ಈ ಸಲದ ಫೆಸ್ಟಿವಲ್‌ ಸೀಸನ್‌ನಲ್ಲಿ ಗೆಳತಿಯರ ನಡುವೆ ಐಕಾನಿಕ್‌ ಹೋಸ್ಟ್ ಆಗುವುದು ಹೇಗೆ ಎಂದು ಅನಿತಾ ಯೋಚಿಸುತ್ತಲೇ ಇದ್ದಳು. ಜೊತೆಗೆ ಫ್ರೆಂಡ್ಸ್ ಸರ್ಕಲ್‌ನಲ್ಲಿ ತನ್ನ ಇಂಪ್ರೆಶನ್‌ ಮೂಡಿಸಲು ಅವಳು ವಿಶಿಷ್ಟ ಗಿಫ್ಚ್ ಗಳನ್ನು ಆರಿಸಬೇಕಾಗಿತ್ತು. ಅದಕ್ಕಾಗಿ ಹಲವು ಗಿಫ್ಚ್ ಕಾರ್ನರ್‌, ಎಂಪೋರಿಯಮ್, ಆರ್ಟ್‌ ಅಂಡ್‌ ಕ್ರಾಫ್ಟ್ ಸೆಂಟರ್‌ಗಳನ್ನೆಲ್ಲ ಸುತ್ತಿದರೂ ಅವಳಿಗೆ ಯಾವುದೂ ಸರಿಹೊಂದುತ್ತಿರಲಿಲ್ಲ. ಅನಿತಾಳ ಈ ಸಮಸ್ಯೆಯನ್ನು ತಿಳಿದ ಗೆಳತಿ ಆಶಾ ಅವಳಿಗೆ ಒಂದು ಸಲಹೆಯಿತ್ತಳು, ``ಈ ಸಲ ನೀನು ಡನ್‌ ಐಟಮ್ ಗಳನ್ನು ಟ್ರೈ ಮಾಡಬಹುದಲ್ಲ, ನೋಡಲು ಸೊಗಸಾಗಿರುತ್ತದೆ ಮತ್ತು ಈಗ ಅದರದೇ ಟ್ರೆಂಡ್‌ ಇದೆ ಹಾಗೂ ಕೊಟ್ಟವರಿಗೆ ಒಂದು ಇಂಪ್ರೆಶನ್‌ ದೊರೆಯುತ್ತದೆ.

''ಗೆಳತಿ ನೀಡಿದ ಐಡಿಯಾ ಅನಿತಾಳ ಮನಸ್ಸಿಗೆ ಹಿಡಿಸಿತು. ತನಗೆ ಹತ್ತಿರವಿದ್ದ ಆರ್ಟ್‌ ಅಂಡ್‌ ಕ್ರಾಫ್ಟ್ ಎಂಪೋರಿಯಮ್ ಗೆ ಹೋಗಿ ತನಗೆ ಇಷ್ಟವಾದ ವಸ್ತುಗಳನ್ನು ಖರೀದಿಸಿದಳು, ಸಮಾಧಾನ ಸಂತೋಷದಿಂದ ಹಬ್ಬದ ಸಿದ್ಧತೆಯಲ್ಲಿ ತೊಡಗಿದಳು. ನೀವು ಒಮ್ಮೆ ಯೋಚಿಸಿ ನೋಡಿ. ಈಚೆಗೆ ಡನ್‌ ಆರ್ಟ್‌ ಅಂಡ್‌ ಕ್ರಾಫ್ಟ್ ಶೋಪೀಸ್‌ಗಳ ಟ್ರೆಂಡ್‌ ಹೆಚ್ಚುತ್ತಿದೆ. ಇವು ನೋಡಲು ವಿಶಿಷ್ಟವಾಗಿ ಇರುವುದಲ್ಲದೆ, ಬೆಲೆಯೂ ಕೈಗೆಟುಕುವಂತಿರುತ್ತದೆ. ಗ್ಲಾಸ್‌, ಕ್ರಿಸ್ಟಲ್ ಅಥವಾ ಉಡುಗೊರೆ ನೀಡುವ ಬಗ್ಗೆ ಆಲೋಚಿಸಿ. ಅದು ನಿಮ್ಮ ಗೆಳತಿಯರ ಮನಸೆಳೆಯುವುದರಲ್ಲಿ ಸಂದೇಹವೇ ಇಲ್ಲ. ಈಚಿನ ದಿನಗಳಲ್ಲಿ ದುಬಾರಿ ಬೆಲೆಯ ವಸ್ತುಗಳ ಬದಲು ಡನ್‌ ಕ್ರಾಫ್ಟ್  ಗಿಫ್ಟ್ ಐಟಮ್ ಗಳು ಚಾಲ್ತಿಯಲ್ಲಿವೆ.

ಆಯ್ಕೆ

ಡನ್‌ ಕ್ರಾಫ್ಟ್ ನ ಬಗೆಬಗೆಯ ಆರ್ಟ್‌ ಶೋಪೀಸ್‌ಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತವೆ. ಅವುಗಳಲ್ಲಿ ನಿಮಗೆ ಇಷ್ಟವಾದದ್ದು ಬಹಳಷ್ಟು ಇರುತ್ತವೆ. ಆದರೆ ನೀವು ಎಲ್ಲೆಂದರಲ್ಲಿ ಕೊಳ್ಳಲು ಹೋಗಬೇಡಿ. ನಿಮ್ಮ ನಂಬಿಕೆಗೆ ಯೋಗ್ಯವಾದ ಎಂಪೋರಿಯಮ್ ನಲ್ಲೇ ಕೊಂಡುಕೊಳ್ಳಿ. ಗೂಗಲ್ ಸರ್ಚ್‌ನಿಂದ ವಿವರ ದೊರೆಯುತ್ತದೆ.

ನಿಮ್ಮ ಗೆಳತಿಗೆ ಉಡುಗೊರೆ ಕೊಡಲು ಡನ್‌ ಜ್ಯೂವೆಲರಿ ಬಾಕ್ಸ್, ರಿಂಗ್‌ ಕ್ಯಾಬಿನೆಟ್‌, ಡನ್‌ ವ್ಯಾನಿಟಿ ಬಾಕ್ಸ್, ಬ್ಯಾಂಗಲ್ ಬಾಕ್ಸ್ ಮುಂತಾದವನ್ನು ಕೊಳ್ಳಬಹುದು. ನಿಮ್ಮ ಗೆಳತಿಯ ಇಷ್ಟ ಅಥವಾ ಅವಶ್ಯಕತೆಗೆ ತಕ್ಕಂತೆ ಇವುಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದು. ಮೇಲ್ ಫ್ರೆಂಡ್‌ಗೆ ಉಡುಗೊರೆ ನೀಡುವುದಾದರೆ ಡನ್‌ ಪಿಯಾನೊ, ಡನ್‌ ಪೆನ್‌ಸ್ಟಾಂಡ್‌, ಡನ್‌ ಟೇಬಲ್ ಕ್ಲಾಕ್‌, ಡನ್‌ ವಾಲ್‌ ಕ್ಲಾಕ್‌, ಕಾರ್ಡ್‌ ಹೋಲ್ದರ್‌ ಮುಂತಾದವು ಡನ್‌ ಕ್ರಾಫ್ಟ್ ಐಟಮ್ ಗಳಿಂದ ಯಾವುದನ್ನಾದರೂ ಆರಿಸಿಕೊಳ್ಳ ಬಹುದು. ಅವು ಬಗೆಬಗೆಯ ಆಕಾರ ಮತ್ತು ವಿನ್ಯಾಸಗಳಲ್ಲಿ ದೊರೆಯುತ್ತವೆ. ಪ್ಲೇನ್‌ ಮೀನಾಕಾರಿ ಅಥವಾ ಕಟ್‌ವರ್ಕ್‌ನ ಆಯ್ಕೆ ಕೂಡ ಲಭ್ಯ.

ಈ ವಿಷಯಗಳನ್ನು ಗಮನಿಸಿ

ಡನ್‌ ಶೋಪೀಸ್‌ಗಳ ಹೊರಪದರದ ಪಾಲಿಶಿಂಗ್‌ನ್ನು ಚೆನ್ನಾಗಿ ಗಮನಿಸಿ. ಹಳೆಯ ವಸ್ತುಗಳ ಪಾಲಿಶಿಂಗ್‌ ಮಾಸಿ ಹೋಗಿರುತ್ತದೆ. ಕೆಲವು ಬಾರಿ ಅಂಗಡಿಯವರು ಅವುಗಳನ್ನು ರೀಪ್ಯಾಕಿಂಗ್‌ ಮಾಡುತ್ತಾರೆ. ಆದ್ದರಿಂದ ಶೋಪೀಸ್‌ಗಳನ್ನು ಕೊಳ್ಳುವ ಸಮಯದಲ್ಲಿ ಅವುಗಳ ಔಟರ್‌ ಲೇಯರ್‌ನ್ನು ಸರಿಯಾಗಿ ಪರೀಕ್ಷಿಸಿ ನೋಡಿ.

- ರಫ್‌ ಡನ್‌ ಸರ್‌ಫೇಸ್‌, ಕ್ರಾಕ್ಸ್, ಮತ್ತು ಕಟ್ಸ್ ಸಾಮಾನ್ಯ ಸಮಸ್ಯೆಗಳಾಗಿರುತ್ತವೆ. ಆದ್ದರಿಂದ ಐಟಮ್ ಕೊಳ್ಳುವಾಗ ಒಳ ಹೊರಭಾಗಗಳನ್ನೆಲ್ಲ ಪರೀಕ್ಷಿಸಿ ಇಂತಹ ದೋಷಗಳೇನಾದರೂ ಇದೆಯೇ ಎಂದು ನೋಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ