ಹವಾಮಾನ ಬದಲಾದಂತೆ ಫ್ಯಾಷನ್‌ ಕೂಡ ಬದಲಾಗುತ್ತದೆ. ಹವಾಮಾನಕ್ಕೆ ತಕ್ಕಂತೆ ಫ್ಯಾಷನ್‌ ನಮ್ಮದಾಗಿಸಿಕೊಂಡರೆ ಉತ್ತಮ ಲುಕ್ಸ್ ಪಡೆಯಬಹುದು.

ಬೇಸಿಗೆಯಲ್ಲಿ ಏನು ಧರಿಸುವುದು?

ಬೇಸಿಗೆಯಲ್ಲಿ ಧರಿಸಲು ಕಾಟನ್‌ ಬಟ್ಟೆ ಅತ್ಯುತ್ತಮ ಫ್ಯಾಬ್ರಿಕ್‌ ಆಗಿದೆ. ಇದು ನೋಡಲು ಹಾಗೂ ಧರಿಸಲು ಸರಳವಾಗಿರುತ್ತದೆ. ಬೇಸಿಗೆಯಲ್ಲಿ ಬಣ್ಣಗಳ ಆಯ್ಕೆ ವ್ಯಕ್ತಿತ್ವಕ್ಕೆ ಹೊಳಪು ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತೆಳುವಾದ ಬಣ್ಣಗಳು ಬೇಸಿಗೆಯಲ್ಲಿ ಸುಂದರ ಹಾಗೂ ಸ್ಟೈಲಿಶ್‌ ಲುಕ್ಸ್ ಕೊಡುತ್ತವೆ. ಬ್ಲೂ, ಗ್ರೀನ್‌, ಪಿಂಕ್‌, ಮೈಲ್ಡ್ ಯೆಲ್ಲೋ ಇತ್ಯಾದಿ ಬಣ್ಣಗಳು ಬೇಸಿಗೆಯಲ್ಲಿ ಚೆನ್ನಾಗಿರುತ್ತವೆ. ಡಸ್ಟಿ ಶೇಡ್‌ ಮತ್ತು ಫ್ಲೇರ್‌ ಡಿಸೈನ್ಸ್ ಸಹ ಈ ಹವಾಮಾನದಲ್ಲಿ ಚೆನ್ನಾಗಿರುತ್ತವೆ.

ಡಾಟ್ಸ್, ನ್ಯಾಚುರಲ್ ಡಿಸೈನ್ಸ್ ಮತ್ತು ಬ್ಲ್ಯಾಕ್‌ ಪ್ರಿಂಟ್ಸ್ ಕೂಡ ಈ ಹವಾಮಾನದಲ್ಲಿ ಸಾಕಷ್ಟು ಸ್ಟೈಲಿಶ್‌ ಆಗಿರುತ್ತವೆ. ಕಲರ್ ಕಾಂಬಿನೇಶನ್‌ ಬಗ್ಗೆ ಮಾತಾಡುವುದಾದರೆ ಹಸಿರಿನೊಂದಿಗೆ ಬಿಳಿ, ಬಿಳಿಯೊಂದಿಗೆ ಹಳದಿ ಮತ್ತು ಕೆಂಪಿನೊಂದಿಗೆ ಕ್ರೀಂ ಕಲರ್ ಸಾಕಷ್ಟು ಕೂಲ್ ‌ಲುಕ್ಸ್ ಕೊಡುತ್ತವೆ. ವಾಟರ್‌ ಕಲರ್‌ ಮತ್ತು ವೆಟ್‌ ಲುಕ್ಸ್ ನ ಕಲರ್‌ ಕೂಡ ಈ ಹವಾಮಾನದಲ್ಲಿ ಬಹಳ ಇಷ್ಟಪಡಲಾಗುತ್ತದೆ. ಕಾಟನ್‌ನೊಂದಿಗೆ ಜಾರ್ಜೆಟ್‌, ಶಿಫಾನ್‌, ಲೈಟ್‌ ವೇಟ್‌ ಸಿಲ್ಕ್ ನ್ನೂ ಕೂಡ ಈ ಹವಾಮಾನದಲ್ಲಿ ಇಷ್ಟಪಡಲಾಗುತ್ತದೆ. ಈಗ ಮಿಕ್ಸ್ಡ್ ಅಂಡ್‌ ಮ್ಯಾಚ್‌ ಕೂಡ ಫ್ಯಾಷನ್‌ನಲ್ಲಿದೆ. ಅದರಿಂದ ಯೂನಿಕ್‌ ಲುಕ್ಸ್ ಸಿಗುತ್ತದೆ.

ಬಿಳಿಯ ಜಾದೂ

ಬಿಳಿ ಬಣ್ಣ ಎವರ್‌ ಗ್ರೀನ್‌ ಆಗಿದ್ದು ಸರಳತೆಯ ಜೊತೆ ಜೊತೆಗೆ ಫ್ಯಾಷನೆಬಲ್ ಲುಕ್ಸ್ ಕೂಡ ಕೊಡುತ್ತದೆ. ಬಿಳಿಯ ಜೊತೆ ಯಾವುದೇ ಬಣ್ಣವನ್ನಾದರೂ ಮಿಕ್ಸ್ ಮಾಡಿ ಧರಿಸಬಹುದು. ಬೇಸಿಗೆಯಲ್ಲಿ ಬಿಳಿಯ ಬಟ್ಟೆ ತ್ವಚೆಗೆ ಹಾಗೂ ಕಣ್ಣುಗಳಿಗೆ ತಂಪಾದ ಅನುಭವ ನೀಡುತ್ತದೆ. ಪಾರ್ಟಿಗಳಿಗೆ ಬಿಳಿ ಡ್ರೆಸ್‌ ಜೊತೆಗೆ ಸಿಲ್ವರ್‌ ಜ್ಯೂವೆಲರಿ ಒಳ್ಳೆಯ ಕಾಂಬಿನೇಶನ್‌ ಆಗಿದೆ.

ಮಹಿಳಾ ಉದ್ಯೋಗಿಗಳಿಗೆ

ಮಹಿಳಾ ಉದ್ಯೋಗಿಗಳೂ ಸಹ ಕಾಟನ್‌ ವಸ್ತ್ರ ಧರಿಸಲು ಇಷ್ಟಪಡುತ್ತಾರೆ. ಏಕೆಂದರೆ ಅವು ಬೆವರಿನಿಂದ ಬಿಡುಗಡೆ ನೀಡುತ್ತವೆ. ಈ ಹವಾಮಾನದಲ್ಲಿ ಮಹಿಳೆಯರು ಕುರ್ತಾ, ದುಪಟ್ಟಾ ಇಲ್ಲದ ಲೂಸ್‌ ಫಿಟಿಂಗ್‌ ಧರಿಸಬಹುದು. ಬೇಸಿಗೆಯಲ್ಲಿ ಜೀನ್ಸ್ ಕಡಿಮೆ ಧರಿಸಿ. ಲಿನೆನ್‌ನ ಟ್ರೌಸರ್‌ ಕೂಡ ಸಾಕಷ್ಟು ಆರಾಮದಾಯಕ. ಆಫೀಸಿನಲ್ಲಿ ಕೆಲಸ ಮಾಡುವವರಿಗೆ ತೆಳು ಬಣ್ಣದ ಟ್ರೌಸರ್ ಚೆನ್ನಾಗಿರುತ್ತದೆ.

ಟೂ ವೀಲರ್‌ ಓಡಿಸುವ ಮಹಿಳೆಯರು ಕಾಟನ್‌ನ ಬೇಸಿಗೆ ಜಾಕೆಟ್‌ ಅಗತ್ಯವಾಗಿ ಉಪಯೋಗಿಸಬೇಕು. ಏಕೆಂದರೆ ಆಫೀಸ್ ಮತ್ತು ಹೊರಗಿನ ತಾಪಮಾನಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಪರಿಸರ ಮಾಲಿನ್ಯದಿಂದಲೂ ತ್ವಚೆಗೆ ತೊಂದರೆಯಾಗುತ್ತದೆ.

ಪುರುಷರಿಗೆ ಆಫೀಸಿನಲ್ಲಿ ಕೆಲಸ ಮಾಡುವವರ ಮತ್ತು ಫೀಲ್ಡ್ ನಲ್ಲಿ ಕೆಲಸ ಮಾಡುವವರ ಫ್ಯಾಷನ್‌ನಲ್ಲಿ ಬಹಳ ವ್ಯತ್ಯಾಸಗಳಿವೆ. ಬಿಳಿ ಉಡುಪು ಆಫೀಸ್‌ನಲ್ಲಿ ಕೆಲಸ ಮಾಡುವವರಿಗೆ ಉತ್ತಮ. ಆದರೆ ಫೀಲ್ಡ್ ನಲ್ಲಿ ಕೆಲಸ ಮಾಡುವವರು ಬಿಳಿಯ ಬದಲು ಬೇರೊಂದು ತೆಳು ಬಣ್ಣವನ್ನು ಆರಿಸಿಕೊಳ್ಳಬೇಕು.

- ಮಧುಮಿತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ