ಪಾರುಲ್ ಒಬ್ಬ ಖ್ಯಾತ ಹೇರ್‌ ಸ್ಟೈಲಿಸ್ಟ್, ಒಂದು ಸೆಲೂನಿನ ಓನರ್‌ ಕೂಡ. ಈಕೆಯನ್ನು ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸಲು ಧರಿಸುವ ಉಡುಗೆ ಒಂದು ಪ್ರಮುಖ ಪಾತ್ರ ವಹಿಸುತ್ತದೆಯೇ ಎಂದು ಕೇಳಲಾಗಿ, “ಅಫ್‌ಕೋರ್ಸ್‌…. ಖಂಡಿತಾ ಇದೆ! ಎಲ್ಲಾ ಹೆಂಗಸರೂ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸಬೇಕೆಂದೇ ಬಯಸುತ್ತಾರೆ.“

ಹೀಗಾಗಿ ಅವರು ಬಗೆ ಬಗೆಯ ಗೃಹೋಪಾಯಗಳನ್ನು ಅನುಸರಿಸಲು ಯತ್ನಿಸುತ್ತಾರೆ. ಇಷ್ಟೆಲ್ಲ ಆದಮೇಲೂ ವಯಸ್ಸಿನಿಂದ ಚಿಕ್ಕವರಾಗಿ ಕಾಣಿಸಲು ಧರಿಸಿರುವ ಉಡುಗೆಯೂ ಪ್ರಧಾನ ಪಾತ್ರ ವಹಿಸುತ್ತದೆ. ನಿಮ್ಮ ದೇಹದ ಮೈಕಟ್ಟು, ನಿಮ್ಮ ಇಷ್ಟ ಗಮನಿಸಿಕೊಂಡು ನೀವು ಉಡುಗೆ ಆಯ್ಕೆ ಮಾಡಬೇಕು. ಆಗ ಮಾತ್ರ ಯೌವನ ಇನ್ನೂ ಉಳಿದಿದೆ ಎಂದು ತೋರಿಸಿಕೊಳ್ಳಬಹುದು,” ಎನ್ನುತ್ತಾಳೆ.

ಬಹಳಷ್ಟು ಪ್ರೌಢ ಹೆಂಗಸರು ತಮ್ಮ ಟೀನೇಜ್‌ ಮಕ್ಕಳ ಹಾಗೆ ಫ್ಯಾಷನೆಬಲ್ ಡ್ರೆಸೆಸ್‌ ಧರಿಸುತ್ತಾರೆ, ಇದಕ್ಕೆ ಏನು ಹೇಳ್ತೀರಿ? 40+ ಹೆಂಗಸರು ಹೀಗೆ ಡ್ರೆಸ್‌ ಧರಿಸಿದರೆ ಕೆಟ್ಟದಾಗಿ ಕಾಣುವುದಿಲ್ಲವೇ?

“ಇಲ್ಲ…. ಫ್ಯಾಷನ್‌ ಮಾಡಿಕೊಂಡ ಮಾತ್ರಕ್ಕೆ ಅವರನ್ನು ಟೀಕಿಸಬೇಕಾದ ಅಗತ್ಯವಿಲ್ಲ. ಆ ಹೆಂಗಸಿಗೆ ಅಂಥ ಡ್ರೆಸ್‌ ಧರಿಸುವುದರಲ್ಲಿ ಆಸಕ್ತಿ ಇರಬೇಕು ಮತ್ತು ಅದನ್ನು ಹೇಗೆ ಕ್ಯಾರಿ ಮಾಡುವುದು, ಓವರ್‌ಆಲ್ ಗೆಟಪ್‌ ಮೇಂಟೇನ್‌ ಮಾಡುವುದು ಗೊತ್ತಿರಬೇಕು….”

ಇನ್ನೊಂದು ವಿಷಯ ಅಂದ್ರೆ, ಯಂಗ್‌ ಆಗಿ ಕಾಣಿಸಿಕೊಳ್ಳಲು ಟೀನೇಜ್‌ ಮಗಳು ಧರಿಸಿದ ಅಂಥದೇ ಉಡುಗೆಗಳನ್ನು ತಾಯಂದಿರು ಧರಿಸಿ ತಾವು ಚಿಕ್ಕವರಾಗಿ ಕಾಣಿಸುತ್ತಿದ್ದೇವೆ ಎಂದು ತೋರ್ಪಡಿಸುವ ಅಗತ್ಯವೇನಿದೆ? ಆ ಟ್ರೆಂಡ್‌ಗೆ ತಕ್ಕಂತೆ ಹೋಲುವ, ಅದಕ್ಕಿಂತಲೂ ಹೆಚ್ಚು ಸೊಫೆಸ್ಟಿಕೇಟೆಡ್‌ ಡ್ರೆಸೆಸ್‌ ಧರಿಸುವುದು ಇಂಥ ತಾಯಂದಿರಿಗೆ ಸರಿ.

ಯಂಗ್‌ ಆಗಿ ಕಂಡುಬರಲು ಗಿಡ್ಡನೆಯ, ಮೈಗಂಟಿದ ಟೈಟ್‌ ಡ್ರೆಸ್‌ ಧರಿಸ ಬೇಕಾದುದು ಅನಿವಾರ್ಯವೇ?

“ಯಾರಿಗೋ ಹಾಗಿರಬೇಕೆಂದು ಆಸೆಯಾದರೆ ಇದ್ದುಕೊಳ್ಳಲಿ ಬಿಡಿ. ನಿಮ್ಮ ಮೇಲೆ ನಿಮಗೆ ಹೆಚ್ಚಿನ ಆತ್ಮವಿಶ್ವಾಸ ಇರಬೇಕಷ್ಟೆ. ಅದರಿಂದ ತಾವು ಅಂದವಾಗಿ ಕಾಣಿಸುತ್ತಿದ್ದೇವೆ ಎಂದು ಅವರ ಕನ್ನಡಿ ಮನವರಿಕೆ ಮಾಡಿಕೊಡಬೇಕು. ಚಿಕ್ಕದಾದ, ಪಾರದರ್ಶಕ, ಟೈಟ್‌ ಡ್ರೆಸ್‌ ಧರಿಸಿದರೇನೇ ಯಂಗ್‌ ಆಗಿ ಕಾಣಿಸುತ್ತಾರೆ ಅಂದುಕೊಳ್ಳುವುದೂ ಒಂದು ಭ್ರಮೆ! ಟ್ರೆಂಡಿ ಆಗಿರಿ, ಆಗ ಖಂಡಿತಾ ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸುವಿರಿ.

“ಡ್ರೆಸ್‌ ಯಾವುದೇ ಇರಲಿ, ಅದನ್ನು ನೀಟಾಗಿ, ಡೀಸೆಂಟ್‌ ಆಗಿ ಧರಿಸಿರಿ. ಈ ರೀತಿ ಶಿಷ್ಟಾಚಾರದಿಂದ ಡ್ರೆಸ್‌ ಮಾಡದಿದ್ದರೆ, ನೀವು ಯಂಗ್‌ ಆಗಿ ಕಾಣಿಸುವ ಬದಲು ಆಧುನಿಕ ದೊಂಬರ ಕುಣಿತದ ವೇಷಧಾರಿ ಎನಿಸುತ್ತೀರಷ್ಟೆ.”

ಫಿಟ್‌ನೆಸ್‌ನಿಂದ ಬೆಳಗುವ ಆತ್ಮವಿಶ್ವಾಸ

ಕೆಲವು ತಿಂಗಳ ಹಿಂದಷ್ಟೇ ಆಸ್ಟ್ರೇಲಿಯಾದಿಂದ ಮರಳಿರುವ ಬೆಂಗಳೂರಿನ ಸಾಫ್ಟ್ ವೇರ್‌ ಎಂಜಿನಿಯರ್‌ ಭವ್ಯಾ ಹೇಳುತ್ತಾಳೆ, “ನನಗಂತೂ ವೆಸ್ಟರ್ನ್‌ ಡ್ರೆಸೆಸ್‌ ಧರಿಸುವುದೆಂದರೆ ಬಹಳ ಇಷ್ಟ. ಇದು ನನಗೆ ಕಂಫರ್ಟೆಬಲ್ ಎನಿಸುತ್ತದೆ. ವೆಸ್ಟರ್ನ್‌ ಡ್ರೆಸೆಸ್‌ ಜೊತೆ ತಲೆಗೆ ಹ್ಯಾಟ್‌ ಧರಿಸುವುದಂತೂ ಬಹಳ ಸೂಟ್‌ ಆಗುತ್ತದೆ.

“ಹೀಗಾಗಿ ನಾನು ಪ್ರತಿದಿನ ಹೊರಗೆ ಓಡಾಡುವಾಗ ವೆಸ್ಟರ್ನ್‌ ಡ್ರೆಸೆಸ್‌ ಜೊತೆ ಹ್ಯಾಟ್‌ ಧರಿಸುತ್ತೇನೆ. ಸೂರ್ಯನ ಉರಿಬಿಸಿಲು ಮುಖಕ್ಕೆ, ತಲೆಗೆ ತಗುಲಿದಾಗ ನಮ್ಮ ಚರ್ಮ ಕಪ್ಪಾಗಿ, ಕೂದಲು ನಿರ್ಜೀವ ಆಗದೆ ಇರುತ್ತದೆಯೇ? ಆದ್ದರಿಂದ ಹ್ಯಾಟ್‌ ಧರಿಸಿ ನನ್ನ ಆಸೆ ಪೂರೈಸಿಕೊಳ್ಳುವುದರ ಜೊತೆ, ಸೂರ್ಯನ ಹಾನಿಕಾರಕ ಕಿರಣಗಳಿಂದ ನನ್ನ ಚರ್ಮ, ಕೂದಲು ಕಾಪಾಡಿಕೊಳ್ಳಲಿಕ್ಕೂ ದಾರಿ ಆಯ್ತು. ಇದರಿಂದ ಚರ್ಮ ಬೇಗ ವಯಸ್ಸಾದಂತೆ ಕಾಣಿಸುವುದಿಲ್ಲ. ಹೀಗಾಗಿ ನನ್ನ ವಯಸ್ಸಿಗಿಂತಲೂ ನಾನು ಎಷ್ಟೋ ಪಟ್ಟು ಕಿರಿಯವಳಾಗಿ ಕಂಡುಬರುತ್ತೇನೆ.”

ಟ್ರೆಂಡಿ ಕಾಣಿಸಲು ಸಲಹೆಗಳು

ಕೆಲವು ತರುಣಿಯರಿಗಂತೂ ಕಾಲೇಜಿನಲ್ಲಿ ಕಲಿಯುವಾಗಿನಿಂದಲೇ ಟ್ರೆಂಡಿ ಡ್ರೆಸೆಸ್‌ ಧರಿಸುವ ಹವ್ಯಾಸ ಇರುತ್ತದೆ. ಯಂಗ್‌ ಆಗಿ ಕಾಣಿಸಲು ಎಷ್ಟೋ ಹೆಂಗಸರು ಕೇವಲ ಬ್ಯೂಟಿ ಪ್ರಾಡಕ್ಟ್ ಗಳಷ್ಟೇ ಮೊರೆಹೋಗುತ್ತಾರೆ. ಅದರ ಜೊತೆ ನೀವು ನಿಮ್ಮ ಉಡುಗೆಯ ಕಡೆಗೂ ಗಮನಹರಿಸಿದಾಗ ಮಾತ್ರ ನೀವು ಯಂಗ್‌ ಆಗಿ ಕಾಣಿಸಲು ಸಾಧ್ಯ.

ನಿಮ್ಮ ಜೀವನಶೈಲಿಯನ್ನು ನಿಯಮಿತ ರೂಪದಲ್ಲಿ ಪರೀಕ್ಷಿಸಿ. ಕಣ್ತುಂಬಾ ನಿದ್ದೆ ಇರಲಿ, ಬೆಳಗಿನ ಹೊತ್ತು ವಾಕಿಂಗ್‌, ಜಾಗಿಂಗ್‌, ವ್ಯಾಯಾಮ ಇರಲಿ. ನಿಮ್ಮನ್ನು ನೀವು ಸದಾ ಫಿಟ್‌ ಆಗಿರಿಸಿಕೊಳ್ಳಿ. ಆಹಾರ-ವಿಹಾರಗಳ ಕಡೆಗೆ ಸಂಪೂರ್ಣ ಗಮನ ಕೊಡಿ. ಬ್ಯಾಲೆನ್ಸ್ಡ್ ಡಯೆಟ್‌ ಎಂದೂ ತಪ್ಪಿಸದಿರಿ. ನೀವು ಫಿಟ್‌ ಆಗಿದ್ದರೆ ಎಂಥ ಡ್ರೆಸ್‌ ಆದರೂ ನಿಮಗೆ ಸೂಟ್‌ ಆಗುತ್ತದೆ.

ನೀವು ಮನಮೆಚ್ಚಿದ ಡ್ರೆಸ್‌ ಧರಿಸಲು ಬಯಸಿದರೆ ಉಡುಗೆ ಕೊಳ್ಳುವಾಗ ಅದರ ಸ್ಟಿಚಿಂಗ್‌ ಕಡೆಗೂ ಗಮನವಿರಲಿ. ಅದು ಉತ್ತಮ ರೀತಿಯಲ್ಲಿ ಡಿಸೈನ್ಡ್ ಆಗಿದ್ದರೆ, ನೀವು ಆಕರ್ಷಕವಾಗಿ ಕಾಣುವಿರಿ. ವರ್ಟಿಕಲ್ ಸ್ಟ್ರೀಂ ಲೈನ್ಡ್ ಡ್ರೆಸ್‌ ನಿಮ್ಮನ್ನು ಮತ್ತಷ್ಟು ಯಂಗ್‌ ಆಗಿ ತೋರಿಸುತ್ತದೆ. ಎಷ್ಟೋ ಸಲ 3-4 ತರಹದ ಟ್ರೆಂಡ್ಸ್ ಒಂದೇ ಡ್ರೆಸ್‌ನಲ್ಲಿ ಒಟ್ಟೊಟ್ಟಿಗೆ ಮೇಳೈಸಿರುತ್ತವೆ. ಉದಾ: ಟ್ರೆಡಿಷನಲ್ ಕುರ್ತಿಯಲ್ಲಿ ಎಂಬ್ರಾಯಿಡರಿ, ಫುಲ್ ಸ್ಲೀವ್‌ ಜೊತೆ ಕಫ್‌ ಬಟನ್‌, ಆಗ ಸ್ಲೀವ್ಸ್ ಫೋಲ್ಡ್‌ ಮಾಡಲಿಕ್ಕೂ ಬರುತ್ತದೆ. ಆದರೆ ಅಸಲಿಗೆ ಇಂಥವು ಚೆನ್ನಾಗಿ ಕಾಣಿಸುವುದಿಲ್ಲ.

– ನೀವು ಹೊಸ ಹೊಸ ಡ್ರೆಸೆಸ್‌ ಕೊಂಡಾಗ ಜೊತೆಯಲ್ಲೇ ಅವುಗಳಿಗೆ ಮ್ಯಾಚಿಂಗ್‌ ಬ್ಯಾಗ್ಸ್, ಸ್ಯಾಂಡಲ್ಸ್, ಜ್ಯೂವೆಲರಿ ಸೆಟ್‌ ಇತ್ಯಾದಿ ಖರೀದಿಸಿ. ಎಷ್ಟೋ ಸಲ ಡ್ರೆಸ್‌ ಫುಟ್‌ವೇರ್‌ನ ಸ್ಟೈಲ್ ಮ್ಯಾಚ್‌ ಆಗದಿದ್ದರೆ ಟ್ರೆಂಡಿ ಫ್ಯಾಶನ್‌ ಡ್ರೆಸೆಸ್‌ನಲ್ಲಿ ಅಂಥ ಲುಕ್ಸ್ ಇರುವುದಿಲ್ಲ. ಅದೇ ಡ್ರೆಸ್‌ ಜೊತೆ ನಿಮ್ಮ ಆ್ಯಕ್ಸೆಸರೀಸ್‌ ಫೇಸ್‌ ಮೇಕಪ್‌ ಕಡೆಗೂ ಗಮನ ಕೊಟ್ಟರೆ, ತಕ್ಷಣ ನೀವು ಇರುವುದಕ್ಕಿಂತ 10 ವರ್ಷ ಚಿಕ್ಕವರಾಗಿ ಕಾಣುವಿರಿ. ನೀವು ಜೀನ್ಸ್ ಧರಿಸಿದ್ದರೆ ಅದರ ಜೊತೆ ಪೆನ್ಸಿಲ್ ಹೀಲ್ಸ್ ಸ್ಯಾಂಡಲ್ಸ್ ಧರಿಸುವ ಬದಲು, ಪ್ಲಾಟ್‌ಫಾರ್ಮ್ ಹೀಲ್ಸ್ ಧರಿಸಿರಿ. ಸೀರೆ ಜೊತೆ ಪೆನ್ಸಿಲ್ ಹೀಲ್ಸ್ ಧರಿಸುವುದರಿಂದ ಹೆಚ್ಚು ಡೆಲಿಕೆಸಿ ಅನಿಸಿ, ನೀವು ಇನ್ನಷ್ಟು ಯಂಗ್‌ ಆಗಿ ಕಾಣುವಿರಿ.

– ಎಷ್ಟೋ ಹೆಂಗಸರು ಶಾರ್ಟ್‌ ಸ್ಕರ್ಟ್‌ ಧರಿಸಿ ಜೊತೆಗೆ ಬಿಂದಿ ಸಹ ಇರಿಸಿಕೊಳ್ಳುತ್ತಾರೆ. ಇಂಥ ಹೆಂಗಸರನ್ನು ಕಂಡು ಜನ ಫ್ಯಾಷನ್‌ ನಾಲೆಜ್‌ ಇಲ್ಲವೆಂದು ಒಳಗೊಳಗೆ ಮುಸಿಮುಸಿ ನಗುತ್ತಾರೆ. ಆದ್ದರಿಂದ ಎಂದೂ ಹೀಗೆ ಮಾಡಬೇಡಿ.

– ನಿಮಗೆ ಶಾರ್ಟ್‌ ಸ್ಕರ್ಟ್‌ ಧರಿಸುವ ಆಸೆ ಇದ್ದರೆ, ಅಗತ್ಯ ಧರಿಸಿರಿ. ನೀವು 45+ ಆಗಿದ್ದರೆ, ನೀವು ಹೆಚ್ಚು ಫ್ಲೇರ್‌ ವುಳ್ಳ ಸ್ಕರ್ಟ್‌ ಧರಿಸುವ ಬದಲು ಸ್ಟ್ರೇಟ್‌ ಕಟ್‌ ಧರಿಸಿರಿ. ಜೊತೆಗೆ ಫ್ಲ್ಯಾಟ್‌ ಯಾ ಹೀಲ್ಸ್, ಯಾವುದು ನಿಮಗೆ ಅನುಕೂಲಕರವೋ ಅದನ್ನೇ ಧರಿಸಿರಿ. ಇದರಿಂದ ನೀವು ಸ್ಲಿಂ ಆ್ಯಕ್ಟಿವ್‌ ಆಗಿ ಕಂಡುಬರುತ್ತೀರಿ.

ಫೇಸ್‌ ಮೇಕಪ್‌ ಡ್ರೆಸ್ಸಿಂಗ್‌ನ ಭಾಗ

ಇದೆಲ್ಲ ಮುಗಿದ ಮೇಲೆ ನೀವು ಫೇಸ್‌ ಮೇಕಪ್‌ ಮಾಡಿಕೊಳ್ಳದಿದ್ದರೆ ಹೇಗೆ? ಇದೂ ಸಹ ನಿಮ್ಮ ಡ್ರೆಸ್‌ ಗೆಟಪ್‌ನ ಒಂದು ಭಾಗವೆಂದೇ ತಿಳಿಯಿರಿ.

ಡ್ರೆಸ್‌ನ ಮ್ಯಾಚಿಂಗ್‌ ಹೊಂದಿಸಲೆಂದು ಗಾಢ ಬಣ್ಣದ ಐ ಶ್ಯಾಡೋ ಬಳಸಿದರೆ, ಅದು ಬಹಳ ನಾಟಕೀಯ ಎನಿಸುತ್ತದೆ. ಇದರ ಬದಲು ಲೈಟ್‌ ಬಣ್ಣದ ನ್ಯಾಚುರಲ್ ಲುಕ್ಸ್ ನ ಐ ಶ್ಯಾಡೋ ಹಚ್ಚಿರಿ. ಜೊತೆಗೆ ಲಿಪ್‌ಸ್ಟಿಕ್‌ ಸಹ ಸಾಫ್ಟ್ ಕಲರ್‌ನದೇ ಆಗಿರಬೇಕು. ಇದು ನಿಮ್ಮ ತುಟಿಗಳನ್ನು ಮಾಯಿಶ್ಚರೈಸ್ಡ್ ಮಾಡುವ ಜೊತೆಯಲ್ಲೇ ಅದು ಸದಾ ಹೊಳೆಯುವಂತೆ ಮಾಡುತ್ತದೆ. ಇವೆಲ್ಲದರ ಒಟ್ಟಾರೆ ಪರಿಣಾಮವಾಗಿ ನೀವು ಥಳುಕುಬಳುಕಿನ ವೈಯಾರಿ ಬದಲು ಯಂಗ್‌ ಫ್ರೆಶ್‌ ಎನಿಸುವಿರಿ.

– ರುಚಿತಾ ಶರ್ಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ