ಸೋಯಾ  ಓಟ್ಸ್ ಕ್ಯಾಬೇಜ್‌ ರೋಲ್ಸ್

ಸಾಮಗ್ರಿ : 2 ಕಪ್‌ ಸೋಯಾ ತರಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಹೆಚ್ಚಿದ ಹಸಿಮೆಣಸು, ಒಂದಿಷ್ಟು ತುಳಸಿ ಎಲೆ, ಸ್ವೀಟ್ ರೆಡ್‌ ಪೆಪ್ಪರ್‌, ರೆಡ್‌ ಚಿಲೀ ಫ್ಲೇಕ್ಸ್, ಓಮ, ನಿಂಬೆರಸ, ಟೊಮೇಟೊ ಕೆಚಪ್‌, ಟೊಬೆಸ್ಕೋ ಸಾಸ್‌, ಸೀಸನಿಂಗ್‌ಗಾಗಿ 1-2 ಮ್ಯಾಗಿ ಕ್ಯೂಬ್ಸ್, ಅರ್ಧ ಕಪ್‌ ಓಟ್ಸ್, 1 ಸಣ್ಣ ಎಲೆಕೋಸು, ಅರ್ಧ ಕಪ್‌ ತುರಿದ ಚ್ಯಾಡರ್‌ ಚೀಸ್‌ (2 ಭಾಗ ಮಾಡಿ).

ವಿಧಾನ : ಒಂದು ಸ್ಟೀಲ್ ಪಾತ್ರೆಗೆ ಸೋಯಾ, ಹಸಿಮೆಣಸು, ಸ್ವೀಟ್‌ ರೆಡ್‌ ಪೆಪ್ಪರ್‌, ಮ್ಯಾಗಿ ಕ್ಯೂಬ್ಸ್, ಓಟ್ಸ್, ತುಳಸಿ, ರೆಡ್‌ ಚಿಲೀ ಫ್ಲೇಕ್ಸ್, ಓಮ, ಉಪ್ಪು, ಖಾರ ಹಾಕಿ ತುಸು ನೀರು ಬೆರೆಸಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ಮೇಲೆ ಮುಚ್ಚಳ ಇರಿಸಿ 5 ನಿಮಿಷ ಬೇಯಿಸಿ. ನಂತರ ಕೆಳಗಿಳಿಸಿ 5-6 ನಿಮಿಷ ಹಾಗೇ ಬಿಡಿ. ಈ ಮಧ್ಯೆ ಎಲೆಕೋಸಿನ 7-8 ಮೇಲುಪದರ ಹೊರತೆಗೆದು, ಉಳಿದದ್ದನ್ನು ಹೆಚ್ಚಿ ಬೇಯಿಸಿ. ಆರಿದ ನಂತರ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ. ಈಗ ಅಗಲ ಎಲೆಗಳ ಮಧ್ಯದ ದಪ್ಪಗಿನ ಎಳೆಯನ್ನು ಬಿಟ್ಟುಕೊಳ್ಳದಂತೆ ಎಚ್ಚರಿಕೆಯಿಂದ ಕತ್ತರಿಸಿ. ತರಕಾರಿ ಮಿಶ್ರಣಕ್ಕೆ ಒಂದು ಭಾಗ ಚೀಸ್‌, ನಿಂಬೆರಸ ಬೆರೆಸಿ. ಈ ಮಿಶ್ರಣವನ್ನು ಸಮನವಾಗಿ ಎಲ್ಲಾ ಎಲೆಗಳ ಮೇಲೆ ಹರಡಿ, ರೋಲ್ ‌ಮಾಡಿ. ಇದನ್ನು ಟೊಮೇಟೊ ಕೆಚಪ್‌ ಮತ್ತು ಟೊಬೆಸ್ಕೊ ಸಾಸ್‌ನಲ್ಲಿ ಅದ್ದಿಡಿ. ಬೇಕಿಂ ಗ್‌ಡಿಶ್‌ನಲ್ಲಿ ಬಟರ್‌ ಪೇಪರ್‌ ಹರಡಿ, ಅದರ ಮೇಲೆ ಈ ರೋಲ್ಸ್ ಹರಡಿ. 400 ಡಿಗ್ರಿ ಶಾಖದಲ್ಲಿ ಈ ರೋಲ್ಸ್ ನ್ನು 15 ನಿಮಿಷ ಬೇಕ್‌ ಮಾಡಿ. ಬಿಸಿ ಬಿಸಿಯಾದ ಇದರ ಮೇಲೆ ಉಳಿದ ಚೀಸ್‌ ಉದುರಿಸಿ, ಸವಿಯಲು ಕೊಡಿ.

ಸ್ಟಿರ್‌ ಫ್ರೈಡ್‌ ಟೋಫು ವಿತ್‌ ವಿಂಟರ್‌ ವೆಜಿಟೆಬಲ್ ಸ್ಪಿನಾಚ್‌

ಸಾಮಗ್ರಿ : 400 ಗ್ರಾಂ ಟೋಫು, 1 ಕಟ್ಟು ಪಾಲಕ್‌ ಸೊಪ್ಪು, 150 ಗ್ರಾಂ ಹೆಚ್ಚಿದ ಬೀನ್ಸ್, 50 ಗ್ರಾಂ ಹೆಚ್ಚಿದ ಕ್ಯಾರೆಟ್‌, 50 ಗ್ರಾಂ ಹಸಿ ಕೆಂಪು ಮೆಣಸಿನಕಾಯಿ, 2-3 ಚಿಟಕಿ ಆ್ಯಸ್ಪರಾಗಸ್‌, ಅರ್ಧ ಸೌಟು ಎಳ್ಳೆಣ್ಣೆ, 50 ಗ್ರಾಂ ಸ್ಪ್ರಿಂಗ್‌ ಆನಿಯನ್‌, ಒಂದಿಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, 25 ಗ್ರಾಂ ಬಿಸಿ ನೀರಲ್ಲಿ ಕದಡಿದ ಕಾರ್ನ್‌ ಸ್ಟಾರ್ಚ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಡಾರ್ಕ್‌ ಸೋಯಾ ಸಾಸ್‌.

ವಿಧಾನ : ಟೋಫುವನ್ನು ಕ್ಯೂಬ್ಸ್ ಆಗಿ ಕತ್ತರಿಸಿ. ಇದನ್ನು ಬಟರ್‌ ಪೇಪರ್‌ ಮೇಲಿರಿಸಿ, 15 ನಿಮಿಷ ಓವನ್‌ನಲ್ಲಿ ಬೇಕ್‌ ಮಾಡಿ. ಒಂದು ಬಾಣಲೆಯಲ್ಲಿ ಎಳ್ಳೆಣ್ಣೆ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ-ಶುಂಠಿ ಬೆರೆಸಿ ಕೆದಕಬೇಕು. ಆಮೇಲೆ ಒಂದೊಂದಾಗಿ ಹೆಚ್ಚಿದ ತರಕಾರಿ ಹಾಕಿ, 2-3 ನಿಮಿಷ ಬೇಯಿಸಿ. ನಂತರ ಸೋಯಾಸಾಸ್‌, ತುಸು ನೀರು ಬೆರೆಸಿ. ಇದು ಕುದಿಯತೊಡಗಿದಂತೆ ಕಾರ್ನ್ ಸ್ಟಾರ್ಚ್‌ ಬೆರೆಸಿಡಿ. ಆಮೇಲೆ ಇದಕ್ಕೆ ಟೋಫು ಹಾಕಿ. ಇದು 1 ನಿಮಿಷ ಬೇಯಲಿ. ನಂತರ ಅಗತ್ಯಕ್ಕೆ ತಕ್ಕಂತೆ ಒಗ್ಗರಣೆ ಕೊಡಿ, ಉಪ್ಪು, ಖಾರ ಸೇರಿಸಿ. ಟೋಫು ಒಡೆಯದಂತೆ ನಿಧಾನವಾಗಿ ಕೆದಕಿ ಕೆಳಗಿಸಿ. ಕೆಳಗಿಳಿಸಿದ ತಕ್ಷಣ ಇದನ್ನು ಬಿಸಿಯಾಗಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ