ಎಲ್ಲರೂ ಫ್ಯಾಷನೆಬಲ್ ಆಗಿ ಕಾಣಲು ಬಯಸುತ್ತಾರೆ. ಆದರೆ ಫ್ಯಾಷನೆಬಲ್ ಆಗಿ ಕಾಣಲು ಬಟ್ಟೆಗಳನ್ನು ಆರಿಸಿಕೊಳ್ಳುವಾಗ ಜನ ಏನೂ ಯೋಚಿಸದೆ ಯಾವುದೇ ಲೇಟೆಸ್ಟ್ ಫ್ಯಾಷನ್‌ ಬಂದರೆ ಅಥವಾ ಇನ್ಯಾರಿಗೋ ಒಪ್ಪುತ್ತಿರುವ ಡ್ರೆಸ್‌ನ್ನು ಖರೀದಿಸಿ ಬಿಡುತ್ತಾರೆ. ಅದು ತಮಗೆ ಹೊಂದಲಿ ಅಥವಾ ಬಿಡಲಿ.

ಅಂದಹಾಗೆ ಫ್ಯಾಷನ್‌ನ ಅರ್ಥ ನಮ್ಮ ಶರೀರವನ್ನು ಅಲಂಕರಿಸಿ ಕೊಳ್ಳುವುದು. ಬಾಡಿಶೇಪ್‌ಗೆ ತಕ್ಕಂತೆ ಅಲಂಕಾರ ಮಾಡಿಕೊಂಡರೆ ದೇಹದ ಸೌಂದರ್ಯ ದ್ವಿಗುಣವಾಗುತ್ತದೆ. ಬಾಡಿಶೇಪ್‌ ಒಂದು ಶಾರೀರಿಕ ಅನುಪಾತವಾಗಿದೆ. ಆ ಅನುಪಾತಕ್ಕೆ ತಕ್ಕಂತೆ ಉಡುಪುಗಳನ್ನು ಆರಿಸಿಕೊಂಡು ಸುಂದರವಾಗಿ ಕಾಣುವುದು ಫ್ಯಾಷನ್‌. ನಾವು ಬಾಡಿ ಶೇಪ್‌ ಬಗ್ಗೆ ಮಾತಾಡುವಾಗ, ಎತ್ತರ ಅಥವಾ ತೂಕವನ್ನು ಫೋಕಸ್‌ ಮಾಡದೆ ನಿಮ್ಮ ಶೇಪ್‌ ಬಗ್ಗೆ ಫೋಕಸ್‌ ಮಾಡಬೇಕು. ಏಕೆಂದರೆ ಕರೀನಾ ಕಪೂರ್‌ಗೆ ಸುಂದರವಾಗಿ ಕಾಣುವ ಡ್ರೆಸ್‌ ದೀಪಿಕಾ ಪಡುಕೋಣೆಗೂ ಚೆನ್ನಾಗಿರಬೇಕೆಂದೇನಿಲ್ಲ. ಆದ್ದರಿಂದ ನಿಮ್ಮ ಬಾಡಿಶೇಪ್‌ಗೆ ತಕ್ಕಂತೆ ಡ್ರೆಸ್‌ ಆಯ್ದುಕೊಳ್ಳಿ. ಬಾಡಿ ಶೇಪ್‌ ಸಾಮಾನ್ಯವಾಗಿ 5 ಪ್ರಕಾರದ್ದಾಗಿರುತ್ತದೆ. ಪಿಯರ್‌ ಶೇಪ್‌, ರೆಕ್ಟಾಂಗಲ್ ಶೇಪ್‌, ಆ್ಯಪಲ್ ಶೇಪ್, ವೆಜ್‌ ಶೇಪ್‌ ಮತ್ತು ಅರ್‌ ಗ್ಲಾಸ್‌ ಶೇಪ್‌. ನಿಮ್ಮ ಬಾಡಿ ಶೇಪ್‌ ಇವುಗಳಲ್ಲಿ ಯಾವುದಾದರೂ 1 ಅಥವಾ 2ರ ಮಿಕ್ಸ್ ಆಗಿರಬಹುದು. ನಿಮ್ಮ ಬಾಡಿ ಶೇಪ್‌ ಯಾವ ರೀತಿಯದೆಂದು ತಿಳಿದುಕೊಂಡರೆ ಯಾವ ಫ್ಯಾಷನ್‌ ಟ್ರೆಂಡ್‌ನ್ನು ಆಯ್ದುಕೊಳ್ಳಬೇಕು, ಯಾವುದನ್ನು ಆರಿಸಿಕೊಳ್ಳಬಾರದು ಎಂದು ನಿರ್ಧರಿಸಬಹುದು. ಶರೀರದ ಶೇಪ್‌ಗೆ ತಕ್ಕಂತೆ ಡ್ರೆಸ್‌ನ ಆಯ್ಕೆ ಮಾಡುವುದು ಒಳ್ಳೆಯದು.

veg-bodyshape

ಪಿಯರ್ಬಾಡಿ ಶೇಪ್

ಸೋನಮ್ ಕಪೂರ್‌, ಕರೀನಾ ಕಪೂರ್‌ ಈ ಬಾಡಿ ಶೇಪ್‌ನ ಶ್ರೇಣಿಯಲ್ಲಿ ಬರುತ್ತಾರೆ. ಈ ಬಾಡಿ ಶೇಪ್‌ನಲ್ಲಿ ಲೋಯರ್‌ ಪೋರ್ಶನ್‌ ಮೇಲ್ಭಾಗಕ್ಕೆ ಹೋಲಿಸಿದರೆ ಹೆಚ್ಚಾಗಿರುತ್ತದೆ. ಹಿಪ್ಸ್ ಪೋರ್ಶನ್‌ ಶೋಲ್ಡರ್ಸ್ ಗಿಂತ ಅಗಲವಾಗಿರುತ್ತದೆ. ಈ ಬಾಡಿ ಶೇಪ್‌ನಲ್ಲಿ ಹಿಪ್ಸ್ನಿಂದ ಗಮನ ದೂರೀಕರಿಸಿ ತೆಳುವಾದ ಸೊಂಟವನ್ನು ಅರಳಿಸಬೇಕು. ನಿಮ್ಮ ಶೋಲ್ಡರ್ಸ್ಗೆ ವಾಲ್ಯೂಮ್ ಕೊಡಿ. ಕೆಳಗಿನ ಭಾಗದಲ್ಲಿ ವಾಲ್ಯೂಮ್ ಕಡಿಮೆ ಮಾಡಿ. ಈ ಬಾಡಿ ಶೇಪ್‌ ಫೆಮಿನೈನ್‌ ಲುಕ್‌ ಕೊಡುತ್ತದೆ ಹಾಗೂ ತೆಳುವಾದ ಸೊಂಟ ಆಕರ್ಷಣೆಯ ಕೇಂದ್ರವಾಗುತ್ತದೆ.

ಏನು ಮಾಡಬೇಕು/ಬಾರದು?

ಶರೀರದ ಕೆಳಭಾಗದ ಕಡೆಗೆ ಗಮನ ಸೆಳೆಯುವಂತಹ ಕಾರ್ಗೊ ಪ್ಯಾಂಟ್‌ ಹಾಗೂ ಪ್ರಿಂಟೆಡ್‌ ಸ್ಕರ್ಟ್‌ ಇತ್ಯಾದಿ ಉಡುಪುಗಳನ್ನು ಧರಿಸಬೇಡಿ.

ಏ ಲೈನ್‌ ಸ್ಕರ್ಟ್‌ ಧರಿಸಿ. ಸ್ಕರ್ಟ್‌ನ್ನು ವೇಸ್ಟ್ ಲೈನ್‌ನಿಂದ ಕೊಂಚ ಕೆಳಗೆ ಧರಿಸಿ. ಶಾರ್ಟ್‌ ಮತ್ತು ಎಕ್ಸ್ ಟ್ರಾ ಲೇಯರ್‌ ಇರುವ ಟೈಟ್‌ ಸ್ಕರ್ಟ್‌ ಧರಿಸಬೇಡಿ. ಅದರಿಂದ ಶರೀರದ ಹೆವಿ ವೇಸ್‌ ಟೈನ್‌ ಕಡೆಗೆ ಗಮನ ಹೋಗುತ್ತದೆ.

ಬೋಟ್‌ ನೆಕ್‌ ಟಾಪ್ಸ್, ಸ್ಕ್ವೇರ್‌ ಮತ್ತು ಕಾಓ ನೆಕ್‌ ಲೈನ್‌ ಟ್ರೈ ಮಾಡಿ.

ಸ್ಟ್ರಾಪ್‌ ಲೆಸ್‌ ಡ್ರೆಸ್‌ ಧರಿಸಿದಾಗ ಭುಜಗಳು ಎದ್ದು ಕಾಣುತ್ತವೆ. ಟಾಪ್‌ನಲ್ಲಿ ರಫ್ಸ್‌ ಟ್ರೈ ಮಾಡಿ.

ಸೊಂಟದಿಂದ ಮೇಲಕ್ಕೆ ಜಾಕೆಟ್‌ ಧರಿಸಿ. ತೆಳುವಾದ ಸೊಂಟದ ಸೌಂದರ್ಯ ಎದ್ದು ಕಾಣುತ್ತದೆ.

ಬಣ್ಣಗಳನ್ನು ಆರಿಸುವಾಗ ತೆಳು ಬಣ್ಣದ ಟಾಪ್ಸ್ ಮತ್ತು ಗಾಢ ಬಣ್ಣದ ಪ್ಯಾಂಟ್‌ ಉಪಯೋಗಿಸಿ. ಸ್ಟ್ರೆಚೆಬಲ್ ಜೀನ್ಸ್ ಟ್ರೈ ಮಾಡಿ. ಏಕೆಂದರೆ ನಿಮ್ಮ ಲೋಯರ್‌ ಪಾರ್ಟ್‌ಗೆ ಪರ್ಫೆಕ್ಟ್ ಶೇಪ್‌ ಸಿಗಬೇಕು. ಸೈಡ್‌ ಪಾಕೆಟ್ಸ್ ನ ಪ್ಯಾಂಟ್‌ ಧರಿಸಬೇಡಿ. ಆ್ಯಕ್ಸೆಸರೀಸ್ ನಲ್ಲಿ ನೆಕ್ಲೇಸ್‌, ಇಯರ್‌ ರಿಂಗ್ಸ್ ಮತ್ತು ಸ್ಕಾರ್ಫ್‌ ಧರಿಸಿ. ಏಕೆಂದರೆ ನಿಮ್ಮ ಮೇಲಿನ ಭಾಗದ ಮೇಲೆ ಎಲ್ಲರ ದೃಷ್ಟಿ ಬೀಳಲಿ.

ರೆಕ್ಟಾಂಗಲ್ ಬಾಡಿ ಶೇಪ್

ಈ ಬಾಡಿ ಶೇಪ್‌ ಸ್ಟ್ರೇಟ್‌ ಆಗಿರುತ್ತದೆ. ಇದರಲ್ಲಿ ಹೆಚ್ಚು ಕರ್ವ್ಸ್ ಇರುವುದಿಲ್ಲ. ಸೊಂಟದ ಕೆಳಗಿನ ಭಾಗ ಮತ್ತು ಶೋಲ್ಡರ್ಸ್‌ನ ಅಗಲ ಒಂದೇ ಸಮ ಇದ್ದು ಹೆಚ್ಚು ತೆಳುವಾಗಿರುತ್ತದೆ. ಅವುಗಳ ಲುಕ್‌ ಅಥ್ಲೆಟಿಕ್‌ ಆಗಿರುತ್ತದೆ. ಇವರ ಬೆಸ್ಟ್ ಬಾಡಿ ಫೀಚರ್‌ ಕೈ ಕಾಲುಗಳಾಗಿರುತ್ತವೆ. ಇವರಿಗೆ ಶರೀರದ ಯಾವುದೇ ಭಾಗವನ್ನು ಮುಚ್ಚುವ ಅಗತ್ಯವಿಲ್ಲ. ಈ ಬಾಡಿಶೇಪ್‌ನ್ನು ಫ್ಯಾಷನೆಬಲ್ ಆಗಿ ಕಾಣಿಸಲು ಕರ್ವ್ಸ್ ಕ್ರಿಯೇಟ್‌ ಮಾಡಬೇಕು.

ಏನು ಮಾಡಬೇಕು/ ಬಾರದು?

ಬಾಡಿಯಲ್ಲಿ ಕರ್ವ್ಸ್ ಕ್ರಿಯೇಟ್‌ ಮಾಡಲು ಸ್ಕೂಪ್‌ ನೆಕ್‌ ಮತ್ತು ಸ್ವೀಟ್‌ ಹಾರ್ಟ್‌ ಟಾಪ್ಸ್ ಧರಿಸಿ. ಲಾಂಗ್‌ ಜಾಕೆಟ್‌ ಧರಿಸಿ.

ಟಾಪ್‌ ಕಲರ್‌ ರಫ್ಸ್‌ ಇರುವ ಉಡುಪು ಧರಿಸಿ. ಶರೀರದ ಮೇಲ್ಭಾಗ ಎದ್ದು ಕಾಣುವಂತಿರಲಿ.

ಸರಿಯಾದ ಸೈಜ್‌ನ ಬ್ರಾ ಧರಿಸಿ ಲೇಯರ್‌ ಇರುವ ಬಟ್ಟೆ ಧರಿಸಿ. ಕಲರ್‌ಫುಲ್ ಬಾಟಮ್ಸ್ ಧರಿಸಿ.

over-glass-body-shape

ಅರ್ಗ್ಲಾಸ್ಬಾಡಿ ಶೇಪ್

ಈ ಶೇಪ್‌ ಯಾವುದೇ ಮಹಿಳೆಗೆ ಪರ್ಫೆಕ್ಟ್ ಬಾಡಿ ಶೇಪ್‌ ಆಗಿರುತ್ತದೆ. ಇದರಲ್ಲಿ ಶರೀರದ ಮೇಲ್ಭಾಗ ಹಾಗೂ ಕೆಳಭಾಗ ಒಂದೇ ರೀತಿಯ ಅನುಪಾತದಲ್ಲಿ ಇರುತ್ತದೆ ಮತ್ತು ಸೊಂಟ ತೆಳುವಾಗಿರುತ್ತದೆ. ಕರ್ವ್ಸ್ ಅವರ ಶರೀರದ ಆಕರ್ಷಣೆ. ನಿಮ್ಮ ಕರ್ವ್ಸ್ ಗಳ ಶೋ ಆಫ್‌ ಮಾಡಿ. ಫಿಟೆಡ್‌ ಉಡುಪುಗಳು ಈ ಮಹಿಳೆಯರ ಕರ್ವ್ ಗಳನ್ನು ಚೆನ್ನಾಗಿ ಕಾಣಿಸುತ್ತವೆ. ಆದ್ದರಿಂದ ಈ ಬಾಡಿ ಶೇಪ್‌ನವರು ಸಡಿಲವಾದ ಉಡುಪುಗಳನ್ನು ಧರಿಸಬಾರದು.

ಏನು ಮಾಡಬೇಕು/ ಬಾರದು?

ಒಳ್ಳೆಯ ಸಪೋರ್ಟ್‌ ಇರುವ ಬ್ರಾನಿಂದ ಮೇಲ್ಭಾಗವನ್ನು ಅಲಂಕರಿಸಿ.

ಸೊಂಟಕ್ಕೆ ಬೆಲ್ಟ್ ಧರಿಸಿ. ನಿಮ್ಮ ಅರ್‌ ಗ್ಲಾಸ್‌ ಶೇಪ್‌ ಚೆನ್ನಾಗಿ ಕಾಣಲಿ.

ರಾಂಪ್‌ ಡ್ರೆಸ್‌ ಟ್ರೈ ಮಾಡಿ. ಹೈ ವೇಸ್ಟ್ ಸ್ಕರ್ಟ್‌ ಧರಿಸಿದರೆ ಶರೀರದ ಕೆಳಭಾಗ ಎದ್ದು ಕಾಣಿಸುತ್ತದೆ.

ಹಗುರವಾದ ಫ್ಯಾಬ್ರಿಕ್‌ ಆರಿಸಿಕೊಳ್ಳಿ.

ಸ್ಕಿನೀ ಮತ್ತು ಸ್ಟ್ರೇಟ್‌ ಲೆಗ್ಸ್ ಜೀನ್ಸ್ ಆರಿಸಿ. ಬೆಲ್ಟೆಡ್‌ ಟಾಪ್‌ ಧರಿಸಿ.

ಪೆನ್ಸಿಲ್ ಸ್ಕರ್ಟ್‌ ಧರಿಸಿ. ಮೇಲ್ಭಾಗದಲ್ಲಿ ತೆಳು ಬಣ್ಣದ ಹಾಗೂ ಕೆಳಭಾಗದಲ್ಲಿ ಗಾಢ ಬಣ್ಣದ ಉಡುಪುಗಳನ್ನು ಆರಿಸಿ. ಬಲ್ಜಿ ಭಾಗಕ್ಕೆ ಗಾಢ ಬಣ್ಣದ ಹಾಗೂ ಸ್ಕಿನೀ ಭಾಗಕ್ಕೆ ತೆಳು ಬಣ್ಣದ ಉಡುಪುಗಳನ್ನು ಆರಿಸಿಕೊಳ್ಳಿ.

 

ಆ್ಯಪ್ಬಾಡಿ ಶೇಪ್

ಈ ಬಾಡಿ ಶೇಪ್‌ನವರಿಗೆ ಹೆಚ್ಚು ತೂಕ ಶರೀರದ ಮಧ್ಯಭಾಗ. ಅಂದರೆ ಸೊಂಟ ಮತ್ತು ಹೊಟ್ಟೆಯಲ್ಲಿ ಇರುತ್ತದೆ. ಅಂತಹ ಮಹಿಳೆಯರಿಗೆ ಕ್ಲೀವೇಜ್‌ ಭಾಗವನ್ನು ಹೈಲೈಟ್‌ ಮಾಡುವ ಅಗತ್ಯ ಇರುತ್ತದೆ. ಇವರ ಕೈ ಕಾಲುಗಳು ತೆಳುವಾಗಿರುತ್ತವೆ.

ಏನು ಮಾಡಬೇಕು/ ಬಾರದು?

ವಿ ನೆಕ್‌ ಟಾಪ್‌ ಮತ್ತು ಶರ್ಟ್‌ ಧರಿಸಿ. ಅವುಗಳ ನೆಕ್‌ ಲೈನ್‌ ಲೋಯರ್‌ ಆಗಿರಬೇಕು. ಎಂಪೈರ್‌ ವೇಸ್ಟ್ ಶರ್ಟ್‌ ಮತ್ತು ಟಾಪ್‌ನ್ನು ಆರಿಸಿ. ಅದರ ಶರ್ಟ್‌ ಟೇಲ್ ‌ಉದ್ದವಾಗಿರಲಿ. ಅದರಿಂದ ನಿಮ್ಮ ಮಧ್ಯ ಭಾಗಕ್ಕೆ ಸ್ಲಿಮ್ಮರ್‌ ಲುಕ್‌ ಸಿಗಲಿ. ಮಾನೋಕ್ರೋಮಾಟಿಕ್‌ ಲುಕ್‌ ಟ್ರೈ ಮಾಡಿ. ಒಳ್ಳೆಯ ಸಪೋರ್ಟ್‌ ಇರುವ ಬ್ರಾ ಧರಿಸಿ. ಚಿಕ್ಕ ಸ್ಕರ್ಟ್‌ ಧರಿಸಿ. ಜನರ ಗಮನ ಸೊಂಟದಿಂದ ದೂರವಾಗಿ ಕಾಲುಗಳ ಮೇಲೆ ಹೋಗುತ್ತದೆ. ಸ್ಕಿನೀ ಜೀನ್ಸ್ ಧರಿಸಬೇಡಿ. ಶೂಸ್‌ನಲ್ಲಿ ವೆಜ್‌ ಹೀಲ್ ‌ಟ್ರೈ ಮಾಡಿ. ಸ್ಟೇಟ್‌ಮೆಂಟ್‌ ಜ್ಯೂವೆಲರಿ ಧರಿಸಿ.

apple-bodyshape-q

ವೆಜ್ಬಾಡಿ ಶೇಪ್

ಈ ಬಾಡಿ ಶೇಪ್‌ನ್ನು ಉಲ್ಟಾ ತ್ರಿಕೋನದ ಶೇಪ್‌ ಎಂದೂ ಕರೆಯುತ್ತಾರೆ. ಈ ಶೇಪ್‌ನಲ್ಲಿ ಮೇಲ್ಭಾಗ ಹಾಗೂ ಭುಜ ಅಗಲವಾಗಿರುತ್ತದೆ. ಅದಕ್ಕೆ ಹೋಲಿಸಿದರೆ ಸೊಂಟ ಮತ್ತು ಶರೀರದ ಕೆಳಬಾಗ ತೆಳುವಾಗಿರುತ್ತದೆ. ಈ ಬಾಡಿಶೇಪ್‌ನ ಮುಖ್ಯ ಆಕರ್ಷಣೆಯ ಕೇಂದ್ರ ಕಾಲುಗಳು. ಈ ಬಾಡಿ ಶೇಪ್‌ನ ಮಹಿಳೆಯರು ತಮ್ಮ ಕೆಳಗಿನ ಭಾಗವನ್ನು ಎದ್ದು ಕಾಣುವಂತೆ ಹಾಗೂ ಶೋಲ್ಡರ್ಸ್‌ ಭಾಗವನ್ನು ಕಡಿಮೆ ಅರಳಿಸಲು ಗಮನ ಕೊಡಬೇಕು.

ಏನು ಮಾಡಬೇಕು/ಬಾರದು?

ಶರೀರದ ಕೆಳಭಾಗದ ಉಡುಪು ಬ್ರೈಟ್‌ ಕಲರ್‌ನದ್ದಾಗಿರಲಿ.

ಅಗಲವಾದ ಪ್ಯಾಂಟ್‌ ಮತ್ತು ಲಾಂಗ್‌ ಸ್ಕರ್ಟ್‌ ಧರಿಸಿ.

ಸ್ಪೆಗೆಟಿ ಸ್ಟ್ರಾಪ್‌ ಟಾಪ್‌ ಧರಿಸಬೇಡಿ.

ಬೋಟ್‌ ನೆಕ್‌ ಲೈನ್‌ ಟಾಪ್‌ ಕೂಡ ಧರಿಸಬೇಡಿ.

ನಿಮ್ಮ ಸೊಂಟದ ಮೇಲೆ ಜನರ ಗಮನ ಹೋಗುವಂತಹ ಟಾಪ್‌ ಧರಿಸಿ.

ಎತ್ತರದ ವೇಸ್ಟ್ ಸ್ಟೈಲ್ ನ್ನು ಟ್ರೈ ಮಾಡಿ.

ಜಿ. ಸುಮತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ