ಮೊಟ್ಟೆಯನ್ನು ಬಳಸಿ ನೂರಾರು ಬಗೆಯ ಪದಾರ್ಥಗಳನ್ನು ಸಿದ್ಧಪಡಿಸಬಹುದು. ಮೊಟ್ಟೆಯ ಕಾರಣದಿಂದಾಗಿ ಆ ಪದಾರ್ಥಗಳು ಅದೆಷ್ಟು ರುಚಿಕಟ್ಟಾಗಿರುತ್ತವೆಂದರೆ, ಅವನ್ನು ನೋಡುತ್ತಲೇ ಬಾಯಲ್ಲಿ ನೀರೂರುತ್ತದೆ. ಆದರೆ ಅದೆಷ್ಟೋ ಜನ ಧಾರ್ಮಿಕ ಕಾರಣದಿಂದಾಗಿ, ಆರೋಗ್ಯ ಹಾಗೂ ವಾಸನೆಯಿಂದಾಗಿ ಅದನ್ನು ಸೇವಿಸಲು ಇಷ್ಟಪಡುವುದಿಲ್ಲ. ನಿಮಗೆ ಮೊಟ್ಟೆಯ ವಾಸನೆ ಇಷ್ಟವಾಗದಿದ್ದರೆ ಆ ಎಲ್ಲ ಪದಾರ್ಥಗಳನ್ನು ನೀವು ಸೇವಿಸುವುದನ್ನು ಬಿಟ್ಟೇ ಬಿಡುತ್ತೀರಾ? ಇದಕ್ಕೆ ನಿಮ್ಮ  ಉತ್ತರ `ಇಲ್ಲ' ಎಂದಾದಲ್ಲಿ, ಮೊಟ್ಟೆಯ ಬದಲಿಗೆ ಬಹಳಷ್ಟು ಬಗೆಯ ಪದಾರ್ಥಗಳನ್ನು ಬಳಸಿ ಅಷ್ಟೇ ರುಚಿಕಟ್ಟಾದ ಪದಾರ್ಥಗಳ ಆನಂದವನ್ನು ಅನುಭವಿಸಬಹುದು.

ಕೇಕ್‌ ಅಥವಾ ಕುಕೀಸ್‌ ತಯಾರಿಸಲು ನೀವು ಮೊಟ್ಟೆಯ ಬದಲಿಗೆ ಕೆಳಕಂಡ ಪದಾರ್ಥಗಳನ್ನು ಉಪಯೋಗಿಸಬಹುದು.

ಕೇಕ್‌ನಲ್ಲಿ ಮೊಟ್ಟೆಯ ಬದಲಿಗೆ ಕಾಲು ಕಪ್‌ ಮೊಸರು ಹಾಕಬಹುದು.

ಮೊಸರಿನ ಬದಲಿಗೆ ಒಂದು ಕಳಿತ ಬಾಳೆಹಣ್ಣನ್ನು ಕೂಡ ಹಾಕಬಹುದು.

ಪಪ್ಪಾಯಿ ಅಥವಾ ಸೇಬು ಹಣ್ಣಿನ ಸಾಸ್‌ ಬಳಸಿ ಸುವಾಸನೆಯುಕ್ತ ಫ್ರೂಟ್‌ ಕೇಕ್‌ ತಯಾರಿಸಬಹುದು.

ಸಾಸ್‌ ತಯಾರಿಸಿಕೊಳ್ಳಲು ಸೇಬು ಅಥವಾ ಪಪ್ಪಾಯಿಯನ್ನು ಸಕ್ಕರೆ, ನೀರು ಹಾಗೂ ದಾಲ್ಚಿನ್ನಿಯ ಜೊತೆಗೆ ಕುದಿಸಿ ನಂತರ  ಚೆನ್ನಾಗಿ ಗೊಟಾಯಿಸಿ.

ಕಿತ್ತಳೆ ರಸ ಚಾಕ್ಲೇಟ್‌ ಕೇಕ್‌ನ ಮಿಶ್ರಣವನ್ನು ಬಹಳಷ್ಟು ರುಚಿಕರಗೊಳಿಸುತ್ತದೆ. ಅದು ಹಗುರವಾಗುವಂತೆ ಮಾಡುತ್ತದೆ.

2 ಮೊಟ್ಟೆಗಳ ಬದಲಿಗೆ 1 ಟಿನ್‌ ಕಂಡೆನ್ಸ್ಡ್ ಮಿಲ್ಕ್ ನ ಉಪಯೋಗ ಮಾಡಿ ನೀವು ಕುಕೀಸ್‌ ಮತ್ತು ಕೇಕ್‌ ತಯಾರಿಸಬಹುದು.

ಮೊಟ್ಟೆ ಅಥವಾ ಹಾಲಿನ ಪದಾರ್ಥಗಳಿಂದ ಅಲರ್ಜಿ ಆಗುವವರಿಗೆ 1 ದೊಡ್ಡ ಚಮಚ ಫ್ಲೇಕ್ಸ್ ಸೀಡ್‌ ಅಂದರೆ 3 ದೊಡ್ಡ ಚಮಚ ಅಗಸೆ ಬೀಜದ ಪೌಡರ್‌ನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ. ಅದು ಜಿಗುಟು ಜಿಗುಟಾಗಿದ್ದಲ್ಲಿ ಕೇಕ್‌, ಕುಕೀಸ್‌ನ ಮಿಶ್ರಣದಲ್ಲಿ ಬೆರೆಸಿ.

ಬೇಕಿಂಗ್‌ ಪೌಡರ್‌ನ ಹೊರತಾಗಿ 1 ದೊಡ್ಡ ಚಮಚ ಜಿಲೇಟಿನ್‌ನ್ನು 3 ದೊಡ್ಡ ಚಮಚ ಸಾಧಾರಣ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಕೇಕ್‌ನ ಮಿಶ್ರಣದಲ್ಲಿ ಸೇರಿಸಬಹುದು. ಇದರಿಂದ ಕೇಕ್‌ನಲ್ಲಿ ಕ್ರ್ಯಾಕ್‌ ಉಂಟಾಗುವುದಿಲ್ಲ.

ಯಾವುದೇ ಒಂದು ಪದಾರ್ಥವನ್ನು ಹಗುರಗೊಳಿಸುವುದು ಒಂದು ತಂತ್ರಜ್ಞಾನ. ಇದೇ ಕಾರಣದಿಂದ ಬ್ರೆಡ್‌, ಬನ್‌ ಮುಂತಾದವು ಹಗುರವಾಗುತ್ತವೆ. ಅದಕ್ಕಾಗಿ ಮೊಟ್ಟೆಯ ಬದಲಿಗೆ ಬೇಕಿಂಗ್‌ ಪೌಡರ್‌ ಅಥವಾ ಬೇಕಿಂಗ್‌ ಸೋಡಾವನ್ನು ಬಳಸುವುದು ಸಾಮಾನ್ಯ ಸಂಗತಿ. ಇಂತಹ ಅದೆಷ್ಟೋ ಸಾಮಗ್ರಿಗಳಿದ್ದು, ಅವನ್ನು ಬಳಸುವುದರ ಮೂಲಕ ಬ್ರೆಡ್‌ ಮುಂತಾದವುಗಳನ್ನು ರುಚಿಕಟ್ಟಾಗಿಸಬಹುದು.

ಪುಡಿಂಗ್‌ನಲ್ಲಿ ಸಾಕಷ್ಟು ಮೊಟ್ಟೆಗಳ ಅಗತ್ಯ ಉಂಟಾಗುತ್ತದೆ. ಆದರೆ ಟೋಫುವನ್ನು ಕತ್ತರಿಸಿಕೊಂಡು, ಚೆನ್ನಾಗಿ ಮ್ಯಾಶ್‌ ಮಾಡಿ ಅಥವಾ ಮಿಕ್ಸಿಯಲ್ಲಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು 2 ಮೊಟ್ಟೆಗಳ ಬದಲಿಗೆ ಕಾಲು ಕಪ್‌ ಟೋಫುವನ್ನು ಉಪಯೋಗಿಸಬಹುದು.

ಮಜ್ಜಿಗೆ ಅಥವಾ ಲಸ್ಸಿಯನ್ನು ಉಪಯೋಗಿಸಿ ಬ್ರೆಡ್‌, ಕೇಕ್‌ ಮುಂತಾದವನ್ನು ತಯಾರಿಸಬಹುದು.

ಟಿಕ್ಕಿ ಬರ್ಫಿ, ಕೋಫ್ತಾ ಮುಂತಾದವನ್ನು ತಯಾರಿಸಲು ಮೊಟ್ಟೆಯ ಬದಲಿಗೆ ಆಲೂಗೆಡ್ಡೆ ಅಥವಾ ಎರಡನ್ನೂ ಜೊತೆ ಜೊತೆಗೆ ಸೇರಿಸಿ ಉಪಯೋಗಿಸಬಹುದಾಗಿದೆ. ನೀವು ಮೊಟ್ಟೆ ಮತ್ತು ಆಲೂಗೆಡ್ಡೆಯ ಬದಲಿಗೆ ಕೆಳಕಂಡ ಪ್ರಯೋಗ ಮಾಡಬಹುದು.

ಕಾರ್ನ್‌ ಸ್ಟಾರ್ಚ್‌ ಅಥವಾ ಕಾರ್ನ್‌ಫ್ಲೋರ್‌ ಮತ್ತು ಬ್ರೆಡ್‌ನ ಪುಡಿಯನ್ನು ಮಿಶ್ರಣ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ