ನೀವು ಮನೆಯಿಂದ ಹೊರಹೋಗುವಾಗೆಲ್ಲಾ ಒಂದು ವಸ್ತುವನ್ನು ತೆಗೆದುಕೊಳ್ಳಲು ಮರೆಯುತ್ತೀರಿ. ಹೌದು, ನಾವು ಪರ್ಸ್‌ಬಗ್ಗೆಯೇ ಹೇಳುತ್ತಿದ್ದೇವೆ. ಇಂದು ಪರ್ಸ್‌ನಮ್ಮ ಜೀವನದ ಅತ್ಯಂತ ಪ್ರಮುಖ ಹಾಗೂ ಅಗತ್ಯ ಭಾಗವಾಗಿದೆ. ನಮ್ಮ ಹಣ, ಮೇಕಪ್‌ಪ್ರಾಡಕ್ಟ್ ಗಳು ಮತ್ತು ಇತರ ಅವಶ್ಯಕ ವಸ್ತುಗಳನ್ನು ಇಟ್ಟುಕೊಳ್ಳಲು ನಮಗೆ ಪರ್ಸ್‌ಅಗತ್ಯವಾಗಿದೆ. ಇಷ್ಟೇ ಅಲ್ಲ, ನಮ್ಮ ವ್ಯಕ್ತಿತ್ವಕ್ಕೆ ಕಾಂತಿ ತಂದುಕೊಡುವಲ್ಲಿಯೂ ಪರ್ಸ್‌ಪ್ರಮುಖ ಪಾತ್ರ ವಹಿಸುತ್ತದೆ. ಬೇರೆ ಬೇರೆ ಫ್ಯಾಷನ್‌ನ ಬಟ್ಟೆಗಳು ನಮ್ಮ ಸೌಂದರ್ಯ ಹೆಚ್ಚಿಸುವಂತೆ ಬೇರೆ ಬೇರೆ ಫ್ಯಾಷನ್ನಿನ ಪರ್ಸ್‌ಗಳು ನಮ್ಮ ಸೌಂದರ್ಯಕ್ಕೆ ಶೋಭೆ ತಂದುಕೊಡುತ್ತವೆ.

ಪರ್ಸ್‌ಗಳನ್ನು ಪ್ರಾಚೀನ ಕಾಲದಿಂದಲೇ ಉಪಯೋಗಿಸಲಾಗುತ್ತಿದೆ. ಪರ್ಸ್‌ಎಂಬ ಹೆಸರು ಇಂಗ್ಲಿಷ್‌ನವರೇ ಇಟ್ಟಿದ್ದು. ಹಿಂದಿನ ಕಾಲದಲ್ಲಿ ಜನ ಇದನ್ನು ಸಂಚಿ, ಕೈಚೀಲ, ಥೈಲಿ ಎನ್ನುತ್ತಿದ್ದರು. ಪುರುಷರು ಹಿಂದೆ ತಮ್ಮ ಬನಿಯನ್‌ನಲ್ಲಿಯೇ ಒಂದು ದೊಡ್ಡ ಜೇಬನ್ನು ಮಾಡಿಸಿ ಅದರಲ್ಲಿ ಥೈಲಿ ಇಡುತ್ತಿದ್ದರು. ಮಹಿಳೆಯರು ತಮ್ಮ ಹಣವನ್ನು ಸಂಚಿಯಲ್ಲಿ ಇಡುತ್ತಿದ್ದರು ಮತ್ತು ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದರು.

ದೊಡ್ಡ ವಸ್ತುಗಳು ಅಂದರೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಮೊದಲು ಗಂಟು ಉಪಯೋಗಿಸುತ್ತಿದ್ದರು. ನಂತರ ಇದರಲ್ಲಿ ಕೊಂಚ ಬದಲಾವಣೆ ಕಂಡು ಬಂತು. ಗಂಟು ಥೈಲಿಯ ರೂಪ ಪಡೆದುಕೊಂಡಿತು. ಥೈಲಿಗಳನ್ನು ಜನ ಹೆಚ್ಚಾಗಿ ಕೈಗಳಲ್ಲಿಯೇ ಹಿಡಿದುಕೊಳ್ಳುತ್ತಿದ್ದರು, ಹೆಗಲಿಗೆ ತೂಗುಬಿಡುತ್ತಿರಲಿಲ್ಲ.

purane-fashion-ki-2

ಈ ಸಂಚಿ, ಕೈಚೀಲ, ಥೈಲಿಗಳ ಮೇಲೆ ಬೇರೆ ಬೇರೆ ರೀತಿಯ ಕಸೂತಿಗಳು ಹಾಗೂ ಎಂಬ್ರಾಯಿಡರಿ ಮಾಡಿ ಅವಕ್ಕೆ ಬಹಳ ಸುಂದರ ರೂಪ ಕೊಡುತ್ತಿದ್ದರು.

ನಂತರ ನಿಧಾನವಾಗಿ ಥೈಲಿಗಳಲ್ಲಿಯೂ ಬದಲಾವಣೆ ಬಂದಿತು. ಅವುಗಳ ಜಾಗವನ್ನು ಪರ್ಸ್‌ಪಡೆದುಕೊಂಡಿತು. ಇಂದು ಮಾರುಕಟ್ಟೆಯಲ್ಲಿ ಅನೇಕ ಫ್ಯಾಷನೆಬಲ್ ಪರ್ಸ್‌ಗಳು ಲಭ್ಯವಿವೆ. ಅವುಗಳಲ್ಲಿ ಲೇಡೀಸ್‌ಶಾಪಿಂಗ್‌ಬ್ಯಾಗ್‌, ಕ್ಲಚೆಸ್‌ಬೀಡೆಡ್ ಕಾರ್ಟೂನ್‌ಪರ್ಸ್‌, ಡಿಸೈನರ್‌ಕ್ಲಚ್‌ಬ್ಯಾಗ್‌, ಫ್ಯಾನ್ಸಿ ಕ್ಲಚ್‌ಬ್ಯಾಗ್‌ಮತ್ತು ವೆಡಿಂಗ್‌ಕ್ಲಚ್‌ಬ್ಯಾಗ್‌ವಿಭಿನ್ನ ಬಣ್ಣಗಳು, ಡಿಸೈನ್‌ಗಳು ಹಾಗೂ ಸ್ಟೈಲ್‌ಗಳಲ್ಲಿ ಲಭ್ಯವಿವೆ.

ಹಿಂದೆ ಉಪಯೋಗಿಸುತ್ತಿದ್ದ ಸಂಚಿಗೂ ಈಗ ಮಾಡರ್ನ್‌ಲುಕ್ಸ್ ಕೊಡಲಾಗಿದೆ. ಹಿಂದೆ ಸಂಚಿಯನ್ನು ಸೊಂಟದಲ್ಲಿ ಇಡಲಾಗುತ್ತಿತ್ತು. ಆದರೆ ಈಗ ಸ್ಲಿಂಗಲ್ ಬ್ಯಾಗುಗಳ ರೂಪದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಇವನ್ನು ಉಪಯೋಗಿಸುತ್ತಾರೆ. ಮಾಡರ್ನ್‌ಲುಕ್ಸ್ ನ ಸ್ಲಿಂಗಲ್ ಬ್ಯಾಗುಗಳ ಜೊತೆ ಜೊತೆಗೆ ಎಂಬ್ರಾಯಿಡರಿ ಮತ್ತು ಕಸೂತಿ ಇರುವ ಸ್ಲಿಂಗಲ್ ಬ್ಯಾಗ್‌ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಪ್ರಸಿದ್ಧ ಕ್ಲಚೆಸ್‌ಮತ್ತು ಪರ್ಸ್‌ಡಿಸೈನರ್‌ಕಾಜಲ್‌ರ ಪ್ರಕಾರ ಇಂದು ಬಾಕ್ಸ್ ಕ್ಲಚೆಸ್‌, ನಿಯಾನ್‌ಕ್ಲಚೆಸ್‌ಮತ್ತು ಬಿಗ್‌ಸೈಜಿನ ಕ್ಲಚೆಸ್‌ಹೆಚ್ಚು ಫ್ಯಾಷನ್‌ನಲ್ಲಿದೆ.

ಬಾಕ್ಸ್ ಕ್ಲಚೆಸ್

ಸಾಮಾನ್ಯವಾಗಿ ಬಾಕ್ಸ್ ಕ್ಲಚೆಸ್‌ಚಪ್ಪಟೆಯಾಗಿದ್ದರೂ, ಬಾಕ್ಸ್ ನ ಆಕಾರ ಹೊಂದಿರುತ್ತವೆ. ಅದರಲ್ಲಿ ಕ್ರೆಡಿಟ್‌ಕಾರ್ಡ್‌ಗಳು, ವಿಸಿಟಿಂಗ್‌ಕಾರ್ಡ್ಸ್ ಮತ್ತು ಹಣ ಇಡಬಹುದು.

purane-fashion-ki-3

ನಿಯಾನ್‌ಕ್ಲಚೆಸ್‌ಪಿಂಕ್‌, ಯೆಲ್ಲೋ, ಆರೆಂಜ್‌ನಂತಹ ಬ್ರೈಟ್‌ಬಣ್ಣಗಳ ಬಟ್ಟೆಗಳಲ್ಲಿ ನಿಯಾನ್‌ಕ್ಲಚಸ್‌ತಯಾರಿಸಲಾಗುತ್ತದೆ.

ಬಿಗ್ಸೈಜ್ಕ್ಲಚೆಸ್

ಈ ಕ್ಲಚೆಸ್‌ಆಕಾರದಲ್ಲಿ ಕೊಂಚ ದೊಡ್ಡದಾಗಿರುತ್ತವೆ. ಅದರಲ್ಲಿ ನಮ್ಮ ಮೇಕಪ್‌ಸಾಮಾನುಗಳು, ಹಣ, ಕ್ರೆಡಿಟ್‌ಕಾರ್ಡ್‌ಮತ್ತು ವಿಸಿಟಿಂಗ್‌ಕಾರ್ಡ್‌ಇತ್ಯಾದಿಗಳನ್ನು ಸುಲುಭವಾಗಿ ಇಡಬಹುದು. ಆಫೀಸಿಗೆ ಹೋಗುವ ಮಹಿಳೆಯರು ಮತ್ತು ಕಾಲೇಜು ಹುಡುಗಿಯರು ಇವನ್ನು ಹೆಚ್ಚು ಉಪಯೋಗಿಸುತ್ತಾರೆ.

ಕ್ಲಚಸ್‌ಗಳನ್ನು ಅಕೇಶನ್‌, ಪಾರ್ಟಿ ಮತ್ತು ವೆಡಿಂಗ್ಸ್ ಗೆ ಗಮನ ಕೊಟ್ಟು ಡಿಸೈನ್‌ಮಾಡುತ್ತಾರೆ.

ಈಗೀಗ ಪರ್ಸ್‌ಗಳಲ್ಲಿಯೂ ಮತ್ತೊಮ್ಮೆ ಹಳೆಯ ಫ್ಯಾಷನ್‌ನ ಸುಗ್ಗಿಯಾಗುತ್ತಿದೆ. ಹಳೆಯ ಫ್ಯಾಷನ್‌ನ್ನು ಮಾಡರ್ನೈಸ್‌ಮಾಡುವ ಕೆಲಸವನ್ನು `ರಾಣೀಸ್‌ಪರ್ಸ್‌'ನ ತಯಾರಕ ನಿನಾದ್‌ರಾಣಿ ಮಾಡುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ