ಡೆನಿಮ್ ಜೊತೆ ಅತ್ಯಾಕರ್ಷಕ ಸ್ಟೈಲಿಶ್‌ ವುಲ್ಲನ್‌ ಡ್ರೆಸೆಸ್‌, ನಿಮ್ಮ ಹೊಸ ವರ್ಷದ ಸಂಭ್ರಮಾಚರಣೆಗೆ ಪರ್ಫೆಕ್ಟ್ ಆಯ್ಕೆಯಾಗಿದೆ! ವಿಷ್‌ ಯೂ ಆಲ್...... ಹ್ಯಾಪಿ ನ್ಯೂ ಇಯರ್‌!

ಸಂಕ್ರಾಂತಿಯ ಸಡಗರಕ್ಕಾಗಿ ನವ ನವೀನ ಉಡುಗೆಗಳು

fashion-Bhumi-A (1)

ಈ ಯೆಲ್ಲೋ ಲಾಂಗ್‌ ಡ್ರೆಸ್‌ ಜೊತೆ ಸಿಲ್ವರ್‌ ನೆಕ್‌ ಲೇಸ್‌, ಸ್ಟೈಲಿಶ್‌ ಗೆಟಪ್‌ಗೆ ಇದು ಸಾಕಲ್ಲವೇ! ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ!

ಬಟರ್‌ ಸೀ ಗ್ರೀನ್‌ ಲೇಯರ್ಡ್‌ ಡ್ರೆಸ್‌.... ಇದಲ್ಲವೇ ಬೊಂಬಾಟ್‌ ಕಾಂಬಿನೇಶನ್‌! ಇಂಥ ಅತ್ಯಾಧುನಿಕ ಡಿಸೈನಿನ, ಮಿರಿಮಿರಿ ಮಿಂಚುವ ಬ್ಯೂಟಿಫುಲ್ ಬಣ್ಣದ ಈ ಡ್ರೆಸ್‌ ಧರಿಸಿ ಹೊಸ ಸೊಸೆ, ಅತ್ತೆ ಮನೆಯಲ್ಲಿ ಎಳ್ಳು ಬೀರಲು ಹೊರಟರೆ, ಕಾಲಕ್ಕೆ ತಕ್ಕಂಥ ಉಡುಗೆಯ ಬದಲಾವಣೆ ಹಾಗೂ ಸಾಂಪ್ರದಾಯಿಕ ಆಚರಣೆಗೆ ಎಲ್ಲರೂ ತಲೆದೂಗಲೇ ಬೇಕು!

fashion-Bhumi-B (1)

ಧೋತಿ ಸ್ಟೈಲ್‌ನ ಈ ಬ್ಲ್ಯಾಕ್‌ ಡ್ರೆಸ್‌ ಹೊಸ ವರ್ಷದ ಪಾರ್ಟಿಗೆ ಗ್ಲಾಮರಸ್‌ ಗೆಟಪ್‌ ಕೊಡುವುದಲ್ಲದೆ, ಸಂಕ್ರಾಂತಿ ಮರುದಿನದ ತವರುಮನೆಯ ಭೇಟಿಗೂ, ನವ ವಿವಾಹಿತೆಗೆ ಹೇಳಿ ಮಾಡಿಸಿದಂತಿದೆ!

ವೈಟ್‌ ಡ್ರೆಸ್‌ ಮತ್ತು ಬ್ಲ್ಯಾಕ್‌ ಬೆಲ್ಟ್ ನ್ಯೂ ಇಯರ್‌ ಈವ್ನಿಂಗ್‌ ಪಾರ್ಟಿ ಹಾಗೂ ಸಂಕ್ರಾಂತಿಯ ಸಡಗರಕ್ಕೂ ಪೂರಕವಾಗಿದೆ! ಹಬ್ಬದ ಸಡಗರ ಸಂಭ್ರಮ ಹೆಚ್ಚಿಸಲು, ಸರಳತೆಯಲ್ಲೂ ಸೌಮ್ಯತೆ ಬಿಂಬಿಸುವ, ಇಂಥ ಆಧುನಿಕ ಉಡುಗೆಗಳು ನಿಮ್ಮ ಸಿಂಪ್ಲಿಸಿಟಿಗೆ ಹಿಡಿದ ಕೈಗನ್ನಡಿ!

ಎಳ್ಳು ಬೆಲ್ಲ ಬೀರಲು ಹೊರಟಿರಾ....?

ಸಂಕ್ರಾಂತಿಯ ಸಂಭ್ರಮ ಹೆಚ್ಚಿಸಲು ಸಂಜೆ ಹೊತ್ತು ಎಳ್ಳು ಬೆಲ್ಲ ಬೀರಲು ಹೊರಟ ಯುವತಿಯರಿಗಾಗಿ ಇಲ್ಲಿವೆ ನವ ನವೀನ ಉಡುಗೆಗಳು.......

ಸಂಕ್ರಾಂತಿಗಾಗಿ ಆಕರ್ಷಕ ಆಭರಣಗಳು

Max-fashion (1)

ನಿಮ್ಮ ಪರ್ಸನಾಲ್ಟಿಗೆ ಆತ್ಮವಿಶ್ವಾಸ ತುಂಬಿದ ಹೊಳಪು ನೀಡಲು, ಈ ನವನವೀನ ಅತ್ಯಾಕರ್ಷಕ `ಮದರ್‌ ಆಫ್‌ ಪರ್ಲ್'ನಿಂದ ಸಿಂಗರಿಸಲ್ಪಟ್ಟ, ನೇಚರ್‌ ಥೀಮ್ ಆಧರಿಸಿದ ಈ ಮುತ್ತಿನ ಆಭರಣಗಳನ್ನು ಧರಿಸಿ. ಕಲರ್‌ ಫುಲ್ ಪೆಂಡೆಂಟ್ಸ್, ನೆಕ್‌ ಪೀಸಸ್‌, ರಿಂಗ್ಸ್, ಕಿವಿಯೋಲೆ ತೊಟ್ಟು ರೇಷ್ಮೆ ಸೀರೆ, ಲಂಗದಾವಣಿಗಳೊಂದಿಗೆ ಸರಭರ ಓಡಾಡುತ್ತಾ, ಎಳ್ಳುಬೆಲ್ಲ ಹಂಚುತ್ತಾ, ಸಂಕ್ರಾಂತಿ ಹಬ್ಬವನ್ನು ಸೊಗಸಾಗಿ ಸಂಭ್ರಮಿಸಿ!

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ