ಮಹಾನಗರಗಳು ಮಾತ್ರವಲ್ಲದೆ ಇಂದು ತಾಲ್ಲೂಕು ಮಟ್ಟದ ಸಣ್ಣ ಊರುಗಳಲ್ಲೂ ಫ್ಯಾಷನ್‌ ರಾರಾಜಿಸುತ್ತಿದೆ. ಹೊರಗಿನ ಕೆಲಸಗಳಿಗೆಂದು ಬಸ್ಸು, ಮೆಟ್ರೋ, ಇತರ ವಾಹನಗಳಲ್ಲಿ ಸಂಚರಿಸುವ ಸಹಸ್ರಾರು ಮಹಿಳೆಯರನ್ನು ಗಮನಿಸಿದರೆ, ಇಂದು ಚಾಲ್ತಿಯಲ್ಲಿರುವ ಜನಪ್ರಿಯ ಫ್ಯಾಷನ್‌ ಯಾವುದು ಎಂದು ಥಟ್ಟನೆ ತಿಳಿಯುತ್ತದೆ. ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಕ್ರಾಪ್‌ಟಾಪ್‌ ತರಹವೇ ಕ್ರಾಪ್‌ ಜ್ಯಾಕೆಟ್ಸ್ ಸಹ ಇಂದಿಗೂ ಫ್ಯಾಷನ್‌ನಲ್ಲಿದೆ ಎಂದು ಖಾತ್ರಿಯಾಯಿತು. ಆದರೆ ಆ ಹುಡುಗಿ ಮೆಟ್ರೋದಿಂದ ಇಳಿದಾಗ, ಅಲ್ಲಿದ್ದ ಎಲ್ಲರೂ ತಡೆಹಿಡಿದಿದ್ದ ನಗುವನ್ನು ಹೊರಚೆಲ್ಲಿದರು. ಕಾರಣ ಅವಳ ಜ್ಯಾಕೆಟ್‌! ಏಕೆಂದರೆ ಅವಳ ಜ್ಯಾಕೆಟ್‌ ಎಷ್ಟು ಟೈಟಾಗಿ ಚಿಕ್ಕದಾಗಿತ್ತೆಂದರೆ, ಅವಳು ಆ ಕಡೆ ಈ ಕಡೆ ಕೈ ಆಡಿಸಿದಂತೆ, ಒಳಗಿನ ಇನ್ನರ್‌ ವೇರ್‌ ಹೊರಗಿಣುಕುತ್ತಿತ್ತು. ಈಗ ಸ್ಟೈಲಿಶ್‌ ಜ್ಯಾಕೆಟ್‌ ತರಹವೇ ಸ್ಟೈಲಿಶ್‌ ಇನ್ನರ್‌ವೇರ್‌ ಸಹ ಕೊಂಡಿದ್ದರೆ, ಇಂಥ ಫ್ಯಾಷನ್‌ ಡಿಸಾಸ್ಟರ್‌ ಆಗುತ್ತಿರಲಿಲ್ಲ. ಹೀಗೆ ಒಂದು ಸಣ್ಣ ಫ್ಯಾಷನ್‌ ಮಿಸ್ಟೇಕ್‌ ಇಡೀ ಲುಕ್ಸನ್ನೇ ಹಾಳು ಮಾಡಿಬಿಡುತ್ತದೆ.

ನಾವು ಯಾವುದೇ ಫ್ಯಾಷನ್‌ ಫಾಲೋ ಮಾಡುವ ಮುನ್ನ ಅದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆ ಮಾಡಿದಾಗ ಮಾತ್ರ ಫ್ಯಾಷನ್‌ ಬ್ಲಂಡರ್ಸ್‌ ಆಗುವುದಿಲ್ಲ. ಸಾಮಾನ್ಯವಾಗಿ, ಫ್ಯಾಷನೆಬಲ್ ಆಗಬೇಕೆಂಬ ಧಾವಂತದಲ್ಲಿ, ಮಹಿಳೆಯರು ಕಾಪಿಕ್ಯಾಟ್‌ ಆಗುತ್ತಾರೆ. ಇನ್ನೊಬ್ಬರನ್ನು ಕಂಡು ತಾವು ಹಾಗೇ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ, ಎಷ್ಟೋ ಸಲ ಅದು ಅವರಿಗೆ ಸೂಟ್‌ ಆಗುವುದೇ ಇಲ್ಲ! ಇಲ್ಲಿಂದಲೇ ಫ್ಯಾಷನ್‌ ಮಿಸ್ಟೇಕ್ಸ್ ಶುರುವಾಗುತ್ತವೆ.

ಸೆಕ್ಸಿ ಎಂದು ತೋರ್ಪಡಿಸಲು ಸ್ಕಿನ್‌ ಎಕ್ಸ್ ಪೋಷರ್‌ : ಸೆಕ್ಸಿ ಲುಕ್ಸ್ ಫ್ಯಾಷನ್ನಿನ ಒಂದು ಭಾಗವೇ ಆಗಿದೆ. ಓವರ್‌ಆಲ್ ಡ್ರೆಸ್‌ಅಪ್‌, ಹೇರ್‌ಸ್ಟೈಲ್‌, ಫುಟ್‌ವೇರ್‌, ಪರ್ಫೆಕ್ಟ್ ಆ್ಯಟಿಟ್ಯೂಡ್‌ ಲುಕ್ಸ್ ನ್ನು ಸೆಕ್ಸಿ ಮಾಡುತ್ತವೆಯೇ ಹೊರತು ಕ್ಲೀವೇಜ್‌, ವೇಯ್ಸ್ಟ್ ಲೈನ್‌, ಓಪನ್‌ ಬ್ಯಾಕ್‌ ಪ್ರದರ್ಶನಗಳಷ್ಟೇ ಈ ಕೆಲಸ ಮಾಡವು. ಅಷ್ಟು ಮಾತ್ರಲ್ಲದೆ, ಯಾವ ಸಂದರ್ಭಕ್ಕಾಗಿ ಸೆಕ್ಸಿಯಾಗಿ ಕಾಣಿಸಿಕೊಳ್ಳಬೇಕು ಎಂಬುದೂ ಮುಖ್ಯ. ಭ್ರಮೆಗೆ ಒಳಗಾದ ಮಹಿಳೆಯರು ಎಲ್ಲೆಡೆ ಅದರ ಪ್ರದರ್ಶನಕ್ಕೆ ಯತ್ನಿಸಿ ನಗೆಗೀಡಾಗುತ್ತಾರೆ. ಆಯಾ ಸಂದರ್ಭ ಸನ್ನಿವೇಶ ಅರಿತು ನಡೆದುಕೊಳ್ಳಬೇಕಷ್ಟೆ.

ಡ್ರೆಸ್‌ ಫಿಟ್‌ ಆಗದಿದ್ದಾಗ ಹಿಟ್‌ ಆಗುವುದು ಹೇಗೆ? : ಕೆಲವು ಮಹಿಳೆಯರಿಗೆ ಫ್ಯಾಷನ್ನಿನ ಭೂತ ಹೇಗೆ ನೆತ್ತಿಗೇರಿರುತ್ತದೆಂದರೆ, ಅವರಿಗೆ ತಮ್ಮ ದೇಹದ ಆಕಾರ ಹೇಗಿದೆ ಎಂಬುದರ ಪರಿಜ್ಞಾನವೇ ಇರುವುದಿಲ್ಲ. ಅಂಥವರಿಗೆ ಎಷ್ಟೋ ಸಲ ಔಟ್‌ಫಿಟ್ಸ್ ಸೈಜ್‌ನಲ್ಲಿ ಚಿಕ್ಕದಾಗುತ್ತವೆ. ಅವನ್ನು ಬಲವಂತವಾಗಿ ಧರಿಸುವುದರಿಂದ, ಆ ಡ್ರೆಸ್‌ ದೇಹದ ಉಬ್ಬು ತಗ್ಗುಗಳನ್ನು ಧಾರಾಳವಾಗಿ  ಪ್ರದರ್ಶಿಸುತ್ತದೆ. ಸರಿಯಾದ ಸೈಜ್‌ ಆರಿಸದಿದ್ದರೆ, ಖಂಡಿತಾ ಅದೂ ಸಹ ಫ್ಯಾಷನ್‌ ಬ್ಲಂಡರ್ಸ್‌ನಲ್ಲಿ ಸೇರುತ್ತದೆ. ಬಹಳ ಟೈಟ್‌ ಅಥವಾ ತುಂಬಾ ಲೂಸ್‌ ಫಿಟ್ಟಿಂಗ್ಸ್ ಎರಡೂ ಸರಿಯಲ್ಲ. ಈ ಎರಡೂ ನಿಮ್ಮ ಗೆಟಪ್‌ ಕೆಡಿಸುತ್ತವೆ. ಆದ್ದರಿಂದ ನಿಮ್ಮ ಸೈಜ್‌ಗೆ ತಕ್ಕಂತೆ ಸೂಕ್ತವಾಗಿ ಆರಿಸಿ. ದಪ್ಪ ಮಹಿಳೆಯರು ಬಿಗಿ ಉಡುಗೆಗಳನ್ನು ಎಂದೂ ಧರಿಸಬಾರದು. ಹೆಚ್ಚು ಟೈಟ್‌ ಬಟ್ಟೆಗಳಲ್ಲಿ ದೇಹ ತೆಳ್ಳಗೆ ಕಾಣಿಸುವುದೂ ಇಲ್ಲ, ಲುಕ್ಸ್ ಚೆನ್ನಾಗಿರುವುದೂ ಇಲ್ಲ. ಅದೇ ತರಹ ಬಹಳ ತೆಳ್ಳಗಿರುವ ಮಹಿಳೆಯರೂ ಸಹ ಸ್ಕಿನ್‌ ಟೈಟ್‌ ಬಟ್ಟೆ ಧರಿಸಬಾರದು, ಆಗ ಅವರು ಇನ್ನೂ ತೆಳ್ಳಗೆ ಕಾಣಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ