ಇನ್ನರ್‌ವೇರ್‌ ಅಥವಾ ಲಾಂಜರಿಯ ಬಗ್ಗೆ ಮಾತನಾಡುವಾಗ, ವಿಶ್ವದಲ್ಲಿ ಕಳೆದ ಹಲವು ವರ್ಷಗಳಿಂದ ಹೊಸತೊಂದು ಕ್ರಾಂತಿಯೇ ಆಗಿದೆ ಎನ್ನಬಹುದು. ಬಾಡಿಕೇರ್‌, ಲಿಬ್‌, ಗ್ರೋವರ್‌ಸನ್ಸ್ ಪ್ಯಾರಿಸ್‌ ಬ್ಯೂಟಿ, ಜಾಕಿ, ಲಕ್ಸ್, ಫೀಲಿಂಗ್ಸ್, ವಿ.ಐ.ಪಿ. ಇತ್ಯಾದಿ ಕಂಪನಿಗಳು ಆಧುನಿಕ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ವಿಶೇಷ ಡಿಸೈನಿನ ಲೇಡೀಸ್‌ ಅಂಡರ್ ಗಾರ್ಮೆಂಟ್ಸ್ ನ್ನು ಪ್ರಸ್ತುತಪಡಿಸುತ್ತಿವೆ.

ಇಲ್ಲಿಯವರೆಗೂ ಕೇವಲ ಕಪ್ಪು, ಬಿಳಿ, ಕೆಂಪು ಇತ್ಯಾದಿ ಬಣ್ಣಗಳಿಗಷ್ಟೇ ಸೀಮಿತವಾಗಿದ್ದ ಬ್ರಾ, ಪ್ಯಾಂಟಿಗಳು ಈಗ ಎಲ್ಲಾ ಬಗೆಯ ಬಣ್ಣ, ಡಿಸೈನ್‌ಗಳಲ್ಲೂ ಲಭಿಸುತ್ತಿವೆ. ಈಗ ಪ್ಲೇನ್‌ ಜೊತೆ ಪ್ರಿಂಟೆಡ್‌ ಡಿಸೈನ್‌ಗಳಲ್ಲಿ ಪೋಲ್ಕಾ ಡಾಟ್ಸ್, ಅನಿಮಲ್ ಪ್ರಿಂಟ್ಸ್, ಚಿಕನ್‌ಕಾರಿ, ಕಶೀದಾಕಾರಿ, ಸೀಕ್ವೆನ್ಸ್ ಕೆಲಸಗಳಿಂದ ಸುಸಜ್ಜಿತಗೊಂಡಿರುವ ಬ್ರಾ ಲೇಸ್‌ ವರ್ಕ್‌ನಿಂದ ಮತ್ತಷ್ಟು ಶೋಭಿಸುತ್ತಿವೆ.

ಫ್ಯಾಬ್ರಿಕ್‌ ದೃಷ್ಟಿಯಿಂದ ನೋಡಿದರೆ ಅದರಲ್ಲೂ ಎಷ್ಟೋ ವಿಭಿನ್ನತೆಗಳಿರುತ್ತವೆ. ಪ್ರತಿಯೊಂದು ಫ್ಯಾಬ್ರಿಕ್‌ ಎಲ್ಲರಿಗೂ ಸೂಟ್ ಆಗುವುದಿಲ್ಲ. ಹಾಗಾಗಿಯೇ ಬ್ರ್ಯಾಂಡೆಡ್‌ಕಂಪನಿಗಳು ಸಾಧ್ಯವಾದಷ್ಟೂ ಎಲ್ಲಾ ಬಗೆಯ ಮಹಿಳೆಯರಿಗೂ ಚೆನ್ನಾಗಿ ಒಪ್ಪುವಂಥ, ಅವರ ಅಗತ್ಯಗಳು, ದೈಹಿಕ ಕಂಫರ್ಟ್‌ಗೆ ಸೂಕ್ತವಾಗುವಂಥ ಇನ್ನರ್‌ವೇರ್‌ಗಳನ್ನೇ ಸಿದ್ಧಪಡಿಸುತ್ತವೆ.

ಫ್ಯಾಬ್ರಿಕ್‌ ಆರಿಸುವಾಗ ನೆನಪಿಡಬೇಕಾದ ಮತ್ತೊಂದು ಅಂಶವೆಂದರೆ, ಬೇರೆ ಮಹಿಳೆಯರಿಗೆ ಸೂಟ್‌ ಆದಂತಹ ಒಳವಸ್ತ್ರಗಳು ನಿಮಗೂ ಸೂಟ್‌ ಆಗಲೇಬೇಕು ಎಂದೇನಿಲ್ಲ. ಯಾವುದನ್ನು ಧರಿಸಿ ನಿಮ್ಮ ಡ್ರೆಸ್‌ ಶೇಪ್‌ ನೀಟಾಗಿ ಬರುತ್ತದೋ ಅದೇ ಫ್ಯಾಬ್ರಿಕ್ ನಿಮಗೆ ಹೆಚ್ಚು ಉಪಯುಕ್ತ ಎಂದರ್ಥ.

ಲಾಂಜರಿಯಲ್ಲಿ ಬಳಕೆಯಾಗುವ ಫ್ಯಾಬ್ರಿಕ್ಸ್

ಕಾಟನ್‌ : ಹತ್ತಿಗಿಂತಲೂ ಉತ್ತಮವಾದ ಫ್ಯಾಬ್ರಿಕ್‌ ಮತ್ತೊಂದಿಲ್ಲ. ಇದು ಬೇಸಿಗೆಯಲ್ಲಿ ಬೆವರನ್ನು ಹೀರಿಕೊಳ್ಳುತ್ತದೆ ಹಾಗೂ ಗಾಳಿಯಾಡಲೂ ಅನುಕೂಲಕರವಾಗಿದೆ. ಸ್ಕಿನ್‌ ಅಲರ್ಜಿ ಉಳ್ಳವರಿಗೆ ಇದು ಅತಿ ಸೂಕ್ತ. ಬೇಸಿಗೆ, ಮಳೆಗಾಲದಲ್ಲಿ ಬ್ರೆಸ್ಟ್ ನಡುವೆ ಅಥವಾ ಕೆಳಭಾಗದಲ್ಲಿ ಉಂಟಾಗುವ ಸ್ಕಿನ್‌ ಆಲರ್ಜಿಗೆ ಬೆವರಿನ ಸಮಸ್ಯೆಯಿಂದ ಇದು ಬಹಳ ಹಿತಕಾರಿ.

ಪಾಲಿಯೆಸ್ಟರ್ಕಾಟನ್‌ : ಕಾಟನ್‌ ಜೊತೆ ಸಿಂಥೆಟಿಕ್‌ ಯಾರ್ನ್‌ ಬೆರೆಸಿ ಈ ಫ್ಯಾಬ್ರಿಕ್‌ ತಯಾರಿಸಲಾಗುತ್ತದೆ. ಇದು ಹತ್ತಿಯ ವಸ್ತ್ರಕ್ಕಿಂತಲೂ ಬಹಳ ಸಾಫ್ಟ್ ಆಗಿರುತ್ತದೆ. ಮಳೆಗಾಲ, ಚಳಿಗಾಲಗಳಲ್ಲಿ ಈ ವಸ್ತ್ರದ ಬ್ರಾಗಳು ಬೇಗನೆ ಒಣಗುತ್ತವೆ. ಆದರೆ ಸ್ಕಿನ್‌ಅಲರ್ಜಿ ಇರುವವರು ಇದನ್ನು ಬಳಸಬಾರದು.

ಲೈಕ್ರಾ : ಈ ಯಾರ್ನ್‌ನಿಂದ ತಯಾರಾದ ಬ್ರಾ, ಬಾಡಿಯ ಶೇಪ್‌ಗೆ ಬಿಲ್‌ಕುಲ್ ‌ಫಿಟ್‌ ಎನಿಸುತ್ತದೆ. ಇದನ್ನು ಧರಿಸುವುದರಿಂದ ದೇಹದ ಉಬ್ಬು ತಗ್ಗುಗಳು ಎದ್ದು ಕಾಣುತ್ತವೆ. ಫಿಗರ್‌ ಬಲು ನಾಜೂಕಾಗಿ ಕಣ್ಸೆಳೆಯುಂತಿರುತ್ತದೆ. ಆದರೆ ಹೆಚ್ಚು ಸಣ್ಣ ಇರುವ ಮಹಿಳೆಯರು ಈ ಫ್ಯಾಬ್ರಿಕ್‌ನ ಬ್ರಾ ಧರಿಸಬಾರದು.

ಹೌಝರಿ ಯಾರ್ನ್‌ : ಈ ಯಾರ್ನ್‌ ಬಲು ಮೃದು ಹಾಗೂ ಸಾಫ್ಟ್ ಆಗಿದ್ದು ಜೊತೆಗೆ ಸ್ಟ್ರೆಚೆಬಲ್ ಕೂಡ. ಇದು ಹತ್ತಿಯ ಆಧುನಿಕ ರೂಪವಾಗಿದೆ. ಚಳಿಗಾಲಕ್ಕೆ ಇದರ ಬೆಚ್ಚನೆಯ ಅನುಭವ ಹೆಚ್ಚಿನ ಮುದ ನೀಡುತ್ತದೆ.

ನೈಲಾನ್‌ : ನೈಲಾನ್‌ ಬ್ರಾ ಜಗ್ಗದ ಗಟ್ಟಿತನಕ್ಕೆ ಹೆಸರುವಾಸಿ. ಆದರೆ ಇದು ಬೇಸಿಗೆಗೆ ಖಂಡಿತಾ ಕೂಡದು. ಇತ್ತೀಚಿನ ದಿನಗಳಲ್ಲಿ ನೆಟ್‌ ಹಾಗೂ ನೈಲಾನ್‌ನ್ನು ಬೆರೆಸಿ, ದೊಡ್ಡ ಕಂಪನಿಗಳು ಅಂಡರ್‌ ವೈರ್ಡ್ ಬ್ರಾಗಳನ್ನು ತಯಾರಿಸುತ್ತಿವೆ, ಇವು ಜೋತುಬಿದ್ದ ಸ್ತನಗಳನ್ನು ಎತ್ತಿಹಿಡಿಯುವುದರಲ್ಲಿ ಪೂರಕ. ಆದರೆ ಇದು ಮಳೆಗಾಲ, ಚಳಿಗಾಲಕ್ಕೆ ಮಾತ್ರ ಸೀಮಿತ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ