ಪ್ಯಾಶನ್‌ ಫ್ರೂಟ್‌ ಕ್ರ್ಯಾನ್‌ ಕೂಲರ್‌

ಸಾಮಗ್ರಿ : 1 ಪ್ಯಾಶನ್‌ ಫ್ರೂಟ್‌ನ ತಿರುಳು, ಅರ್ಧ ಕಪ್‌ ಪ್ಯಾಶನ್‌ ಫ್ರೂಟ್‌ ಜೂಸ್‌,  60 ಮಿ.ಲೀ. ಕ್ರ್ಯಾನ್‌ಬೆರಿ ಜೂಸ್‌, 20 ಮಿ.ಲೀ. ಆರೆಂಜ್‌ ಜೂಸ್‌, 10 ಮಿ.ಲೀ. ನಿಂಬೆರಸ, 20 ಮಿ.ಲೀ. ಶುಗರ್‌ ಸಿರಪ್‌, 100 ಗ್ರಾಂ ಐಸ್‌ ಕ್ಯೂಬ್ಸ್.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಜೂಸರ್‌ಗೆ ಹಾಕಿ ಒಮ್ಮೆ ಚಲಾಯಿಸಿ, ತಕ್ಷಣ ಸವಿಯಲು ಕೊಡಿ.

ಟೀಟೋಟಲರ್ಸ್‌ ಡ್ರೀಂ ಶಾರ್ಟ್ಸ್

ಸಾಮಗ್ರಿ : 40 ಮಿ.ಲೀ. ಸ್ಟ್ರಾಬೆರಿ ಜೂಸ್‌, 1 ಸಣ್ಣ ಚಮಚ ನಿಂಬೆರಸ, ರುಚಿಗೆ ತಕ್ಕಷ್ಟು ಶುಗರ್‌ ಸಿರಪ್‌, ರಾಕ್‌ ಸಾಲ್ಟ್, ಐಸ್‌ಕ್ಯೂಬ್ಸ್.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಜೂಸರ್‌ಗೆ ಹಾಕಿ ಒಮ್ಮೆ ಚೆನ್ನಾಗಿ ಚಲಾಯಿಸಿ. ಇದನ್ನು ಶಾರ್ಟ್‌ ಗ್ಲಾಸುಗಳಿಗೆ ತುಂಬಿಸಿ ಸವಿಯಲು ಕೊಡಿ. ಸ್ಟ್ರಾಬೆರಿ ಜೂಸ್‌ ಬೇಡ ಎನಿಸಿದರೆ ನಿಮ್ಮ ಆಯ್ಕೆಯ ಇತರ ಜೂಸ್‌ ಬಳಸಬಹುದು.

ಮ್ಯಾಂಗೋ ಜೂಸ್

ಸಾಮಗ್ರಿ : 1 ಕಿಲೋ ಮಾಗಿದ ಮಾವು (ಸಿಪ್ಪೆ ಹೆರೆದು ಹೋಳಾಗಿಸಿ ಜೂಸ್‌ ಮಾಡಿ), ಅಗತ್ಯವಿದ್ದಷ್ಟು ಪುಡಿ ಸಕ್ಕರೆ, ಹಾಲಲ್ಲಿ ನೆನೆಸಿದ ಕೇಸರಿ, ಕೋಲ್ಡ್ ಮಿಲ್ಕ್.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಜೂಸರ್‌ಗೆ ಹಾಕಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಕೂಲ್ ‌ಕೂಲ್ ‌ಆಗಿ ಸರ್ವ್ ಮಾಡಿ.

ಮ್ಯಾಂಗೋ ಪನಾ

ಸಾಮಗ್ರಿ : 2 ಹುಳಿ ಮಾವಿನಕಾಯಿ (ಸಿಪ್ಪೆ ಹೆರೆದು ಹೋಳು ಮಾಡಿ), ಅಗತ್ಯವಿದ್ದಷ್ಟು ಶುಗರ್‌ ಸಿರಪ್‌, ಹಾಲಲ್ಲಿ ನೆನೆಸಿದ ಕೇಸರಿ, ಏಲಕ್ಕಿ ಪುಡಿ.

ವಿಧಾನ : ಒಂದು ಬಾಣಲೆಯಲ್ಲಿ ಶುಗರ್‌ ಸಿರಪ್‌ ಬಿಸಿ ಮಾಡಿ, ಅದಕ್ಕೆ ಹುಳಿ ಮಾವಿನ ಹೋಳು ಹಾಕಿ ಮಂದ ಉರಿಯಲ್ಲಿ ಹದನಾಗಿ ಬೇಯಿಸಿ. ಇದನ್ನು ಮಿಕ್ಸಿಗೆ ಹಾಕಿ, ಏಲಕ್ಕಿ, ಕೇಸರಿ ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಎಷ್ಟು ತೆಳು ಬೇಕೋ ಅಷ್ಟು ನೀರು ಬೆರೆಸಿಕೊಳ್ಳಿ.

ಚಟ್‌ಪಟಾ ಸ್ಪೈಸೀ ಜೂಸ್‌

ಸಾಮಗ್ರಿ : 20 ಮಿ.ಲೀ. ಹುಣಿಸೇ ರಸ, 1-1 ಚಮಚ ನಿಂಬೆರಸ, ಶುಗರ್‌ ಸಿರಪ್‌, ಅರ್ಧ ಕಪ್‌ ಕಿತ್ತಳೆ ರಸ, 4-5 ತೊಳೆ ಕಿತ್ತಳೆ ಕುಸುಮೆ, ರುಚಿಗೆ ತಕ್ಕಷ್ಟು ಉಪ್ಪು, ಚಾಟ್‌ ಮಸಾಲ, ಐಸ್‌ ಕ್ಯೂಬ್ಸ್.

ವಿಧಾನ : ಜೂಸರ್‌ಗೆ ಕ್ರಶ್ಡ್ ಐಸ್‌ ಕ್ಯೂಬ್ಸ್, ಕಿತ್ತಳೆ ಕುಸುಮೆ, ಬಾಕಿ ಸಾಮಗ್ರಿ ಹಾಕಿ ಬ್ಲೆಂಡ್‌ ಮಾಡಿ. ಕ್ರಶ್ಡ್ ಐಸ್‌ನ್ನು ಸಣ್ಣ ಗೋಲಿ ಗಾತ್ರದ ಉಂಡೆ ಮಾಡಿ, ಅದನ್ನು ಹುಣಿಸೆ ರಸದಲ್ಲಿ ನೆನೆಹಾಕಿ. ಇವನ್ನು ಕಡ್ಡಿಯಲ್ಲಿ ಸಿಗಿಸಿ, ಚಿತ್ರದಲ್ಲಿರುವಂತೆ ಜೂಸ್‌ನ್ನು ಗ್ಲಾಸುಗಳಿಗೆ ಸುರಿದು, ಅದರಲ್ಲಿ  ಈ ರೀತಿ ಅಲಂಕರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ