಂಗ್‌ ಶಿಕ್ಷಣ ಮುಗಿಸಿದರು. ನಂತರ ಮುಂಬೈನ ಒಂದು ಎಕ್ಸ್ ಪರ್ಟ್‌ ಹೌಸ್‌ನಲ್ಲಿ 4 ವರ್ಷ ಕೆಲಸ ಮಾಡುವಾಗ ಯೂರೋಪಿಯನ್‌, ಕೊರಿಯನ್‌, ಅಮೆರಿಕನ್‌ ಇತ್ಯಾದಿ ವಿಶ್ವದ ಅನೇಕ ಪ್ರಸಿದ್ಧ ಡಿಸೈನರ್‌ ಹೌಸ್‌ಗಳ ಜೊತೆ ಕೆಲಸ ನಿರ್ವಹಿಸಿದರು.

ಎಲ್ಲಾ ಉಡುಪುಗಳೂ ಬದಲಾಗುತ್ತಿರುತ್ತವೆ. ಆದರೆ ಸೀರೆಯ ಕ್ರೇಝ್ ಎಂದೂ ಮುಗಿಯುವುದಿಲ್ಲ. ಬ್ಲೌಸ್‌ಗಳಲ್ಲಿ ಕೊಂಚ ಬದಲಾವಣೆ ಮಾಡಿ ಅದನ್ನು ಸದಾ ಧರಿಸಬಹುದು ಎಂದು ಅವರಿಗೆ ತಿಳಿಯಿತು. ವಿದೇಶಗಳಲ್ಲಿರುವ ಭಾರತೀಯರು ಬ್ಲೌಸ್ ಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ.

2007ರಲ್ಲಿ ಅವರನ್ನು ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಮೊದಲ ಬಾರಿ ಆಯ್ಕೆ ಮಾಡಲಾಯಿತು. ಆಗಲೇ ಅವರು ತಮ್ಮ `ದೇವಾರುನ್‌' ಬ್ರ್ಯಾಂಡ್‌ ಸ್ಥಾಪಿಸಿದರು. ಅದರ ಪ್ರಮುಖ ಉದ್ದೇಶ ಭಾರತೀಯ ಪರಂಪರೆಗೆ ಹೊಚ್ಚ ಹೊಸ ಲುಕ್ಸ್ ಕೊಡುವುದಾಗಿತ್ತು.

ಸಂದರ್ಭ ಮತ್ತು ಋತು

ಈಗ ಮಹಿಳೆಯರು ಸೀರೆಯನ್ನು ಧರಿಸುವುದು ಕಡಿಮೆ. ಆದರೆ ವಿಶೇಷ ಸಂದರ್ಭಗಳಲ್ಲಿ ಮತ್ತು ಹಬ್ಬಗಳಲ್ಲಿ ಅವರು ಸೀರೆ ಉಡುತ್ತಾರೆ. ಅದರ ಮಾರುಕಟ್ಟೆ ಎಂದೂ ಕಡಿಮೆಯಾಗುವುದಿಲ್ಲ. ಆದಾಗ್ಯೂ ಈಗ ಕಾಂಟ್ರಾಸ್ಟ್ ಧರಿಸುವ ಪದ್ಧತಿ ಇದೆ. ಆದರೆ ಬ್ಲೌಸ್‌ ಆಯ್ಕೆ ಮಾಡುವ ಮೊದಲು ಕೆಲವು ವಿಷಯಗಳನ್ನು ಗಮನಿಸಿ.

ಕಪ್ಪು ಬಣ್ಣದ ಶಿಫಾನ್‌ ಬ್ಲೌಸ್‌ ಮೇಲೆ ಗೋಲ್ಡನ್‌ ಕಸೂತಿ ಮಾಡಿದ್ದರೆ ಅದನ್ನು ಯಾವ ಬಣ್ಣದ ಸೀರೆಯೊಂದಿಗಾದರೂ ಧರಿಸಬಹುದು.

ಹಬ್ಬಗಳ ಸಂದರ್ಭದಲ್ಲಿ ಗಾಢ ಬಣ್ಣದ ಬ್ಲೌಸ್‌ ಅಧಿಕ ಪಾಪ್ಯುಲರ್‌ ಆಗಿರುತ್ತದೆ. ಕೆಂಪು, ನೀಲಿ, ಆರೆಂಜ್‌, ಹಸಿರು, ಎಮರಾಲ್ಡ್ ಗ್ರೀನ್‌, ಬದನೆ ಇತ್ಯಾದಿ ಎಲ್ಲ ಬಣ್ಣಗಳ ಬ್ಲೌಸ್‌ಗಳೂ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಬೇಸಿಗೆಯಲ್ಲಿ ತೆಳು ಬಣ್ಣದ ಅಂದರೆ ಪಿಂಕ್‌ ಮೇಲೆ ಸಿಲ್ವರ್‌ ವರ್ಕ್‌, ಮುಕ್ಕೇಶ್‌ ಕಸೂತಿ, ಬಿಳಿ, ಆಫ್‌ ಲೈಟ್‌, ಟರ್ಕ್ವಾಯಜ್‌ ಮೇಲೆ ಸಿಲ್ವರ್‌ ವರ್ಕ್‌ ಹೆಚ್ಚು ಜನಪ್ರಿಯವಾಗಿದೆ. ಈ ಬ್ಲೌಸ್‌ಗಳನ್ನು ಸಿಲ್ಕ್, ಶಿಫಾನ್‌, ಜಾರ್ಜೆಟ್‌ ಇತ್ಯಾದಿ ಎಲ್ಲ ಸೀರೆಗಳೊಂದಿಗೆ ಧರಿಸಬಹುದು.

ಹೆಚ್ಚಿನ ಬ್ಲೌಸ್‌ಗಳು ಪಾರಂಪರಿಕ ಹಾಗೂ ಎಥ್ನಿಕ್‌ ಲುಕ್ಸ್ ಹೊಂದಿರುತ್ತವೆ. ಅವುಗಳನ್ನು ಹೊಲಿಯಲು ಹೆಚ್ಚು ಸಮಯ ಬೀಳುತ್ತದೆ. ಇವುಗಳ ಬೆಲೆ 400 ರೂ. ನಿಂದ ಹಿಡಿದು ಲಕ್ಷಾಂತರ ರೂ.ಗಳವರೆಗೆ ಇದೆ. ಕಸೂತಿಗೆ ತಕ್ಕಂತೆ ಬೆಲೆ ಹೆಚ್ಚು ಕಡಿಮೆಯಾಗುತ್ತದೆ. ಇದಲ್ಲದೆ ಬ್ಲೌಸ್‌ನಲ್ಲಿ ಉಪಯೋಗಿಸಲಾಗಿರುವ ಬಟ್ಟೆಯನ್ನು ಆಧರಿಸಿ ಕೂಡ ಬೆಲೆ ನಿರ್ಧರಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ