ಫ್ಯಾಷನ್‌ ಮತ್ತು ಸ್ಟೈಲ್‌ಗೆ ವ್ಯಕ್ತಿಯೊಂದಿಗೆ ನೇರ ಸಂಬಂಧವಿರುತ್ತದೆ. ಅವರ ಸ್ಟೈಲ್ ‌ಸೆನ್ಸ್ ಸರಿಯಾಗಿಲ್ಲದಿದ್ದರೆ, ಎಷ್ಟೇ ಫ್ಯಾಷನ್‌ಮಾಡಿಕೊಂಡರೂ ಇದು ಹೊಂದುವುದಿಲ್ಲ. ಬೆಲೆಬಾಳುವ ಡ್ರೆಸ್‌ ಮತ್ತು ಆಭರಣಗಳನ್ನು ಧರಿಸಿದ ಮಾತ್ರಕ್ಕೆ ಯಾರೂ ಸುಂದರವಾಗಲು ಸಾಧ್ಯವಿಲ್ಲ. ಕಾಲ, ಸಂದರ್ಭಗಳನ್ನೂ ಗಮನದಲ್ಲಿ ಇಡಬೇಕಾಗುತ್ತದೆ.

ವ್ಯಕ್ತಿ ಬೇರೆ ಸ್ಟೈಲ್ ‌ಬೇರೆ

ಫ್ಯಾಷನ್‌ ಪ್ರತಿ ವರ್ಷ ಬದಲಾಗುತ್ತಿರುತ್ತದೆ. ಆದರೆ ಪ್ರತಿ ವ್ಯಕ್ತಿಗೂ ಸ್ಟೈಲ್ ವಿಭಿನ್ನವಾಗಿರುತ್ತದೆ, ಅದು ಬದಲಾಗುವುದಿಲ್ಲ. ಸ್ಟೈಲಿಂಗ್‌ಗೆ ವ್ಯಕ್ತಿಯ ಬಣ್ಣ ಮತ್ತು ದೇಹ ರಚನೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ವ್ಯಕ್ತಿಯು ಸ್ಥೂಲವಾಗಿರಲಿ ಅಥವಾ ಸಪೂರವಾಗಿರಲಿ, ಸೂಕ್ತ ಸ್ಟೈಲಿಂಗ್‌ನಿಂದ ಗ್ಲಾಮರಸ್‌ ಮತ್ತು ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಸುಂದರವಾಗಿ ಕಾಣಲು ಬೆಲೆಬಾಳುವ ಉಡುಪು ಧರಿಸಬೇಕಿಲ್ಲ. ಸಾಧಾರಣ ಡ್ರೆಸ್‌ ಆದರೂ ನಿಮ್ಮ ಸ್ಟೈಲ್‌ಗೆ ತಕ್ಕಂತಿದ್ದರೆ ನೀವು ಸುಂದರವಾಗಿ ಕಾಣುವಿರಿ. ಯಾವುದೇ ಡ್ರೆಸ್‌ ಆದರೂ ಸಂದರ್ಭಕ್ಕೆ ತಕ್ಕಂತೆ ಧರಿಸಬೇಕು.

ಸ್ಟೈಲ್ ‌ರೂಪಿಸಿಕೊಳ್ಳುವುದು ಹೇಗೆ ಎಂದು ತಿಳಿದಿರಬೇಕು. ಕೆಲವರಲ್ಲಿ ಮ್ಯಾನರ್ಸ್‌ ಸ್ವಾಭಾವಿಕವಾಗಿ ಮೈಗೂಡಿರುತ್ತದೆ. ಆದರೆ ಕೆಲವರ ಬಾಡಿ ಲ್ಯಾಂಗ್ವೇಜ್‌ ಸರಿ ಇರುವುದಿಲ್ಲ. ಅಂಥವರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ದೊರೆಯುವುದಿಲ್ಲ. ಅಂಥವರು ಯಶಸ್ವಿಯಾಗಬೇಕಾದರೆ ಸರಿಯಾದ ನಡೆನುಡಿ, ರೀತಿ ನೀತಿ ಕಲಿಯಬೇಕು.

ಪ್ರೆಸೆಂಟೆಬಲ್ ಆಗಿರಿ

ಹೌಸ್‌ ವೈಫ್‌ ಕೂಡ ಇದರಲ್ಲಿ ಹಿಂದುಳಿಯುತ್ತಾರೆ. ಅವರು ಸರಿಯಾದ ರೀತಿಯಲ್ಲಿ ಮಾತನಾಡಲು ಕಲಿತರೆ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಆಗ ಕುಟುಂಬದಲ್ಲಿ ಒಳ್ಳೆಯ ವಾತಾವರಣ ನೆಲೆಸುತ್ತದೆ. ಇದೊಂದು ರೀತಿಯ ವಿಜ್ಞಾನವಾಗಿದ್ದು, ಇದನ್ನು ಅಗತ್ಯವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ತಮ್ಮಲ್ಲಿ ಏನು ಕೊರತೆಯಿದೆ ಎಂದು ಅನೇಕ ಮಹಿಳೆಯರು ಕೇಳುತ್ತಾರೆ. ಅವರಲ್ಲಿ ಏನೂ ಕೊರತೆಯಿಲ್ಲ. ಆದರೆ ಸರಿಯಾದ ರೀತಿಯಲ್ಲಿ ತಮ್ಮನ್ನು ಪ್ರೆಸೆಂಟ್‌ ಮಾಡಿಕೊಳ್ಳಬೇಕೆಂದು ಅವರು ಅರ್ಥ ಮಾಡಿಕೊಳ್ಳಬೇಕು. ಕೆಲವರು ತಮ್ಮ ಲುಕ್‌ ಚೆನ್ನಾಗಿಲ್ಲ ಎಂದು ಭಾವಿಸುತ್ತಾರೆ. ಅದು ಹಾಗಲ್ಲ, ಎಷ್ಟೋ ಸಿನಿಮಾ ತಾರೆಯರು ವಿಶೇಷ ಲುಕ್ಸ್  ಪಡೆದಿಲ್ಲದಿದ್ದರೂ ಯಶಸ್ವಿಗಳಾಗಿದ್ದಾರೆ. ಮುಖದ ಆಕಾರ ಮತ್ತು ಮೈಮಾಟಕ್ಕೆ ತಕ್ಕಂತೆ ಡ್ರೆಸ್‌ ಮಾಡಿಕೊಳ್ಳಬೇಕು. ಸರಿಯಾದ ಸ್ಟೈಲ್‌‌ನಿಂದ ಸ್ಮಾರ್ಟ್‌ ಲುಕ್‌ ಬರುತ್ತದೆ. ಮೂಡ್‌ ಬದಲಾಗಿ ಚೆನ್ನಾಗಿ ಯೋಚಿಸಬಲ್ಲವರಾಗುತ್ತಾರೆ. ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಕಾರ್ಯ ವಿಧಾನ ಬದಲಾಗುತ್ತದೆ. ಹಿಂದೆ ಭಾರತದಲ್ಲಿ ಇಮೇಜ್‌ ಬಗ್ಗೆ ಹೆಚ್ಚು ಜಾಗರೂಕತೆ ಇರಲಿಲ್ಲ. ಇಂದು ಜನರು ಈ ಬಗ್ಗೆ ಗಮನ ನೀಡುತ್ತಾರೆ. ಕೆಲಸದ ನಂತರ ಹೊಗಳಿಕೆ ಸಿಕ್ಕಿದಾಗ ವ್ಯಕ್ತಿಗೆ ಪ್ರೇರಣೆ ದೊರೆಯುತ್ತದೆ.  ಜನರ ಮುಂದೆ ಪ್ರೆಸೆಂಟೆಬಲ್ ಆಗಿ ಕಾಣಿಸಿಕೊಳ್ಳುವ ಕಲೆಯಿಂದ ನಿಮಗೆ ಸಮಾಜದಲ್ಲಿ ಒಂದು ಗುರುತು ಮೂಡುತ್ತದೆ, ಆದ್ದರಿಂದ ಸ್ಮಾರ್ಟ್‌

ಆಗಿರಿ ಮತ್ತು ಸ್ಟೈಲಿಶ್‌ ಆಗಿರಿ.

- ಕೆ. ಸುಮಲತಾ

ಫ್ಯಾಷನ್‌ ಮಿಸ್ಟೇಕ್ಸ್

ಸರಿಯಾದ ಫ್ಯಾಬ್ರಿಕ್‌ ಆರಿಸದಿರುವುದು.

ಬಟ್ಟೆಯ ಬಣ್ಣ ಸರಿಯಿಲ್ಲದಿರುವುದು.

ಪಾರ್ಟಿಗೆ ತಕ್ಕಂತೆ ಡ್ರೆಸ್‌ ಮಾಡದಿರುವುದು.

ಇತರರು ತಮಗಿಂತ ಚೆನ್ನಾಗಿ ಕಾಣುವರೆಂದು ಭಾವಿಸುವುದು.

ಇದನ್ನು ಸರಿಪಡಿಸುವ ವಿಧಾನಗಳು :

ಹೊರಗೆ ಹೋಗಬೇಕಾದ 2 ದಿನ ಮೊದಲೇ ಡ್ರೆಸ್‌ ಆರಿಸಿ, ಸರಿ ಇದೆಯೇ ಎಂದು ಟ್ರೈ ಮಾಡಿ ನೋಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ