ರೇಷ್ಮೆಯ ತವರೂರಾದ ಭಾರತದಲ್ಲಿ ಜರಿ ಸೀರೆಗಳ ವಿಭಿನ್ನತೆ ವೈವಿಧ್ಯತೆಗಳಿಗೆ ಬರವೇ? ಈ ಮೇಲಿನ ಎಲ್ಲಾ ಬಗೆಯೂ ತಂತಮ್ಮ ಪ್ರಾಂತೀಯ ಗುಣಮಟ್ಟದಿಂದ ವಿಶೇಷ ಎನಿಸಿವೆ.

ರೇಷ್ಮೆಯ ಈ ವೈವಿಧ್ಯಗಳನ್ನು ಗಮನಿಸಿದಾಗ ಲೇಟೆಸ್ಟ್ ಟ್ರೆಂಡ್‌ ಮಟ್ಕಾ ಸಿಲ್ಕ್ ಆಗಿದೆ. ಈ ರೇಷ್ಮೆಗಾಗಿ ಪ.ಬಂಗಳದ ಮಾಲ್ದಾ ಮತ್ತು ಮುರ್ಶಿದಾಬಾದ್‌ ಜಿಲ್ಲೆಯ ಕಚ್ಚಾ ರೇಷ್ಮೆಯನ್ನು ಸಂಸ್ಕರಿಸಿ ಸಿದ್ಧಪಡಿಸಲಾಗುತ್ತದೆ. ಇದು ನಮ್ಮ ದೇಶದಲ್ಲಿ ಪ್ರಖ್ಯಾತಿ ಹೊಂದಿರುವುದು ಮಾತ್ರಲ್ಲದೆ, ವಿದೇಶಗಳಿಗೂ ರಫ್ತಾಗುತ್ತದೆ.

ಇಲ್ಲಿ ತಯಾರಕರು ಒಂದು ವಿಶೇಷ ತಳಿಯ ರೇಷ್ಮೆ ಗೂಡಿನಿಂದ, ಕಚ್ಚಾ ರೇಷ್ಮೆ ತೆಗೆದು, ಇದನ್ನು ಹೀಗೆ ಸಿದ್ಧಪಡಿಸುತ್ತಾರೆ. ಅದಾದ ಮೇಲೆ ನೇಕಾರರು ವಿಶೇಷ ವಿನ್ಯಾಸ ಒದಗಿಸಿ ಸೀರೆಗೆ ಫೈನ್‌ ಟಚ್‌ ನೀಡುತ್ತಾರೆ.

ವೈವಿಧ್ಯಮಯ ವಿನ್ಯಾಸಗಳು

ಮಟ್ಕಾ ಸಿಲ್ಕ್ಸ್ ತನ್ನ ಅಪ್ಪಟ ಪರಿಶುದ್ಧತೆ, ವೈವಿಧ್ಯಮಯ ವಿನ್ಯಾಸಗಳು, ರಿಚ್‌ನೆಸ್‌ ಮತ್ತು ಎಲಿಗೆಂಟ್ಸ್ ಲುಕ್ಕ್ಸ್ ನಿಂದಾಗಿ ಅಪಾರ ಖ್ಯಾತಿ ಪಡೆದಿದೆ. ಅಷ್ಟು ಮಾತ್ರವಲ್ಲದೆ, ಈ ಸೀರೆಗಳ ಇನ್ನಿತರ ವೈಶಿಷ್ಟ್ಯಗಳು ಎಂದರೆ :

– ಮಟ್ಕಾ ಸಿಲ್ಕ್ಸ್ ಸೀರೆಗಳ ಡಿಸೈನ್‌ಗಳಲ್ಲಿ ಝಿಗ್‌ಝ್ಯಾಗ್‌  ಡಿಜಿಟಲ್ ಡಿಸೈನ್‌ ಹೆಚ್ಚು ಜನಪ್ರಿಯ ಎನಿಸಿದೆ. ಆಧುನಿಕ ಯುವತಿಯರು ಇಂಥವನ್ನು ಹೆಚ್ಚಾಗಿ ಆರಿಸಿಕೊಳ್ಳುವುದೇ ಇದಕ್ಕೆ ಕಾರಣ.

– 45 ಬಣ್ಣಗಳು, ಸೆರಗು, ಬಾರ್ಡರ್‌, ಬಾಡಿ ಪಾರ್ಟ್‌ನಲ್ಲಿ ವಿವಿಧ ಕಲರ್ಸ್‌  ಶೇಡ್ಸ್ ಇರುತ್ತವೆ.

– ಸಿಂಪಲ್ ಎಲಿಗೆಂಟ್‌ ಲುಕ್ಸ್ ಕಾರಣ ಗೆಸ್ಟ್ ಪಾರ್ಟೀಸ್‌, ಕ್ಯಾಶ್ಯುಯೆಲ್‌ ಹಾಗೂ ಫ್ರೆಂಡ್ಸ್ ಗ್ಯಾದರಿಂಗ್ಸ್ನಲ್ಲಿ ನಿಮಗೆ ಮಟ್ಕಾ ಸಿಲ್ಕ್ಸ್ ಸೀರೆ ದಿ ಬೆಸ್ಟ್ ಚಾಯ್ಸ್ ಎನಿಸುತ್ತದೆ.

– ಈ ಮಟ್ಕಾ ಸಿಲ್ಕ್ಸ್ ಶೇಸ್ ಗಳಲ್ಲಿ ಪ್ಲೇನ್‌ ಶೇಡ್ಸ್, ಬ್ರಾಡ್‌ ಬಾರ್ಡರ್‌ ಮತ್ತು ಡಿಫರೆಂಟ್‌ ಡಿಸೈನ್ಸ್ ಲಭ್ಯವಿದ್ದು, ಅದು ನಿಮ್ಮ ಪರ್ಸನಾಲಿಟಿಗೆ ಇನ್ನಷ್ಟು ಕಾಂತಿ ಹೆಚ್ಚಿಸುತ್ತದೆ.

– ತಾವು ಸ್ಥೂಲವಾಗಿರುವ ಕಾರಣ, ಅಂಥ ಯುವತಿಯರು ಭಾರಿ ಜರಿ ಸೀರೆ ಇಷ್ಟಪಡುವುದಿಲ್ಲ. ಅಂಥವರಿಗೆಂದೇ ಲೈಟ್‌ ವೆಯ್ಟ್ ಮಟ್ಕಾ ಸಿಲ್ಕ್ಸ್ ಉತ್ತಮ ಆಯ್ಕೆ.

– ಲೈಟ್‌ ಟೆಕ್ಸ್ಚರ್‌, ಡಿಫರೆಂಟ್‌  ಸಾಫ್ಟ್ ಮೆಟೀರಿಯಲ್ ಕಾರಣ ಈ ಸೀರೆಗಳು ಆಫೀಸ್‌ ವೇರ್‌, ಫ್ರೆಂಡ್ಸ್ ಸರ್ಕಲ್ ಹಾಗೂ ಗೆಟ್‌ಟುಗೆದರ್‌ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿವೆ.

ಕಲರ್‌ ಕಾಂಬಿನೇಶನ್‌

– ಪಿಂಕ್‌, ಗ್ರೀನ್‌, ಕ್ರೀಂ, ಸಿಲ್ವರ್‌, ಆನಿಯನ್‌, ರಾಯಲ್ ಬ್ಲೂ ಕಲರ್ಸ್‌ ಮಟ್ಕಾ ಸಿಕ್ಸ್ ನಲ್ಲಿ ವಿಶಿಷ್ಟ ಎನಿಸಿವೆ.

– ಈ ಸೀರೆಗಳ ಜೊತೆ ಸಿಲ್ವರ್‌ ಮತ್ತು ಗೋಲ್ಡನ್‌ ಕಲರ್‌ನ ಬ್ಲೌಸ್‌ ಚೆನ್ನಾಗಿ ಒಪ್ಪುತ್ತವೆ.

– ಪ್ಲೇನ್‌ ಬ್ಲ್ಯಾಕ್‌  ಪಿಂಕ್‌ ಕಲರ್‌ ಕಾಂಬಿನೇಶನ್‌ನ ಲೈಟ್‌ ಮಟ್ಕಾ ಸಿಲ್ಕ್ ಸೀರೆಗಳನ್ನು ಕಾಲೇಜು ಕಿಶೋರಿಯರು, ಆಫೀಸ್‌ ಗರ್ಲ್ಸ್ ಮತ್ತು ಗೃಹಿಣಿಯರು ಬಹಳ ಮೆಚ್ಚುತ್ತಾರೆ.

– ಬ್ರೈಟ್‌ನೆಸ್‌ ಅಟ್ರಾಕ್ಟಿವ್‌ನೆಸ್‌ ಕಾರಣ ಮಟ್ಕಾ ಸಿಲ್ಕ್ಸ್ ಯುವತಿಯರನ್ನು ಹೆಚ್ಚು ಆಕರ್ಷಿಸುತ್ತದೆ.

ಇತರ ಲಾಭಗಳು

– ಈ ಸೀರೆಗಳಲ್ಲಿನ ಅತಿ ಹೆಚ್ಚಿನ ಲಾಭವೆಂದರೆ, ಇವನ್ನು ಲಾಂಡ್ರಿ ವಾಶ್‌ಗೆ ಕೊಡುವ ಅಗತ್ಯವಿಲ್ಲ. ಇವನ್ನು ಹಾಯಾಗಿ ಮನೆಯಲ್ಲೇ ಒಗೆಯಬಹುದು.

– ತನ್ನ ಎಲಿಗೆಂಟ್‌ ಲುಕ್ಸ್ ಕಾರಣ, ಓಪನ್‌ ಸೆರಗು ಈ ಸೀರೆಗಳನ್ನು ಅತ್ಯಧಿಕ ಸ್ಟೈಲಿಶ್‌ ಮಾಡುತ್ತದೆ.

– ಸಾಮಾನ್ಯವಾಗಿ ಸೀರೆ ಜೊತೆ ಬ್ಲೌಸ್‌ ಅಟ್ಯಾಚ್ಡ್ ಆಗಿರುತ್ತದೆ. ಆದರೆ ನೀವು ಬಯಸಿದಲ್ಲಿ ಸೀರೆಗೆ ಮ್ಯಾಚಿಂಗ್‌ ಆಗುವ ಬೇರೆ ಬ್ಲೌಸ್‌ನ್ನು ಟ್ರೈ ಮಾಡಬಹುದು.

– ಪಾರ್ಟಿಗೆ ಹೊರಟಿದ್ದೀರಿ ಎಂದರೆ, ಮಟ್ಕಾ ಸಿಲ್ಕ್ಸ್ ಸೀರೆಯ ಜೊತೆ ಹೈ ಹೀಲ್ಡ್ ಸ್ಯಾಂಡಲ್, ಪರ್ಸ್‌ ಅಥವಾ ಕ್ಲಚ್‌ ಬಳಸಲು ಮರೆಯದಿರಿ.

– ಭಾರತಿ ಭಾಸ್ಕರ್‌

Tags:
COMMENT