ಫ್ಯಾಷನ್‌ಲ್ಲಿ ತೂಗಾಡುವಿಕೆ ಈಗ ಪ್ರಚಲಿತದಲ್ಲಿದೆ. ಈ ದಿನಗಳಲ್ಲಿ ತೂಗಾಟವಿಲ್ಲದೆ ಯಾವ ಫ್ಯಾಷನ್‌ ಕೂಡ ಪೂರ್ತಿಯಾಗುವುದಿಲ್ಲ. ಈಗ ಪಾರಂಪರಿಕ ಭಾರತೀಯ ಉಡುಗೆ ತೊಡುಗೆಗಳು ರೂಢಿಯಲ್ಲಿವೆ. ಈಗಂತೂ ಹಬ್ಬಗಳ ಕಾಲ. ಈ ಸಂದರ್ಭದಲ್ಲಿ ಸಾಮಾನ್ಯಾಗಿ ಪಾರಂಪರಿಕ ಡ್ರೆಸ್‌ಗಳನ್ನೇ ಧರಿಸಲಾಗುತ್ತದೆ. ಪಾರಂಪರಿಕ ಡ್ರೆಸ್‌ಗಳ ಭಾಗವೇ ತೂಗಾಡುವ ಡ್ರೆಸ್‌ ಆಗಿದೆ. ಗುಜರಾತ್‌, ರಾಜಾಸ್ಥಾನ್‌, ಹರಿಯಾಣ, ಪಂಜಾಬ್‌ ಮತ್ತು ಬಿಹಾರಗಳ ಪಾರಂಪರಿಕ ಉಡುಪುಗಳಲ್ಲಿ ವಿಭಿನ್ನ ರೀತಿಯ ತೂಗಾಡುವ ಕುಚ್ಚುಗಳು ಚಾಲ್ತಿಯಲ್ಲಿವೆ.

ಗುಜರಾತ್‌ನಲ್ಲಿ ಚನಿಯಾ ಚೋಲಿ, ರಾಜಾಸ್ಥಾನ್‌ ಮತ್ತು ಹರಿಯಾಣದಲ್ಲಿ ಘಾಘ್ರಾ ಚೋಲಿ, ಪಂಜಾಬ್‌ನಲ್ಲಿ ಪರಾಂಜಾ ಮತ್ತು ಜಡೆಯೊಂದಿಗೆ ಕುಚ್ಚು ರೂಢಿಯಲ್ಲಿದೆ. ಬಿಹಾರದ ಉಡುಪಿನಲ್ಲಿಯೂ ನೆರಿಗೆಗಳುಳ್ಳ ಕುಚ್ಚುಗಳು ಚಾಲ್ತಿಯಲ್ಲಿವೆ.

ಉಡುಪುಗಳ ಹಳೆಯ ಪಾರಂಪರಿಕ ಅಲಂಕರಣ ಮತ್ತೊಮ್ಮೆ ಹಿಂತಿರುಗಿದೆ. ಮಹಿಳೆಯರ ಯಾವುದೇ ಪಾರಂಪರಿಕ ಉಡುಪಾಗಲೀ ಅಥವಾ ಇಷ್ಟವಾದ ಜ್ಯೂವೆಲರಿಯಾಗಲೀ ಇಂದು ತೂಗಾಡುವ ಕುಚ್ಚುಗಳಿಲ್ಲದೆ ಇಲ್ಲ.

ರವಿಕೆಯ ಹಿಂದಿನ ಭಾಗದಲ್ಲಿ ಇಣುಕಿ ನೋಡುವ ಅಮೃತಶಿಲೆಯಂತಹ ಬೆನ್ನಿನ ಮೇಲೆ ತೂಗಾಡುವ ಗುಂಗುರು ಗುಂಗುರಾದ ಲೋಹದ ಅಥವಾ ಬಣ್ಣಬಣ್ಣದ ಬೀಡ್ಸ್ ಗಳಿರುವ ಕುಚ್ಚು, ಬ್ಲೌಸ್‌ನ ಅಕ್ಕಪಕ್ಕ ವೈಯಾರದಿಂದ ತೂಗಾಡುವ ಕುಚ್ಚು, ಸೆರಗಿನ ತುದಿಯಲ್ಲಿ ಹೆಮ್ಮೆಯಿಂದ ಬಳುಕುವ ಕುಚ್ಚು, ಫಾಘ್ರಾದ ಸೊಂಟದ ಭಾಗದಲ್ಲಿ ಕುಲುಕುವ ಕುಚ್ಚು, ಪಾರಂಪರಿಕ ಜಡೆಯಿಂದ ಜೋಲಾಡುವ ಕುಚ್ಚು, ಬಳೆಗಳಿಂದ ನೇತಾಡುವ ಕುಚ್ಚುಗಳು ಹಾಗೂ ಕಿವಿಗಳಿಂದ ತೂಗಾಡುವ ಕುಚ್ಚುಗಳು ಕೇಳುವುದೇ ಬೇಡ. ಇವುಗಳಿಂದ ಯಾರದಾದರೂ ಹೃದಯ ತುಂಬಿ ಬರುತ್ತದೆ.

latkan

ಕುಚ್ಚಿನ ಜಾದೂ ಈ ದಿನಗಳಲ್ಲಿ ಹೇಗಿದೆಯೆಂದರೆ ಸುಭಾಷ್‌ ಘಾಯ್‌ರ ಚಿತ್ರ `ಖಳನಾಯಕ್‌'ನಲ್ಲಿ ನೀನಾ ಗುಪ್ತ್ತಾ ಧಕ್‌ಧಕ್‌ಹುಡುಗಿ ಮಾಧುರಿ ದೀಕ್ಷಿತ್‌ರನ್ನು ಚೋಲಿ ಕೆ ಪೀಚೆ ಕ್ಯಾ ಹೈ ಎಂದು ಕೇಳಿದಾಗ ಮಾಧುರಿ ಬಹಳ ಹೆಮ್ಮೆಯಿಂದ ಚೋಲಿಯಲ್ಲಿ ನನ್ನ ಹೃದಯ ಇದೆ ಎಂದಿದ್ದರು. ಇಂದು ಚೋಲಿ ಕೆ ಪೀಚೆ ಕ್ಯಾ ಹೈ ಎಂದು ಕೇಳಿದ ಕೂಡಲೇ ತೂಗಾಡುವ ಕುಚ್ಚು ಇದೆ ಎನ್ನುತ್ತಾರೆ.

ಹುಡುಗಿಯರ ರವಿಕೆಯಿಂದ ಹಿಡಿದು ಕುರ್ತಿಯವರೆಗೆ, ಘಾಘ್ರಾ ದುಪಟ್ಟಾದಿಂದ ಹಿಡಿದು ಸೀರೆಯ ಸೆರಗಿನವರೆಗೆ, ಜಡೆಯಿಂದ ಹಿಡಿದು ಬಳೆಗಳವರೆಗೆ ಎಲ್ಲ ಕಡೆ ಕುಚ್ಚಿನದೇ ರಾಯಭಾರ.

ಈ ಕುಚ್ಚಿಗಂತೂ ಸ್ವಲ್ಪ ನಾಚಿಕೆಯೇ ಇಲ್ಲ. ಉಡುಪಿನ ನೆಪದಲ್ಲಿ ಹುಡುಗಿಯರ ಶರೀರದ ಬೇರೆ ಬೇರೆ ಭಾಗಗಳಲ್ಲಿ ಎಲ್ಲೆಂದರಲ್ಲಿ ಮನಸ್ಸಿಗೆ ಬಂದಂತೆ ಬಿಂದಾಸ್‌ ಆಗಿ ಚೆಲ್ಲಾಟವಾಡಲು ಹಿಂದೆ ಮುಂದೆ ನೋಡುವುದಿಲ್ಲ. ಇದನ್ನು ಟ್ಯಾಸೆಲ್ ‌ಎಂದೂ ಕರೆಯುತ್ತಾರೆ.

ಪಾರಂಪರಿಕ ರವಿಕೆಯಾಗಲೀ ಆಧುನಿಕ ಬ್ಲೌಸ್‌ ಆಗಲೀ ಸಲ್ವಾರ್‌ ಅಥವಾ ಕುರ್ತಾಗಿಂತ ಕೆಳಗೆ ಕುಚ್ಚುಗಳು ತೂಗಾಡುತ್ತಿರುತ್ತವೆ. ಬೆನ್ನು, ಹೆಗಲು, ಭುಜ ಹಾಗೂ ಈಗ ಸೊಂಟದಿಂದಲೂ ತೂಗಾಡುತ್ತಿರುತ್ತವೆ. ಹಿಂದಿನ ವರ್ಷಗಳಲ್ಲಿ ಹಳ್ಳಿಯ ಯುವತಿಯ ಪಾತ್ರದಲ್ಲಿ ಮಾಲಾ ಸಿನ್ಹಾ, ಆಶಾ ಪಾರೇಖ್‌, ಮುಮ್ತಾಜ್‌, ಶರ್ಮಿಳಾ ಟ್ಯಾಗೋರ್‌ರಂತಹ ಚಿತ್ರನಟಿಯರ ಇದೇ ಕುಚ್ಚುಗಳ ಹಿಂದೆ ನಾಯಕರು ಮೋಹಗೊಳ್ಳುತ್ತಿದ್ದರು. ಈ ನಾಯಕಿಯರ ರವಿಕೆಯ ಹಿಂಭಾಗದಲ್ಲಿ ಅಡ್ಡಗೆರೆಗಳ ಮಧ್ಯೆ ತೂಗಾಡುವ, ಹಾರಾಡುವ ಅಥವಾ ರವಿಕೆಯ ಹಿಂದೆ ಅಥವಾ ಭುಜಗಳ ಕೆಳಗೆ ಹೃದಯಾಕಾರದ ಕಟ್‌, ಅದರ ಮಧ್ಯೆ ತೂಗಾಡುವ ಟ್ಯಾಸೆಲ್‌. ಇದು ನಾಯಕಿಯ ಶೋಕಿಗೆ ಇನ್ನಷ್ಟು ಮೆರುಗು ಕೊಡುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ