ಬೇಸಿಗೆಯ ಸೀಸನ್‌ ಶುರು ಆಗುತ್ತಿದ್ದಂತೆಯೇ ಆಧುನಿಕ ಯುವತಿಯರಿಗೆ ಈ ಸಲ ಧರಿಸಲು ಎಂಥ ಮಾಡಲ್ ಡ್ರೆಸೆಸ್‌ ಸಿಗಲಿವೆ ಎಂಬುದೇ ಚಿಂತೆ.  ಅದರಲ್ಲೂ ಫ್ಯಾಷನ್‌ ವಿಷಯವಾಗಿ ಚರ್ಚೆ ನಡೆಯುವಾಗ ಹೇಳುವುದೇ ಬೇಡ! ಪ್ರತಿ ವರ್ಷದಂತೆಯೇ ಈ ವರ್ಷ ಫ್ಯಾಷನ್ನಿನ ವಿವಿಧ ರೂಪ ನಿಮ್ಮೆದುರು ತೆರೆದುಕೊಳ್ಳಲಿದೆ.

ಬನ್ನಿ, ಈ ವರ್ಷದ ಬೇಸಿಗೆಯಲ್ಲಿ ಯಾವ ಯಾವ ಡ್ರೆಸೆಸ್‌ ಹಾಗೂ ಫುಟ್‌ವೇರ್‌ ನಿಮಗೆ ಗಾರ್ಜಿಯಸ್‌ ಲುಕ್‌ ನೀಡಲಿವೆ ಎಂದು ತಿಳಿಯೋಣ :

ಸೀಕ್ವೆನ್ಸ್ ವರ್ಕ್‌ನಿಂದ ಡೆಕ್ಡ್ ಡ್ರೆಸ್‌ : ಬೇಸಿಗೆಯಲ್ಲಿ ನಕ್ಷತ್ರಗಳ (ಸೀಕ್ವೆನ್ಸ್) ಹೊಳೆ ಹೊಳೆಯುವ ಡ್ರೆಸೆಸ್‌ ಜನಪ್ರಿಯ ಆಗಲಿದೆ. ಒಂದು ಉತ್ತಮ ದಿನದ ಆರಂಭಕ್ಕಾಗಿ ಸೀಕ್ವೆನ್ಸ್  ವರ್ಕ್‌ನ ಟಾಪ್‌ ಲೆಗ್ಗಿಂಗ್‌ ಯಾ ಲೈನ್‌ ಸ್ಕರ್ಟ್‌ ಧರಿಸಿ. ಈ ಎರಡೂ ಡ್ರೆಸ್‌ಗಳೂ ನಿಮಗೆ ಸ್ಟೈಲಿಶ್‌ ಲುಕ್ಸ್ ನೀಡಲಿವೆ. ಗೋಲ್ಡನ್‌, ಸಿಲ್ವರ್‌ನಂಥ ಶೈನಿಂಗ್‌ ಬಣ್ಣಗಳ ಜೊತೆ ನೀಲಿ, ಕಪ್ಪು, ಕೆಂಪು, ಕಿತ್ತಳೆ, ಮೆಜೆಂತಾ ಇತ್ಯಾದಿ ಬಣ್ಣಗಳನ್ನು ಬಳಸಿ ನೋಡಿ. ಇವುಗಳ ಜೊತೆ ತೆಳು ಬಣ್ಣದ ಸ್ಕಾರ್ಫ್‌ ಯಾ ಜ್ಯಾಕೆಟ್‌ ಧರಿಸಿರಿ.

ವಿಂಟೇಜ್‌ ಫ್ಲೇರ್ಸ್‌ : ಈ ತರಹದ ಉಡುಗೆಗಳು 40-50ರ ದಶಕದಲ್ಲಿದ್ದವು. ಇದೀಗ ಮತ್ತೆ ಇವುಗಳಿಗೆ ಬೇಡಿಕೆ ಬಂದಿದೆ. ಫ್ಲೇರ್‌ ಡಿಸೈನ್‌ಳ್ಳ ಮ್ಯಾಕ್ಸಿ/ ಮಿಡಿ ಡ್ರೆಸ್‌ ಧರಿಸಿರಿ ಯಾ ಫ್ಲೇರ್‌ ಟಾಪ್‌ ಜೊತೆ ಡೆನಿಮ್ ಜ್ಯಾಕೆಟ್‌ ಧರಿಸಿರಿ. ಇಷ್ಟು ಮಾತ್ರವಲ್ಲದೆ ಫ್ಲೇರ್‌ ಪ್ರಿಂಟ್‌ನ ಸ್ಕಾರ್ಫ್‌, ಮೊಬೈಲ್‌ ಕವರ್‌, ಬ್ಯಾಗ್‌ ಯಾ ಸಾಕ್ಸ್ ಸಹ ಬಳಸಬಹುದು.

fash

ಫ್ರಿಂಜಿ (ನೆಟೆಡ್‌) ಡ್ರೆಸ್‌ : ಸಂಜೆಯ ಗ್ರಾಂಡ್‌ ಫಂಕ್ಷನ್‌ ಅಥವಾ ಡಿನ್ನರ್‌ಗೆ ಹೊರಡುವುದಿದ್ದರೆ ಫ್ರಿಂಜಿ ಸ್ಕರ್ಟ್‌ ಧರಿಸಿರಿ. ಇದಕ್ಕೆ ಜೊತೆಯಾಗಿ ಎತ್ತರದ ಅಥವಾ ದಪ್ಪಗಿನ ಸ್ಯಾಂಡಲ್ಸ್ ಧರಿಸಿರಿ. ಕಾಕ್‌ಟೇಲ್ ರಿಂಗ್‌ ಯಾ ಬ್ಯೂಟಿಫುಲ್ ರೌಂಡ್‌ ಇಯರ್‌ ರಿಂಗ್ಸ್ ಧರಿಸಿ ಸ್ಟೈಲಿಶ್‌ ಆಗಿ ಹೊರಡಿರಿ.

ಪೇಸ್ಟಲ್ ಕಲರ್‌ ಡ್ರೆಸೆಸ್‌ : ಈ ಸೀಸನ್‌ನಲ್ಲಿ ಪೇಸ್ಟಲ್ ಅಂದ್ರೆ ಲೈಟ್‌ ಕಲರ್‌ ಡ್ರೆಸೆಸ್‌ ನಿಮ್ಮ ವಾರ್ಡ್‌ರೋಬ್‌ನ ಅತ್ಯುತ್ತಮ ಚಾಯ್ಸ್ ಆಗಿರುತ್ತದೆ. ಹಳದಿ, ಬದನೆ, ಹಸಿರು, ಗುಲಾಬಿ, ಆರೆಂಜ್‌ ಇತ್ಯಾದಿ ಬಣ್ಣಗಳ ಉಡುಗೆ ಆರಿಸಿ. ಇವು ಲೈಟ್‌ ಆಗಿದ್ದರೂ ಅಷ್ಟೇ ಆಕರ್ಷಕ ಬಣ್ಣಗಳಾಗಿವೆ.

ಲೈಲಾಕ್‌ ಕಲರ್‌ (ಲೈಟ್‌ ಪರ್ಪಲ್) : ಲೈಲಾಕ್‌ ಬಣ್ಣ ಬೇಸಿಗೆಯಲ್ಲಿ ಹೆಚ್ಚು ಒಪ್ಪುತ್ತದೆ. ಲ್ಯಾವೆಂಡರ್‌ ಶೇಡ್‌ ಹಲವು ಬಗೆಯಲ್ಲಿ ಧರಿಸಬಹುದು. ಲೈಲಾಕ್‌ ಟಾಪ್‌  ಬ್ಲೌಸ್‌ನಿಂದ ಹಿಡಿದು ಟ್ರೌಸರ್‌  ಸ್ಕರ್ಟ್‌ವರೆಗೂ ನೀವು ಟ್ರೈ ಮಾಡಬಹುದು. ಈ ಬಣ್ಣವನ್ನು ಲೈಟ್‌  ಡಾರ್ಕ್‌ ಎರಡೂ ಬಗೆಯಲ್ಲಿ ಪೇರ್‌ ಮಾಡಿ ಧರಿಸಬಹುದು.

pastel

ಸ್ಟೈಲಿಶ್‌ ಕೋಲ್ಡ್ ಶೋಲ್ಡರ್ಸ್‌ : ಇವು ಹಲವು ಬಗೆಯ ಸ್ಟೈಲಿಂಗ್‌ ಆಪ್ಶನ್ಸ್ ನೀಡುತ್ತವೆ ಹಾಗೂ ಇವನ್ನು ಎಲ್ಲಾ ಬಗೆಯ ಡ್ರೆಸೆಸ್‌ ಜೊತೆಗೂ ಧರಿಸಬಹುದು. ಆಫೀಸ್‌ನಲ್ಲಿ ಶರ್ಟ್‌ ತರಹ, ಪಾರ್ಟಿಯಲ್ಲಿ ಟಾಪ್‌ ಆಗಿ, ಈವ್ನಿಂಗ್‌ ಪಾರ್ಟಿಯಲ್ಲಿ ಗೌನ್‌ ಆಗಿ…. ಇತ್ಯಾದಿ.

ಕುಲೋಟ್ಸ್ : ಇದು ಪ್ಲಾಜೋ ಸ್ಟೈಲ್‌ನಲ್ಲಿ ಹೊಸ ಟ್ರೆಂಡ್‌ ರೂಪದಲ್ಲಿ ಫ್ಯಾಷನ್‌ನಲ್ಲಿದೆ. ಇಂದಿನ ಆಧುನಿಕ ತರುಣಿಯರಿಗೆ ಇದು ಅಚ್ಚುಮೆಚ್ಚು. ಬೇಸಿಗೆಯಲ್ಲಿ ನೀವು ಇದನ್ನು ಫಾರ್ಮಲ್ ಕುಲೋಟ್‌ ಪ್ಯಾಂಟ್ಸ್ ತರಹ ಧರಿಸಬಹುದು ಹಾಗೂ ಕುಲೋಟ್‌ ಶಾರ್ಟ್ಸ್ ತರಹ ಕೂಡ.

“40-50ರ ದಶಕದಲ್ಲಿದ್ದ ಉಡುಗೆಗಳ ಫ್ಯಾಷನ್‌ ಇದೀಗ ಮರಳಿ ಬಂದಿದೆ ಎಂದರೆ ನೀವು ನಂಬಲೇಬೇಕು. ಇದರಲ್ಲಿನ ಕೆಲವದರ ಫ್ಯಾಷನ್‌ ಯುವಜನತೆಗೆ ಬಲು ಅಚ್ಚುಮೆಚ್ಚು!”

strapy-sandals

ಪ್ರಿಂಟ್‌ ಟೆಕ್ಸ್ ಚರ್‌ನ ಝಮಾನಾ

ಈ ವಸಂತ ಋತುವಿನಲ್ಲಿ ಅದಕ್ಕೆ ತಕ್ಕಂತೆ ನಮ್ಮ ವಾರ್ಡ್‌ರೋಬ್‌ ಅಲಂಕರಿಸುವ ಅಗತ್ಯವಿದೆ. ಸ್ಪ್ರಿಂಗ್‌ ಸಮ್ಮರ್‌ ಸೀಸನ್‌ 2021ರ ಫ್ಯಾಷನ್‌ ಟ್ರೆಂಡ್‌ನಲ್ಲಿ ಪೇಸ್ಟಲ್, ಫ್ಲೇರ್‌, ಅಪೊಲೆನ್ಸ್, ಜ್ಯಾಮಿಟ್ರಿಕ್‌ ಟೆಕ್ಸ್ ಚರ್‌, ಪ್ಲೇಸ್‌ಮೆಂಟ್‌ ಪ್ರಿಂಟ್ಸ್ ಗಳ ಸಾಲಿಡ್‌ ಮಿಶ್ರಣ ಇರುತ್ತದೆ. ಇದರ ಜೊತೆ ಬೋಲ್ಡ್ ಕಲರ್ಸ್‌ ಬಳಕೆಯಿಂದ ಈ ಟ್ರೆಂಡ್‌ ಇನ್ನಷ್ಟು ಜನಪ್ರಿಯ ಆಗಲಿದೆ. ಫ್ಲೇರ್‌ ಪ್ರಿಂಟ್‌, ಜ್ಯಾಮಿಟ್ರಿಕ್‌ ಟೆಕ್ಸ್ ಚರ್‌, ಕಲರ್‌ ಬ್ಲಾಕಿಂಗ್‌ ನಿಶ್ಚಿತ ರೂಪದಲ್ಲಿ ಬ್ರೈಟ್‌ ವೈಬ್ರೆಂಟ್‌ ಕಲರ್ಸ್‌ ಜೊತೆ  ಟ್ರೆಂಡ್‌ನಲ್ಲಿರುತ್ತದೆ. ಇದರ ಜೊತೆಯಲ್ಲೇ ಫ್ಲೇಯಿ ಫ್ಯಾಬ್ರಿಕ್‌, ಒಂದು ಉತ್ತಮ ಕಾಂಬಿನೇಶನ್‌ ಜೊತೆ ಎಲಿಗೆಂಟ್‌ ಲುಕ್ಸ್ ನಲ್ಲಿ  ಚಾಲ್ತಿಯಲ್ಲಿರುತ್ತದೆ. ಮೋಟಿಫೈ ಆ್ಯಂಬ್ಲಿಶ್‌ಮೆಂಟ್‌ನ ಬಳಕೆ ಸಾಕಷ್ಟು ಕಡಿಮೆ ಆಗುತ್ತದೆ. ಇದರಿಂದ ಔಟ್‌ಫಿಟ್‌ ಲುಕ್ಸ್ ನಲ್ಲಿ ಬೆಟರ್‌ಮೆಂಟ್‌ ಕಾಣಿಸಲಿದೆ. ಟ್ರೆಡಿಶನಲ್ ಫ್ಯಾಬ್ರಿಕ್‌ನ ರಿವೈವ್, ಎಲಿಗೆಂಟ್‌ ಡಿಸೈನ್ಸ್, ಆ್ಯಂಬ್ಲಿಶ್‌ಮೆಂಟ್‌ ಟೆಕ್ನಿಕ್ಸ್ ಮತ್ತು ವೇವ್ಸ್ ಮುಂತಾಗಿ ಎಲ್ಲವನ್ನೂ ಒಳಗೊಂಡಿರುತ್ತದೆ.

ಆಫ್‌ ಶೋಲ್ಡರ್ಡ್‌ ಡ್ರೆಸೆಸ್‌ : ಸದಾ ಚಾಲ್ತಿಯಲ್ಲಿರುವ ಫ್ಯಾಷನ್‌ ಟ್ರೆಂಡ್‌ ಎಂದರೆ ಇದೇ!  ಈ ವರ್ಷ ಸಹ ಇಂಥ ಡ್ರೆಸೆಸ್‌ ಎಲ್ಲರಿಗೂ ಇಷ್ಟವಾಗುತ್ತಿದೆ. ಇದನ್ನು ನೀವು ಲಾಂಗ್‌ ನಿಕ್ಕರ್‌/ ಶಾರ್ಟ್‌ ಡ್ರೆಸ್‌/ ಟಾಪ್‌ ಜೊತೆ ಧರಿಸಬಹುದು.

“ಹಿಂದೆಲ್ಲ ಡ್ರೆಸೆಸ್‌ ಕುರಿತಾಗಿ ಜನ ಬಹಳ ಕಾನ್ಶಿಯಸ್‌ ಆಗಿರುತ್ತಿದ್ದರು, ಆದರೆ ಫುಟ್‌ವೇರ್ಸ್‌ ನಿರ್ಲಕ್ಷಿಸುತ್ತಿದ್ದರು. ಆದರೆ ಇತ್ತೀಚೆಗೆ ಡಿಸೈನರ್‌ ಫುಟ್‌ವೇರ್ಸ್‌ನ ಟ್ರೆಂಡ್‌ ಜೋರು ದಾರಿ  ಹಿಡಿದಿದೆ.”

ಈ ಸಮ್ಮರ್‌ನಲ್ಲಿ ಸ್ಟೈಲಿಶ್‌ ಆಗಿರಿ

ಸ್ಪ್ರಿಂಗ್‌/ಸಮ್ಮರ್‌ ಸೀಸನ್ನಿನ ಒಂದು ಫೇವರಿಟ್‌ ಔಟ್‌ಫಿಟ್‌ ಎಂದರೆ ಪೆನ್ಸಿಲ್ ಸ್ಕರ್ಟ್‌! 2021ರಲ್ಲೂ ಇದು ಟ್ರೆಂಡ್‌ನಲ್ಲಿರುತ್ತದೆ.

ನೀವು ಇದನ್ನು ಕೇವಲ ಆಫೀಸಿಗೆ, ಕಾರ್ಪೋರೇಟ್‌ ಮೀಟಿಂಗ್ಸ್ ಇತ್ಯಾದಿಗಳಿಗೆ ಮಾತ್ರವಲ್ಲದೆ, ಬೇರೆ ಫಂಕ್ಷನ್ಸ್ ಗೂ ಬಳಸಬಹುದು. ಇದರ ಬಟನ್ಸ್ ವುಳ್ಳದ್ದನ್ನು ಸಾಮಾನ್ಯದಿಂದ ದೊಡ್ಡ ಶರ್ಟ್‌ವರೆಗೆ ಧರಿಸಿ, ಇನ್‌ಫಾರ್ಮಲ್ ಲುಕ್ಸ್ ಪಡೆಯಬಹುದು.

ಈ ಲುಕ್ಸ್ ನ್ನು ಫಂಕಿ ಮಾಡಲು ನೀವು ಸಾಕ್ಸ್ ಬೂಟ್ಸ್ ಬಳಸಿಕೊಳ್ಳಿ. ಪೆನ್ಸಿಲ್ ಸ್ಕರ್ಟ್‌ ಜೊತೆ ಫ್ಲೇರ್‌ ಟಾಪ್‌ ಮತ್ತು ಹೈಹೀಲ್ಸ್ ಕಾಂಬಿನೇಶನ್‌ ಬಳಸಿಕೊಳ್ಳಿ. ಭಾರಿ ಬ್ರೆಡ್‌ ವರ್ಕ್‌ ಪೆನ್ಸಿಲ್‌ ಸ್ಕರ್ಟ್‌ ಜೊತೆ ಕ್ರಾಪ್‌ ಟಾಪ್‌ ಮತ್ತು ಕೋಲ್ಡ್ ಶೋಲ್ಡರ್‌ ಟಾಪ್‌ ಟ್ರೆಂಡ್‌ನಲ್ಲಿದೆ. ಇವನ್ನು ಹಲವು ರೀತಿಯಲ್ಲಿ ಸ್ಟೈಲ್ ಮಾಡಬಹುದು. ನೀವು ಸ್ಟಾರ್‌ ಸ್ಟಡೆಡ್‌ ಪೆನ್ಸಿಲ್ ಸ್ಕರ್ಟ್‌ ಜೊತೆ ಚೆಕ್ಸ್ ವುಳ್ಳ ಟಾಪ್‌ ಧರಿಸಬಹುದು. ಇದರ ಮೇಲೆ ಒಂದು ಉದ್ದನೆ ಜ್ಯಾಕೆಟ್‌ ಧರಿಸಿ ಇನ್ನಷ್ಟು ಸ್ಟೈಲಿಶ್‌ ಎನಿಸಬಹುದು.

ಬೆಲ್‌‌ಬಾಟಮ್ : ಇದು 80ರ ದಶಕದ ಟ್ರೆಂಡ್‌, ಆದರೆ ಈಗಿನ ಹೊಸ ಟ್ರೆಂಡ್‌ನಲ್ಲಿ ವಾಪಸ್‌ ಮರಳಿದೆ. ಇದೊಂದು ಸ್ಟೈಲಿಶ್‌ ರೆಟ್ರೋ ಆಪ್ಶನ್‌ ಎನ್ನಬಹುದು.

ಹೆರಿಟೇಜ್‌ ಚೆಕ್ಸ್  : ಬೇಸಿಗೆಯಲ್ಲಿ ಫಾರ್ಮಲ್ ಡ್ರೆಸೆಸ್‌ಗೆ ಇದೊಂದು ಉತ್ತಮ ಆಯ್ಕೆ. ಈ ಪ್ಯಾಟರ್ನ್‌ನ ಫ್ಲೇರ್ ಫೆಮಿನೈನ್‌ ಸೂಟ್‌ ಬಳಸಿರಿ. ಇದು ಯಾವುದೇ ಅಫಿಶಿಯಲ್ ಮೀಟಿಂಗ್‌ಗೆ ಪರ್ಫೆಕ್ಟ್ ಆಗುತ್ತದೆ. ನೀವು ಪೆನ್ಸಿಲ್‌ ಸ್ಕರ್ಟ್‌ ಯಾ ಟ್ರೌಸರ್‌ ಜೊತೆ ಲಿನೆನ್‌ ಶರ್ಟ್‌ ಸಹ ಧರಿಸಬಹುದು. ಚೆಕ್ಸ್ ಶರ್ಟ್‌ನ್ನು ನೀವು ದೈನಂದಿನ ಉಡುಗೆಗಳ ರೂಪದಲ್ಲಿಯೂ ಧರಿಸಬಹುದು. ಇದನ್ನು ಹೆಚ್ಚು ಆಕರ್ಷಕಗೊಳಿಸಲು, ಇದರ ಜೊತೆ ಸ್ಕಾರ್ಫ್‌ ಧರಿಸಿರಿ.

ಈ ವರ್ಷದ ಫ್ಯಾಷನ್ನಿನ ವೈಶಿಷ್ಟ್ಯ

ಈ ವರ್ಷ ಇಂಡಿಯನ್‌ ಫ್ಯಾಷನ್‌ನಲ್ಲಿ ಹೊಸ ಮತ್ತು ಹಳೆಯ ಫ್ಯಾಷನ್ನಿನ ಮಿಕ್ಸ್ ಇರುತ್ತದೆ. ಈ ವರ್ಷ ಹಳೆಯ ಸ್ಟೈಲ್‌ಗಳ ಡ್ರೆಸೆಸ್‌ ಹೊಸ ರೂಪದಲ್ಲಿ ನೋಡ ಸಿಗಲಿದೆ.

ಶರಾರಾ : ಹಿಂದಿನ ವರ್ಷದ ಪ್ಲಾಜೋ ದಿನಗಳು ಹೋದವು. ಅಂದರೆ ಪ್ಲಾಜೋ ತೊರೆದು ಈ ಬಾರಿಯ ವಸಂತ ಋತುವಿಗಾಗಿ ಕೊಂಡುಕೊಳ್ಳಿ ಶರಾರಾ. ಬಣ್ಣಬಣ್ಣದ ಡಿಸೈನರ್‌ ಕುರ್ತಿಗಳ ಜೊತೆ ಶರಾರಾ ಸ್ಟೈಲಿಶ್‌ ಫುಟ್‌ವೇರ್‌ ಉತ್ತಮ ಲುಕ್ಸ್ ನೀಡುತ್ತವೆ.

ಡ್ರೆಸ್‌ ಕುರ್ತಾ : ಒನ್‌ಪೀಸ್‌ ಡ್ರೆಸ್‌ ಭಾರತೀಯ ಉಡುಗೆಗಳಿಗೆ ವೆಸ್ಟರ್ನ್‌ ಲುಕ್ಸ್ ನೀಡುತ್ತವೆ. ಕಾಲೇಜು ಕಿಶೋರಿಯರಿಗೆ, ಉದ್ಯೋಗಸ್ಥ ಯುವ ವನಿತೆಯರು, ಗೃಹಿಣಿಯರಿಗೂ ಸೂಕ್ತವಾಗಿದೆ.

ಇಂಡೀ ಟಾಪ್ಸ್ : ಇದು ಆರಾಮ ನೀಡುವ ಉಡುಗೆ. ಇದನ್ನು ನೀವು ಲೆಗ್ಗಿಂಗ್ಸ್, ಸ್ಲಿಮ್ ಪ್ಯಾಂಟ್‌, ಜೀನ್ಸ್ ಜೊತೆಗೂ ಧರಿಸಬಹುದು. ಇದನ್ನು ಧರಿಸಿ ನೀವು ಟ್ರೆಂಡಿ, ಆರಾಮದಾಯಕ ಫೀಲ್ ಮಾಡಬಹುದು.

ರಫ್ಡ್‌ ಸ್ಕರ್ಟ್ಸ್ : ಸ್ಲೀವ್ ಲೆಸ್‌ನಲ್ಲಿ ರಫ್ಡ್‌ 2020ರ ಆರಂಭದಿಂದಲೇ ಇದೆ. ಕಳೆದ ವರ್ಷ ರಫ್ಡ್‌ ಸ್ಕರ್ಟ್‌ ಫ್ಯಾಷನ್‌ಗೆ ಬಂದಿತ್ತು. ಈ ವರ್ಷ ಆ ಟ್ರೆಂಡ್‌ ಮುಂದುವರಿದಿದೆ. ಇದನ್ನು ಯಾವುದೇ ಟೀಶರ್ಟ್‌ ಜೊತೆ ಧರಿಸಿರಿ.

ಪೋಂಚೋ : ಈ ಸೀಸನ್‌ಗೆ ಇದು ಧಾರಾಳ ಆರಾಮದಾಯಕ ಹಾಗೂ ಸ್ಟೈಲಿಶ್‌ ಎನ್ನಬಹುದು.

ಬ್ರೈಟ್‌ ಕಲರ್ಸ್‌ : ಯೆಲ್ಲೋ ಕುರ್ತಿಯನ್ನು ವೈಟ್‌ ಜೊತೆ ಮತ್ತು ರೆಡ್‌ನ್ನು ಬ್ಲೂ ಜೊತೆ ಮ್ಯಾಚ್‌ ಮಾಡಿ, ಈ ಸೀಸನ್ನಿನ ಆಕರ್ಷಣೆಯ ಕೇಂದ್ರಬಿಂದುವಾಗಿ.

ಫುಟ್‌ವೇರ್‌ ಟ್ರೆಂಡ್‌ ಜೋರಾಗಿರುತ್ತದೆ

ಈ ಸಲದ ಬೇಸಿಗೆಯಲ್ಲಿ ಮುಂಜಿ, ಮದುವೆ ಸಮಾರಂಭವಿರಲಿ ಅಥವಾ ಸ್ಪೆಷಲ್ ಪಾರ್ಟಿ, ಇಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಸ್ಟೈಲಿಶ್‌ ಡ್ರೆಸೆಸ್‌ ಲಭ್ಯ. ಅಲ್ಲಿ ಫುಟ್‌ವೇರ್ಸ್‌ನ ಟ್ರೆಂಡ್‌ ಕೂಡ ಜೋರಾಗಿರುತ್ತದೆ.

ಸ್ಯಾಂಡಲ್ಸ್ : ಪ್ರಿಟಿ ಫೆಮಿನೈನ್‌ ಸ್ಯಾಂಡಲ್ಸ್ ಮತ್ತೆ ಟ್ರೆಂಡ್‌ಗೆ ಬಂದಿದೆ. ಈ ಸೀಸನ್‌ನಲ್ಲಿ ಮೆಟ್ಯಾಲಿಕ್‌  ಪೇಸ್ಟಲ್ ಕಲರ್ಸ್‌ ವಿಶೇಷವಾಗಿ ಟ್ರೆಂಡಿ ಎನಿಸಿವೆ.

ವೈಟ್‌ ಈಸ್‌ ಇನ್‌ : ಬೇಸಿಗೆಯ ಬಣ್ಣ ಎಂದರೆ ಬಿಳುಪು. ಈ ಸೀಸನ್‌ನಲ್ಲಿ ಸ್ನೀಕರ್ಸ್‌ನಿಂದ ಹಿಡಿದು ಹೈಹೀಲ್ಸ್ ವರೆಗೂ ಎಲ್ಲಾ ರೀತಿಯ ಫುಟ್‌ವೇರ್‌ಗಳಲ್ಲೂ ಬಿಳಿಯ ಬಣ್ಣ ಮಿಳಿತಗೊಂಡಿದೆ.

ಕಿಟನ್‌ ಹೀಲ್ಸ್ : ಈ ಸಮ್ಮರ್‌ ಸೀಸನ್‌ನಲ್ಲಿ ಕಿಟನ್‌ ಹೀಲ್ಸ್ ಟ್ರೆಂಡ್‌ನಲ್ಲಿರುತ್ತದೆ. ಇವು ನಿಮಗೆ ಕ್ಲಾಸಿ ಲುಕ್‌ ನೀಡುತ್ತವೆ, ಜೊತೆಗೆ ಸಾಕಷ್ಟು ಕಂಫರ್ಟೆಬಲ್ ಕೂಡ.

ಸಿಲ್ವರ್‌ ಶೂಸ್‌ : ಸಮ್ಮರ್‌ ವೆಡ್ಡಿಂಗ್‌ ಅಥವಾ ಪಾರ್ಟಿ ಇರಲಿ, ಸಿಲ್ವರ್‌ ಶೂಸ್‌ ಟ್ರೆಂಡ್‌ನಲ್ಲಿವೆ. ಸಿಲ್ವರ್‌ ಮ್ಯಾಜಿಕ್‌ನ ಶೈನಿಂಗ್‌ ಫುಟ್‌ವೇರ್‌, ಈ ಸೀಸನ್‌ನಲ್ಲಿ  ನಿಮ್ಮನ್ನು ಡಿಫರೆಂಟ್‌ ಆಗಿ ತೋರಿಸಲಿದೆ.

ಫ್ಲೇರ್‌ ಪ್ರಿಂಟ್‌ : ಸಮ್ಮರ್‌ ಸೀಸನ್‌ನಲ್ಲಿ ಫ್ಲೇರ್‌ ಟ್ರೆಂಡ್‌ ಎವರ್‌ಗ್ರೀನ್‌ ಎನಿಸುತ್ತದೆ. ನೀವು ಫ್ಲೇರ್‌ ಸ್ಯಾಂಡಲ್ಸ್ ಯಾ ಪ್ರಿಟಿ ಫ್ಲೇರ್‌ ಬೆಲರಿನ್‌ ಧರಿಸಿ ಟ್ರೆಂಡಿ ಸ್ಟೈಲಿಶ್‌ ಎನಿಸುವಿರಿ.

ಬ್ರೋಗ್ಸ್ : ಇವು ಕಂಫರ್ಟೆಬಲ್ ಟ್ರೆಂಡಿ ಎನಿಸಿವೆ. ಇವನ್ನು ನೀವು ಕ್ರಾಪ್‌ ಪ್ಯಾಂಟ್‌ ಯಾ ಜೀನ್ಸ್ ಜೊತೆ ಧರಿಸಬಹುದು. ವೈಟ್‌  ಸಿಲ್ವರ್‌ ಬ್ರೋಗ್ಸ್ ವಿಶೇಷವಾಗಿ ಯುವಜನತೆಯ ಅಚ್ಚುಮೆಚ್ಚು ಎನಿಸಿವೆ.

– ಗಿರಿಜಾ ಶಂಕರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ